ಉಪಯುಕ್ತ ಮಾಹಿತಿ: ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ

ನೋವು ನಿವಾರಣೆ : ಬಾಳೆ ಹಣ್ಣಿನ ಸಿಪ್ಪೆಯನ್ನು ರಾತ್ರಿ ಮಲಗುವ ವೇಳೆ ಗಾಯಗಳಿರುವ ಜಾಗಕ್ಕೆ ಬಟ್ಟೆಯ ಸಹಾಯದಿಂದ ಕಟ್ಟಿರಿ. ಈ ರೀತಿ ಮಾಡುವುದರಿಂದ ಬೇಗನೆ ನೋವು ಕಡಿಮೆಯಾಗುತ್ತದೆ.

zahir | news18
Updated:June 16, 2019, 5:13 PM IST
ಉಪಯುಕ್ತ ಮಾಹಿತಿ: ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ
ಬಾಳೆ ಸಿಪ್ಪೆ
  • News18
  • Last Updated: June 16, 2019, 5:13 PM IST
  • Share this:
ಸಾಮಾನ್ಯವಾಗಿ ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಅಂದರೆ ಬಾಳೆಹಣ್ಣಿನ ಸಿಪ್ಪೆಯನ್ನು ಯಾರಾದರೂ ತಿನ್ನುತ್ತಾರಾ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಕಸದ ಬುಟ್ಟಿ ಸೇರುವ ಈ ಸಿಪ್ಪೆಯಿಂದಲೂ ಅನೇಕ ರೀತಿಯ ಪ್ರಯೋಜನಗಳಿವೆ ಎಂಬುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ.

ಬಾಳೆ ಹಣ್ಣಿನ ಸಿಪ್ಪೆಯು ಅನೇಕ ರೀತಿಯ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಈ ಹಣ್ಣಿನ ಸಿಪ್ಪೆಯಲ್ಲೂ ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗೆಯೇ ನಾರಿನಂಶ, ಮೆಗ್ನೀಷಿಯಂ, ಪೊಟಾಷಿಯಂ  ಕೂಡ ಇದರಲ್ಲಿ ಅಡಗಿರುತ್ತವೆ. ಇಂತಹ ಹಲವು ಪೋಷಕಾಂಶಗಳನ್ನು ಬಾಳೆ ಸಿಪ್ಪೆಯಿಂದ ಪಡೆಯಬಹುದಾಗಿದೆ. ಹಾಗಿದ್ರೆ ಬಾಳೆ ಸಿಪ್ಪೆಯನ್ನು ಯಾವ ರೀತಿಯಾಗಿ ಬಳಸಿ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಬಿಳಿ ಹಲ್ಲುಗಳಿಗಾಗಿ : ನಿಮ್ಮ ಹಲ್ಲುಗಳು ಪಳಪಳ ಹೊಳೆಯಬೇಕಿದ್ದಲ್ಲಿ ಬಾಳೆ ಹಣ್ಣಿನ ಸಿಪ್ಪೆಯಿಂದ  ಒಂದು ನಿಮಿಷ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿ. ಒಂದು ವಾರ ಈ ರೀತಿ ಮಾಡಿದರೆ  ಹಳದಿಗಟ್ಟಿದ ನಿಮ್ಮ ಹಲ್ಲುಗಳು ಶುಭ್ರವಾಗಿ ಕಾಣಿಸುತ್ತದೆ.

ಸುಕ್ಕು ನಿವಾರಣೆಗೆ : ನಿಮ್ಮ ಚರ್ಮ ಸುಕ್ಕುಗಟ್ಟಿದ್ದರೆ ಬಾಳೆ ಹಣ್ಣಿನ ಸಿಪ್ಪೆಯನ್ನು ಆ ಪ್ರದೇಶದಲ್ಲಿ ಉಜ್ಜಿ. ಇದರಿಂದ ತ್ವಚೆಯ ಮೇಲೆ ದ್ರವಾಂಶ ಬೀರುತ್ತದೆ. ಇದರಿಂದ ಸುಕ್ಕು ಮರುಕಳಿಸುವುದು ತಪ್ಪುತ್ತದೆ.

ನೋವು ನಿವಾರಣೆ : ಬಾಳೆ ಹಣ್ಣಿನ ಸಿಪ್ಪೆಯನ್ನು ರಾತ್ರಿ ಮಲಗುವ ವೇಳೆ ಗಾಯಗಳಿರುವ ಜಾಗಕ್ಕೆ ಬಟ್ಟೆಯ ಸಹಾಯದಿಂದ ಕಟ್ಟಿರಿ. ಈ ರೀತಿ ಮಾಡುವುದರಿಂದ ಬೇಗನೆ ನೋವು ಕಡಿಮೆಯಾಗುತ್ತದೆ. ಅಲ್ಲದೆ ಕ್ರಿಮಿಕೀಟಗಳು ಕಚ್ಚಿದ ಜಾಗಕ್ಕೆ ಇದರಿಂದ ಮಸಾಜ್ ಮಾಡಿದರೆ ತುರಿಕೆ ಹಾಗೂ ನೋವು ನಿವಾರಣೆಯಾಗುತ್ತದೆ.

ಮೊಡವೆಗಳಿಗೆ:
ತ್ವಚ್ಛೆಯ ಆರೈಕೆಗೆ ಮನೆಮದ್ದಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿಕೊಳ್ಳಬಹುದು. ಮುಖ್ಯವಾಗಿ ಮುಖದಲ್ಲಿ ಮೂಡುವ ಮೊಡವೆಗಳ ಸಮಸ್ಯೆಗೆ ಬಾಳೆ ಸಿಪ್ಪೆಯಿಂದ ಪರಿಹಾರ ಕಂಡುಕೊಳ್ಳಬಹುದು. ಮೊಡವೆಗಳಿರುವ ಜಾಗದಲ್ಲಿ ಬಾಳೆ ಸಿಪ್ಪೆಯಿಂದ ಪ್ರತಿನಿತ್ಯ ಸವರುವುದರಿಂದ ಮೊಡವೆಗಳು ಕಡಿಮೆಯಾಗುತ್ತಾ ಹೋಗುತ್ತವೆ.ಕಲೆಗಳ ನಿವಾರಣೆಗೆ : ಮುಖದಲ್ಲಿ ಕಪ್ಪು ಕಲೆ ಅಥವಾ ಮೊಡವೆಗಳಿದ್ದಲ್ಲಿ ಬಾಳೆ ಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ. ಸುಮಾರು 10-15 ನಿಮಿಷಗಳ ಕಾಲ ಬಿಟ್ಟು ಮುಖವನ್ನು ತೊಳೆಯಿರಿ. ದಿನದಲ್ಲಿ ಎರಡು ಅಥವಾ ಮೂರು ಭಾರಿ ಈ ರೀತಿ ಮಾಡುವುದರಿಂದ ಒಂದು ವಾರದೊಳಗೆ ಕಲೆಗಳು ಮಾಯವಾಗುತ್ತವೆ.

ಉತ್ತಮ ತ್ವಚೆಗಾಗಿ : ಉತ್ತಮ ತ್ವಚೆಗಾಗಿ ಎರಡು ದಿನಕ್ಕೊಮ್ಮೆ ಬಾಳೆ ಹಣ್ಣಿನ ಸಿಪ್ಪೆಯಿಂದ ಮುಖದ ಪೂರ್ತಿ ಮಸಾಜ್ ಮಾಡಿಕೊಳ್ಳಿ. ಇದರಲ್ಲಿರುವ ಔಷಧೀಯ ಗುಣ ನಿಮ್ಮ ತ್ವಚೆಯನ್ನು ಮೃದುಗೊಳಿಸಿ ಸುಂದರವಾಗಿಸುತ್ತದೆ.

ಸಿಪ್ಪೆ ತಿನ್ನಿ : ಬಾಳೆ ಹಣ್ಣಿನ ಸಿಪ್ಪೆಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಲ್ಲದೆ ಸಿಪ್ಪೆಯನ್ನು ಬಳಸಿ ಅನೇಕ ಕಡೆಗಳಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ತಯಾರು ಮಾಡಿಕೊಳ್ಳಬಹುದು.

ಇದನ್ನೂ ಓದಿ: ಕನ್ನಡದ ಗಾಯಕನಿಗೆ ಶ್ರೇಷ್ಠ ಗೌರವ: ಅಮೆರಿಕದ ಈ ನಗರದಲ್ಲಿ ಮೇ.12 'ವಿಜಯ್ ಪ್ರಕಾಶ್ ಡೇ'
First published:June 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ