Benefits of Turmeric: ಅರಶಿನದಲ್ಲಿದೆ ಸರ್ವ ರೋಗಗಳಿಗೆ ಮದ್ದು! ಯಾವೆಲ್ಲ ಸಮಸ್ಯೆಗೆ ಬಳಸಬಹುದು ನೋಡಿ

ಆಯುರ್ವೇದದಲ್ಲಿ ಅರಿಶಿನಕ್ಕೆ ಮಹತ್ವದ ಸ್ಥಾನವಿದೆ. ಅರಿಶಿನವು ನಂಜುನಿರೋಧಕ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಯುರ್ವೇದದಲ್ಲಿ ಅರಿಶಿನಕ್ಕೆ (Turmeric) ಮಹತ್ವದ ಸ್ಥಾನವಿದೆ. ಅರಿಶಿನವು ನಂಜುನಿರೋಧಕ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದೆ. ಆಯುರ್ವೇದದಲ್ಲಿ ಅರಿಶಿನವು ರಕ್ತ (Blood) ಶುದ್ಧೀಕರಣದಲ್ಲಿ ಮುಖ್ಯವಾದುದು ಎಂದು ಹೇಳಲಾಗುತ್ತದೆ. ಅಡುಗೆ ಮನೆಯಲ್ಲಿ ಸದಾಕಾಲ ಲಭ್ಯವಿರುವ ಸರ್ವ ರೋಗಗಳಿಗೆ ಮದ್ದು ಎಂದು ಕರೆಸಿಕೊಳ್ಳುವ ಅರಿಶಿನ ಆರೋಗ್ಯ (Health) ಸೇರಿದಂತೆ ಸೌಂದರ್ಯದ (Beauty) ವಿಷಯದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ.  ಇದನ್ನು ತಿನ್ನುವ ಮೂಲಕ, ರಕ್ತದಲ್ಲಿ ಕಂಡುಬರುವ ವಿಷಕಾರಿ ವಸ್ತುಗಳು ಹೊರಬರುತ್ತವೆ ಮತ್ತು ರಕ್ತ ಪರಿಚಲನೆ ಸುಗಮವಾಗುತ್ತದೆ ಎಂದು ಆಯುರ್ವೇದದಲ್ಲಿ ನಂಬಿಕೆ ಇದೆ.

    ಹಾಲಿನೊಂದಿಗೆ ಅರಿಶಿನ ಮಿಶ್ರಣ ಮಾಡಿ ಕುಡಿದರೆ ಮೂಳೆಗಳನ್ನು ಬಲಪಡಿಸಬಹುದು

    ಹಾಲಿನೊಂದಿಗೆ ಅರಿಶಿನ ಮಿಶ್ರಣ ಮಾಡಿ ಕುಡಿದರೆ ಮೂಳೆಗಳನ್ನು ಬಲಪಡಿಸಬಹುದು. ಹಾಲಿನಲ್ಲಿ ಅಡಗಿರುವ ಕ್ಯಾಲ್ಸಿಯಂ ಮೂಳೆಗಳನ್ನು ಅನುಮತಿಸುತ್ತದೆ ಮತ್ತು ಅರಿಶಿನ ಗುಣಲಕ್ಷಣಗಳಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಅದೇ ರೀತಿ ಅರಿಶಿನವೂ ಮೂಳೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

    ಇದನ್ನೂ ಓದಿ: White Teeth: ಹಳದಿ ಹಲ್ಲಿನಿಂದ ಮುಕ್ತಿ ಸಿಗಬೇಕಾ? ಹಾಗಿದ್ರೆ ಮೊದಲು ಈ ಆಹಾರಗಳಿಂದ ದೂರವಿರಿ

    ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಅರಿಶಿನ ಹಾಲು ಸಹಕಾರಿ

    ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮುನ್ನ ಅರ್ಧ ಲೋಟ ಹಾಲಿಗೆ ಒಂದು ಚಿಟಿಕೆ ಅರಿಶಿನವನ್ನು ಹಾಕಿ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ಪರಿಹಾರವಾಗುತ್ತದೆ.

    ಶೀತ ಮತ್ತು ಕೆಮ್ಮು ಶೀಘ್ರವಾಗಿ ಶಮನಗೊಳ್ಳುವುದು

    ಅರಿಶಿನ ಹಾಲು ವೈರಸ್ ವಿರೋಧಿ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ, ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಇದು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ತ್ವರಿತ ಪರಿಹಾರ ನೀಡುತ್ತದೆ.

     ಅರಿಶಿನ ಹಾಲನ್ನು ಕುಡಿಯುವುದ ಚರ್ಮ ಹೆಚ್ಚು ಹೊಳೆಯುತ್ತದೆ

    ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲನ್ನು ಕುಡಿಯುವುದು ಒಳಿತು. ಹತ್ತಿಯಲ್ಲಿ ಅರಿಶಿನ ಹಾಲನ್ನು ನೆನೆಸಿ ಚರ್ಮ ಕೆಂಪಾಗಿರುವ ಜಾಗದಲ್ಲಿ ಅದ್ದಿ 15 ನಿಮಿಷಗಳ ಕಾಲ ಬಿಟ್ಟರೆ ಪೀಡಿತ ಪ್ರದೇಶವು ಬಹಳ ಬೇಗ ಗುಣವಾಗುತ್ತದೆ. ಇದು ಮೊದಲಿಗಿಂತ, ಚರ್ಮ ಹೆಚ್ಚು ಹೊಳೆಯುವಂತೆ ಮಾಡುತ್ತದೆ.

    ಚಿಕ್ಕ ಗಾಯದ ಮೇಲೆ ಹಾಕುವುದರಿಂದ ರಕ್ತ ಬರುವುದು ನಿಲ್ಲುತ್ತದೆ

    ಬಿದ್ದು ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿರುವಾಗ ಈ ಅರಿಶಿನದ ಪುಡಿಯನ್ನು ಗಾಯದ ಮೇಲೆ ಹಾಕುವುದರಿಂದ ರಕ್ತ ಬರುವುದು ನಿಲ್ಲುತ್ತದೆ. (ಚಿಕ್ಕ ಗಾಯಗಳಿಗೆ) ಆ್ಯಂಟಿಸೆಪ್ಟಿಕ್ ಆಗಿರುವುದರಿಂದ ಬೇಗನೆ ಗಾಯವೂ ಒಣಗುತ್ತದೆ/ಮಾಯುತ್ತದೆ.

    ಜೀರ್ಣಕ್ರಿಯೆ ಉತ್ತಮ ಜೀರ್ಣಕಾರಿ ಶಕ್ತಿ ಹೊಂದಿದೆ

    ಇದು ಉತ್ತಮ ಜೀರ್ಣಕಾರಿ ಶಕ್ತಿ ಹೊಂದಿದ್ದು, ಹುಣ್ಣುಗಳು, ಅತಿಸಾರ ಮತ್ತು ಅಜೀರ್ಣವನ್ನು ತಡೆಯುತ್ತದೆ ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೊಟ್ಟೆಯ ಹುಣ್ಣುಗಳು ಮತ್ತು ಕೊಲೈಟಿಸ್ ನ್ನು ಕಡಿಮೆಗೊಳಿಸುತ್ತದೆ. ಇದು ಒಂದು ಪ್ರಬಲ ನಂಜುನಿರೋಧಕವೂ ಆಗಿದೆ .

    ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹಾರ ಮಾಡಲು ಅರಿಶಿನವು ಸಹಕಾರಿ

    ಅರಶಿನವು ನೈಸರ್ಗಿಕ ಡ ಡಿಟಾಕ್ಸಿನ್ ಫೈಯರ್ ಆಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಹೊಟ್ಟೆ ಉಬ್ಬರಿಸುವ ಸಮಸ್ಯೆಯನ್ನು ಇದರಿಂದ ಶಮನ ಗೊಳಿಸಬಹುದು. ಅದೇ ರೀತಿ ಅರಿಶಿನವನ್ನು ಸೇವಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಶಮನಗೊಳಿಸಲು ಬಳಸಬಹುದು.

    ಬಾಯಿಯ ದುರ್ವಾಸನೆಯ ಸಮಸ್ಯೆಗೆ ಅರಿಶಿನವು ರಾಮಬಾಣ

    ಬಾಯಿಯ ದುರ್ವಾಸನೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅರಿಶಿನವು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಭಾಷಣವನ್ನು ಸೇವಿಸಿದಾಗ ಅದು ಬಾಯಿಯಲ್ಲಿರುವ ಬ್ಯಾಕ್ಟೀರಿಯವನ್ನು ಕೊಲ್ಲಲು ಸಹಾಯಮಾಡುತ್ತದೆ.

    ಇದನ್ನೂ ಓದಿ: Tonsillitis ನೋವಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದಿನಿಂದ ಹೋಗಲಾಡಿಸಬಹುದು ನೋಡಿ

    ತ್ವಚೆಯ ಸುಕ್ಕು ನಿವಾರಿಸುವುದರಲ್ಲಿ ಅರಿಶಿನ ಪ್ರಮುಖ ಪಾತ್ರ ನಿರ್ವಹಿಸುತ್ತದೆ

    ಸುಕ್ಕುಗಳನ್ನು ನಿವಾರಿಸುವುದರಲ್ಲಿ ಸಹ ಅರಿಶಿನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸ್ವಲ್ಪ ಅಕ್ಕಿಪುಡಿಯ ಜೊತೆಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಟೊಮೇಟೊ ರಸ ಹಾಗು ಒಂದು ಚಮಚ ಹಾಲನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿರುವ ಸುಕ್ಕುಗಳ ಮೇಲೆ ಲೇಪಿಸಿ. ನಂತರ ಇದನ್ನು 20 ನಿಮಿಷಗಳ ಕಾಲ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ.
    Published by:Swathi Nayak
    First published: