ಕಾನೂನು ಏನೇ ಹೇಳಿದರೂ ಸಲಿಂಗಿಗಳಿಗೆ ಸಾಮಾಜಿಕವಾಗಿ ಸಿಕ್ಕಿಲ್ಲ ಮನ್ನಣೆ

ಗಂಡು ಹೆಣ್ಣನ್ನು ಮದುವೆಯಾಗಬೇಕು ಎನ್ನುವುದು ಸಮಾಜದ ನಿಯಮ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಕೂಡ. ಆದರೆ, ಕೆಲವರಲ್ಲಿ ಮಾತ್ರ ಹಾರ್ಮೋನ್​ಗಳ ಬದಲಾವಣೆ ಇರುತ್ತದೆ. ಗಂಡು ಮತ್ತೊಂದು ಗಂಡನ್ನು ಮದುವೆಯಾಗುತ್ತಾನೆ. ಹೆಣ್ಣು ಮತ್ತೊಂದು ಹೆಣ್ಣನ್ನು ಮದುವೆಯಾಗುತ್ತಾಳೆ. 

ಸಾಮದರ್ಭಿಕ ಚಿತ್ರ

ಸಾಮದರ್ಭಿಕ ಚಿತ್ರ

 • RedWomb
 • Last Updated :
 • Share this:
  ಇತ್ತೀಚೆಗೆ ತೆರೆಕಂಡಿದ್ದ ಆಯುಷ್ಮಾನ್​ ಖುರಾನಾ ಅಭಿನಯದ ‘ಶುಭ ಮಂಗಲ್​ ಜ್ಯಾದಾ ಸಾವಧಾನ್​’ ಚಿತ್ರದ ಟ್ರೈಲರ್​​ ಭಾರೀ ವೈರಲ್​ ಆಗಿತ್ತು. ಇದಕ್ಕೆ ಕಾರಣ ಈ ಸಿನಿಮಾ ಇರುವುದು ಸಲಿಂಗಿಗಳ ಬಗ್ಗೆ. 2018ರ ಸೆಪ್ಟೆಂಬರ್​ಗೂ ಮೊದಲು ಸಲಿಂಗಿಗಳು ಮದುವೆ ಆಗುವುದು, ಸಂಬಂಧದಲ್ಲಿರುವುದು ಅಪರಾಧವಾಗಿತ್ತು. ಆದರೆ, ಇದನ್ನು ಕೋರ್ಟ್​ ತೆರವುಗೊಳಿಸಿತ್ತು. ಕಾನೂನಾತ್ಮಕವಾಗಿ ಸಲಿಂಗಿಗಳು ಮದುವೆ ಆಗುವುದಕ್ಕೆ ಒಪ್ಪಿಗೆ ಇದೆ. ಆದರೆ, ಸಾಮಾಜಿಕವಾಗಿ ಮನಸ್ಥಿತಿಗಳು ಇನ್ನೂ ಬದಲಾಗಿಲ್ಲ.

  ವಿಚಿತ್ರ ಜೀವನ ಶೈಲಿ:

  ಗಂಡು ಹೆಣ್ಣನ್ನು ಮದುವೆಯಾಗಬೇಕು ಎನ್ನುವುದು ಸಮಾಜದ ನಿಯಮ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಕೂಡ. ಆದರೆ, ಕೆಲವರಲ್ಲಿ ಮಾತ್ರ ಹಾರ್ಮೋನ್​ಗಳ ಬದಲಾವಣೆ ಇರುತ್ತದೆ. ಗಂಡು ಮತ್ತೊಂದು ಗಂಡನ್ನು ಮದುವೆಯಾಗುತ್ತಾನೆ. ಹೆಣ್ಣು ಮತ್ತೊಂದು ಹೆಣ್ಣನ್ನು ಮದುವೆಯಾಗುತ್ತಾಳೆ.

  ನೀವು ಭಿನ್ನವಾಗಿ ಜನಿಸಿದ್ದೀರಾ?:

  ಸಮಾಜದಲ್ಲಿ ಅದೆಷ್ಟೋ ಜನರು ಭಿನ್ನವಾಗಿ ಜನಿಸಿರುತ್ತಾರೆ. ಅವರ ಭಾವನೆಗಳು, ಅವರ ಕಾಮನೆಗಳು ಬೇರೆಬೇರೆ ರೀತಿ ಇರುತ್ತವೆ. ಈ ರೀತಿಯ ಜನರು ತಮ್ಮ ಭಾವನೆಗಳನ್ನು ಹೊರ ಹಾಕಲು ಒಮ್ಮೊಮ್ಮೆ ಭಯಗೊಳ್ಳುತ್ತಾರೆ. ಆದರೆ ಕೆಲವರು ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದರಲ್ಲಿ ರಾಂಚಿಯ ಮೇಕಪ್​ ಆರ್ಟಿಸ್ಟ್​ ರಾಶಿ ಕೂಡ ಒಬ್ಬರು.

  “ನನಗೆ ಆಗಿನ್ನೂ 18 ವರ್ಷ. ನನಗೆ ಹುಡುಗರ ನೋಡಿದಾಗ ಏನು ಅನ್ನಿಸುತ್ತಿರಲಿಲ್ಲ. ಆದರೆ, ಹುಡುಗಿಯರನ್ನು ನೋಡಿದಾಗ, ನಟಿಯರನ್ನು ನೋಡಿದಾಗ ಮೈಯಲ್ಲಿ ರೋಮಾಂಚನ ಉಂಟಾಗುತ್ತಿತ್ತು. ಆಸೆಗಳು ಹೊರ ಹೊಮ್ಮುತ್ತಿದ್ದವು. ನನಗೆ ಕಾಲೇಜಿಗೆ ಬಂದ ನಂತರ ನನ್ನಂತೆ ಅನೇಕರು ಇದ್ದಾರೆ ಎನ್ನುವ ವಿಚಾರ ಗೊತ್ತಾಗಿತ್ತು. ಈಗ ಇಬ್ಬರೂ ರೂಮ್​ ಮಾಡಿಕೊಂಡಿದ್ದೇವೆ. ಹೊರ ಜಗತ್ತಿಗೆ ನಾವು ಕೇವಲ ರೂಮೇಟ್ಸ್​ ಮಾತ್ರ,” ಎನ್ನುತ್ತಾರೆ ರಾಶಿ.

  ಇದನ್ನೂ ಓದಿ: ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಶಾಕಿಂಗ್​ ನ್ಯೂಸ್​!

  ಈ ಮೊದಲು ಜಗತ್ತು ಹೀಗಿರಲಿಲ್ಲವೇ?:

  ಸಲಿಂಗ ಎನ್ನುವ ವಿಚಾರ ಇತ್ತೀಚೆಗೆ ಹುಟ್ಟಿಕೊಂಡ ವಿಚಾರವೇ? ಖಂಡಿತವಾಗಿಯೂ ಇಲ್ಲ. ಮೊದಲು ತಂತ್ರಜ್ಞಾನ ಇಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ. ಹೀಗಾಗಿ, ಸಲಿಂಗಿಗೆ ಪಾರ್ಟ್​​ನರ್​ ಹುಡುಕುವುದು ತುಂಬಾನೇ ಕಷ್ಟವಾಗಿತ್ತು, ಅಲ್ಲದೆ, ಮನೆಯ ಕಟ್ಟು ಪಾಡುಗಳಿಗೆ ಸಿಕ್ಕಿ ಕೊರಗುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಸಲಿಂಗಿಗಳು ತಮ್ಮ ಭಾವನೆಗಳನ್ನು ಮುಕ್ತವಾಗಿ ಮಾತನಾಡುವ ಹಕ್ಕಿದೆ.

  First published: