• Home
  • »
  • News
  • »
  • lifestyle
  • »
  • Alzheimer's: ಅಲ್ಜೈಮರ್‌ ಅನ್ನೋದು ಪ್ರಾಥಮಿಕ ಮೆದುಳಿನ ಕಾಯಿಲೆಯಲ್ಲ; ಇದೊಂದು ಸ್ವಯಂ ನಿರೋಧಕ ಕಾಯಿಲೆಯಂತೆ

Alzheimer's: ಅಲ್ಜೈಮರ್‌ ಅನ್ನೋದು ಪ್ರಾಥಮಿಕ ಮೆದುಳಿನ ಕಾಯಿಲೆಯಲ್ಲ; ಇದೊಂದು ಸ್ವಯಂ ನಿರೋಧಕ ಕಾಯಿಲೆಯಂತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಲ್ಜೈಮರ್‌ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಮುಖ ವಿವಾದಗಳಿಗೆ ಸಾಕ್ಷಿಯಾಗಿದೆ. ಜುಲೈ 2022 ರಲ್ಲಿ, ಸೈನ್ಸ್ ನಿಯತಕಾಲಿಕವು ಪ್ರತಿಷ್ಠಿತ ಜರ್ನಲ್ ನೇಚರ್‌ನಲ್ಲಿ ಪ್ರಕಟವಾದ 2006 ರ ಪ್ರಮುಖ ಸಂಶೋಧನಾ ಪ್ರಬಂಧವನ್ನು ವರದಿ ಮಾಡಿದೆ. ಇದು ಬೀಟಾ-ಅಮಿಲಾಯ್ಡ್ ಎಂಬ ಮೆದುಳಿನ ಪ್ರೋಟೀನ್‌ನ ಕೊರತೆಯನ್ನು ಅಲ್ಜೈಮರ್‌ ಕಾಯಿಲೆಗೆ ನೇರ ಕಾರಣ ಎಂದು ಗುರುತಿಸಿದೆ.

ಮುಂದೆ ಓದಿ ...
  • Share this:

ಮನುಷ್ಯರಲ್ಲಿ ವಯಸ್ಸಾದ ನಂತರ ಮರೆವು ಹೆಚ್ಚಾಗುತ್ತದೆ. ಕೆಲವರಿಗೆ ಮರೆವು ಹೆಚ್ಚಾಗಿ ಅದು ಮುಂದೆ ಅಲ್ಜೈಮರ್‌ (Alzheimer) ಕಾಯಿಲೆಯಾಗಿ ಬದಲಾಗುತ್ತದೆ. ಈ ಕಾಯಿಲೆಯ (disease) ಚಿಕಿತ್ಸೆಗಾಗಿ ಈಗೀಗ ಸಂಶೋಧನೆಗಳು ಹೆಚ್ಚಾಗುತ್ತಿವೆ. ಈ ಸಂಶೋಧನೆಗಳು ವಿವಾದತ್ಮಕತೆಗೆ ತಿರುಗುತ್ತಿರುವುದು ವಿಷಾದನೀಯ. ಅಲ್ಜೈಮರ್‌ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಮುಖ ವಿವಾದಗಳಿಗೆ ಸಾಕ್ಷಿಯಾಗಿದೆ. ಜುಲೈ 2022 ರಲ್ಲಿ, ಸೈನ್ಸ್ ನಿಯತಕಾಲಿಕವು ಪ್ರತಿಷ್ಠಿತ ಜರ್ನಲ್ ನೇಚರ್‌ನಲ್ಲಿ ಪ್ರಕಟವಾದ 2006 ರ ಪ್ರಮುಖ ಸಂಶೋಧನಾ ಪ್ರಬಂಧವನ್ನು ವರದಿ ಮಾಡಿದೆ. ಇದು ಬೀಟಾ-ಅಮಿಲಾಯ್ಡ್ (Beta-amyloid) ಎಂಬ ಮೆದುಳಿನ ಪ್ರೋಟೀನ್‌ನ (Brain Protein) ಕೊರತೆಯನ್ನು ಅಲ್ಜೈಮರ್‌ ಕಾಯಿಲೆಗೆ ನೇರ ಕಾರಣ ಎಂದು ಗುರುತಿಸಿದೆ. ಇದು ಫ್ಯಾಬ್ರಿಕೇಟೆಡ್ ಡೇಟಾವನ್ನು (Fabricated data) ಆಧರಿಸಿರಬಹುದು.


ಬೀಟಾ-ಅಮಿಲಾಯ್ಡ್
ಕಳೆದ ಜೂನ್ 2021 ರಲ್ಲಿ, ಯುಸ್‌.ಎ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ಅಲ್ಜೈಮರ್‌ ಚಿಕಿತ್ಸೆಯಾಗಿ ಅಡುಕಾನುಮಾಬ್ ಎಂಬ ಪ್ರತಿಕಾಯ ಬೀಟಾ-ಅಮಿಲಾಯ್ಡ್ ಗೆ ಗ್ರೀನ್ ಸಿಗ್ನಲ್‌ ನೀಡಿದೆ. ಅದರ ಬಳಕೆಯನ್ನು ಬೆಂಬಲಿಸುವ ಡೇಟಾವು ಅಪೂರ್ಣ ಮತ್ತು ವಿರೋಧಾತ್ಮಕವಾಗಿದ್ದರೂ ಸಹ ಯುಸ್‌.ಎ ಪುಡ್‌ ಅಂಡ್‌ ಎರಗ್‌ ಅಡ್ಮೀನಿಸ್ಟ್ರೇಷನ್‌ ಇದಕ್ಕೆ ಅನುಮೋದನೆ ನೀಡಿದ್ದಾರೆ. ಕೆಲವು ವೈದ್ಯರು ಅಡುಕಾನುಮಾಬ್‌ಗೆ ಎಂದಿಗೂ ಅನುಮೋದಿಸಬಾರದು ಎಂದು ಹೇಳುತ್ತಾರೆ. ಆದರೆ ಇನ್ನು ಕೆಲವರು ಈ ಔಷಧಿಯು ಬಹಳ ಪ್ರಯೋಜನಕಾರಿಯಾಗಿದೆ ಇದಕ್ಕೆ ಅವಕಾಶ ನೀಡಬೇಕು ಎಂದು ಹೇಳುತ್ತಾರೆ.


ಈ ಕಾಯಿಲೆಗೆ ಲಕ್ಷಾಂತರ ಜನರಿಗೆ ಪರಿಣಾಮಕಾರಿ ಚಿಕಿತ್ಸೆಯ ಅಗತ್ಯವಿರುವುದರಿಂದ, ಮಾನವಕುಲವನ್ನು ಬಹುದಿನಗಳಿಂದ ಕಾಡುತ್ತಿರುವ ಪ್ರಮುಖ ಕಾಯಿಲೆಗಳಲ್ಲಿ ಒಂದಾಗಿರುವ ಈ ಕಾಯಿಲೆಗೆ ಇನ್ನು ಸೂಕ್ತ ಚಿಕಿತ್ಸೆಯನ್ನು ಕಂಡುಹಿಡಿಯುವಲ್ಲಿ ಸಂಶೋಧಕರು ಏಕೆ ಇನ್ನು ತಪ್ಪು ಮಾಡುತ್ತಿದ್ದಾರೆ? ಎಂಬುದೇ ತಿಳಿಯುತ್ತಿಲ್ಲ.


ಬೀಟಾ-ಅಮಿಲಾಯ್ಡ್ ಎಂಬ ಮೆದುಳಿನ ಪ್ರೋಟಿನ್‌
ಬೀಟಾ-ಅಮಿಲಾಯ್ಡ್ ಎಂಬ ಪ್ರೋಟೀನ್‌ ಮೆದುಳಿಗೆ ಹಾನಿಯುಂಟುಮಾಡುವ ಕ್ಲಂಪ್‌ಗಳ ರಚನೆಯನ್ನು ತಡೆಗಟ್ಟುವ ಮೂಲಕ ಆಲ್ಝೈಮರ್‌ಗೆ ಹೊಸ ಚಿಕಿತ್ಸೆಗಳನ್ನು ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ವಿಜ್ಞಾನಿಗಳು ಇದರಲ್ಲಿ ವಿಫಲರಾಗುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ ಅವರು ಬೌದ್ಧಿಕವಾಗಿ ಈ ಕಾಯಿಲೆಗೆ ಚಿಕಿತ್ಸೆ ಕಂಡುಹಿಡಿಯಬೇಕೆಂಬ ಹಠವನ್ನು ಹೊಂದಿದ್ದಾರೆ.


ಇದನ್ನೂ ಓದಿ:  Mental Disease: ನೆನಪಿನ ಶಕ್ತಿ ಕಸಿಯುವ, ನರಗಳ ಅವನತಿಗೆ ಕಾರಣವಾಗುತ್ತೆ ಈ ಕಾಯಿಲೆ, ಎಚ್ಚರ!


ಇನ್ನು ವಿಷಾದನೀಯ ಸಂಗತಿಯೆಂದರೆ ಅಸಹಜ ಪ್ರೊಟೀನ್ ಕ್ಲಂಪ್‌ಗಳನ್ನು ಅಧ್ಯಯನ ಮಾಡುವ ಈ ವಿಧಾನವು ಉಪಯುಕ್ತ ಔಷಧ ಅಥವಾ ಚಿಕಿತ್ಸೆಯಾಗಿ ಇನ್ನು ರೂಪಗೊಂಡಿಲ್ಲ. ಅಲ್ಜೈಮರ್‌ ಕಾಯಿಲೆಗೆ ಹೊಸ "ಔಟ್-ಆಫ್-ದಿ-ಕ್ಲಂಪ್" ಎಂಬ ಚಿಕಿತ್ಸಾ ವಿಧಾನವು ಮೆದುಳಿನ ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ.


ಇದು ಸ್ವಯಂ ನಿರೋಧಕ ಸ್ಥಿತಿ: ಹೊಸ ಸಿದ್ದಾಂತ
ಟೊರೊಂಟೊದಲ್ಲಿನ ಯೂನಿವರ್ಸಿಟಿ ಹೆಲ್ತ್ ನೆಟ್‌ವರ್ಕ್‌ನ ಭಾಗವಾಗಿರುವ ಕ್ರೆಂಬಿಲ್ ಬ್ರೈನ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ಪ್ರಯೋಗಾಲಯವು ಅಲ್ಜೈಮರ್‌ ಕಾಯಿಲೆಯ ಹೊಸ ಸಿದ್ಧಾಂತವನ್ನು ರೂಪಿಸುತ್ತಿದೆ ಎಂದು ಸಂಶೋಧಕರು ಹೇಳಿದರು.


“ನಮ್ಮ ಹಿಂದಿನ 30 ವರ್ಷಗಳ ಸಂಶೋಧನೆಯ ಆಧಾರದ ಮೇಲೆ, ನಾವು ಇನ್ನು ಮುಂದೆ ಆಲ್ಜೈಮರ್‌ ಅನ್ನು ಪ್ರಾಥಮಿಕವಾಗಿ ಮೆದುಳಿನ ಕಾಯಿಲೆ ಎಂದು ಪರಿಗಣಿಸುವುದಿಲ್ಲ. ಬದಲಿಗೆ, ಅಲ್ಜೈಮರ್‌ ಮುಖ್ಯವಾಗಿ ಮೆದುಳಿನೊಳಗಿನ ಪ್ರತಿರಕ್ಷಣಾ ವ್ಯವಸ್ಥೆಯ ಅಸ್ವಸ್ಥತೆ ಎಂದು ನಾವು ತೀವ್ರವಾಗಿ ಪರಿಗನಿಸುತ್ತವೆ” ಎಂದು ಸಂಶೋಧಕರು ಹೇಳಿದರು.


ದೇಹದ ಪ್ರತಿಯೊಂದು ಅಂಗದಲ್ಲಿ ಕಂಡುಬರುವ ಪ್ರತಿರಕ್ಷಣಾ ವ್ಯವಸ್ಥೆಯು ಕೋಶಗಳು ಮತ್ತು ಅಣುಗಳ ಸಂಗ್ರಹವಾಗಿದ್ದು, ಗಾಯಗಳನ್ನು ಬೇಗನೆ ವಾಸಿ ಮಾಡಲು ಮತ್ತು ಇತರ ರೋಗಗಳಿಂದ ರಕ್ಷಿಸಲು ಇವು ಕಾರ್ಯನಿರ್ವಹಿಸುತ್ತವೆ.


ಇದೇ ಪ್ರಕ್ರಿಯೆಯು ಸಹ ಮೆದುಳಿನಲ್ಲಿ ನಡೆಯುತ್ತವೆ. ತಲೆಗೆ ಆಘಾತ ಉಂಟಾದಾಗ, ಮೆದುಳಿನ ಪ್ರತಿರಕ್ಷಣಾ ವ್ಯವಸ್ಥೆಯು ದುರಸ್ತಿಗೆ ಸಹಾಯ ಮಾಡಲು ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಮೆದುಳಿನಲ್ಲಿ ಬ್ಯಾಕ್ಟೀರಿಯಾಗಳು ಇದ್ದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಅವುಗಳನ್ನು ದೇಹದಿಂದ ಹೊರ ಹಾಕಲು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಪಡುತ್ತದೆ.


ರೋಗದ ಇತರ ಸಿದ್ಧಾಂತಗಳು
ಅಲ್ಜೈಮರ್‌ ಒಂದು ಸ್ವಯಂರೋಗ ಎಂಬ ಈ ಸ್ವಯಂ ನಿರೋಧಕ ಸಿದ್ಧಾಂತದ ಜೊತೆಗೆ, ಅನೇಕ ಇತರ ಹೊಸ ಮತ್ತು ವೈವಿಧ್ಯಮಯ ಸಿದ್ಧಾಂತಗಳು ಈಗ ಬೆಳಕಿಗೆ ಬರುತ್ತಿವೆ. ಉದಾಹರಣೆಗೆ, ಕೆಲವು ವಿಜ್ಞಾನಿಗಳು ಅಲ್ಜೈಮರ್‌ ಮೈಟೊಕಾಂಡ್ರಿಯಾ ಎಂಬ ಸಣ್ಣ ಸೆಲ್ಯುಲಾರ್ ರಚನೆಗಳ ರೋಗ ಎಂದು ನಂಬುತ್ತಾರೆ.


ಇದನ್ನೂ ಓದಿ:  Diabetes Food: ಡಯಾಬಿಟೀಸ್​ ಸಮಸ್ಯೆ ಇದ್ರೆ ಸಕ್ಕರೆ ಹಾಕದ ಈ ಆಹಾರಗಳನ್ನು ತಿನ್ನಿ


ಪ್ರತಿ ಮೆದುಳಿನ ಕೋಶದಲ್ಲಿನ ಶಕ್ತಿ ಕಾರ್ಖಾನೆಗಳೇ ಈ ಮೈಟೋಕಾಂಡ್ರಿಯಾಗಳು ಆಗಿವೆ. . ಮೈಟೊಕಾಂಡ್ರಿಯಾ ನಾವು ಉಸಿರಾಡುವ ಗಾಳಿಯಿಂದ ಆಮ್ಲಜನಕವನ್ನು ಮತ್ತು ನಾವು ಸೇವಿಸುವ ಆಹಾರದಿಂದ ಗ್ಲೂಕೋಸ್ ಅನ್ನು ಬಳಸಿಕೊಂಡು, ನೆನಪಿನ ಶಕ್ತಿಗೆ ಅಗತ್ಯವಾದ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.

Published by:Ashwini Prabhu
First published: