• Home
  • »
  • News
  • »
  • lifestyle
  • »
  • Alzheimer Disease: ವಯಸ್ಸಾದಂತೆ ಕಾಡುವ ಆಲ್ಝೈಮರ್ ಕಾಯಿಲೆ, ನೆನಪಿನ ಶಕ್ತಿ ಕುಂದಿಸುವ ಸಂಕೇತಗಳು ಹೀಗಿವೆ!

Alzheimer Disease: ವಯಸ್ಸಾದಂತೆ ಕಾಡುವ ಆಲ್ಝೈಮರ್ ಕಾಯಿಲೆ, ನೆನಪಿನ ಶಕ್ತಿ ಕುಂದಿಸುವ ಸಂಕೇತಗಳು ಹೀಗಿವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜ್ಞಾಪಕ ಶಕ್ತಿ ನಷ್ಟವು ದೈನಂದಿನ ಜೀವನದಲ್ಲಿ ಸಾಕಷ್ಟು ಅನಾಹುತ ಮತ್ತು ಸಮಸ್ಯೆ ಉಂಟು ಮಾಡುತ್ತದೆ. ಹೀಗೆ ಮರೆವು ದಿನವೂ ಮತ್ತು ನಿರಂತರವಾಗಿ ಕಾಡುತ್ತಿದ್ದರೆ ಇದು ಆಲ್ಝೈಮರ್ ಕಾಯಿಲೆ ಅಥವಾ ಬುದ್ಧಿಮಾಂದ್ಯತೆ ಲಕ್ಷಣ ಆಗಿರಬಹುದು. ಕುಟುಂಬದ ಸದಸ್ಯರಿಗೆ ಆಲ್ಝೈಮರ್ ಇದೆಯೇ ಎಂದು ಗುರುತಿಸುವುದು ಮುಖ್ಯ.

ಮುಂದೆ ಓದಿ ...
  • Share this:

    ವಯಸ್ಸಾಗುತ್ತಾ (Age) ಹೋದಂತೆ ಹಲವು ಕಾಯಿಲೆಗಳು (Disease) ಕಾಡುತ್ತವೆ. ಅಸ್ವಸ್ಥತೆ, ಅನಾರೋಗ್ಯ ಪದೇ ಪದೇ ಮನುಷ್ಯನನ್ನು (Human) ಹಿಂಡಿ ಹಿಪ್ಪೆ ಮಾಡುತ್ತದೆ. ದೇಹದಲ್ಲಿ (Body) ಹಲವು ರೀತಿಯ ಸಮಸ್ಯೆಗಳು ಶುರು ಆಗುತ್ತವೆ. ವಯಸ್ಸಾದ ನಂತರ ಬರುವ ಕಾಯಿಲೆಗಳಲ್ಲಿ ಬರುವ ಸಾಮಾನ್ಯ ಕಾಯಿಲೆ ಅಂದ್ರೆ ನೆನಪಿನ ಶಕ್ತಿ ಕುಂದುವಿಕೆ ಅಥವಾ ನಷ್ಟ (Alzheimer Disease). ನಿಮ್ಮ ಕುಟುಂಬದ ಕೆಲವು ಅಥವಾ ಇತರೆ ಹಿರಿಯ ಸದಸ್ಯರು ಈ ಸಮಸ್ಯೆ ಎದುರಿಸುತ್ತಿರಬಹುದು. ಯವುದೋ ಒಂದು ವಸ್ತುವನ್ನು ಎಲ್ಲಿಂದಲೋ ಎತ್ತಿಕೊಂಡು ಮತ್ತೆ ಅದೇ ಸ್ಥಳದಲ್ಲಿ ಆ ವಸ್ತುವನ್ನು ಇಡುವುದನ್ನೇ ಮರೆತಿರುತ್ತಾರೆ. ಚಹಾ ಅಥವಾ ಹಾಲು ಬಿಸಿ ಮಾಡಲು ಇಟ್ಟು ಬಂದು ಮರೆತು ಬಿಟ್ಟಿರುತ್ತಾರೆ.


    ನಿರಂತರವಾಗಿ ಉಂಟಾಗುವ ಮರೆವು ಸಮಸ್ಯೆ


    ಹೀಗೆ ಉಂಟಾಗು ಜ್ಞಾಪಕ ಶಕ್ತಿ ನಷ್ಟವು ದೈನಂದಿನ ಜೀವನದಲ್ಲಿ ಸಾಕಷ್ಟು ಅನಾಹುತ ಮತ್ತು ಸಮಸ್ಯೆ ಉಂಟು ಮಾಡುತ್ತದೆ. ಹೀಗೆ ಮರೆವು ದಿನವೂ ಮತ್ತು ನಿರಂತರವಾಗಿ ಕಾಡುತ್ತಿದ್ದರೆ ಇದು ಆಲ್ಝೈಮರ್ ಕಾಯಿಲೆ ಅಥವಾ ಬುದ್ಧಿಮಾಂದ್ಯತೆ ಲಕ್ಷಣ ಆಗಿರಬಹುದು.


    ಕುಟುಂಬದ ಸದಸ್ಯರಿಗೆ ಆಲ್ಝೈಮರ್ ಇದೆಯೇ ಎಂದು ಗುರುತಿಸುವುದು ಮುಖ್ಯ. ಆಲ್ಝೈಮರ್ ಅನ್ನು ಗುರುತಿಸಲು ಕೆಲವು ಸಂಕೇತಗಳಿವೆ. ಅವುಗಳ ಮೂಲಕ ಕಾಯಿಲೆಯನ್ನು ಕಂಡು ಹಿಡಿಯಬಹುದು. ಆಲ್ಝೈಮರ್ ಕಾಯಿಲೆ ವ್ಯಕ್ತಿಯ ಸ್ಮರಣಾಶಕ್ತಿ, ​​ಆಲೋಚನಾ ಶಕ್ತಿ, ತಾರ್ಕಿಕ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತದೆ


    ಡಾ.ಅಶುತೋಷ್ ನಿರಂಜನ್ ಅವರ ಪ್ರಕಾರ, ಅಲ್ಝೈಮರ್ ಮೆದುಳಿನ ಕಾಯಿಲೆ ಆಗಿದೆ. ಕ್ಷೀಣಗೊಳ್ಳುವ ನರವೈಜ್ಞಾನಿಕ ಸ್ಥಿತಿಯಲ್ಲಿ, ಮೆದುಳಿನ ಜೀವಕೋಶಗಳು ಸಾಯುತ್ತವೆ ಮತ್ತು ಮೆದುಳು ಕುಗ್ಗುತ್ತದೆ. ಬುದ್ಧಿಮಾಂದ್ಯತೆ ಉಂಟಾದಾಗ ಮಾನಸಿಕ, ನಡವಳಿಕೆ ಮತ್ತು ಸಾಮಾಜಿಕ ಸಾಮರ್ಥ್ಯಗಳಲ್ಲಿ ಪ್ರಗತಿಯು ಕುಸಿತ ಕಾಣುತ್ತದೆ.


    ವ್ಯಕ್ತಿ ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಳ್ತಾನೆ. ಆಲ್ಝೈಮರ್ ಕಾಯಿಲೆ ಸ್ಮರಣೆ, ​​ಆಲೋಚನಾ ಶಕ್ತಿ, ತಾರ್ಕಿಕ ಕೌಶಲ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಪ್ರಕ್ರಿಯೆ ನಿಧಾನಗತಿಯ ಕುಸಿತಕ್ಕೆ ಕಾರಣವಾಗಿದೆ. ಈ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.


    ಜ್ಞಾಪಕ ಶಕ್ತಿ ನಷ್ಟ ಉಂಟಾಗುವುದು


    ಆರಂಭಿಕ ಹಂತದಲ್ಲಿ ಒಬ್ಬ ವ್ಯಕ್ತಿಯು ತ್ವರಿತ ಮಾಹಿತಿ ಪಡೆಯುವ ವಿಷಯವನ್ನೇ ಮರೆಯುತ್ತಾನೆ. ಇದು ಆಲ್ಝೈಮರ್ ಕಾಯಿಲೆಯ ಅತ್ಯಂತ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ. ಪ್ರಮುಖ ದಿನಾಂಕ ಮತ್ತು ಘಟನೆಗಳನ್ನು ಮರೆಯುವುದು,


    ಪ್ರಶ್ನೆ ಪದೇ ಪದೇ ಕೇಳುವುದು ಮತ್ತು ಮುಖ್ಯ ಸಂಗತಿಗಳನ್ನು ನೆನಪಿಡಲು ಸಾಧ್ಯವಾಗದ ಸ್ಥಿತಿ, ಕುಟುಂಬ ಸದಸ್ಯರಿಂದ ಹೆಚ್ಚು ಸಹಾಯ ಪಡೆಯುವುದು ಆಲ್ಝೈಮರ ನ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ.


    ಆಲ್ಝೈಮರ್ನ ಕಾಯಿಲೆಯಿಂದ ವ್ಯಕ್ತಿಯಲ್ಲಿ ಸಾರ್ಥ್ಯ ಕುಸಿತ


    ಕೆಲವು ಆಲ್ಝೈಮರ ರೋಗಿಗಳು ಸಮಸ್ಯೆ ಯೋಜಿಸುವ ಅಥವಾ ಸಂಖ್ಯೆಗಳೊಂದಿಗೆ ಕೆಲಸ ಮಾಡುವ ಸಾಮರ್ಥ್ಯದಲ್ಲಿ ಬದಲಾವಣೆ ಹೊಂದಿರುತ್ತಾರೆ. ಅವರು ಸರಳವಾದ ವಿಷಯ ಅಥವಾ ಪರಿಹಾರ ನೆನಪಿಡಲು ಸಾಧ್ಯವಾಗದೇ ಒದ್ದಾಡುತ್ತಾರೆ.


    ಅವರು ತಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಮರೆಯುತ್ತಾರೆ. ಏಕಾಗ್ರತೆಯ ತೊಂದರೆ ಅನುಭವಿಸುವುದು. ಮೊದಲಿಗಿಂತ ಹೆಚ್ಚು ನಿಧಾನವಾಗಿ ಕೆಲಸ ಮಾಡುವುದು.


    ಸುಲಭವಾದ ಕೆಲಸ ಪೂರ್ಣಗೊಳಿಸುವಲ್ಲಿ ತೊಂದರೆ


    ಆಲ್ಝೈಮರ್ ಕಾಯಿಲೆ ಇರುವ ಜನರಿಗೆ ದೈನಂದಿನ ಕೆಲಸ ಕಂಪ್ಲೀಟ್ ಮಾಡೋಕೆ ಆಗಲ್ಲ. ವಿಶೇಷ ದಿನ ನೆನಪಿಡಲು ಆಗಲ್ಲ. ಸಮಯ ಹವಾಮಾನ ಮತ್ತು ದಿನಾಂಕ ಗುರುತಿಸಲು ಸಾಧ್ಯವಿಲ್ಲ. ಆಲ್ಝೈಮರ್ನ ರೋಗಿಗಳು ಸಮಯ, ಹವಾಮಾನ ಮತ್ತು ದಿನಾಂಕ ಮರೆಯುತ್ತಾರೆ. ಯಾವುದೋ ಜಾಗಕ್ಕೆ ಹೋಗಲು ಹೋಗಿ ಇನ್ಯಾವುದೋ ಜಾಗಕ್ಕೆ ಹೋಗ್ತಾರೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು


    ಆಲ್ಝೈಮರ್ ಕಾಯಿಲೆ ಇರುವ ಜನರು ವಸ್ತುಗಳನ್ನು ತಪ್ಪಾಗಿ ಜೋಡಿಸಬಹುದು. ವಯಸ್ಸು ಹೆಚ್ಚಿದಂತೆ ಈ ಆಲ್ಝೈಮರ ಕಾಯಿಲೆ ಮತ್ತಷ್ಟು ಹೆಚ್ಚುತ್ತದೆ.

    Published by:renukadariyannavar
    First published: