Shilpa Shetty:ಯಾವಾಗಲೂ ಸ್ವಂತಿಕೆಯನ್ನು ಅಳವಡಿಸಿಕೊಳ್ಳಿ- ಸಾಮಾಜಿಕ ಜಾಲಾತಾಣದಲ್ಲಿ ಶಿಲ್ಪಾ ಶೆಟ್ಟಿ ಹೊಸ ಫೋಟೊ ವೈರಲ್

ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ತಯಾರಿಕೆಯ ಆರೋಪದ ಮೇಲೆ ಬಂಧಿಸಿಲಾಗಿತ್ತು. ಈ ಸಮಯದಲ್ಲಿ ಶಿಲ್ಪಾ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು.

ಶಿಲ್ಪಾ ಶೆ್ಟ್ಟಿ

ಶಿಲ್ಪಾ ಶೆ್ಟ್ಟಿ

  • Share this:
ಮಗಳು ಸಮೀಷಾ ಮತ್ತು ಮಗ ವಿಯಾನ್ ಜೊತೆ ಮನೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಿ  ನಟಿ ಶಿಲ್ಪಾ ಶೆಟ್ಟಿ(Shilpa Shetty) ಇತ್ತೀಚೆಗೆ ಸುದ್ದಿಯಾಗಿದ್ದಾರೆ. ನಟಿ ಮನೆಯಲ್ಲಿ ಪೂಜೆ ಮಾಡಿ, ಕುಟುಂಬದ ಜೊತೆ  ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಶನಿವಾರ, ಶಿಲ್ಪಾ  ವ್ಯಕ್ತಿತ್ವದದ ಕುರಿತು ಮತ್ತು ಯಾವಾಗಲೂ  ಹ್ಯಾಪಿ ಆಗಿರುವ ಬಗ್ಗೆ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಕೆಲ ಸಲಹೆ ನೀಡಿದ್ದಾರೆ. ತಮ್ಮ ಸುಂದರ ಫೋಟೋ ಹಂಚಿಕೊಂಡಿರುವ ಶಿಲ್ಪಾ ಅಭಿಮಾನಿಗಳ ಜೊತೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರತಿ ಬಾರಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತಿತ್ತು. ಆದರೆ ಈ ಬಾರಿ ಸಾಮಾನ್ಯವಾಗಿ ಆಚರಣೆ ಮಾಡಲಾಗಿದೆ. ಪತಿ ರಾಜ್​ ಕುಂದ್ರಾ(Raj Kundra) ಜೈಲಿನಲ್ಲಿದ್ದರೆ, ಸಹೋದರಿ ಶಮಿತಾ ಶೆಟ್ಟಿ(Shamitha Shetty) OTT ಬಿಗ್​ ಬಾಸ್​ನಲ್ಲಿ(Bigboss) ಭಾಗವಹಿಸಿದ್ದಾರೆ.

ಶನಿವಾರ ತನ್ನ ಇನ್‌ಸ್ಟಾಗ್ರಾಮ್  ಖಾತೆಯಲ್ಲಿ ಶಿಲ್ಪಾ, ಫೋಟೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಆಕೆ  ಗುಲಾಬಿ ಬಣ್ಣದ ಸೀರೆಯುಟ್ಟು ತನ್ನ ಸೊಂಟದ ಸುತ್ತಲೂ ಬೆಲ್ಟ್ ಅನ್ನು ಧರಿಸಿದ್ದು, ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗಷ್ಟೇ  ಹಂಗಾಮ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದ  ನಟಿ, ಸೀರೆಯ ಜೊತೆ ಸುಂದರವಾದ ಹಾರ ಮತ್ತು ಕಿವಿಯೋಲೆಗಳನ್ನು ಹಾಕಿದ್ದಾರೆ.  ಫೋಟೋದಲ್ಲಿ ಸಂಪೂರ್ಣವಾಗಿ ಮಂತ್ರಮುಗ್ಧರಾಗಿ  ಶಿಲ್ಪಾ ಕಾಣಿಸುತ್ತಿದ್ದರು. ಫೋಟೋದೊಂದಿಗೆ, ಶಿಲ್ಪಾ ಸ್ವಂತಿಕೆಗೆ ಸಂಬಂಧಿಸಿದ ಶೀರ್ಷಿಕೆಯನ್ನು ಬರೆದಿದ್ದಾರೆ. "ನೀವು ಏನು ಧರಿಸಿದರೂ, ಯಾವಾಗಲೂ  ಸ್ವಂತಿಕೆಯನ್ನು ಅಳವಡಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ತಯಾರಿಕೆಯ ಆರೋಪದ ಮೇಲೆ ಬಂಧಿಸಿಲಾಗಿತ್ತು. ಈ ಸಮಯದಲ್ಲಿ ಶಿಲ್ಪಾ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು.

 ಇನ್ನು ಪತಿ ರಾಜ್ ಕುಂದ್ರಾ ಬಂಧನದ  ನಂತರ ಸಾರ್ವಜನಿಕವಾಗಿ ನಟಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿರಲಿಲ್ಲ., ರಿಯಾಲಿಟಿ ಶೋ ಸೂಪರ್ ಡಾನ್ಸರ್​ನಲ್ಲಿ ಕೂಡ ಕೆಲ ದಿನಗಳ ಕಾಲ ಭಾಗವಹಿಸಿರಲಿಲ್ಲ. ಆದರೆ ಇದೀಗ ರಿಯಾಲಿಟಿ ಶೋ ಮೂಲಕ ಕಮ್​ಬ್ಯಾಕ್ ಮಾಡಿದ್ದಾರೆ. ಸೂಪರ್ ಡಾನ್ಸರ್’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ಶಿಲ್ಪಾ , ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಮೂಲಗಳ ಪ್ರಕಾರ, ಶಿಲ್ಪಾ ಅವರ ಸಂಕಷ್ಟದ ಸಮಯದಲ್ಲಿ ಕೂಡ ತಂಡವು ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿತ್ತು. ಅವರಿಗೆ ಧೈರ್ಯ ಹೇಳಿ, ಅವರ ಜೊತೆಗಿದ್ದರು.  ಅಲ್ಲದೇ ಮಗು, ಕುಟುಂಬಕ್ಕೋಸ್ಕರವಲ್ಲದೇ, ತಮ್ಮನ್ನು ದೃಷ್ಟಿಯಲ್ಲಿಟ್ಟುಕೊಂಡು ರಿಯಾಲಿಟಿ ಶೋದಲ್ಲಿ ಭಾಗಿಯಾಗುವುದು ಅವಶ್ಯಕ ಎಂದು ಶಿಲ್ಪಾ ಭಾವಿಸಿ  ಮರಳಲು ಒಪ್ಪಿಕೊಂಡಿದ್ದಾರೆ. ಅವರನ್ನು ಶೋಗೆ ಅದ್ದೂರಿಯಾಗಿ ಆಮಂತ್ರಿಸಿದ್ದನ್ನು ನೋಡಿ, ಶಿಲ್ಪಾ ಭಾವುಕರಾಗಿದ್ದರು.

 ಶಿಲ್ಪಾ ಅವರು ಶೋಗೆ ಪ್ರವೇಶ ಮಾಡುತ್ತಾ ತಮಗೆ ಸಿಕ್ಕ ಸ್ವಾಗತ ನೋಡಿ ಭಾವುಕರಾಗಿದ್ದು,  ಆಗ ಸಹ ತೀರ್ಪುಗಾರರಾದ ನಿರ್ದೇಶಕ ಅನುರಾಗ್ ಬಸು ಹಾಗೂ ಗೀತಾ ಕಪೂರ್ ಶಿಲ್ಪಾ ಅವರನ್ನು ಸಮಾಧಾನ ಮಾಡಿದ್ದಾರೆ. ಈ ಮೊದಲು ಅನುರಾಗ್ ಬಸು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘‘ಶೋನಲ್ಲಿ ಶಿಲ್ಪಾ ಅವರು ಬರುತ್ತಿಲ್ಲ, ಅದು  ಬಹಳ ಬೇಸರ ತಂದಿದೆ. ನಮ್ಮದು ಮೂರು ಜನರ ಸಣ್ಣ ಕುಟುಂಬ. ಅದರಲ್ಲಿ ಒಬ್ಬರು ಗೈರಾದಾಗ ಅವರ ಅನುಪಸ್ಥಿತಿ ಬಹಳ ಕಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Raj Kundra-Shamita Shetty ಗೈರಿನಲ್ಲಿ ಮಕ್ಕಳ ಜತೆ ಗಣಪತಿ ಹಬ್ಬ ಆಚರಿಸಿದ Shilpa Shetty

ಪತಿ ಮಾಡುತ್ತಿದ್ದ ಕೆಲಸಗಳು ಶಿಲ್ಪಾ ಶೆಟ್ಟಿಮತ್ತು ಅವರ ಕುಟುಂಬಕ್ಕೆ ತೀವ್ರ ಮುಜುಗರ ಉಂಟು ಮಾಡಿರುವುದು ಸತ್ಯ.. ಅದರಲ್ಲೂ ಈ ಪ್ರಕರಣ ತಮ್ಮ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನ ಅರಿತಿರುವ ಶೀಲ್ಪಾ, ಒಂದು  ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. , ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದಾರೆ ಎಂದು  ಸಿನಿಮಾ ಮಾಧ್ಯಮವೊಂದು ವರದಿ ಮಾಡಿದೆ.
Published by:Sandhya M
First published: