Butter : ಬೆಣ್ಣೆ ಬದಲಿಗೆ ಈ 5 ವಸ್ತುಗಳನ್ನು ಬಳಸಿದ್ರೆ ಅಡುಗೆ ರುಚಿ ಹೆಚ್ಚಾಗುತ್ತದೆ
Butter Alternative : ಬೆಣ್ಣೆ ಸಂಸ್ಕರಿಸಿದ ಆಹಾರ ಉತ್ಪನ್ನವಾಗಿರುವ ಕಾರಣದಿಂದಾಗಿ ಹಾನಿಕಾರಕವಾಗಿದೆ. ಹೀಗಾಗಿ ದೇಹದಲ್ಲಿ ಹೆಚ್ಚು ಕೊಲೆಸ್ಟರಾಲ್ ಸಂಗ್ರಹವಾಗಿ ಹಲವಾರು ರೋಗಗಳನ್ನು ತಂದೊಡ್ಡಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ.. ಹೀಗಾಗಿ ಬೆಣ್ಣೆಯ ಬದಲಿಗೆ ಕೆಲವು ಪರ್ಯಾಯ ಮಾರ್ಗಗಳನ್ನು ಬಳಸಿ ರುಚಿಯಾದ ಅಡುಗೆ ತಯಾರು ಮಾಡಬಹುದು..
ಬೆಣ್ಣೆ, ( butter) ಎಂದರೆ ಒಮ್ಮೆ ಎಲ್ಲರ ಬಾಯಲ್ಲೂ ನೀರನ್ನು ತರಿಸುವುದು. ಅದರ ಮೃದುವಾದ ಸ್ಥಿರತೆ ಹಾಗೂ ರುಚಿಯು ಆಹಾರ ಪದಾರ್ಥಗಳ( Tasty food ) ಪರಿಮಳ (Smell)ಹಾಗೂ ಸವಿಯನ್ನು ಹೆಚ್ಚಿಸುವುದು. ಬಿಸಿ ಬಿಸಿಯಾದ ರೊಟ್ಟಿ, ಪರಾಟ, ಬಿಸಿಬೇಳೆ ಬಾತ್, ಪೊಂಗಲ್ ಗಳಂತಹ ಆಹಾರಗಳ ಮೇಲೆ ಬೆಣ್ಣೆಯನ್ನು ಹಾಕಿಕೊಂಡು ತಿಂದರೆ ಸ್ವರ್ಗಕ್ಕೆ ಮೂರೇ ಗೇಣು..ಅಲ್ಲದೆ ಮನೆಯಲ್ಲಿಯೇ ತಯಾರಿಸಿದ ಬೆಣ್ಣೆ ಮತ್ತು ಅಧಿಕ ಶುದ್ಧತೆ ಹಾಗೂ ಆರೋಗ್ಯದಿಂದ ಕೂಡಿರುತ್ತದೆ. ಆದ್ರೆ ಮಾರುಕಟ್ಟೆಯಲ್ಲಿ ಸಿಗುವ ಬೆಣ್ಣೆಗಳು ಕೆಲವು ಕಲಬೆರಿಕೆ ಅಥವಾ ದೀರ್ಘ ಸಮಯಗಳ ಕಾಲ ಹಾಳಗದೆ ಇರುವಂತೆ ಕಾಯ್ದಿಡಲು ಕೆಲವು ರಾಸಾಯನಿಕ ಪದಾರ್ಥಗಳನ್ನು ಸೇರಿಸುವುದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು.. .ಅಲ್ಲದೆ ಬೆಣ್ಣೆ ಸಂಸ್ಕರಿಸಿದ ಆಹಾರ ಉತ್ಪನ್ನವಾಗಿರುವ ಕಾರಣದಿಂದಾಗಿ ಹಾನಿಕಾರಕವಾಗಿದೆ. ಹೀಗಾಗಿ ದೇಹದಲ್ಲಿ ಹೆಚ್ಚು ಕೊಲೆಸ್ಟರಾಲ್ ( cholesterol)ಸಂಗ್ರಹವಾಗಿ ಹಲವಾರು ರೋಗಗಳನ್ನು ತಂದೊಡ್ಡಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ.. ಹೀಗಾಗಿ ಬೆಣ್ಣೆಯ ಬದಲಿಗೆ ಕೆಲವು ಪರ್ಯಾಯ ಮಾರ್ಗಗಳನ್ನು( alternative) ಬಳಸಿ ರುಚಿಯಾದ ಅಡುಗೆ ತಯಾರು ಮಾಡಬಹುದು..ಬೆಣ್ಣೆಯ ಬದಲಾಗಿ ಬಳಸುವ ಪರ್ಯಾಯ ವಸ್ತುಗಳು ಯಾವುವು ಎನ್ನುವುದನ್ನು ನೋಡುವುದಾದರೆ..
1) ತುಪ್ಪ :ತುಪ್ಪವನ್ನ ಬೆಣ್ಣೆ ಇಂದಲೇ ತಯಾರು ಮಾಡಲಾಗುತ್ತದೆ.. ಆದರೆ ಇದು ಆರೋಗ್ಯಕ್ಕೆ ಬೆಣ್ಣೆ ಗಿಂತಲೂ ಹೆಚ್ಚು ಸಹಾಯಕಾರಿ.. ಭಾರತೀಯರ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ತುಪ್ಪ ತುಪ್ಪದಲ್ಲಿ ಕ್ಯಾಲೋರಿ, ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ವೈರಸ್ ಅಥವಾ ಬ್ಯಾಕ್ಟೀರಿಯ ವಿರುದ್ದ ಹೋರಾಡುವ ಗುಣ ಹೊಂದಿದೆ. ಹೀಗಾಗಿ ಬೆಣ್ಣೆಯ ಬದಲಿಗೆ ಅಡುಗೆಗೆ ತುಪ್ಪವನ್ನು ಪರ್ಯಾಯವಾಗಿ ಬಳಕೆ ಮಾಡಬಹುದು..
2)ಅವಕಾಡೊ : ಅವಕಾಡೊ ಉತ್ತಮ ಕೊಬ್ಬುಗಳಿಂದ ಸಮೃದ್ಧವಾಗಿದೆ ಮಾತ್ರವಲ್ಲ, ಈ ಅವಕಾಡೊದಲ್ಲಿ ಒಲೀಕ್ ಆಮ್ಲವೂ ಅಧಿಕವಾಗಿದೆ, ಇದು ಆರೋಗ್ಯಕ್ಕೆ ಉತ್ತಮ. ದೈನಂದಿನ ಆಹಾರಕ್ರಮದಲ್ಲಿ ಆವಕಾಡೊ ಸೇರಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹೀಗಾಗಿ ಬೆಣ್ಣೆ ಬದಲಿಗೆ ಬ್ರೆಡ್ ಟೋಸ್ಟ್ ಸೇವನೆಯ ಮಾಡುವಾಗ ಅವಕಾಡೋ ಬಳಸಬಹುದು..
3)ಸೇಬಿನ ಸಾಸ್: ಸೇಬಿನ ಸಾಸ್ ನಾರಿನ ಗುಣಲಕ್ಷಣಗಳನ್ನು ಮತ್ತು ದಾಲ್ಚಿನ್ನಿಯ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ಹೀಗಾಗಿ ಸೇಬಿನ ಸಾಸನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಆರೋಗ್ಯಕರ ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯ ಮಾಡುತ್ತದೆ.
4)ಆಲಿವ್ ಆಯಿಲ್ :ಆಲಿವ್ ಎಣ್ಣೆಯನ್ನು ಬೆಣ್ಣೆ ಮಾತ್ರವಲ್ಲದೆ ಅಡುಗೆ ಎಣ್ಣೆಯ ಪರ್ಯಾಯವಾಗಿ ಬಳಸಬಹುದು. ಹೃದಯಕ್ಕೆ ಪ್ರಯೋಜನಕಾರಿಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆಯಲ್ಲಿ ಪಾಲಿಫಿನಾಲ್ ಗಳು ಸಮೃದ್ಧವಾಗಿದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಕೆಟ್ಟ ಎಲ್ ಡಿಎಲ್ ಕೊಲೆಸ್ಟ್ರಾಲ್ನಿಂದ ರಕ್ಷಣೆ ನೀಡುತ್ತದೆ..ಆಲಿವ್ ಆಯಿಲ್ ರಕ್ತನಾಳಗಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗಗಳಿಗೆ ಕಾರಣಗಳಾದ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರವಿರಿಸುತ್ತದೆ.. ಹೀಗಾಗಿ ಬೆಣ್ಣೆಯ ಬದಲಿಗೆ ಆಲಿವ್ ಆಯಿಲ್ ಅನ್ನು ಅಡುಗೆಯಲ್ಲಿ ಉಪಯೋಗಿಸಬಹುದು..
5)ಗ್ರೀಕ್ ಮೊಸರು :.ಕೆನೆರಹಿತ ರುಚಿಯಾದ ಗ್ರೀಕ್ ಮೊಸರು ಬೆಣ್ಣೆಯ ಪರ್ಯಾಯ ಮಾರ್ಗಗಳಲ್ಲಿ ಒಂದು. ಪ್ರೋಬಯಾಟಿಕ್ಗಳ ಸಮೃದ್ಧ ಮೂಲವಾಗಿರುವ ಗ್ರೀಕ್ ಮೊಸರು ಕೊಲೆಸ್ಟ್ರಾಲ್ ನಿಯಂತ್ರಣ ಮಾಡಿ ಕರುಳಿನ ಆರೋಗ್ಯ ಅಭಿವೃದ್ಧಿ ಮಾಡುತ್ತದೆ.ಮೊಸರಿನ ಸೇವನೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ ಹಾಗೂ ಹಲವಾರು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಆಯಾಸವನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ನಮ್ಮ ಊಟದೊಂದಿಗೆ ಹಾಗೂ ಜೊತೆಗೆ ಗ್ರೀಕ್ ಮೊಸರು ಸೇವನೆ ಮಾಡಬಹುದು..
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ