ಪ್ರತಿದಿನ ಬೆಳಿಗ್ಗೆ (Daily Morning) ನೆನೆಸಿದ ಬಾದಾಮಿಯ (Almond) ಸಿಪ್ಪೆ ತೆಗೆದು ತಿನ್ನುವಂತೆ ಮನೆಯಲ್ಲಿ (Home) ಹಿರಿಯಲು ಸಲಹೆ ನೀಡುತ್ತಾರೆ. ಮೆದುಳಿನ ಆರೋಗ್ಯಕ್ಕೆ (Brain Health) ನೆನೆಸಿದ ಬಾದಾಮಿ ಸೇವನೆ ಮಾಡುವುದು ಸಹಾಯ ಮಾಡುತ್ತದೆ. ಬಾದಾಮಿ ಒಂದು ಸೂಪರ್ ಫುಡ್ ಆಗಿದೆ. ಬಾದಾಮಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುತ್ತದೆ. ಬಾದಾಮಿ ಸಿಪ್ಪೆ, ಬಾದಾಮಿ ಹಾಗೂ ಎಣ್ಣೆ (Almond And Oil) ಕೂಡ ಆರೋಗ್ಯ ಹಾಗೂ ಸ್ಕಿನ್ ಮತ್ತು ಕೂದಲ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಕಾರಿ ಆಗಿದೆ. ಅನೇಕ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಬಾದಾಮಿ ಸೇವನೆ ಸಹಾಯ ಮಾಡುತ್ತದೆ ಅಂತಾರೆ ತಜ್ಞರು.
ಆರೋಗ್ಯಕ್ಕೆ ಬಾದಾಮಿ ಎಣ್ಣೆ ಎಷ್ಟು ಪ್ರಯೋಜನಕಾರಿ?
ಇತ್ತೀಚಿನ ದಿನಗಳಲ್ಲಿ ಬಾದಾಮಿ ಎಣ್ಣೆಯ ಬಳಕೆಗೆ ಹೆಚ್ಚು ಬೇಡಿಕೆಯಿದೆ. ಅನೇಕರು ಸೌಂದರ್ಯ ಮತ್ತು ಕೂದಲಿನ ಉತ್ಪನ್ನಗಳಲ್ಲಿ ಬಾದಾಮಿ ಎಣ್ಣೆ ಬಳಸುತ್ತಾರೆ.
ಅದೇ ರೀತಿ ಬಾದಾಮಿ ಎಣ್ಣೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂದು ಗೊತ್ತಾ? ಬಾದಾಮಿ ಎಣ್ಣೆಯನ್ನು ಆಹಾರದಲ್ಲಿ ಸೇರಿಸುವ ಸರಿಯಾದ ಮಾರ್ಗ ಯಾವುದು ಎಂಬುದನ್ನು ಇಲ್ಲಿ ನೋಡೋಣ.
ಬಾದಾಮಿ ಎಣ್ಣೆಯಲ್ಲಿರುವ ಪೋಷಕಾಂಶಗಳು
ಅಮೇರಿಕನ್ ಹೆಲ್ತ್ ಅಸೋಸಿಯೇಷನ್ ಪ್ರಕಾರ, ಬಾದಾಮಿಯ ನಿಯಮಿತ ಸೇವನೆ ಹೃದಯಕ್ಕೆ ಆರೋಗ್ಯಕರ ಕೊಬ್ಬು ಪಡೆಯಲು ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ತಾಮ್ರ,
ಮೆಗ್ನೀಸಿಯಮ್ ಮತ್ತು ರಂಜಕವಿದೆ. ರೋಗ ನಿರೋಧಕ ಶಕ್ತಿ ಬಲಪಡಿಸಲು ಬಾದಾಮಿ ಸೇವನೆ ಪ್ರಯೋಜನಕಾರಿ ಆಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಜೊತೆಗೆ ಉರಿಯೂತ ನಿವಾರಕ ಗುಣಗಳಿವೆ.
ಬಾದಾಮಿ ಎಣ್ಣೆ ಆರೋಗ್ಯ ಪ್ರಯೋಜನಗಳು ಹೀಗಿವೆ
ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿಡುತ್ತದೆ
ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರುಪೇರಾಗುತ್ತಿದ್ದರೆ, ನಿಮ್ಮ ಆಹಾರದಲ್ಲಿ ಬಾದಾಮಿ ಎಣ್ಣೆ ಸೇರಿಸಿ. ಸಂಶೋಧನೆಯೊಂದರ ಪ್ರಕಾರ, ಬಾದಾಮಿ ಎಣ್ಣೆಯಲ್ಲಿ ಮೊನೊಸಾಚುರೇಟೆಡ್ ಕೊಬ್ಬಿದೆ.
ಇದು ಹೃದಯದ ಆರೋಗ್ಯ ಕಾಪಾಡುತ್ತದೆ. ಉತ್ಕರ್ಷಣ ನಿರೋಧಕಗಳು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕಾಪಾಡುತ್ತೆ.
ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ
ಅಧಿಕ ರಕ್ತದ ಸಕ್ಕರೆ ಸಮಸ್ಯೆ ಕಡಿಮೆ ಮಾಡಲು ಜನರು ಬಾದಾಮಿ ಎಣ್ಣೆಯನ್ನು ಆಹಾರದಲ್ಲಿ ಸೇರಿಸಿ. ಬಾದಾಮಿ ಎಣ್ಣೆಯಲ್ಲಿರುವ ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು ಟೈಪ್ 2 ಮಧುಮೇಹ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.
ಸಂಶೋಧನೆಯೊಂದರ ಪ್ರಕಾರ, ಬೆಳಗಿನ ಉಪಾಹಾರದಲ್ಲಿ ಬಾದಾಮಿ ಎಣ್ಣೆ ಸೇವಿಸಿದರೆ ರಕ್ತದ ಸಕ್ಕರೆ ದಿನವಿಡೀ ಸಮತೋಲನದಲ್ಲಿರುತ್ತದೆ. ದಿನವಿಡೀ ಹಸಿವು ಕಡಿಮೆ ಎಂದು ತಿಳಿಸಿದೆ.
ತೂಕ ನಷ್ಟಕ್ಕೆ ಬಾದಾಮಿ ಎಣ್ಣೆ ಸಹಕಾರಿ
ಬಾದಾಮಿ ಎಣ್ಣೆಯು ಆರೋಗ್ಯಕರ ಕೊಬ್ಬು ಹೊಂದಿದೆ. ಇದು ವೇಗವಾಗಿ ತೂಕ ಇಳಿಕೆಗೆ ಸಹಕಾರಿ. ಆಹಾರದಲ್ಲಿ ಬಾದಾಮಿ ಎಣ್ಣೆ ಸೇರಿಸಿದರೆ ದೀರ್ಘಕಾಲ ಹಸಿವಾಗಲ್ಲ. ಕಡಿಮೆ ಕ್ಯಾಲೊರಿ ಸೇವನೆಗೆ ಸಹಕಾರಿ.
ಬಾದಾಮಿ ಎಣ್ಣೆ ಸೇವನೆ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ
ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಬಾದಾಮಿ ಎಣ್ಣೆ ಸಹಕಾರಿ. ಬಾದಾಮಿ ಎಣ್ಣೆಯು ನೀರು ಮತ್ತು ಲಿಪಿಡ್ ಜೊತೆ ಚಲನೆ ಸುಲಭವಾಗಿಸುತ್ತದೆ. ಇದಕ್ಕಾಗಿ ಒಂದು ಲೋಟ ಹಾಲಿನಲ್ಲಿ ಎರಡು ಚಮಚ ಬಾದಾಮಿ ಎಣ್ಣೆ ಸೇವಿಸಿ. ಇದು ಜೀರ್ಣಕ್ರಿಯೆ ಸಮಸ್ಯೆ ಪರಿಹಾರ ನೀಡುತ್ತದೆ.
ಇದನ್ನೂ ಓದಿ: ಚಿಯಾ ಬೀಜವನ್ನು ಹೀಗೆ ತಿಂದ್ರೆ ಬೇಗ ತೂಕ ಕಡಿಮೆಯಾಗುತ್ತಂತೆ!
ಆಹಾರದಲ್ಲಿ ಬಾದಾಮಿ ಎಣ್ಣೆ ಸೇರಿಸುವ ಸರಿಯಾದ ಮಾರ್ಗ ಯಾವುದು?
ಬಾದಾಮಿ ಎಣ್ಣೆಯನ್ನು ಬಾದಾಮಿ ಬೀಜಗಳಿಂದ ತಯಾರಿಸುತ್ತಾರೆ. ಸಂಸ್ಕರಿಸಿದ ಬಾದಾಮಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದ್ರೆ ಅದರ ಪೋಷಕಾಂಶಗಳಿಗೆ ಹಾನಿಯಾಗುತ್ತದೆ. ಹಾಗಾಗಿ ಸಂಸ್ಕರಿಸದ ಬಾದಾಮಿ ಎಣ್ಣೆ ಬಳಸಿ. ಸಲಾಡ್ ಅಥವಾ ಸೂಪ್ ನಲ್ಲಿ ಸೇರಿಸಿ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ