Drugs Addiction: ಡ್ರಗ್ಸ್ ದಾಸರಾಗುವುದು ಸುಲಭ, ಆದ್ರೆ ಅದರ ಅಡ್ಡ ಪರಿಣಾಮಗಳು ಒಂದೆರೆಡಲ್ಲ

Drugs Addiction: ಡ್ರಗ್ ಸೇವಿಸುವ ನಾಲ್ಕು ಜನರಲ್ಲಿ ಒಬ್ಬರು ಸಾವಿಗೀಡಾಗುತ್ತಿದ್ದರೆ, ಶೇ.70ರಷ್ಟು ಜನರು ಮಾನಸಿಕ ಖಿನ್ನತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇನ್ನು ಈ ಡ್ರಗ್ಸ್​ ಅಪಾಯಗಳ ಕುರಿತು ಫೋರ್ಟಿಸ್ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಯ ಕನ್ಸಲ್ಟೆಂಟ್ ಆಕಾಂಕ್ಷಾ ಪಾಂಡೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  “ಡ್ರಗ್” (Drugs)ಇತ್ತೀಚೆಗೆ ಹೆಚ್ಚು ಮುಂಚೂಣಿಯಲ್ಲಿರುವ ವಿಷಯ. ಸಾಕಷ್ಟು ಯುವ ಜನರು ಈ ಡ್ರಗ್ಸ್ ಎಂಬ ವ್ಯಸನಕ್ಕೆ ದಾಸರಾಗುತ್ತಾ ಹೋಗುತ್ತಿದ್ದಾರೆ. ಇದರಿಂದ ಅವರ ದೈಹಿಕ ಆರೋಗ್ಯದ(Health) ಜೊತೆಗೆ ಮಾನಸಿಕ ಆರೋಗ್ಯವೂ ಹದಗೆಡುತ್ತಾ ಹೋಗುತ್ತದೆ. ಕ್ರಮೇಣ ಅವರು ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ. ಕೆಲವೊಮ್ಮೆ ಡ್ರಗ್ ಸೇವನೆ ಕ್ಯಾನ್ಸರ್(Cancer), ಸ್ಟ್ರೋಕ್, ಹೃದಯಾಘಾತ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗೆ ಕಾರಣವಾದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದರಿಂದ ಹೊರ ಬರುವ ಮಾರ್ಗ ಅತ್ಯಂತ ಕಠಿಣ. ಆದರೆ, ಪರಿಸ್ಥಿತಿ ಕೈ ಮೀರುವ ಮುನ್ನ ಈ ಸಮಸ್ಯೆಯಿಂದ ಹೊರಬರುವ ಮನಸ್ಸು ಮಾಡಿದರೆ, ಖಂಡಿತ ಡ್ರಗ್ಸ್ ವ್ಯಸನದಿಂದ ಮುಕ್ತವಾಗಬಹುದು. ಡ್ರಗ್ ಸೇವಿಸುವ ನಾಲ್ಕು ಜನರಲ್ಲಿ ಒಬ್ಬರು ಸಾವಿಗೀಡಾಗುತ್ತಿದ್ದರೆ, ಶೇ.70ರಷ್ಟು ಜನರು ಮಾನಸಿಕ ಖಿನ್ನತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇನ್ನು ಈ ಡ್ರಗ್ಸ್​ ಅಪಾಯಗಳ ಕುರಿತು ಫೋರ್ಟಿಸ್ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಯ ಕನ್ಸಲ್ಟೆಂಟ್ ಆಕಾಂಕ್ಷಾ ಪಾಂಡೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 

  ಯಾವ  ಡ್ರಗ್ಸ್‌ಗಳು ಹೆಚ್ಚು ಅಪಾಯಕಾರಿ:

  ಮೆಥಾಂಫೆಟೈನ್ ಡ್ರಗ್ಸ್ ಅತಿ ಹೆಚ್ಚು ಅಪಾಯಕಾರಿ. ಕೊಕೇನ್, ಗಾಂಜಾ, ಅಫೀಮು ಸೇರಿದಂತೆ ಇತರೆ ಡ್ರಗ್ಸ್ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಸಮಸ್ಯೆ ಉಂಟು ಮಾಡುತ್ತದೆ. ಡ್ರಗ್ ಸೇವನೆಯಿಂದ ಮೆದುಳಿನಲ್ಲಿ ಡೋಪಮೈನ್ ರಾಸಾಯನಿಕ ಬಿಡುಗಡೆ ಮಾಡುತ್ತದೆ. ಇದರಿಂದ ಮೆದುಳು ಬೇರಾವುದೋ ಲೋಕದಲ್ಲಿ ತೇಲಿದ ಅನುಭವ ನೀಡುತ್ತದೆ. ಈ ರಾಸಾಯನಿಕ ಬಿಡುಗಡೆ ಹೆಚ್ಚಾದಷ್ಟು ಮೆದುಳಿನ ಇತರೆ ನರಗಳು ನಿಶ್ಯಕ್ತಿ ಹೊಂದುತ್ತಾ ಬರುತ್ತವೆ. ಹೀಗಾಗಿಯೇ ಬಹುತೇಕರು ಡ್ರಗ್ ಸೇವನೆ ಬಳಿಕ ಮಂಕಾಗುವುದು. ಕಾಲಕ್ರಮೇಣ ಮೆದುಳು ತನ್ನ ದೈನಂದಿನ ಚಟುವಟಿಕೆಯನ್ನು ನಿಲ್ಲಿಸಿ ಡ್ರಗ್ ಸೇವನೆಗೆ ಹೆಚ್ಚು ಪ್ರೇರೇಪಿಸುತ್ತದೆ. ಇದು ಮದ್ಯಪಾನಕ್ಕೂ ಹೊರತೇನಲ್ಲ. ಒಮ್ಮೆ ವ್ಯಸನಿಗಳಾದರೆ ಮತ್ತದನ್ನೇ ಬಯಸುತ್ತಿರುತ್ತದೆ.

  ಇದನ್ನೂ ಓದಿ: ಬಿಪಿ ಸಮಸ್ಯೆಗೆ ಬೀಟ್​ರೂಟ್​ ಜ್ಯೂಸ್ ಬೆಸ್ಟ್- ಇದರಲ್ಲಿ ಏನೆಲ್ಲಾ ಪ್ರಯೋಜನಗಳಿದೆ ನೋಡಿ

  ಡ್ರಗ್ಸ್​ ಸೇವನೆಯಿಂದ ಉಂಟಾಗುವ  ದೈಹಿಕ ಆರೋಗ್ಯ ಸಮಸ್ಯೆಗಳೇನು?

  ಡ್ರಗ್ ಸೇವನೆಯಿಂದ ಬಹಳಷ್ಟು ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.
  * ಕ್ರಿಯಾಶೀಲತೆ ಕಳೆದುಕೊಳ್ಳುವುದು
  * ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
  * ವಾಕರಿಕೆ, ಕಿಬ್ಬೊಟ್ಟೆ ನೋವು, ಕಡಿಮೆ ಹಸಿವು, ತೂಕ ನಷ್ಟ
  * ಮೆದುಳಿನ ನರಗಳು ದುರ್ಬಲವಾಗುವುದು, ಪಾರ್ಶ್ವವಾಯು ಹೊಡೆಯುವ ಸಾಧ್ಯತೆ
  * ಹೃದಯದಲ್ಲಿ ಬೊಜ್ಜು ಬೆಳವಣಿಗೆ ಹಾಗೂ ರಕ್ತನಾಳಗಳು ಸರಾಗವಾಗಿ ರಕ್ತ ಪಂಪ್ ಮಾಡದೇ ಇರುವುದು
  * ಹೆಪಟೋಸೆಲ್ಯುಲಾರ್ ಒತ್ತಡದಿಂದ ಯಕೃತ್ತಿನ ಹಾನಿ ಅಥವಾ ವೈಫಲ್ಯ
  * ನೆನಪಿನ ಶಕ್ತಿ ಕಳೆದುಕೊಳ್ಳುವುದು
  * ಪುರುಷರಲ್ಲಿ ಸ್ತನ ಬೆಳವಣಿಗೆ, ದೇಹದ ಉಷ್ಣತೆಯಲ್ಲಿ ಏರಿಕೆ.

  ಆಪ್ತ ಸಮಾಲೋಚನೆ ಎಷ್ಟು ಉಪಯುಕ್ತ

  ಡ್ರಗ್ ಸೇವಿಸುವವರು ಸಂಪೂರ್ಣ ಕ್ರಿಯಾಶೀಲ ಕಳೆದುಕೊಂಡು ಬಿಡುತ್ತಾರೆ. ಈ ಪ್ರಪಂಚದ ಅರಿವೇ ಅವರಿಗೆ ಇರುವುದಿಲ್ಲ. ಅವರದ್ದೇ ಲೋಕದಲ್ಲಿ ಜೀವಿಸುತ್ತಾ, ತಮ್ಮ ಸುತ್ತಲಿನ ಸಂಬಂಧಗಳನ್ನು ಮರೆಯುತ್ತಾರೆ. ಇಂಥ ಲಕ್ಷಣಗಳು ಕಂಡು ಬಂದರೆ ಅವರು ಡ್ರಗ್ ಸೇವನೆಯಲ್ಲಿ ತೊಡಗಿದ್ದಾರೆ ಎಂದು ಸುಲಭವಾಗಿ ಅಂದಾಜಿಸಬಹುದು. ಇಂಥವರಿಗೆ ಆಪ್ತ ಸಮಾಲೋಚನೆ ಉಪಯುಕ್ತ. ಆದರೆ, ಕೆಲವರು ಅತಿ ಹೆಚ್ಚು ಡ್ರಗ್‌ಗೆ ವ್ಯಸನಿಗಳಾಗಿದ್ದರೆ ಅವರಿಗೆ ಆಪ್ತ ಸಮಾಲೋಚನೆ ಪರಿಣಾಮಕಾರಿಯಾಗುವುದಿಲ್ಲ. ಅವರಿಗೆ ವ್ಯಸನಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸುವುದು ಉತ್ತಮ.

  ಡ್ರಗ್ ವ್ಯಸನದಿಂದ ಹೊರಬರಲು ಯಾವ ಚಿಕಿತ್ಸೆ ಸಹಕಾರಿ:

  ಇದನ್ನೂ ಓದಿ: ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿದ್ರೆ, ದೇಹದಲ್ಲಿ ಕಬ್ಬಿಣದ ಮಟ್ಟ ಕಡಿಮೆ ಆಗಿರ್ಬೋದು ಎಚ್ಚರ

  ಈಗಾಗಲೇ ವ್ಯಸನಕ್ಕೆ ಒಳಗಾಗಿದ್ದರೆ ಅವರಿಗೆ ಪ್ರಾರಂಭದಲ್ಲಿ ದೇಹದಲ್ಲಿನ ಟಾಕ್ಸಿನ್‌ನನ್ನು ಹೊರ ತೆಗೆಯುವ ಚಿಕಿತ್ಸೆ ನೀಡಲಾಗುತ್ತದೆ. ಇದರ ಜೊತೆಗೆ ಕಾಗ್ನಿಟಿವ್-ಬಿಹೇವಿಯರ್ ಥೆರಪಿಯು (ಸಿಬಿಟಿ) ಡ್ರಗ್ ಸೇವನೆಯನ್ನು ಬಿಡಿಸುವ ಚಿಕಿತ್ಸೆಯಾಗಿದೆ. ಬಹು ಆಯಾಮದ ಕುಟುಂಬ ಚಿಕಿತ್ಸೆ, ಸೇರಿದಂತೆ ಹಲವು ರೀತಿಯ ಚಿಕಿತ್ಸೆ ನೀಡಲಾಗುತ್ತದೆ, ಅಲ್ಲದೆ, ಧನಾತ್ಮಕತೆಯನ್ನು ಬಿಂಬಿಸುವ ಚಿಕಿತ್ಸೆಗಳು ಇರಲಿವೆ. ಈ ರೀತಿಯ ಚಿಕಿತ್ಸೆಗಳಿಂದ ಶೇ.40 ರಿಂದ 60ರಷ್ಟು ಪ್ರಮಾಣದಲ್ಲಿ ಚೇತರಿಕೆ ಕಂಡು ಬರುತ್ತದೆ ಎನ್ನಲಾಗಿದೆ.
  Published by:Sandhya M
  First published: