Teachers Day: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ತಿಳಿದು ಕೊಳ್ಳಬೇಕಾದ ಪ್ರಮಖ ಅಂಶಗಳು

ಸೆಪ್ಟೆಂಬರ್ 5, 1888 ರಂದು ಜನಿಸಿದ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ

ಡಾ. ಸರ್ವಪಲ್ಲಿ ರಾಧಾಕೃಷ್ಣನ್

ಡಾ. ಸರ್ವಪಲ್ಲಿ ರಾಧಾಕೃಷ್ಣನ್

  • Share this:
    ಒಬ್ಬ ವ್ಯಕ್ತಿಗೆ ಗುರಿ ಹೇಗೆ ಮುಖ್ಯವೋ ಅದೇ ರೀತಿ ಗುರು ಕೂಡ ಮುಖ್ಯ. ಅಂತಹ ಗುರಿಗೆ ಮಾರ್ಗದರ್ಶನ ತೋರಿಸುವ ಶಿಕ್ಷಕರ ದಿನಾಚರಣೆ ನಾಳೆ. ಈ ದಿನದಂದು ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರಿವಿಗೆ ಅನಂತ ನಮನ ಸಲ್ಲಿಸಿದರೂ ಕಡಿಮೆ. ಜೀವನ ಪ್ರತಿಯೊಂದು ಪಾಠ ಹೇಳಿಕೊಡುವ ಪ್ರತಿಯೊಬ್ಬ ವ್ಯಕ್ತಿ ಗುರು ಎಂಬುದರ ಜೊತೆಗೆ ಶಿಕ್ಷಣ ಕಲಿಸಿದ ಗುರುವಿನ ಸ್ಥಾನ ಮಹತ್ತರ. ವಿದ್ಯಾರ್ಥಿಗಳ ಜೀವನ ರೂಪಿಸಲು ಹಾದಿ ತೋರುವ ಶಿಕ್ಷಕರ ಅಗಾಧ ಸೇವೆ ಗಮನಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದಲೇ ಪ್ರತಿ ವರ್ಷ ಶಿಕ್ಷಕರ ದಿನ (Teachers Day) ಆಚರಣೆ ಮಾಡಲಾಗುವುದು.

    ಭಾರತದ ಮಾಜಿ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ (Dr Sarvepalli Radhakrishnan) ಅವರ ಜನ್ಮ ದಿನಾಚರಣೆಯ ವಿಶೇಷ ದಿನವನ್ನು ಶಿಕ್ಷಕರ ದಿನವೆಂದು ಘೋಷಿಸಲಾಗಿದೆ. ಈ ಮೂಲಕ ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವ ಕಾರ್ಯ ಮುಂದುವರೆದಿದೆ.  ಸೆಪ್ಟೆಂಬರ್ 5, 1888 ರಂದು ಜನಿಸಿದ ಅವರ ಹುಟ್ಟುಹಬ್ಬದ ದಿನ ಅವರ ಜೊತೆಗೆ ನಮ್ಮೆಲ್ಲರಿಗೂ ಗುರಿ ತೋರಿದ ಗುರುಗಳಿಗೆ ನಮನ ಸಲ್ಲಿಸಿ ಶಿಕ್ಷಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಡಾ ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪ ರಾಷ್ಟ್ರಪತಿ ಮತ್ತು ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು

    ಡಾ, ರಾಧಾಕೃಷ್ಣನ್ ಅವರು ಶಿಕ್ಷಕರು, ವಿದ್ವಾಂಸರು ಮತ್ತು ತತ್ವಜ್ಞಾನಿಗಳಾಗಿ ಅವರ ಅದ್ಭುತ ಕೌಶಲ್ಯಯುತ ವ್ಯಕ್ತಿಯಾಗಿ ಹೆಸರು ಪಡೆದವರು. ತಮ್ಮ ಜೀವನದುದ್ದಕ್ಕೂ, ಅವರು ಇತರರಿಗೆ ಓದಿನ ಕುರಿತು ಆಸಕ್ತಿ ಬೆಳೆಸಿ, ವಿದ್ಯಾಭ್ಯಾಸ ಆರಂಭಮಾಡುವಂತೆ ಪ್ರೇರೇಪಿಸಿದರು. ಅಷ್ಟೇ ಅಲ್ಲದೇ, ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣದ ಶಕ್ತಿಯ ಎಷ್ಟು ಎಂಬುದನ್ನು ಒತ್ತಿ ಹೇಳಿದರು. ತಮ್ಮ ಜೀವನಾದ್ಯಾಂತ ಜನರಿಗೆ ಸಾಕ್ಷರತೆ ಅರಿವನ್ನು ಹರಡಲು ಪ್ರಯತ್ನಿಸಿದ ಅವರ ಜನ್ಮ ದಿನವನ್ನು ಶಿಕ್ಷಣ ದಿನವಾಗಿ ದೇಶದಲ್ಲಿ ಆಚರಿಸಲಾಗುತ್ತಿದೆ.

    ಇದನ್ನು ಓದಿ: ವಿರಾಟ್​- ಅನುಷ್ಕಾ ಹೊರತಾಗಿಯೂ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ​ ಆಗಿದೆ ಈ ಕ್ರಿಕೆಟಿಗರ ಲವ್​ ಸ್ಟೋರಿ

    ಸರ್ವಪಲ್ಲಿ ರಾಧಾಕೃಷ್ಣ ಬಗ್ಗೆ ತಿಳಿಯಬೇಕಾದ ಪ್ರಮುಖ ಅಂಶ

    • ತಮಿಳುನಾಡಿನ (Tamil nadu) ಮಧ್ಯಮ ವರ್ಗದ ಕುಟುಂಬದಲ್ಲಿ 1888ರ ಸೆಪ್ಟೆಂಬರ್​ 5 ರಂದು ಹುಟ್ಟಿದ ಅವರು ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.
      ಡಾ. ರಾಧಾಕೃಷ್ಣನ್ ಅವರನ್ನು ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ತತ್ವಜ್ಞಾನಿಯಾಗಿದ್ದರು. ಆದರೆ, ಅವರು ಇತಿಹಾಸ ವಿಷಯದಲ್ಲಿ ಹೆಚ್ಚಿನ ಅರಿವು ಹೊಂದಿದ್ದರು.

    • ತಮ್ಮ 20ನೇ ವಯಸ್ಸಿನಲ್ಲಿ ಅವರು ವೇದಾಂತದ ನೀತಿಶಾಸ್ತ್ರ ಮತ್ತು ಅದರ ಆಧ್ಯಾತ್ಮಿಕ ಪ್ರಮೇಯವನ್ನು ಪ್ರಕಟಿಸಿ ಗಮನ ಸೆಳೆದರು

    • ಡಾ. ರಾಧಾಕೃಷ್ಣನ್ ಅವರು ಮೊದಲು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಸೇರಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. 1918 ರಲ್ಲಿ, ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾದರು

    • ಯುನೆಸ್ಕೋದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದರು. ಈ ಮೂಲಕ ದೇಶದಲ್ಲಿ ಶಿಕ್ಷಣದ ಶಕ್ತಿಯನ್ನು ಹರಡಲು ಪ್ರಯತ್ನಿಸಿದರು

    • ಗೌತಮ ಬುದ್ಧ, ಭಾರತ ಮತ್ತು ಚೀನಾ, ರವೀಂದ್ರನಾಥ ಟ್ಯಾಗೋರರ ತತ್ವಶಾಸ್ತ್ರ, ಜೀವನದ ಹಿಂದೂ ದೃಷ್ಟಿಕೋನ, ಜೀವನದ ಆದರ್ಶವಾದಿ ದೃಷ್ಟಿಕೋನ, ಕಲ್ಕಿ ಅಥವಾ ನಾಗರೀಕತೆಯ ಭವಿಷ್ಯ, ನಮಗೆ ಬೇಕಾದ ಧರ್ಮ ಅವರ ಪ್ರಮುಖ ಕೃತಿಗಳು
      ಇನ್ನು ರಾಧಾಕೃಷ್ಣನ್​ ಅವರ ಹೆಸrಉ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗೆ 16 ಬಾರಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿಗೆ 11 ಬಾರಿ ನಾಮ ನಿರ್ದೇಶನಗೊಂಡಿತು. 1954 ರಲ್ಲಿ ಅವರಿಗೆ ಭಾರತ ರತ್ನವನ್ನೂ ನೀಡಿ ಗೌರವಿಸಲಾಯಿತು.

    • ರಾಧಾಕೃಷ್ಣನ್​ ಅವರು 86ನೇ ಇಳಿ ವಯಸ್ಸಿನಲ್ಲಿ ಅಂದರೆ ಏಪ್ರಿಲ್​ 17, 1975ರಂದು ತಮಿಳಿನಾಡಿನಲ್ಲಿ ನಿಧನರಾದರು

    Published by:Seema R
    First published: