• Home
 • »
 • News
 • »
 • lifestyle
 • »
 • Day Dreaming: ಹಗಲುಗನಸು ಕಾಣೋದು ಲೈಫ್​ನಲ್ಲಿ ಈ ಬದಲಾವಣೆಗೆ ಕಾರಣವಾಗುತ್ತಂತೆ

Day Dreaming: ಹಗಲುಗನಸು ಕಾಣೋದು ಲೈಫ್​ನಲ್ಲಿ ಈ ಬದಲಾವಣೆಗೆ ಕಾರಣವಾಗುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Day Dreaming: ಹಗಲುಗನಸುಗಳು ಜೀವನದ ಗುರಿ ಮುಟ್ಟಲು ನೆರವಾಗುತ್ತವೆ ಎನ್ನುವುದು ತುಂಬ ಜನರಿಗೆ ಗೊತ್ತಿಲ್ಲ. ಸಂಶೋಧಕರ ಪ್ರಕಾರ, ಹಗಲುಗನಸುಗಳು ಅವರ ಜೀವನದ ಗುರಿ ಮಟ್ಟಲು ಪ್ರೇರಣೆ ನೀಡುತ್ತದೆ.

 • Share this:

ನೀವು ಈಗ ಯಾವುದೋ ಮೀಟಿಂಗ್‌ (Meeting) ಅಲ್ಲಿ ಇದೀರಿ, ಆದರೆ ನಿಮ್ಮ ಮನಸ್ಸು ಎಲ್ಲೊ ಅಲೆದಾಡುತ್ತಾ, ಕಿಟಕಿಯಿಂದಾಚೆಗೆ ನೋಡುತ್ತ ಕನಸುಗಳನ್ನು (Dream)  ಕಾಣ್ತಾ ಇದೆ? ಆದರೆ ಇದ್ದಕ್ಕಿಂದಂತೆ ಮಿಟಿಂಗ್‌ ಹೋಸ್ಟ್‌ ನಿಮ್ಮನ್ನು ಯಾವುದೋ ಪ್ರಶ್ನೆಯನ್ನು ಕೇಳಿದಾಗ ನೀವು ಬೆಪ್ಪರಾಗಿ ನನಗೆ ಏನೂ ಗೊತ್ತೆ ಇಲ್ಲ ಎಂದು ಸುಮ್ಮನೆ ಕೂರುತ್ತಿರಿ? ಇದು ಯಾಕೆ ಹೀಗಾಗುತ್ತೆ ಎಂಬುದು ನಿಮಗೆ ಗೊತ್ತೆ? ಇದರ ಸಂಕೇತ, ನಾವೆಲ್ಲರೂ ಹಗಲು ಕನಸುಗಳನ್ನು (Day Dreaming) ಕಾಣುತ್ತೇವೆ. ಏನಪ್ಪ ರಾತ್ರಿ ಕನಸಿನ ಬಗ್ಗೆ ಗೊತ್ತು, ಈ ರೀತಿ ಯೋಚನೆ ಮಾಡೋದು ಹಗಲು ಕನಸಾ? ಎಂದು ನಿಮಗೆ ಗೊಂದಲ ಅನಿಸಬಹುದು. ಆದರೆ, ಹೌದು ಈ ರೀತಿಯ ಪ್ರಕ್ರಿಯೆಗೆ ಹಗಲು ಕನಸು ಅಂತಾರೆ.


ಈಗಲೂ ನಾವು ಹಗಲು ಗನಸು ಕಾಣಬಲ್ಲೆವು. ಅದರರ್ಥ ಚುರುಕಾದ ಮೆದುಳು ಇರುವುದರ ಸಂಕೇತ ಅದು. ನಮ್ಮ ಮೆದುಳಿನ ಪರದೆಯಲ್ಲಿ ಬಂದು ಹೋಗುವ ನಮ್ಮ ಯೋಚನೆಗಳಿಂದ ನಾವು ಯಾವತ್ತೂ ಕೂಡ ತಪ್ಪಿಸಿಕೊಳ್ಳಲಾರೆವು. ನಾವು ಅಂದುಕೊಳ್ಳುವುದಕ್ಕಿಂತಲೂ ಹೆಚ್ಚು ಹಗಲು ಕನಸು ಕಾಣಬಹುದು. ನಮ್ಮ ಜೀವನದ 47% ರಷ್ಟು ಸಮಯವನ್ನು ನಾವು ಹಗಲು ಗನಸುಗಳಲ್ಲಿ ಕಳೆದು ಬಿಡುತ್ತೇವೆ ಎನ್ನುತ್ತಾರೆ ತಜ್ಞರು.


ಹಗಲು ಕನಸು ಒಳ್ಳೆಯದಾ ಅಥವಾ ಕೆಟ್ಟದಾ? ಸಂಶೋಧನೆಗಳು ಏನ್‌ ಹೇಳ್ತಿವೆ?


"ಮನುಷ್ಯರು ಒಂದು ದಿನದಲ್ಲಿ ಸಾವಿರಾರು ಬಾರಿ ಹಗಲುಗನಸು ಕಾಣುತ್ತಾರೆ, ಅದರ ಸಮಯವೂ ಸಹ ಕೆಲವು ಸೆಕೆಂಡುಗಳ ಮಾತ್ರವೇ ಇರುತ್ತದೆ" ಎಂದು ಓಸ್ಲೋ ವಿಶ್ವವಿದ್ಯಾಲಯದ ಮೂಲಭೂತ ವೈದ್ಯಕೀಯ ವಿಜ್ಞಾನಗಳ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಅನ್ನಾ ಚೇಂಬರ್ಸ್ ಅವರು ವಿವರಿಸುತ್ತಾರೆ.


ನಾವು ಹಗಲುಗನಸು ಕಂಡಾಗ ನಮ್ಮ ಮೆದುಳಿನಲ್ಲಿ ಏನಾಗುತ್ತದೆ ಎಂಬುದರ ವಿವರಣೆಯು ಸಂಶೋಧನೆಗಳಿಂದ ತಿಳಿದು ಬಂದಿದೆ. ಆ ಸಂಶೋಧನೆಯಲ್ಲಿ ಮಾನವನ ಮೆದುಳಿನ ಒಳಗೆ, ಹಿಪೊಕ್ಯಾಂಪಸ್ ಎಂದು ಕರೆಯಲ್ಪಡುವ 3 ಸೆಂಟಿಮೀಟರ್ ಉದ್ದದ ಸಾಸೇಜ್-ಆಕಾರದ ಒಂದು ಚಿಕ್ಕ ಭಾಗವಿದೆ. ಈ ಭಾಗದ ಮುಖ್ಯ ಕೆಲಸವೆಂದರೆ ಇದು ಬಹಳಷ್ಟು ಮಾಹಿತಿ ಮತ್ತು ಅನಿಸಿಕೆಗಳನ್ನು ಪಡೆಯುತ್ತದೆ ಮತ್ತು ಅನೇಕ ನೆನಪುಗಳನ್ನು ಹುಟ್ಟು ಹಾಕಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಒಂದು ನಿರ್ದಿಷ್ಟ ಸಮಯ ಕಳೆದ ನಂತರ, ನೆನಪುಗಳು ಸ್ಪಷ್ಟವಾಗಿ ಮೆದುಳಿನಲ್ಲಿ ಓಡಾಡುತ್ತವೆ.


ಇದರ ಬಗ್ಗೆ ʼಸೆಲ್-ಟೈಪ್-ಸ್ಪೆಸಿಫಿಕ್ ಸೈಲೆನ್ಸ್ ಇನ್‌ ತಾಲಮೊಕಾರ್ಟಿಕಲ್ ಸರ್ಕ್ಯೂಟ್ಸ್‌ ಪ್ರೆಸಿಡ್‌ ಹಿಪೊಕ್ಯಾಂಪಲ್ ಶಾರ್ಪ್-ವೇವ್ ರಿಪ್ಪಲ್ಸ್‌ʼ ಎಂಬ ಶೀರ್ಷಿಕೆಯ ಅಧ್ಯಯನವನ್ನು ಇತ್ತೀಚೆಗೆ ಸೆಲ್ ವರದಿಗಳಲ್ಲಿ ಪ್ರಕಟಿಸಲಾಗಿದೆ.


ನೀವು ಹಗಲುಗನಸು ಕಂಡಾಗ ನಿಮ್ಮ ನೆನಪುಗಳು ಎಲ್ಲಿ ಸಂಗ್ರಹವಾಗುತ್ತವೆ?


"ನಾವು ನಿದ್ರೆಯ ಸಮಯ ಮತ್ತು ಸ್ಥಿತಿಯನ್ನು 'ಸ್ತಬ್ಧ ಎಚ್ಚರ' ಎಂದು ಕರೆಯುತ್ತೇವೆ. ಇದರ ಪ್ರಕಾರ ನಾವು ನಿದ್ದೆ ಮಾಡುತ್ತಿರುವಾಗ ನಮ್ಮ ಸುತ್ತ ಮತ್ತಲೂ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿರುವುದಿಲ್ಲ. ಆದರೆ ಹಲವು ಚಟುವಟಿಕೆಗಳನ್ನು ನಮ್ಮ ಸೂಪ್ತ ಮನಸ್ಸು ಗ್ರಹಿಸಿರುತ್ತದೆ. ಇದರಿಂದ ನಾವು ಹಗಲುಗನಸು ಕಾಣುತ್ತೇವೆ.


ಈ ಸ್ಥಿತಿಯಲ್ಲಿ ಹಿಪೊಕ್ಯಾಂಪಸ್ ವಿವಿಧ ನೆನಪುಗಳನ್ನು ಎನ್ಕೋಡ್ ಮಾಡುವ ವಿದ್ಯುತ್ ಪ್ರಚೋದನೆಗಳನ್ನು ಕಳುಹಿಸುತ್ತದೆ. ಇದು ಹೇಗಿದೆ ಎಂದರೆ, ವಿಭಿನ್ನ ಬಾರ್‌ಕೋಡ್‌ಗಳು ಅಂಗಡಿಯಲ್ಲಿನ ಉತ್ಪನ್ನವನ್ನು ಹೇಗೆ ಅನನ್ಯವಾಗಿ ಗುರುತಿಸುತ್ತವೆ ಎಂಬುದು ಇಲ್ಲಿ ಸ್ವಲ್ಪಮಟ್ಟಿಗೆ ಹೋಲುತ್ತದೆ”ಎಂದು ಮಾಲಿಕ್ಯುಲರ್ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಕೋಯೆನ್ ವರ್ವೆಕೆ ವಿವರಿಸುತ್ತಾರೆ.
ಹಗಲುಗನಸು ಎಂಬುದು ಬಹುತೇಕರ ಪ್ರಕಾರ ವ್ಯರ್ಥ ಪ್ರಲಾಪ, ಸುಮ್ಮನೆ ಕಾಲಹರಣ. ಆದರೆ ವಿಜ್ಞಾನಿಗಳ ಪ್ರಕಾರ, ಹಗಲು ಗನಸು ಖಂಡಿತವಾಗಿಯೂ ಕಾಲಹರಣ ಅಲ್ಲ. ಅದು ದೈನಂದಿನ ಕಾರ್ಯಗಳ ಮಂದಗತಿಯಿಂದ ನಮ್ಮನ್ನು ನಾವೇ ಬೇರ್ಪಡಿಸಿಕೊಳ್ಳುವ ಉಪಯುಕ್ತ ಕಾಲಕ್ಷೇಪವಾಗಿದೆ.


ನಮ್ಮ ಮನಸ್ಸು ಹಗಲುಗನಸು ಕಂಡಾಗ ಏನಾಗುತ್ತದೆ ಎಂಬುದನ್ನು ಹತ್ತಿರದಿಂದ ನೋಡಲು ಸಂಶೋಧನಾ ತಂಡವು ಇಲಿಗಳನ್ನು ಒಳಗೊಂಡ ಪ್ರಯೋಗಗಳನ್ನು ನಡೆಸಿತು. ಮೆದುಳಿನ ಅನೇಕ ಪ್ರದೇಶಗಳಿಂದ ನರ ಕೋಶಗಳ ಚಟುವಟಿಕೆಯನ್ನು ಏಕಕಾಲದಲ್ಲಿ ಅಳೆಯಲು ಅವರು ವಿಶೇಷ ಸೂಕ್ಷ್ಮದರ್ಶಕಗಳನ್ನು ಬಳಸಿದರು.


"ಮೆದುಳು ಶಾಂತ ಮತ್ತು ಎಚ್ಚರವಾಗಿರುವ ಸಮಯದಲ್ಲಿ, ಹಿಪೊಕ್ಯಾಂಪಸ್ ಮೆದುಳಿನ ಉಳಿದ ಭಾಗಗಳಿಗೆ ಹಿಂದಿನ ನೆನಪುಗಳ ಬಗ್ಗೆ ದುರ್ಬಲ ಸಂದೇಶಗಳನ್ನು ಮಾತ್ರ ಕಳುಹಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಮೆದುಳಿನ ಉಳಿದ ಭಾಗಗಳು ಅನುಭವಿಸುವ ಮಾಹಿತಿಯ ಗೊಂದಲದಲ್ಲಿ ಈ ಸಂದೇಶಗಳು ಕಳೆದುಹೋಗುವಷ್ಟು ದುರ್ಬಲವಾಗಿರುತ್ತವೆ. ಆದರೆ, ಹಿಪೊಕ್ಯಾಂಪಸ್‌ ಈ ಮಾಹಿತಿಯ ಬಗ್ಗೆ ಹೇಗೆ ಜಾಗೃತವಾಗಿರುತ್ತದೆ? ಎಂಬ ಪ್ರಶ್ನೆಯು ಇಲ್ಲಿ ಉದ್ಬವಿಸುತ್ತದೆ” ಎಂದು ಡಾಕ್ಟರೇಟ್ ಸಂಶೋಧನಾ ಸಹವರ್ತಿ ಕ್ರಿಸ್ಟೋಫರ್ ನೆರ್ಲ್ಯಾಂಡ್ ಬರ್ಗೆ ಹೇಳುತ್ತಾರೆ.


ಹಿಪೊಕ್ಯಾಂಪಸ್ ಮೆದುಳಿಗೆ ನೀಡುವ ಮಾಹಿತಿಯ ಒಂದರಿಂದ ಎರಡು ಸೆಕೆಂಡುಗಳ ಮೊದಲು, ಮೆದುಳಿನ ದೊಡ್ಡ ಭಾಗಗಳು ಮೌನವಾಗುತ್ತವೆ. ಹಿಪೊಕ್ಯಾಂಪಸ್ ಹೇಳಲು ಪ್ರಯತ್ನಿಸುತ್ತಿರುವುದನ್ನು ಮೆದುಳಿನ ಇತರ ಭಾಗಗಳು ಗಮನವಿಟ್ಟು ಆಲಿಸುವ ಸಾಧ್ಯತೆ ಇದೆ, ಇದು ಮೇಲಿನ ಪ್ರಶ್ನೆಗೆ ಉತ್ತರ ಆಗಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.


ಹಿಪೊಕ್ಯಾಂಪಸ್‌ನಿಂದ ಮೆದುಳಿನ ಇತರ ಪ್ರದೇಶಗಳಿಗೆ ನೆನಪುಗಳನ್ನು ಹೇಗೆ ವರ್ಗಾಯಿಸಲಾಗುತ್ತದೆ ಎಂಬುದನ್ನು ವಿವರಿಸಲು ಇದು ಸಹಾಯ ಮಾಡುತ್ತದೆ. ನಾವು ಎಚ್ಚರವಾಗಿರುವಾಗ ಆದರೆ ನಿರ್ಲಿಪ್ತರಾಗಿರುವಾಗ - ಬಹುಶಃ ಹಗಲುಗನಸು ಕಾಣುತ್ತೇವೆ. ಆ ಸಮಯದಲ್ಲಿ ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳ ಬಗ್ಗೆ ನಮಗೆ ಕಡಿಮೆ ಅರಿವಿರುತ್ತದೆ. ಇದು ಉತ್ತಮ ಕಾರಣಕ್ಕಾಗಿ ಸಂಭವಿಸುತ್ತದೆ ಎಂಬುದು ನಮ್ಮ ಸಂಶೋಧನೆಗಳಿಂದ ತಿಳಿದು ಬಂದಿದೆ” ಎಂದು ಅನ್ನಾ ಚೇಂಬರ್ಸ್ ಅವರು ಹೇಳುತ್ತಾರೆ.


ಹಗಲು ಕನಸು ಕಾಣುವುದರ ಪ್ರಯೋಜನಗಳೇನು?


 • ನಾವು ಹೊರಜಗತ್ತಿನ ಗದ್ದಲಗಳಿಂದ ನಮ್ಮ ಮನಸ್ಸುಗಳನ್ನು ನಿರಾಳಗೊಳಿಸಲು ಹಗಲುಗನಸುಗಳು ನಮಗೆ ಸಹಕರಿಸುತ್ತವೆ.

 • ಮನಸ್ಸು ಶಾಂತವಾಗಿ ವಿಶ‍್ರಾಂತ ಸ್ಥಿತಿಗೆ ಬರುತ್ತದೆ ಹಾಗೂ ಹೊಸತನ್ನು ಪರಿಶೋಧನೆ ಮಾಡುತ್ತದೆ.

 • ಇಡೀ ದಿನದ ಕೆಲಸದ ನಂತರ ಅಥವಾ ಸ್ನೇಹಿತರು, ಇಲ್ಲವೇ ಸಂಗಾತಿಯ ಜತೆಗೆ ಜಗಳಗಳಾದಾಗ ಹಗಲುಗನಸು ಮನಸ್ಸನ್ನು ಶಾಂತವಾಗಿಸುತ್ತದೆ.

 • ನೀವು ನಿಮ್ಮ ಚಿಂತೆಗಳನ್ನು ಮರೆತು ಮುನ್ನಡೆಯಲು ಹಗಲು ಗನಸುಗಳು ನೆರವಾಗಬಲ್ಲದು.


ಹಗಲುಗನಸುಗಳು ನಮ್ಮ ಸಮಸ್ಯೆಗಳನ್ನೂ ಪರಿಹರಿಸಬಲ್ಲವು. ಅವು ಕೇವಲ ಚಿಂತೆಗಳನ್ನು ದೂರ ಮಾಡುವ ಸಾಧನವಲ್ಲ. ನಿಮಗೆ ಎದುರಾಗಿರುವ ಸಮಸ್ಯೆಯನ್ನು ಮತ್ತೆ ಸಂಪೂರ್ಣ ಮನಸ್ಸಿನಿಂದ ಎದುರಿಸಲು ನಿಮಗೆ ಹಗಲುಗನಸುಗಳು ಸಹಾಯ ಮಾಡುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.


ಇದನ್ನೂ ಓದಿ: ತೂಕ ಇಳಿಸೋಕೆ ಊಟ ಬಿಡೋದು ಈ ಸಮಸ್ಯೆಗಳಿಗೆ ಕಾರಣವಾಗಬಹುದು


ಸಮಸ್ಯೆಗಳನ್ನು ಪರಿಹರಿಸಲು ಕೂಡ ಅವು ನೆರವಾಗಬಲ್ಲವು. ಆಂತರಿಕ ಚಿಂತನೆಗಳು, ಸಂಶೋಧನೆಗಳು, ಹತೋಟಿಗೆ ಸಿಗದೆ ಓಡಾಡುವ ಮನಸ್ಸು, ಹಗಲುಗನಸು, ಇವೆಲ್ಲವೂ ನಮ್ಮ ಮೆದುಳಿಗೂ ಮನಸ್ಸಿಗೂ ತುಂಬ ಒಳ್ಳೆಯದು. ಇವು ಹೊಸ ಐಡಿಯಾಗಳನ್ನು ಪಡೆಯಲು ಸಹಾಯ ಮಾಡುವ ಪ್ರಕ್ರಿಯೆಗಳೂ ಆಗಿವೆ.


ಹಗಲು ಗನಸುಗಳು ಸೃಜನಶೀಲತೆ ಮತ್ತು ನಮಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ವೃದ್ಧಿಸುತ್ತದೆ. ಗಮನವನ್ನು ಕೇಂದ್ರೀಕರಿಸಲು ಮತ್ತು ನಿರ್ದಿಷ್ಟ ಕಾರ್ಯಗಳತ್ತ ನಮ್ಮ ಚಿತ್ತವನ್ನು ಹರಿಸಲು ಅವು ನೆರವಾಗುತ್ತದೆ. ಹೀಗಾಗಿ ಹಗಲುಗನಸು ಕಾಣುವುದು ಮನುಷ್ಯರ ಸಾಮಾನ್ಯ ಅಭ್ಯಾಸ ಎನ್ನುತ್ತಾರೆ ವಿಜ್ಞಾನಿಗಳು.


ನೀವು ಗಮನಿಸಿರಬಹುದು. ಮಕ್ಕಳ ಮನಸ್ಸು ತುಂಬ ಚಂಚಲ. ಅವರು ಒಂದು ಕೆಲಸದ ಮೇಲೆ ತುಂಬ ಹೊತ್ತು ಫೋಕಸ್ ಮಾಡಲಾರರು. ಅವರು ಬೇಗನೇ ತಮ್ಮದೇ ಲೋಕಕ್ಕೆ ಹೋಗಿಬಿಡುತ್ತಾರೆ. ಯುವಕರು ಕೂಡ ಅಷ್ಟೇ. ಹಗಲುಗನಸು ಕಾಣುವುದು ಅವರೇ ಹೆಚ್ಚು. ಅದರಿಂದ ಅವರ ಮೆದುಳು ಸಮಸ್ಯೆಗಳನ್ನು ಪರಿಹರಿಸಲು ಸಜ್ಜಾಗುತ್ತದೆ. ಸೃಜನಶೀಲತೆಯು ಚುರುಕಾಗುತ್ತದೆ.


ಇದನ್ನೂ ಓದಿ: ಈ ಔಷಧಿಗಳು ಬೊಜ್ಜು, ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತಂತೆ


ಅಲ್ಲದೆ, ಹಗಲುಗನಸುಗಳು ಜೀವನದ ಗುರಿ ಮುಟ್ಟಲು ನೆರವಾಗುತ್ತವೆ ಎನ್ನುವುದು ತುಂಬ ಜನರಿಗೆ ಗೊತ್ತಿಲ್ಲ. ಸಂಶೋಧಕರ ಪ್ರಕಾರ, ಹಗಲುಗನಸುಗಳು ಅವರ ಜೀವನದ ಗುರಿ ಮಟ್ಟಲು ಪ್ರೇರಣೆ ನೀಡುತ್ತದೆ. ಕ್ರೀಡಾಪಟುಗಳು, ಕಲಾವಿದರು ತಮ್ಮ ಪ್ರದರ್ಶನಕ್ಕಿಂತ ಮೊದಲು ಬೇಕೆಂದೇ ಹಗಲುಗನಸು ಕಾಣುತ್ತಾರೆ. ಅವರ ಉತ್ತಮ ನಿರ್ವಹಣೆಗೆ ಇದು ಪ್ರೇರೇಪಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

Published by:Sandhya M
First published: