New Year 2022: ಹೊಸ ವರ್ಷವನ್ನು ಹೊಸತನದಿಂದ ಆರಂಭ ಮಾಡಲು ಹವ್ಯಾಸಗಳನ್ನು ಬೆಳೆಸಿಕೊಳ್ಳಿ

New Year: ಚಿಕಿತ್ಸಕರ ಜತೆ ಮಾತನಾಡಲು ನಿಮಗೆ ಮಾನಸಿಕ ಸಮಸ್ಯೆಯೇ ಇರಬೇಕೆಂದೇನಿಲ್ಲ. ಮನಸ್ಸಿನ ಒತ್ತಡವನ್ನು ಕಳೆದು ನೆಮ್ಮದಿ ದೊರಕಲು ಚಿಕಿತ್ಸಕರ ಜತೆ ಮನಬಿಚ್ಚಿ ಮಾತನಾಡಿ. ಮಾನಸಿಕ ಆರೋಗ್ಯ ತಜ್ಞರು ಒತ್ತಡವನ್ನು ನಿರ್ವಹಿಸಲು ಮತ್ತು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ನಿಭಾಯಿಸಲು ನೆರವಾಗುತ್ತಾರೆ

ಹೊಸವರ್ಷ 2022

ಹೊಸವರ್ಷ 2022

  • Share this:
    2021 ಮುಗಿದು 2022ಕ್ಕೆ ಕಾಲಿಟ್ಟಾಗಿದೆ. ಹಳೆಯ ವರ್ಷದ(Old Year) ಕಹಿ ನೆನಪುಗಳು(Memory) ಎಲ್ಲವನ್ನು ಮರೆತು ಹೊಸ ಜೀವನವನ್ನು(New Life) ಶುರುಮಾಡುವ ಕಾಲ ಇದಾಗಿದೆ..ಕಳೆದ ವರ್ಷ ನಾವು ಅನುಭವಿಸಿದ ಸಂಕಷ್ಟ ದುಃಖಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ.. ಆದರೆ ಹೊಸವರ್ಷದಲ್ಲಿ(New Year) ಹೊಸತನದಿಂದ ನಮ್ಮ ಜೀವನವನ್ನು(Life) ಆರಂಭ ಮಾಡುವ ಅವಕಾಶ ನಮ್ಮ ಕೈಯಲ್ಲಿಯೇ ಇದೆ..ಹೀಗಾಗಿ ಹೊಸ ವರ್ಷದ ಆರಂಭದಿಂದ ನಾವು ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಂಡರೆ ವರ್ಷಪೂರ್ತಿ ಅವುಗಳನ್ನು ನಡೆಸಿಕೊಳ್ಳುತ್ತಾ ನಮ್ಮ ಮನಸ್ಸಿಗೆ ಸುಖ ಶಾಂತಿ ನೆಮ್ಮದಿಯನ್ನು ತಂದು ಕೊಳ್ಳಬಹುದಾಗಿದೆ.. ಹಾಗಿದ್ರೆ ಹೊಸ ವರ್ಷದಿಂದ ನಾವು ಯಾವ ರೀತಿಯ ಕೆಲಸಗಳನ್ನು ಮಾಡಬಹುದು ಅನ್ನೋವ ಮಾಹಿತಿ ಇಲ್ಲಿದೆ..

    1) ಗಿಡಗಳನ್ನು ನೆಡಿ: ಹಸಿರು ಪರಿಸರ ಎಂದಿಗೂ ಮನಸ್ಸಿಗೆ ಮುದ ನೀಡುತ್ತದೆ.. ನಾವು ಒಂದು ಗಿಡ ನೆಟ್ಟರೆ ಅದು ನಮಗೆ ಎಷ್ಟು ವರ್ಷಗಳ ಕಾಲ ಗಾಳಿ ಹಾಗೂ ನೆರಳನ್ನು ನೀಡುತ್ತಾ ಬರುತ್ತದೆ.. ನಾವು ನೀಡುವ ಒಂದು ಗಿಡ ಇತರರಿಗೆ ಮಾರ್ಗದರ್ಶನವಾಗಿ ಅವರನ್ನು ಸಹ ಗಿಡ ನೆಡಲು ಪ್ರೇರೇಪಣೆ ಮಾಡಬಹುದು.. ಗಿಡ ನೆಡುವ ಪ್ರಕ್ರಿಯೆ ಮನಸ್ಸಿನ ಆತಂಕವನ್ನು ಕಡಿಮೆ ಮಾಡುತ್ತದೆ. ನಿಸರ್ಗ ಮತ್ತು ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವ ಮಾನಸಿಕ ಆರೋಗ್ಯ ಉತ್ತಮವಾಗಿದ್ದು ರಕ್ತದೊತ್ತಡ ಮತ್ತು ಸ್ನಾಯು ಹಾಗೂ ದೇಹದ ಸಮನ್ವಯವನ್ನು ಬಲಪಡಿಸುತ್ತದೆ. ಅಲ್ಲದೆ ನಾವು ನೀಡುವ ಒಂದು ಗಿಡ ಎಷ್ಟು ವರ್ಷಗಳ ಕಾಲ ಅನೇಕರ ಪಾಲಿಗೆ ಉಸಿರು ನೀಡುವ, ನೆರಳು ಕೂಡ ನೀಡಲಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ನೋ ನ್ಯೂ ಇಯರ್​ ಪಾರ್ಟಿ.. ಸೆಲೆಬ್ರೇಷನ್​ಗೆ ಗೋವಾಗೆ ಹಾರಿದ ಕರುನಾಡ ಮಂದಿ!

    2) ಚಲನ ಚಿತ್ರಗಳನ್ನು ವೀಕ್ಷಣೆ ಮಾಡಿ: ಹಳೆಯ ವರ್ಷದ ಕಹಿ ನೆನಪಿನಿಂದ ಹೊರಬರಲು ನೀವು ಒದ್ದಾಡುತ್ತಿದ್ದರೆ ಹೊಸವರ್ಷದಲ್ಲಿ ಹೊಸತನದ ರೀತಿಯಲ್ಲಿ ನಿಮ್ಮ ಜೀವನವನ್ನು ಪ್ರಾರಂಭ ಮಾಡಿ.. ನಾವು ಬೇಸರದಲ್ಲಿದ್ದಾಗ ನಮ್ಮ ಮನಸ್ಸಿಗೆ ಹೆಚ್ಚು ಮುದಾ ನೀಡುವುದು ಕಾಮಿಡಿ.ಹೀಗಾಗಿ ನೀವು ಬೇಸರದಿಂದ ಇದ್ದರೆ ಅದರಿಂದ ಹೊರಬಂದು ನಿಮ್ಮ ಮನಸ್ಸು ಉಲ್ಲಾಸದಾಯಕವಾಗಿ ಇರಬೇಕು ಎಂದರೆ ಹೆಚ್ಚು ಕಾಮಿಡಿ ಸಿನಿಮಾಗಳನ್ನು ನೋಡಿ.. ಇದು ನಿಮ್ಮ ಮನಸ್ಸಿನ ದುಃಖದ ಛಾಯೆಯಿಂದ ಹೊರತಂದು ಉಲ್ಲಾಸ ಗೊಳಿಸಲಿದೆ.ನಾವು ಎಷ್ಟು ನಗುತ್ತೇವೆ ಅಷ್ಟು ನಮ್ಮ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.. ಇದರಿಂದ ವರ್ಷಪೂರ್ತಿ ನೀವು ನಗುನಗುತಾ ಕಾಲ ಕಳೆಯಬಹುದು.

    3) ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ: ದಯವೇ ಧರ್ಮದ ಮೂಲ ಎಂಬ ಮಾತಿನಂತೆ ನಾವು ಯಾವಾಗಲೂ ದಯೆಯಿಂದ ಇರಬೇಕು.. ಕಷ್ಟದಲ್ಲಿದ್ದವರಿಗೆ ನೇರವಾಗಿ ಉದಾರತೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಇತರರೆಡೆಗೆ ನಾವು ಬೆಳೆಸಿಕೊಳ್ಳುವ ಉದಾರತೆಯ ನಮಗೆ ಸಮಸ್ಯೆಗಳನ್ನು ತಿಳಿದುಕೊಂಡು ನಮ್ಮ ದೃಷ್ಟಿಕೋನಗಳನ್ನು ಬದಲಾವಣೆ ಮಾಡಿಕೊಳ್ಳಲು ನೆರವಾಗುತ್ತದೆ. ಮತ್ತೊಬ್ಬರ ಸಮಸ್ಯೆಗೆ ಸ್ಪಂದಿಸುತ್ತಾ ಇದ್ದರೆ ನಮ್ಮಲ್ಲಿನ ಸಮಸ್ಯೆಗಳು ಮರೆತುಹೋಗಿ ಅವು ಏನೇನೂ ಅಲ್ಲ ಎನ್ನಿಸಿ ನಮ್ಮನ್ನ ಸಮಾಜಮುಖಿ ಕಾರ್ಯಗಳಿಗೆ ಪ್ರೇರೇಪಿಸಲಿದೆ.

    4) ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡಿ: ನಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡುತ್ತಿರುವ ವಸ್ತುಗಳಲ್ಲಿ ಸಾಮಾಜಿಕ ಮಾಧ್ಯಮಗಳು ಕೂಡ ಒಂದು.. ನಾವು ಎಷ್ಟು ಸಮಯ ಸಾಮಾಜಿಕ ಮಾಧ್ಯಮಗಳಲ್ಲಿ ಇರುತ್ತೇವೋ ಅಷ್ಟು ಹೆಚ್ಚು ನಕಾರಾತ್ಮಕ ಭಾವನೆ ನಮ್ಮಲ್ಲಿ ತುಂಬಿಕೊಳ್ಳುತ್ತದೆ.. ಅನಾವಶ್ಯಕವಾಗಿ ಮೊಬೈಲ್ ಬಳಕೆಯ ನಿಲ್ಲಿಸಿ ಸೋಶಿಯಲ್ ಮೀಡಿಯಾದಲ್ಲಿ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು. ನಾವು ಸಾಮಾಜಿಕ ಮಾಧ್ಯಮದಿಂದ ಹೊರಬಂದಾಗ ನಮ್ಮ ಮನಸ್ಥಿತಿ ಸುಧಾರಣೆಯಾಗುತ್ತದೆ.. ಯಾವಾಗಲೂ ಆನ್ಲೈನಲ್ಲಿ ಇರುವ ಬದಲು ಪುಸ್ತಕ ಓದುವುದು ಸಂಗೀತ ಕೇಳುವುದು ಒಳ್ಳೆಯ ಸಿನಿಮಾ ವೀಕ್ಷಣೆ ಮಾಡುವಂತಹ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಅದು ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಳ ಮಾಡಲಿದೆ.

    5) ಚೆನ್ನಾಗಿ ನಿದ್ರೆ ಮಾಡಿ: ನಿದ್ರೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಇರುವ ಮದ್ದು.. ಕೆಲವರು ಮಲಗುವ ಹೆಚ್ಚು ತಡರಾತ್ರಿಯವರೆಗೂ ಮೊಬೈಲ್ ಬಳಕೆ ಮಾಡುತ್ತಾರೆ ಮತ್ತು ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಬಳಕೆ ಮಾಡುತ್ತಾರೆ.. ವಿಶ್ರಾಂತಿ ಇಲ್ಲದೆ ಈ ರೀತಿ ಮೊಬೈಲ್ ಬಳಕೆಯ ಮಾಡುವುದು ನಿಮ್ಮ ನಿದ್ರೆಯನ್ನು ಕಸಿದುಕೊಳ್ಳಬಹುದು.. ಒಬ್ಬ ಮನುಷ್ಯ ಪ್ರತಿದಿನ ಆರು ಗಂಟೆಗೂ ಅಧಿಕ ಕಾಲ ನಿದ್ರೆ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸಲಿದೆ. ಟು ಪ್ರತಿನಿತ್ಯ ಮಲಗುವ ಮುನ್ನ ಒಂದು ಒಳ್ಳೆಯ ಪುಸ್ತಕ ಓದಿ ಇಷ್ಟವಾದ ಆಹಾರ ಸೇವಿಸಿ ಒಂದು ಸಂಗೀತ ಕೇಳಿದರೆ ನಿಮ್ಮ ನಿಮ್ಮ ಮನಸ್ಸು ಶಾಂತವಾಗಿ ನಿಮಗೆ ಹಾಯಾದ ನಿದ್ದೆ ಬರಲಿದೆ.

    6) ಧ್ಯಾನ ಮಾಡಿ: ಧ್ಯಾನ ಸರ್ವರೋಗಕ್ಕೂ ಮದ್ದು.. ಮನಸ್ಸಿನ ಆರೋಗ್ಯವನ್ನು ಸುಧಾರಿಸಲು ಧ್ಯಾನ ಎಂಬುದು ಅತಿಮುಖ್ಯವಾದದ್ದು.. ತಮ್ಮ ಒತ್ತಡದ ದಿನಚರಿ ಎಷ್ಟೇ ಇದ್ದರೂ ಸಹ ಪ್ರತಿದಿನ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸಲಿದೆ.. ಜೊತೆಗೆ ಒತ್ತಡ ನಿವಾರಣೆ ಖಿನ್ನತೆ ನಿವಾರಣೆ ಕೂಡ ಆಗಲಿದೆ. ಅದೇ ನಮ್ಮಲ್ಲಿ ನಾನು ನಕಾರಾತ್ಮಕ ಮನೋಭಾವ ತೊಲಗಿ ದಿಢೀರ್ ಸಿಟ್ಟು, ಅಳು ಮೊದಲಾದ ಮೂಡ್ ಸ್ವಿಂಗ್ಸ್ ಕಡಿಮೆಯಾಗುತ್ತದೆ..

    ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಹಲವು ನಿರ್ಬಂಧ; ಜನಸಂದಣಿ, ಡಿಜೆಗೆ ಅವಕಾಶ ಇಲ್ಲ

    7)ಚಿಕಿತ್ಸಕರೊಂದಿಗೆ ಮಾತನಾಡಿ: ಚಿಕಿತ್ಸಕರ ಜತೆ ಮಾತನಾಡಲು ನಿಮಗೆ ಮಾನಸಿಕ ಸಮಸ್ಯೆಯೇ ಇರಬೇಕೆಂದೇನಿಲ್ಲ. ಮನಸ್ಸಿನ ಒತ್ತಡವನ್ನು ಕಳೆದು ನೆಮ್ಮದಿ ದೊರಕಲು ಚಿಕಿತ್ಸಕರ ಜತೆ ಮನಬಿಚ್ಚಿ ಮಾತನಾಡಿ. ಮಾನಸಿಕ ಆರೋಗ್ಯ ತಜ್ಞರು ಒತ್ತಡವನ್ನು ನಿರ್ವಹಿಸಲು ಮತ್ತು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ನಿಭಾಯಿಸಲು ನೆರವಾಗುತ್ತಾರೆ. ಇದು ನಿಮ್ಮ ಜೀವನವನ್ನು ಸುಧಾರಿಸುತ್ತದೆ.
    Published by:ranjumbkgowda1 ranjumbkgowda1
    First published: