Alia Yoga: ಪ್ರತಿದಿನ ಈ ಯೋಗಾಸನ ಮಾಡಿದ್ರೆ ಬೆಸ್ಟ್ ಅಂತೆ! ಈ ಬಗ್ಗೆ ಟಿಪ್ಸ್ ಕೊಟ್ರು ಆಲಿಯಾ ಭಟ್ ಟ್ರೈನರ್

ಹಾಸಿಗೆಯಿಂದ ಎದ್ದ ತಕ್ಷಣ ಫೋನ್‌ ಅನ್ನು ನೋಡುವ ಬದಲು, ಯೋಗ ಮಾಡಿ ಮತ್ತು ಜೀವನಶೈಲಿಯಲ್ಲಿ ಆರೋಗ್ಯಕರ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿ ಎಂದು ಅಂಶುಕಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಯೋಗಾಸನದ ವಿಡಿಯೋ ಜೊತೆಗೆ ಪೋಸ್ಟ್ ಮಾಡಿದ್ದಾರೆ.

ನಟಿ ಆಲಿಯಾ ಭಟ್

ನಟಿ ಆಲಿಯಾ ಭಟ್

 • Share this:
  ಹಲವರು ತುಂಬಾ ದಿನಗಳಿಂದ ಯೋಗವನ್ನು (Yoga) ದಿನನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು, ಬೆಳಗ್ಗೆ (Morning) ಎದ್ದ ತಕ್ಷಣ ಸ್ವಲ್ಪ ಹೊತ್ತು ಯೋಗ, ಧ್ಯಾನ (Meditation) ಮಾಡಬೇಕು ಅಂತಾ ಅಂದುಕೊಂಡಿರುತ್ತಾರೆ. ಆದರೆ ಸಮಯದ (Time) ಅಭಾವ, ಇಲ್ಲವೇ ಆರಂಭದಲ್ಲಿ ಯಾವ ಯೋಗ ಭಂಗಿ ಮಾಡಿದರೆ ಉತ್ತಮ ಹೀಗೆ ಮಾರ್ಗದರ್ಶನದ ಕೊರತೆಯಿಂದಾಗಿ ಯೋಗಾಸನದಿಂದ ದೂರವೇ ಉಳಿದು ಬಿಡುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಯೋಗವು ಅನೇಕ ಆರೋಗ್ಯ (Healthy) ಪ್ರಯೋಜನಗಳನ್ನು ಹೊಂದಿದೆ. ಇದು ನಮ್ಯತೆ, ಸ್ಥಿರತೆ ಮತ್ತು ದೇಹದ ಚಲನೆಯ ವ್ಯಾಪ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಸ್ನಾಯು ಗುಂಪುಗಳ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಬಲಪಡಿಸಲು ಹಾಗೂ ದೇಹದ ಚಲನಶೀಲತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ ಮತ್ತು ದಿನವನ್ನು ಶುರು ಮಾಡಲು ದೇಹವನ್ನು ಸಿದ್ಧಗೊಳಿಸುತ್ತದೆ. ಬೆಳಗ್ಗೆ ಯೋಗಾಭ್ಯಾಸ ಮಾಡುವ ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ, ಚೈತನ್ಯ ನೀಡುತ್ತದೆ.

  ಸೆಲಬ್ರಿಟಿ ಯೋಗ ಟ್ರೈನರ್ ಹೇಳೋದೇನು?

  ಹಾಗಾದರೆ ಪ್ರತಿದಿನ ಅಭ್ಯಾಸ ಮಾಡಲು 5 ಯೋಗ ಆಸನಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳಾದ ಆಲಿಯಾ ಭಟ್, ಕರೀನಾ ಕಪೂರ್ ಮತ್ತು ಅನನ್ಯಾ ಪಾಂಡೆ ಅವರಿಗೆ ತರಬೇತಿ ನೀಡುವ ಮೂಲಕ ಹೆಸರುವಾಸಿಯಾಗಿರುವ ಯೋಗ ತರಬೇತುದಾರರಾದ ಅಂಶುಕಾ ಪರ್ವಾನಿ ತಿಳಿಸಿಕೊಟ್ಟಿದ್ದಾರೆ. ಅವರು ಪ್ರತಿದಿನ ಬೆಳಗ್ಗೆ ಎದ್ದ ನಂತರ ಮಾಡಬಹುದಾದ ಐದು ಯೋಗ ಆಸನಗಳ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

  ಮೊಬೈಲ್ ಬಿಡಿ, ಯೋಗ ಮಾಡಿ!

  ಹಾಸಿಗೆಯಿಂದ ಎದ್ದ ತಕ್ಷಣ ಫೋನ್‌ ಅನ್ನು ನೋಡುವ ಬದಲು, ಯೋಗ ಮಾಡಿ ಮತ್ತು ಜೀವನಶೈಲಿಯಲ್ಲಿ ಆರೋಗ್ಯಕರ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿ ಎಂದು ಅಂಶುಕಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಯೋಗಾಸನದ ವಿಡಿಯೋ ಜೊತೆಗೆ ಪೋಸ್ಟ್ ಮಾಡಿದ್ದಾರೆ.

  ಇದನ್ನೂ ಓದಿ: Hair Care: ಬಾಲಿವುಡ್ ತಾರೆಯರ ಕೂದಲ ಸೌಂದರ್ಯದ ರಹಸ್ಯ ಏನು ಗೊತ್ತಾ? ಇಲ್ಲಿದೆ ಯಾರಿಗೂ ಗೊತ್ತಿಲ್ಲದ ಗುಟ್ಟು

  ವಿವಿಧ ಆಸನಗಳ ಬಗ್ಗೆ ತಿಳಿಸಿದ ಅಂಶುಕಾ

  ವಿಡಿಯೋದಲ್ಲಿ ಅಂಶುಕಾ ಬಟರ್‌ಫ್ಲೈ, ವಿಪರೀತ ಕರಣಿ, ಭುಜಂಗಾಸನ, ಅರ್ಧ ಮತ್ಸ್ಯೇಂದ್ರಾಸನ ಮತ್ತು ಪವನಮುಕ್ತಾಸನವನ್ನು ಮಾಡಿದ್ದಾರೆ. ಕಿಬ್ಬೊಟ್ಟೆಯ ಮತ್ತು ಕೋರ್ ಸ್ನಾಯುಗಳನ್ನು ವಿಸ್ತರಿಸುವುದರಿಂದ ಹಿಡಿದು ತೋಳುಗಳು ಮತ್ತು ಕಾಲಿನ ಸ್ನಾಯುಗಳಿಂದ ಕೆಲಸ ಮಾಡುವವರೆಗೆ, ಈ ಯೋಗ ಆಸನಗಳು ಬಹು ಪ್ರಯೋಜನಗಳನ್ನು ಹೊಂದಿವೆ. “ನೀವು ಪ್ರತಿದಿನ ಮಾಡಬಹುದಾದ ಈ ಯೋಗ ಆಸನಗಳನ್ನು ಪ್ರಯತ್ನಿಸಿ" ಎಂದು ಅಂಶುಕಾ ಬರೆದಿದ್ದಾರೆ.

  ಬಟರ್‌ಫ್ಲೈ

  ನೇರವಾಗಿ ಕುಳಿತುಕೊಳ್ಳುವುದು ಮತ್ತು ನಿಮ್ಮ ಬೆನ್ನುಮೂಳೆಯನ್ನು ಉದ್ದವಾಗಿಸುವ ಈ ಭಂಗಿ ದೇಹದ ಜಾಗೃತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೆನ್ನು, ಸೊಂಟ ಮತ್ತು ತೊಡೆಯ ಸ್ನಾಯುಗಳ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ನಮ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಚಲನೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ.

  ವಿಪರೀತ ಕರಣಿ

  ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಗ್ಯಾಸ್ಟ್ರಿಕ್ ತೊಂದರೆ ಮತ್ತು ವಾಯುವನ್ನು ನಿವಾರಿಸುತ್ತದೆ. ಇದರ ಅಭ್ಯಾಸವು ಸೊಂಟ, ಸ್ಯಾಕ್ರಲ್ ಪ್ರದೇಶ ಮತ್ತು ಕೆಳ ಬೆನ್ನಿನಲ್ಲಿ ನೋವನ್ನು ನಿವಾರಿಸುತ್ತದೆ.

  ಭುಜಂಗಾಸನ

  ಬೆನ್ನುಮೂಳೆಯನ್ನು ಬಲಪಡಿಸುತ್ತದೆ, ಎದೆ ಮತ್ತು ಶ್ವಾಸಕೋಶಗಳು, ಭುಜಗಳು ಮತ್ತು ಹೊಟ್ಟೆಯನ್ನು ವಿಸ್ತರಿಸುತ್ತದೆ. ಯಕೃತ್ತು ಮತ್ತು ಮೂತ್ರಪಿಂಡದಂತಹ ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ಭುಜಂಗಾಸನವು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಕೆಲವು ಸ್ತ್ರೀರೋಗ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

  ಪವನಮುಕ್ತಾಸನ

  ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
  ಪವನಮುಕ್ತಾಸನವು ಮಲಬದ್ಧತೆ, ಅಜೀರ್ಣ, ಅತಿಸಾರ ಮತ್ತು ಆಮ್ಲೀಯತೆಯನ್ನು ನಿವಾರಿಸುತ್ತದೆ.

  ಅರ್ಧ ಮತ್ಸ್ಯೇಂದ್ರಾಸನ

  ಕೆಳ ಬೆನ್ನಿನ ನೋವಿನಿಂದ ಪರಿಹಾರವನ್ನು ನೀಡುತ್ತದೆ. ನಿಮ್ಮ ಬೆನ್ನುಹುರಿಯ ಸಾಮಾನ್ಯ ತಿರುಗುವಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅರ್ಧ ಮತ್ಸ್ಯೇಂದ್ರಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ

  ಇದನ್ನೂ ಓದಿ: Anupama Gowda: 'ನಮ್ಮಮ್ಮ ಸೂಪರ್‌ ಸ್ಟಾರ್' ಮುಗೀತಿದ್ದಂತೆ ಕೂದಲಿಗೆ ಕತ್ತರಿ ಹಾಕಿದ ಅನುಪಮಾ! 'ಅಕ್ಕ' ಇದ್ಯಾಕಕ್ಕಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್

  ಈ ಎಲ್ಲಾ ಆಸನಗಳು ಒಟ್ಟಾರೆ " ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಿರಲು ಸಹಾಯ ಮಾಡುತ್ತದೆ, ನಿಮ್ಮ ಶಕ್ತಿಯ ಮಟ್ಟಗಳು ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ, ಆತಂಕವನ್ನು ಕಡಿಮೆ ಮಾಡುತ್ತದೆ" ಎಂದು ಅಂಶುಕಾ ಪರ್ವಾನಿ ಹೇಳಿದ್ದಾರೆ.
  Published by:Annappa Achari
  First published: