ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಭುಜ, ಬೆನ್ನು ನೋವು ಹಾಗೂ ಕುತ್ತಿಗೆ ನೋವು ತುಂಬಾನೇ ಸಾಮಾನ್ಯವಾಗಿ ಬಿಟ್ಟಿದೆ. ಕಚೇರಿ, ಮನೆಯಲ್ಲಿ ಕೆಲಸ ಮಾಡುವವರನ್ನು ಸೇರಿ ಸಾಮಾನ್ಯವಾಗಿ ಇತ್ತೀಚೆಗೆ ಈ ಭುಜ, ಕತ್ತು,ಬೆನ್ನು ನೋವು ಜನರನ್ನು ಬಹಳ ಕಾಡುವಂತದ್ದು. ಬಿಡುವಿಲ್ಲದ ಕೆಲಸದಲ್ಲಿ ಸಣ್ಣ-ಪುಟ್ಟ ದೈನಂದಿನ ವ್ಯಾಯಾಮವನ್ನೂ ಸಹ ಕೆಲವರು ಬಿಟ್ಟು ಬಿಟ್ಟಿದ್ದಾರೆ. ಜಡ ಜೀವನಶೈಲಿ (Lifestyle) ಯಾವಾಗಲೂ ಅನಾರೋಗ್ಯಕರವಾದದ್ದು. ಬಿಡುವಿಲ್ಲದ ಕೆಲಸದ ಮಧ್ಯದಲ್ಲಿಯೂ ಎದ್ದು ಸ್ವಲ್ಪ ಹೊತ್ತು ಓಡಾಡುವ, ಕೈ ಕಾಲು, ಕತ್ತನ್ನು ಆಡಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯಾವುದೇ ದೈಹಿಕ ವ್ಯಾಯಾಮ ಇಲ್ಲದ ಜನರಲ್ಲಿ ಸ್ನಾಯು ಸಮಸ್ಯೆ ಹೆಚ್ಚು ಕಂಡುಬರುತ್ತಿದೆ. ಅದರಲ್ಲೂ ವಿಶೇಷವಾಗಿ ಭುಜ, ಬೆನ್ನು ಮತ್ತು ಕೋರ್ ಸ್ನಾಯುಗಳಿಗೆ (Shoulder, Core and Spine) ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಾಗಿ ನೋಡಬಹುದಾಗಿದೆ.
ಕುಳಿತಲ್ಲಿಯೇ ಕುಳಿತು ಕೆಲಸ ಮಾಡುವುದು ಅನಿವಾರ್ಯ ಎನ್ನುವವರು, ಅವರ ದೈನಂದಿನ ಜೀವನದಲ್ಲಿ ಕೆಲವು ಯೋಗ ಆಸನಗಳನ್ನು ಸೇರಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಬೆನ್ನು, ಭುಜ, ಕೋರ್ ಸ್ನಾಯುಗಳನ್ನು ಬಲಪಡಿಸಲು ಉತ್ತಮ ಯೋಗಾಭ್ಯಾಸವೊಂದನ್ನ ಯೋಗ ತರಬೇತುದಾರರಾದ ಅಂಶುಕಾ ಪರ್ವಾನಿ ಎಂಬುವವರು ತಿಳಿಸಿಕೊಟ್ಟಿದ್ದಾರೆ.
ಅಂಶುಕಾ ಪರ್ವಾನಿ ಹೇಳಿಕೊಟ್ಟ ಆಸನಗಳಿವು
ಆಲಿಯಾ ಭಟ್ ಅವರ ಯೋಗ ತರಬೇತುದಾರರಾದ ಅಂಶುಕಾ ಪರ್ವಾನಿ ಅವರು ಅರ್ಧ ಪೂರ್ವೋತ್ತನಾಸನ ಅಥವಾ ರಿವರ್ಸ್ ಟೇಬಲ್ ಟಾಪ್ ಪೋಸ್ ಎಂಬ ಆರಂಭಿಕ ಸ್ನೇಹಿ ಆಸನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಅರ್ಧ ಪೂರ್ವೋತ್ತನಾಸನ ಅಥವಾ ರಿವರ್ಸ್ ಟೇಬಲ್ ಟಾಪ್ ಭಂಗಿ ಪ್ರಯೋಜನಗಳು
ಅಂಶುಕಾ ಪ್ರಕಾರ, ಅರ್ಧ ಪೂರ್ವೋತ್ತನಾಸನ ಅಥವಾ ರಿವರ್ಸ್ ಟೇಬಲ್ ಟಾಪ್ ಭಂಗಿಯು ಆರಂಭಿಕರಿಗೆ ಉತ್ತಮ ಯೋಗದ ಆಸನವಾಗಿದೆ ಎನ್ನುತ್ತಾರೆ. ಇದು "ಭುಜ, ಕೋರ್ ಮತ್ತು ಬೆನ್ನುಮೂಳೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತ್ರಿಕೋನಾಸನದಿಂದ ಕಾಲುಗಳ, ಎದೆಯ, ಸೊಂಟದ, ಬೆನ್ನೆಲುಬಿನ ಸ್ನಾಯುಗಳು ಹಿಗ್ಗುವುದಲ್ಲದೆ ಅವುಗಳನ್ನು ಬಲಿಷ್ಟವಾಗಿಸುತ್ತದೆ. ಇದು ಸಮತೋಲನ ಮತ್ತು ಭಂಗಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮನಸ್ಸಿನ ಮೇಲೆ ಅತ್ಯಂತ ಪರಿಣಾಮ ಬೀರುತ್ತದೆ . ಈ ಆಸನ ಮಾಡುವುದರಿಂದ ಮನಸ್ಸು ಶಾಂತವಾಗಿ ಹಾಯ್ ಎನಿಸುತ್ತದೆ ಎಂದಿದ್ದಾರೆ.
View this post on Instagram
ಅರ್ಧ ಪೂರ್ವೋತ್ತನಾಸನ ಭಂಗಿ ಮಾಡುವುದು ಹೇಗೆ?
• ಅರ್ಧ ಪೂರ್ವೋತ್ತನಾಸನವನ್ನು ಆರಂಭಿಸಲು, ದಂಡಾಸನ ಭಂಗಿಯಲ್ಲಿ ಕಾಲುಗಳನ್ನು ವಿಸ್ತರಿಸಿ ಯೋಗ ಚಾಪೆಯ ಮೇಲೆ ಮೊದಲು ಕುಳಿತುಕೊಳ್ಳಿ.
• ಉಸಿರಾಡುವಿಕೆಯೊಂದಿಗೆ, ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ, ನಿಮ್ಮ ಸೊಂಟವನ್ನು ಮೇಲಕ್ಕೆತ್ತಿ.
• ತೊಡೆಗಳು ನೆಲಕ್ಕೆ ಸಮಾನಾಂತರವಾಗುವವರೆಗೆ ಸೊಂಟವನ್ನು ಮೇಲಕ್ಕೆ ಎತ್ತಲು ಪ್ರಾರಂಭಿಸಿ. ನಿಮ್ಮ ಪೃಷ್ಠವನ್ನು ಸಂಕುಚಿತಗೊಳಿಸಿ, ನಿಮ್ಮ ಹೊಟ್ಟೆಯನ್ನು ಮೇಲಕ್ಕೆ ತಳ್ಳುವುದು, ನಿಮ್ಮ ತಲೆಯನ್ನು ನೆಲಕ್ಕೆ ಸಮಾನಾಂತರವಾಗಿ ಇರಿಸಲು ಪ್ರಯತ್ನಿ.
• ಮೊಣಕಾಲುಗಳನ್ನು ತೊಡೆಗಳಿಗೆ 90 ಡಿಗ್ರಿ ಕೋನದಲ್ಲಿ ಇರಿಸಿ ಭಂಗಿಯನ್ನು ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ.
• ನಿಮ್ಮ ಪಾದಗಳು ಮತ್ತು ಅಂಗೈಗಳ ನಡುವೆ ದೇಹದ ತೂಕವನ್ನು ಸಮವಾಗಿ ವಿತರಿಸಲು ಪ್ರಯತ್ನಿಸಿ.
• ನಿಮ್ಮ ಮೂಗಿನ ಮೂಲಕ ಶಾಂತವಾಗಿ ಉಸಿರಾಡಿ.
• ಕೊನೆಯದಾಗಿ ನಿಮ್ಮ ಸೊಂಟವನ್ನು ನಿಧಾನವಾಗಿ ನೆಲಕ್ಕೆ ಇಳಿಸಿ.
ಸುರಕ್ಷತಾ ಸಲಹೆ
ಅರ್ಧ ಪೂರ್ವೋತ್ತನಾಸನ ಭಂಗಿ ಆರಂಭಿಸುವ ಮುನ್ನ ಕೆಲವು ವಿಚಾರಗಳ ಬಗ್ಗೆಯೂ ಎಚ್ಚರ ವಹಿಸಬೇಕು. “ನೀವು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿದ್ದರೆ, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ಮಣಿಕಟ್ಟುಗಳು, ಭುಜಗಳು ಮತ್ತು ಬೆನ್ನಿನ ಯಾವುದೇ ಗಾಯಗಳಿಂದ ಬಳಲುತ್ತಿದ್ದರೆ ಈ ಆಸನವನ್ನು ಅಭ್ಯಾಸ ಮಾಡುವುದನ್ನು ತಡೆಯಬೇಕು." ಎಂದು ಅಂಶುಕಾ ಪರ್ವಾನಿ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ