ಸೀರೆ ಲುಕ್​ನಲ್ಲಿ ಮಿಂಚಿದ ಮುದ್ದುಮುಖದ ನಟಿ ಆಲಿಯಾ ಭಟ್

news18
Updated:June 29, 2018, 6:06 PM IST
ಸೀರೆ ಲುಕ್​ನಲ್ಲಿ ಮಿಂಚಿದ ಮುದ್ದುಮುಖದ ನಟಿ ಆಲಿಯಾ ಭಟ್
news18
Updated: June 29, 2018, 6:06 PM IST
ನ್ಯೂಸ್ 18 ಕನ್ನಡ

ಭಾರತೀಯ ನಾರಿ ಎಂದರೆ ತಕ್ಷಣ ಮನಸಲ್ಲಿ ಮೂಡುವ ಚಿತ್ರಣ ಸೀರೆಯುಟ್ಟ ನಾರಿ. ದೇಸಿ ಸಂಸ್ಕೃತಿಯ ಒಂದು ಭಾಗವಾಗಿರುವ ಸೀರೆ ಹೆಣ್ಣುಮಕ್ಕಳ ಅಂದವನ್ನು ಹೆಚ್ಚಿಸುತ್ತದೆ . ಸದಾ ಗ್ಲಾಮರ್​ನಿಂದ ಕಂಗೊಳಿಸುವ ಬಾಲಿವುಡ್​ನಲ್ಲಿ ಒಂದು ಸೀರೆಗೆ ಒಂದು ವ್ಯಾಲ್ಯೂ ತಂದು ಕೊಟ್ಟಿದ್ದು ನಟಿ ವಿದ್ಯಾ ಬಾಲನ್ ಎಂದರೆ ತಪ್ಪಾಗಲಾರದು. ಇದೀಗ ಬಾಲಿವುಡ್​ನ ಯುವ ನಟಿ ಆಲಿಯಾ ಭಟ್ ನಿಶ್ಚಿತಾರ್ಥ ಪಾರ್ಟಿವೊಂದರಲ್ಲಿ ಸೀರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಇತರೆ ಸೆಲೆಬ್ರೆಟಿಗಳು ಹುಬ್ಬೇರುವಂತೆ ಮಾಡಿದ್ದಾರೆ.

ಮುಕೇಶ್​ ಅಂಬಾನಿ ಮಗನ ನಿಶ್ಚಿತಾರ್ಥ ಪಾರ್ಟಿಯಲ್ಲಿ ಪಿಂಕ್​ ಸೀರೆಯಲ್ಲಿ ಕಾಣಿಸಿದ ಮುದ್ದು ಮುಖ ಆಲಿಯಾ ಚಿತ್ರಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಶಾರೂಖ್ ಖಾನ್, ಸಚಿನ್ ತೆಂಡುಲ್ಕರ್, ಅಯಾನ್ ಮುಖರ್ಜಿ, ಗೌರಿ ಖಾನ್, ರಣಬೀರ್ ಕಪೂರ್​ರಂತಹ ಸ್ಟಾರ್ಸ್​ ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ತನ್ನ ಬಾಯ್​ಫ್ರೆಂಡ್​ ನಿಕ್ ಜೋನಸ್ ಜೊತೆ ಬಂದಿದ್ದ ಪ್ರಿಯಾಂಕಾ ಚೋಪ್ರಾ ಅಂಬಾನಿ ಕುಟುಂಬದ ಸಮಾರಂಭದ ಆಕರ್ಷಣೆಯ ಕೇಂದ್ರ ಬಿಂದುವಾಗಲಿದ್ದಾರೆ ಎಂಬುದು ಎಲ್ಲರ ಊಹೆಯಾಗಿತ್ತು. ಆದರೆ ಚಿತ್ರರಂಗದ ಬಹುದೊಡ್ಡ ಸೆಲೆಬ್ರಿಟಿಗಳನ್ನೇ ಸೈಡ್ ಲೈನ್​ಗೆ​ ಸರಿಸಿ ಮಿಂಚಿದ್ದು ನಟಿ ಆಲಿಯಾ ಭಟ್.
Loading...

A post shared by Indian Fashion Hub (@indianfashionhubb) on

ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಸ್ಟುಡಿಯೋಸ್ ತಯಾರಿಸಿದ ಬ್ರೊಕೇಡ್ ಸೀರೆಯಲ್ಲಿ ಆಲಿಯಾ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಣೆಯಲ್ಲಿ ಚಿಕ್ಕ ಬಿಂದಿ ಮತ್ತು ಚೆಂದದ ಕಿವಿಯೋಲೆ ಧರಿಸಿದ ಆಲಿಯಾ ಭಟ್ ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕಾರ್ಯಕ್ರಮಕ್ಕೆ ಸ್ಯಾರಿ ಲುಕ್​ನಲ್ಲಿ ಅನೀರಿಕ್ಷಿತವಾಗಿದ ಆಗಮಿಸಿದ್ದು, ಕ್ಯಾಮೆರಾ ಕಣ್ಣುಗಳಿಗೆ ಹಬ್ಬವಾಗಿ ಹೋಗಿತ್ತು.ಈ ಹಿಂದೆ ನಟಿ ಸೋನಮ್ ಕಪೂರ್ ಮದುವೆ ಸಮಾರಂಭಕ್ಕೆ ನಟ ರಣಬೀರ್ ಕಪೂರ್ ಜೊತೆ ಆಲಿಯಾ ಭಟ್ ಬಂದಿದ್ದರು. ಇದರಿಂದ ಬಾಲಿವುಡ್ ಗಾಸಿಪ್ ಕಾಲಂಗಳಲ್ಲಿ ರಣಬೀರ್ ಮತ್ತು ಆಲಿಯಾ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಾರಿ ಮಾತ್ರ ಆಲಿಯಾ, ನಟ ರಣಬೀರ್​ ಆಗಮನದ ಒಂದು ಗಂಟೆಯ ನಂತರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.A post shared by Alia ✨⭐️ (@aliaabhatt) on
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ