ಮದ್ಯಪಾನಿಗಳಿಗೊಂದು ಎಚ್ಚರಿಕೆ; ಈ ರೀತಿಯಾಗಿ ಆಲ್ಕೋಹಾಲ್ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

news18
Updated:August 15, 2018, 9:33 PM IST
ಮದ್ಯಪಾನಿಗಳಿಗೊಂದು ಎಚ್ಚರಿಕೆ; ಈ ರೀತಿಯಾಗಿ ಆಲ್ಕೋಹಾಲ್ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ
news18
Updated: August 15, 2018, 9:33 PM IST
-ನ್ಯೂಸ್ 18 ಕನ್ನಡ

ಸಾಮಾನ್ಯವಾಗಿ ಮದ್ಯಪಾನಿಗಳು ಸೋಡಾ ಅಥವಾ ನೀರು ಮಿಶ್ರಣ ಮಾಡಿ ಆಲ್ಕೋಹಾಲ್​ನ್ನು ಸೇವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದ್ಯ ಸೇವಿಸಿದಾಗ ನಿದ್ರೆ ಬರದಿರಲು ಆಲ್ಕೊಹಾಲ್​ಗೆ ಎನರ್ಜಿ ಡ್ರಿಂಕ್ ಸೇರಿಸಲಾಗುತ್ತಿದೆ. ಈ ರೀತಿಯಲ್ಲಿ ಮದ್ಯ ಸೇವಿಸುವುದರಿಂದ ಮನುಷ್ಯರಲ್ಲಿ ನಕರಾತ್ಮಕ ಚಿಂತನೆ ಮೂಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಆಲ್ಕೋಹಾಲ್​ಗೆ ಎನರ್ಜಿ ಡ್ರಿಂಕ್ ಮಿಶ್ರ ಮಾಡಿ ಕುಡಿದರೆ ಹಿಂಸೆಗೆ ಪ್ರಚೋದನೆ ನೀಡುವುದಲ್ಲದೆ, ಅಪಾಯಕಾರಿ ನಡವಳಿಕೆಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

192 ಜೀಬ್ರಾ ಮೀನುಗಳ ಮೇಲೆ ನಡೆಸಲಾದ ಈ ಅಧ್ಯಯನದಲ್ಲಿ ಆಲ್ಕೋಹಾಲ್ ಮತ್ತು ಎನರ್ಜಿ ಡ್ರಿಂಕ್ ಮಿಶ್ರಣವು ಕೆಟ್ಟ ಪರಿಣಾಮ ಬೀರುತ್ತಿರುತ್ತಿರುವುದನ್ನು ಪತ್ತೆ ಹಚ್ಚಲಾಯಿತು. ಈ ವೇಳೆ ಮೀನಿನಲ್ಲಿ ಭಯದ ಗುಣ ಲಕ್ಷಣಗಳು ಹೆಚ್ಚಾಗಿರುವುದು ಕಂಡು ಬಂದಿದ್ದು, ಹಾಗೆಯೇ ಮೀನುಗಳು ನಿಯಂತ್ರಣ ತಪ್ಪಿರುವುದು ಕಾಣಿಸಿದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಈ ಅಧ್ಯಯನದ ಪ್ರಕಾರ, ಇಬ್ಬರು ವ್ಯಕ್ತಿಗಳು ಜೊತೆಯಾಗಿ ಎನರ್ಜಿ ಡ್ರಿಂಕ್ಸ್​ನೊಂದಿಗೆ ಮದ್ಯಪಾನ ಮಾಡಿದರೆ ಇದರ ಪರಿಣಾಮ ಉಲ್ಬಣಗೊಳ್ಳಬಹುದು. ಇದರಿಂದ ಸಾಮಾಜಿಕ ಸಂವಹನವನ್ನು ಕಡಿಮೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಹೋರಾಟ, ಹಿಂಸಾಚಾರ ಮತ್ತು ಅಪಾಯಕಾರಿ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಬ್ರಿಟನ್ ವಿಶ್ವ ವಿದ್ಯಾಲಯದ ಮ್ಯಾಟ್​ ಪಾರ್ಕರ್ ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಮೀನುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಪರೀಕ್ಷಿಸಲಾಗಿತ್ತು. ಪ್ರತಿ ಮೀನುಗಳಿಗೆ ಗಂಟೆಗೆ ಒಂದು ಬಾರಿ ಎನರ್ಜಿ ಡ್ರಿಂಕ್ಸ್​ನಲ್ಲಿರುವ ಟೌರಿನ್ ಮತ್ತು ಆಲ್ಕೋಹಾಲ್​ ನೀಡಲಾಗಿತ್ತು.

ಮದ್ಯ ಮತ್ತು ಟೌರಿನ್ ಎರಡರಲ್ಲೂ ಒಡ್ಡಿರುವ ಮೀನುಗಳನ್ನು ಇತರೆ ಮೀನುಗಳಿಗೆ ಹೋಲಿಸಿದರೆ ಕಡಿಮೆ ಸಂವಾದವನ್ನು ನಡೆಸುತ್ತಿರುವುದು ಕಂಡು ಬಂದಿದೆ. ಹೆಚ್ಚು ಅಪಾಯಕಾರಿ ನಡವಳಿಕೆಯನ್ನು ಹೊಂದಿದ್ದ ಈ ಮೀನುಗಳು ಹೆಚ್ಚಾಗಿ ಪರಭಕ್ಷಕ ವಲಯಗಳಲ್ಲಿ ಕಾಣಿಸಿಕೊಂಡಿದ್ದವು ಎಂದು ಅಧ್ಯಯನ ತಂಡ ತಿಳಿಸಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಆಗಿದ್ದರೂ ಹೆಚ್ಚಿನವರು ಉಲ್ಲಾಸಕ್ಕಾಗಿ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಇತ್ತೀಚೆಗೆ ಮದ್ಯಪ್ರಿಯರು ಎನರ್ಜಿ ಡ್ರಿಂಕ್ಸ್​ನೊಂದಿಗೆ ಮದ್ಯ ಸೇವಿಸುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ನಡೆಸಲಾದ ಈ ಹೊಸ ಅಧ್ಯಾಯನದಿಂದ ಈ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...