ಮದ್ಯಪಾನಿಗಳಿಗೊಂದು ಎಚ್ಚರಿಕೆ: ನೀವು ಈ ರೀತಿಯಾಗಿ ಮದ್ಯ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಈ ಅಧ್ಯಯನಕ್ಕಾಗಿ ಮೀನುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಪರೀಕ್ಷಿಸಲಾಗಿತ್ತು. ಪ್ರತಿ ಮೀನುಗಳಿಗೆ ಗಂಟೆಗೆ ಒಂದು ಬಾರಿ ಎನರ್ಜಿ ಡ್ರಿಂಕ್ಸ್​ನಲ್ಲಿರುವ ಟೌರಿನ್ ಮತ್ತು ಆಲ್ಕೋಹಾಲ್​ ನೀಡಲಾಗಿತ್ತು.

zahir | news18
Updated:June 14, 2019, 9:23 PM IST
ಮದ್ಯಪಾನಿಗಳಿಗೊಂದು ಎಚ್ಚರಿಕೆ: ನೀವು ಈ ರೀತಿಯಾಗಿ ಮದ್ಯ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ
@Mental Floss
  • News18
  • Last Updated: June 14, 2019, 9:23 PM IST
  • Share this:
ಸಾಮಾನ್ಯವಾಗಿ ಮದ್ಯಪಾನಿಗಳು ಸೋಡಾ ಅಥವಾ ನೀರು ಮಿಶ್ರಣ ಮಾಡಿ ಆಲ್ಕೋಹಾಲ್​ನ್ನು ಸೇವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮದ್ಯ ಸೇವಿಸಿದಾಗ ನಿದ್ರೆ ಬರದಿರಲು ಅನೇಕರು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.

ಮದ್ಯಪಾನ ಮಾಡಿದರೆ ಬೇಗನೆ ಮತ್ತಗಾಗುತ್ತದೆ ಎಂದು ಕುಡುಕರು ಹೊಸ ಐಡಿಯಾ ಮೊರೆ ಹೋಗುತ್ತಿದ್ದಾರೆ. ಮದ್ಯ ಸೇವಿಸಿದರೆ ಅಮಲಿನಲ್ಲಿ ತೇಲುತ್ತಾ ಖುಷಿ ಪಡುತ್ತಾ ಇರಬೇಕು. ಆದರೆ ಆಲ್ಕೊಹಾಲ್ ದೇಹ ಸೇರಿದಾಗ ಕೆಲವರಲ್ಲಿ ಬೇಗನೆ ನಿದ್ರೆ ಆವರಿಸಿ ಬಿಡುತ್ತದೆ. ಇದರಿಂದ ಮದ್ಯದ ಅಸಲಿ ಮಜಾ ತಪ್ಪುತ್ತದೆ ಎಂದು ನಿದ್ರೆ ಬರದಿರಲು ಆಲ್ಕೊಹಾಲ್​ಗೆ ಎನರ್ಜಿ ಡ್ರಿಂಕ್ ಸೇರಿಸಿ ಕುಡಿಯುತ್ತಿದ್ದಾರೆ.

ಆದರೆ ನೆನಪಿಟ್ಟುಕೊಳ್ಳಿ, ಮದ್ಯಪಾನ ಆರೋಗ್ಯಕಕ್ಕೆ ಹಾನಿಕಾರಕ. ಇನ್ನು ಅದಕ್ಕೆ ಎನರ್ಜಿ ಡ್ರಿಂಕ್ಸ್ ಮಿಕ್ಸ್​ ಮಾಡಿದರೆ ಇನ್ನೂ ಅಪಾಯಕಾರಿ. ಏಕೆಂದರೆ ಎನರ್ಜಿ ಡ್ರಿಂಕ್ಸ್​ ಅನ್ನು ಮದ್ಯದೊಂದಿಗೆ ಮಿಶ್ರಣ ಮಾಡುವುದರಿಂದ ಮನುಷ್ಯರಲ್ಲಿ ನಕರಾತ್ಮಕ ಚಿಂತನೆ ಮೂಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಆಲ್ಕೋಹಾಲ್​ಗೆ ಎನರ್ಜಿ ಡ್ರಿಂಕ್ ಮಿಶ್ರ ಮಾಡಿ ಕುಡಿದರೆ ಹಿಂಸೆಗೆ ಪ್ರಚೋದನೆ ನೀಡುವುದಲ್ಲದೆ, ಅಪಾಯಕಾರಿ ನಡವಳಿಕೆಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

192 ಜೀಬ್ರಾ ಮೀನುಗಳ ಮೇಲೆ ನಡೆಸಲಾದ ಈ ಅಧ್ಯಯನದಲ್ಲಿ ಆಲ್ಕೋಹಾಲ್ ಮತ್ತು ಎನರ್ಜಿ ಡ್ರಿಂಕ್ ಮಿಶ್ರಣವು ಕೆಟ್ಟ ಪರಿಣಾಮ ಬೀರುತ್ತಿರುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ವೇಳೆ ಮೀನಿನಲ್ಲಿ ಭಯದ ಗುಣ ಲಕ್ಷಣಗಳು ಹೆಚ್ಚಾಗಿರುವುದು ಕಂಡು ಬಂದಿದ್ದು, ಹಾಗೆಯೇ ಮೀನುಗಳು ನಿಯಂತ್ರಣ ತಪ್ಪಿರುವುದು ಕಾಣಿಸಿದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಈ ಅಧ್ಯಯನದ ಪ್ರಕಾರ, ಇಬ್ಬರು ವ್ಯಕ್ತಿಗಳು ಜೊತೆಯಾಗಿ ಎನರ್ಜಿ ಡ್ರಿಂಕ್ಸ್​ನೊಂದಿಗೆ ಮದ್ಯಪಾನ ಮಾಡಿದರೆ ಇದರ ಪರಿಣಾಮ ಉಲ್ಬಣಗೊಳ್ಳಬಹುದು. ಇದರಿಂದ ಸಾಮಾಜಿಕ ಸಂವಹನವನ್ನು ಕಡಿಮೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಹೋರಾಟ, ಹಿಂಸಾಚಾರ ಮತ್ತು ಅಪಾಯಕಾರಿ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಬ್ರಿಟನ್ ಸಂಶೋಧಕರು ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಮೀನುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಪರೀಕ್ಷಿಸಲಾಗಿತ್ತು. ಪ್ರತಿ ಮೀನುಗಳಿಗೆ ಗಂಟೆಗೆ ಒಂದು ಬಾರಿ ಎನರ್ಜಿ ಡ್ರಿಂಕ್ಸ್​ನಲ್ಲಿರುವ ಟೌರಿನ್ ಮತ್ತು ಆಲ್ಕೋಹಾಲ್​ ನೀಡಲಾಗಿತ್ತು.ಮದ್ಯ ಮತ್ತು ಟೌರಿನ್ ಎರಡರಲ್ಲೂ ಒಡ್ಡಿರುವ ಮೀನುಗಳನ್ನು ಇತರೆ ಮೀನುಗಳಿಗೆ ಹೋಲಿಸಿದರೆ ಕಡಿಮೆ ಸಂವಾದವನ್ನು ನಡೆಸುತ್ತಿರುವುದು ಕಂಡು ಬಂದಿದೆ. ಹೆಚ್ಚು ಅಪಾಯಕಾರಿ ನಡವಳಿಕೆಯನ್ನು ಹೊಂದಿದ್ದ ಈ ಮೀನುಗಳು ಹೆಚ್ಚಾಗಿ ಪರಭಕ್ಷಕ ವಲಯಗಳಲ್ಲಿ ಕಾಣಿಸಿಕೊಂಡಿದ್ದವು ಎಂದು ಅಧ್ಯಯನ ತಂಡ ತಿಳಿಸಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಆಗಿದ್ದರೂ ಹೆಚ್ಚಿನವರು ಉಲ್ಲಾಸಕ್ಕಾಗಿ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಇತ್ತೀಚೆಗೆ ಮದ್ಯಪ್ರಿಯರು ಎನರ್ಜಿ ಡ್ರಿಂಕ್ಸ್​ನೊಂದಿಗೆ ಮದ್ಯ ಸೇವಿಸುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ನಡೆಸಲಾದ ಈ ಹೊಸ ಅಧ್ಯಾಯನದಿಂದ ಈ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ನೀವು ಪೋರ್ನ್ ವಿಡಿಯೋ ನೋಡುತ್ತೀರಾ? ಹಾಗಿದ್ರೆ ಇಲ್ಲಿದೆ ಶಾಕಿಂಗ್ ನ್ಯೂಸ್
First published:June 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ