ಮಧುಮೇಹ ರೋಗಕ್ಕೆ ವಾಯು ಮಾಲಿನ್ಯವೂ ಕಾರಣ: ಹೊಸ ಅಧ್ಯಯನ

news18
Updated:July 5, 2018, 3:19 PM IST
ಮಧುಮೇಹ ರೋಗಕ್ಕೆ ವಾಯು ಮಾಲಿನ್ಯವೂ ಕಾರಣ: ಹೊಸ ಅಧ್ಯಯನ
news18
Updated: July 5, 2018, 3:19 PM IST
-ನ್ಯೂಸ್ 18 ಕನ್ನಡ

ಭಾರತದಲ್ಲಿ ಸುಮಾರು 61 ದಶಲಕ್ಷ ಜನರು ಮತ್ತು ಅಮೆರಿಕಾದಲ್ಲಿ 24 ದಶಲಕ್ಷ ಜನರು ಮಧುಮೇಹ (ಡಯಾಬಿಟಿಸ್)ದಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿತ್ತು. ಮಧುಮೇಹದ ಸಮಸ್ಯೆ ಉಂಟಾಗಲು ಜೀವನಶೈಲಿ ಮತ್ತು ಆಹಾರ ಕ್ರಮ ಮುಖ್ಯ ಕಾರಣ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಇತ್ತೀಚಿನ ಸಂಶೋಧನೆಯಿಂದ ಡಯಾಬಿಟಿಸ್​ ರೋಗಕ್ಕೆ ವಾಯು ಮಾಲಿನ್ಯ ಕೂಡ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಅಮೆರಿಕದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದಲ್ಲಿ ವಾಯು ಮಾಲಿನ್ಯದಿಂದ ಹೊಸ ಬಗೆಯ ಮಧುಮೇಹದ ಪ್ರಕರಣಗಳು ಪತ್ತೆಯಾಗಿವೆ.

2016 ರಿಂದ ಪ್ರಾರಂಭಿಸಲಾದ ಈ ಸಂಶೋಧನೆಯಲ್ಲಿ 3.2 ಮಿಲಿಯನ್ ಹೊಸ ಮಧುಮೇಹಿ ರೋಗಿಗಳನ್ನು ಪರೀಕ್ಷಿಸಲಾಗಿತ್ತು. ಇದರಲ್ಲಿ ಶೇ.14 ರಷ್ಟು ಪ್ರಕರಣಗಳು ಜಾಗತಿಕ ಸಮಸ್ಯೆಯಾದ ವಾಯು ಮಾಲಿನ್ಯದಿಂದ ಉಂಟಾಗಿದೆ ಎಂಬುದನ್ನು ತಿಳಿಸಿದೆ.

ವಾಯು ಮಾಲಿನ್ಯ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡಿ, ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿರುವ ರಕ್ತದ ಗ್ಲುಕೋಸ್ ಅನ್ನು ದೇಹದ ಶಕ್ತಿಯನ್ನಾಗಿ ಪರಿವರ್ತಿಸುವುದನ್ನು ತಡೆಗಟ್ಟುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಯುಎಸ್​ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ(EPA) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO)ಯಿಂದ ಸುರಕ್ಷಿತ ಎಂದು ಪರಿಗಣಿಸಲ್ಪಟ್ಟಿರುವ ವಾಯು ಮಾಲಿನ್ಯ ಮಟ್ಟದಲ್ಲಿ ಅಪಾಯ ಕಂಡು ಬಂದಿದ್ದು, ಆದರೆ ಅನೇಕ ಉದ್ಯಮಿಗಳ ಲಾಬಿ ಮತ್ತು ಕಂಪನಿಗಳ ವೈಯುಕ್ತಿಕ ಲಾಭಕ್ಕಾಗಿ ವಾಯುಮಾಲಿನ್ಯದ ಅಪಾಯದ ಮಟ್ಟವನ್ನು ಮರೆಮಾಚಲಾಗುತ್ತಿದೆ ಎಂದು ಸಂಶೋಧನಾ ತಂಡದ ಅಲ್​ ಅಲಿ ತಿಳಿಸಿದ್ದಾರೆ.

ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ರೋಗಗಳಲ್ಲಿ ಮಧುಮೇಹ ಕೂಡ ಒಂದಾಗಿದ್ದು, ಜಾಗತಿಕ ಮಟ್ಟದಲ್ಲಿ ಈಗಾಗಲೇ 420 ಕ್ಕಿಂತ ಹೆಚ್ಚು ಮಿಲಿಯನ್ ಜನರು ಡಯಾಬಿಟಿಸ್​ನಿಂದ ಬಳಲುತ್ತಿದ್ದಾರೆ ಎಂದು ಈ ಅಧ್ಯಯನವು ತಿಳಿಸಿದೆ.
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...