Air Pollution: ವಾಯು ಮಾಲಿನ್ಯದಿಂದ ಈ ಎಲ್ಲಾ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಲಿವೆ, ಎಚ್ಚರ

ಗಾಳಿಯಲ್ಲಿ ಹೆಚ್ಚುತ್ತಿರುವ ಹಾನಿಕಾರಕ ಪದಾರ್ಥಗಳು ಮಾನವ ದೇಹದಲ್ಲಿ ಅನೇಕ ಗಂಭೀರ ಆರೋಗ್ಯ ಸಮಸ್ಯೆ ಹುಟ್ಟು ಹಾಕುತ್ತವೆ. ವಾಯು ಮಾಲಿನ್ಯದಿಂದ ಯಾವೆಲ್ಲಾ ಆರೋಗ್ಯ ತೊಂದರೆಗಳು ಕಾಡುತ್ತವೆ ಎಂಬುದನ್ನು ಇಲ್ಲಿ ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ದಿನಗಳಲ್ಲಿ (Now a Days) ಪರಿಸರ ಮಾಲಿನ್ಯವು (Environmental pollution) ಹೆಚ್ಚುತ್ತಿದೆ. ಅದರಲ್ಲೂ ವಾಹನಗಳ (Vehicles) ಓಡಾಟ ಹಾಗೂ ಹಲವು ಚಟುವಟಿಕೆಗಳಿಂದ ವಾಯು ಮಾಲಿನ್ಯ (Air Pollution) ತೀವ್ರತೆ ಹೆಚ್ಚಿದ್ದು, ಜಾಗತಿಕ ಸವಾಲಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರತಿ ವರ್ಷ ಪ್ರಪಂಚದಾದ್ಯಂತ ಸುಮಾರು ಏಳು ಮಿಲಿಯನ್ ಸಾವುಗಳು ವಾಯು ಮಾಲಿನ್ಯದಿಂದ ಉಂಟಾಗುತ್ತವೆ ಎಂದು ಹೇಳಿದೆ. ಹತ್ತರಲ್ಲಿ ಒಂಬತ್ತು ಜನರು ಪ್ರಸ್ತುತ WHO ನಿಗದಿಪಡಿಸಿದ ಮಾಲಿನ್ಯದ ಮಿತಿ ಮೀರಿದ ಗಾಳಿ ಉಸಿರಾಡುವಂತಾಗಿದೆ. ಹೀಗಾಗಿ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ವಾಸಿಸುವ ಜನರು ವಾಯು ಮಾಲಿನ್ಯದಿಂದ ಹೆಚ್ಚು ಬಳಲುತ್ತಿದ್ದಾರೆ.

  ವಾಯು ಮಾಲಿನ್ಯಕ್ಕೆ ಕಾರಣವೇನು?

  ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆಧುನಿಕ ಕೈಗಾರಿಕೀಕರಣ, ವಿವೇಚನಾರಹಿತ ಅರಣ್ಯ ನಾಶ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಹೊಗೆ, ಪ್ಲಾಸ್ಟಿಕ್ ಸುಟ್ಟ ಹೊಗೆ ಸೇರಿದಂತೆ ಅನೇಕ ಅಂಶಗಳು ಗಾಳಿ ಕಲುಷಿತವಾಗಲು ಮುಖ್ಯ ಕಾರಣವಾಗುತ್ತವೆ.

  ಗಾಳಿಯಲ್ಲಿ ಹೆಚ್ಚುತ್ತಿರುವ ಹಾನಿಕಾರಕ ಪದಾರ್ಥಗಳು ಮಾನವ ದೇಹದಲ್ಲಿ ಅನೇಕ ಗಂಭೀರ ಆರೋಗ್ಯ ಸಮಸ್ಯೆ ಹುಟ್ಟು ಹಾಕುತ್ತವೆ. ವಾಯು ಮಾಲಿನ್ಯದಿಂದ ಯಾವೆಲ್ಲಾ ಆರೋಗ್ಯ ತೊಂದರೆಗಳು ಕಾಡುತ್ತವೆ ಎಂಬುದನ್ನು ಈ ಕೆಳಗೆ ನೋಡೋಣ.

  ಇದನ್ನೂ ಓದಿ: ಜೋಳದಲ್ಲೂ ಇದೆ ಔಷಧೀಯ ಗುಣ, ಈ ಖಾಯಿಲೆಗಳಿಗೆ ಇದೇ ರಾಮಬಾಣ!

  ವಾಯು ಮಾಲಿನ್ಯ ರೋಗ

  ಅಕಾಲಿಕ ಮರಣ

  ಉಬ್ಬಸ

  ಹೃದಯರೋಗ

  ಸ್ಟ್ರೋಕ್

  ಶ್ವಾಸಕೋಶದ ಕ್ಯಾನ್ಸರ್

  ಶ್ವಾಸಕೋಶಕ್ಕೆ ಹಾನಿ

  ಸೋಂಕು

  ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD)

  ಉರಿಯೂತ

  ಉಬ್ಬಸ

  ಕೆಮ್ಮು ಮತ್ತು ಉಸಿರಾಟ ತೊಂದರೆ

  ಗಂಡಸರಲ್ಲಿ ಸ್ವಲೀನತೆ ಅಪಾಯ

  ಒಂದು ಅಧ್ಯಯನವಾದ NCBI ಪ್ರಕಾರ, ಗರ್ಭಿಣಿಯರು ವಾಯು ಮಾಲಿನ್ಯ ಮತ್ತು ಒತ್ತಡಕ್ಕೆ ಒಡ್ಡಿಕೊಳ್ಳುತ್ತಾರೆ. ಹೀಗಾಗಿ ಗಂಡು ಮಕ್ಕಳಲ್ಲಿ ಸ್ವಲೀನತೆ ಮತ್ತು ವಿವಿಧ ರೀತಿಯ ಮೆದುಳಿನಂತಹ ಸಾಮಾಜಿಕ ನಡವಳಿಕೆ ಅಪಾಯ ಹೆಚ್ಚುತ್ತದೆ.

  ಆಟಿಸಂ ಎಂದರೇನು?

  ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ಒಂದು ಸ್ಥಿತಿ. ಈ ಅಸ್ವಸ್ಥತೆಯು ನಡವಳಿಕೆ ಸೀಮಿತ ಮತ್ತು ಪುನರಾವರ್ತಿತ ಮಾದರಿ ಹೊಂದಿದೆ. ಸ್ವಲೀನತೆ ಸ್ಪೆಕ್ಟ್ರಮ್ ಅಸ್ವಸ್ಥತೆಯಲ್ಲಿ ಸ್ಪೆಕ್ಟ್ರಮ್ ಎಂಬ ಪದವು ರೋಗ ಲಕ್ಷಣ ಮತ್ತು ತೀವ್ರತೆಯ ದೀರ್ಘಾವಧಿ ಸರಪಳಿ ಸೂಚಿಸುತ್ತದೆ.

  ವಾಯು ಮಾಲಿನ್ಯ ದೇಹದ ಯಾವ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ

  ವಾಯು ಮಾಲಿನ್ಯದಿಂದ ದೀರ್ಘಾವಧಿಯ ಆರೋಗ್ಯದ ಪರಿಣಾಮಗಳು ಹೃದ್ರೋಗ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಉಸಿರಾಟದ ಕಾಯಿಲೆ ಆಗಿದೆ. ಜೊತೆಗೆ ವಾಯು ಮಾಲಿನ್ಯವು ದೀರ್ಘಾವಧಿಯಲ್ಲಿ ಜನರ ನರಗಳು, ಮೆದುಳು, ಮೂತ್ರಪಿಂಡಗಳು, ಯಕೃತ್ತು ಮತ್ತು ಇತರ ಅಂಗಗಳಿಗೆ ಹಾನಿ ಮಾಡುತ್ತದೆ. ವಾಯು ಮಾಲಿನ್ಯಕಾರಕಗಳು ಜನ್ಮ ದೋಷ ಉಂಟು ಮಾಡುತ್ತವೆ ಎಂದು ಹೇಳಲಾಗಿದೆ.

  AQI ಅನ್ನು ಮಾರ್ಗದರ್ಶಿಯಾಗಿ ಬಳಸಿ

  ಗಾಳಿಯ ಗುಣಮಟ್ಟ ಅಳೆಯಲು AQI ಬಳಸಬಹುದು. AQI ಅನಾರೋಗ್ಯಕರ ಪ್ರದೇಶದಲ್ಲಿದ್ದಾಗ, ಹೊರಾಂಗಣ ಚಟುವಟಿಕೆ ತಪ್ಪಿಸಿ, ಟ್ರಾಫಿಕ್ ಪ್ರದೇಶಗಳಲ್ಲಿ ಓಡಾಡಬೇಡಿ. ಮನೆಯಲ್ಲೇ ಇರಿ. ಹೊರಗೆ ಹೋಗುವಾಗ ಮಾಸ್ಕ್ ಧರಿಸಿ. ಮುಖವಾಡಗಳು ದೇಹಕ್ಕೆ ಹಾನಿಕಾರಕ ಕಣಗಳ ಪ್ರವೇಶ ತಡೆಯುತ್ತದೆ.

  ಸಾರ್ವಜನಿಕ ಸಾರಿಗೆ ಬಳಸಿ

  ವಾಯು ಮಾಲಿನ್ಯಕ್ಕೆ ಸಾರಿಗೆಯು ಅತಿದೊಡ್ಡ ಕೊಡುಗೆ. ವೈಯಕ್ತಿಕ ವಾಹನ ಬಳಸುವ ಬದಲು, ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಸೌಲಭ್ಯ ಬಳಸಿ. ಇಂಧನ ಬಳಕೆ ಕಡಿಮೆ ಮಾಡಿದರೆ ವಾಯು ಮಾಲಿನ್ಯ ನಿಯಂತ್ರಿಸಬಹುದು.

  ಗ್ಯಾಸ್ ಸ್ಟೌವ್ ಬದಲಾಯಿಸಿ

  ಗ್ಯಾಸ್ ಸ್ಟವ್ ಬದಲಿಗೆ ಇಂಡಕ್ಷನ್ ಅಥವಾ ಎಲೆಕ್ಟ್ರಿಕ್ ಸ್ಟೌವ್ ಬಳಸಿ. ಇಂಡಕ್ಷನ್ ಕುಕ್‌ಟಾಪ್‌ಗಳು ಒಳಾಂಗಣ ಮಾಲಿನ್ಯ ತಡೆಯುತ್ತದೆ.

  ಇದನ್ನೂ ಓದಿ: ಮೂಲವ್ಯಾಧಿಗೆ ಇಲ್ಲಿದೆ ಸರಳ ಮನೆಮದ್ದು, ಖಂಡಿತಾ ಬೇಗ ಗುಣವಾಗುತ್ತೆ ಅಂತಾರೆ ಡಾಕ್ಟರ್

  ಏರ್ ಪ್ಯೂರಿಫೈಯರ್ ಬಳಸಿ

  ಏರ್ ಪ್ಯೂರಿಫೈಯರ್ ಒಳಾಂಗಣ ಗಾಳಿಯ ಗುಣಮಟ್ಟ ಸುಧಾರಿಸುತ್ತದೆ. ಏರ್ ಪ್ಯೂರಿಫೈಯರ್ ವಾಯು ಮಾಲಿನ್ಯದ ಅಪಾಯ ಕಡಿಮೆ ಮಾಡುತ್ತದೆ. ಫಿಲ್ಟರ್ ಅನ್ನು ನಿಯಮಿತವಾಗಿ ಬದಲಾಯಿಸಿ. ಗಾಳಿಯ ಗುಣಮಟ್ಟ ಸುಧಾರಿಸುತ್ತದೆ.
  Published by:renukadariyannavar
  First published: