• Home
  • »
  • News
  • »
  • lifestyle
  • »
  • Air Pollution: ಹೆಚ್ಚುತ್ತಿದೆ ವಾಯುಮಾಲಿನ್ಯ ಪ್ರಮಾಣ; ಉಸಿರಾಟದ ಸೋಂಕು, ಶ್ವಾಸಕೋಶದ ಕ್ಯಾನ್ಸರ್ ಅಪಾಯವೂ ಹೆಚ್ಚಳ!

Air Pollution: ಹೆಚ್ಚುತ್ತಿದೆ ವಾಯುಮಾಲಿನ್ಯ ಪ್ರಮಾಣ; ಉಸಿರಾಟದ ಸೋಂಕು, ಶ್ವಾಸಕೋಶದ ಕ್ಯಾನ್ಸರ್ ಅಪಾಯವೂ ಹೆಚ್ಚಳ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಾಯು ಮಾಲಿನ್ಯದ ಅಡ್ಡ ಪರಿಣಾಮ ದೇಹದ ಹಲವು ಭಾಗಗಳಿಗೆ ಅಪಾಯಕಾರಿ ಆಗಿದೆ. ವಾಹನದ ಹೊಗೆ, ಯಂತ್ರಗಳು ಹೊರಸೂಸುವ ಕೆಟ್ಟ ಹೊಗೆ, ಕೈಗಾರಿಕೆಗಳ ತ್ಯಾಜ್ಯ ಹೀಗೆ ಹಲವು ಕಾರಣಗಳಿಂದ ನಾವು ಉಸಿರಾಡುವ ಗಾಳಿ ಕೆಟ್ಟದಾಗಿದೆ. ಮಾಲಿನ್ಯದ ಕೆಟ್ಟ ಪರಿಣಾಮವು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ದೆಹಲಿ (Delhi) ಮತ್ತು ಎನ್‌ ಸಿಆರ್‌ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ (City) ವಾಯು ಮಾಲಿನ್ಯ (Air Pollution) ಸಮಸ್ಯೆ (Problem) ಹೆಚ್ಚಿದೆ. ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಆಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ 400 ಕ್ಕೂ ಮೀರಿದೆ. ಇದರ ಕೆಟ್ಟ ಪರಿಣಾಮ ಆರೋಗ್ಯದ ಮೇಲೆ ಉಂಟಾಗುತ್ತಿದೆ. ವಾಯು ಮಾಲಿನ್ಯವು ಅನೇಕ ಗಂಭೀರ ಆರೋಗ್ಯ ಸಮಸ್ಯೆ (Health Problems) ಉಂಟು ಮಾಡುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಕಳವಳ ವ್ಯಕ್ತಪಡಿಸಿದೆ. ಮಾಲಿನ್ಯದಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆ ತಡೆಯಲು ಜಾಗೃತಿ ಮೂಡಿಸಲಾಗುತ್ತಿದೆ. ಮಾಲಿನ್ಯದ ಕೆಟ್ಟ ಪರಿಣಾಮವು ಶ್ವಾಸಕೋಶದ ಮೇಲೆ ಕಂಡು ಬರುತ್ತಿದೆ.


    ವಾಯು ಮಾಲಿನ್ಯದ ಅಡ್ಡ ಪರಿಣಾಮ ದೇಹದ ಹಲವು ಭಾಗಗಳಿಗೆ ಅಪಾಯಕಾರಿ ಆಗಿದೆ. ಹೆಚ್ಚು ದಟ್ಟಣೆ, ಯಂತ್ರಗಳು ಹೊರಸೂಸುವ ಕೆಟ್ಟ ಹೊಗೆ, ಕೈಗಾರಿಕೆಗಳ ತ್ಯಾಜ್ಯ ಹೀಗೆ ಹಲವು ಕಾರಣಗಳಿಂದ ನಾವು ಉಸಿರಾಡುವ ಗಾಳಿ ಕೆಟ್ಟದಾಗಿದ್ದು, ಅಪಾಯಕಾರಿ ಮತ್ತು ಕಲುಷಿತವಾಗುತ್ತಿದೆ. ಕಲುಷಿತ ಗಾಳಿಯ ಉಸಿರಾಟದಿಂದ ಪ್ರತಿ ವರ್ಷ ಸುಮಾರು 7 ಮಿಲಿಯನ್ ಜನರು ಸಾಯುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.


    ಉಸಿರಾಟ ಸೋಂಕು, ಹೃದ್ರೋಗ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯ


    ಡಬ್ಲ್ಯುಎಚ್‌ಒ ನೀಡಿರುವ ಮಾರ್ಗಸೂಚಿ ಪ್ರಕಾರ, ವಾಯು ಮಾಲಿನ್ಯದಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಉಂಟಾಗುತ್ತಿವೆ. ಇದು ಉಸಿರಾಟದ ಸೋಂಕು, ಹೃದ್ರೋಗ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತಿದೆ.


    ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


    ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಜನರ ಮೇಲೆ ಇದು ಮತ್ತಷ್ಟು ಕೆಟ್ಟ ಪರಿಣಾಮ ಬೀರಲಿದೆ. ಮಕ್ಕಳು, ವೃದ್ಧರು ಹಾಗೂ ಬಡವರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ.


     ಪರ್ಟಿಕ್ಯುಲೇಟ್ ಮ್ಯಾಟರ್ ಎಂದರೇನು?


    ಧೂಳು, ಕೊಳಕು, ಮಸಿ, ಹೊಗೆ ಮತ್ತು ದ್ರವದ ಹನಿ ಸೇರಿದಂತೆ ಗಾಳಿಯಲ್ಲಿ ಕಂಡು ಬರುವ ಕೆಟ್ಟ ಕಣಗಳ ವಸ್ತುವಾಗಿದೆ. ಡೀಸೆಲ್ ವಾಹನ ಮತ್ತು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಂತಹ ಮೂಲಗಳಿಂದ ಕಣಗಳು ವಿಶಿಷ್ಟವಾಗಿ ಹೊರಸೂಸಲ್ಪಡುತ್ತವೆ.10 ಮೈಕ್ರೋಮೀಟರ್‌ಗಳಿಗಿಂತ ಕಡಿಮೆ ವ್ಯಾಸದ ಕಣಗಳು (PM10) ಆರೋಗ್ಯಕ್ಕೆ ಅಷ್ಟಾಗಿ ಹಾನಿ ಮಾಡಲ್ಲ.


    2.5 ಮೈಕ್ರೊಮೀಟರ್‌ಗಳಿಗಿಂತ ಕಡಿಮೆ ವ್ಯಾಸದ ಕಣಗಳು (PM2.5) ಹೆಚ್ಚು ಆರೋಗ್ಯ ಅಪಾಯ ಉಂಟು ಮಾಡುತ್ತವೆ. ಸೂಕ್ಷ್ಮ ಕಣಗಳು ಶ್ವಾಸಕೋಶದೊಳಗೆ ಆಳವಾಗಿ ಹೋಗುತ್ತವೆ.


    ಶ್ವಾಸಕೋಶ ಮತ್ತು ನರಮಂಡಲದ ಮೇಲೆ ಅಡ್ಡ ಪರಿಣಾಮ


    ವಾಯು ಮಾಲಿನ್ಯವು ಗಂಭೀರ ಆರೋಗ್ಯ ಪರಿಣಾಮ ಉಂಟು ಮಾಡುತ್ತಿದೆ. ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದ್ರೋಗ ಸಮಸ್ಯೆ ಹೆಚ್ಚಿಸುತ್ತಿದೆ. ಹೆಚ್ಚಿನ ಸಾವುಗಳು ಶ್ವಾಸಕೋಶ ಮತ್ತು ನರಮಂಡಲ ಸಮಸ್ಯೆಯಿಂದ ಉಂಟಾಗುತ್ತಿವೆ.


    ಇದು ಧೂಮಪಾನದಲ್ಲಿ ಬಳಸುವ ತಂಬಾಕಿನ ಪರಿಣಾಮ ಹೊಂದಿದೆ. ಅತಿಯಾಗಿ ಉಪ್ಪನ್ನು ಸೇವಿಸುವವರು ಹೆಚ್ಚು ಅಪಾಯಕ್ಕೆ ತುತ್ತಾಗತ್ತಾರೆ. ದೀರ್ಘಕಾಲದ ಬ್ರಾಂಕೈಟಿಸ್‌ನಿಂದ ಶ್ವಾಸಕೋಶದ ಕ್ಯಾನ್ಸರ್‌ ವರೆಗೆ, ವಾಯು ಮಾಲಿನ್ಯವು ರೋಗದ ಅಪಾಯ ಹೆಚ್ಚಿಸುತ್ತದೆ.


    ವಾಯು ಮಾಲಿನ್ಯ ಮತ್ತು ಉಸಿರಾಟದ ವ್ಯವಸ್ಥೆಗೆ ಅದರ ಸಂಬಂಧವು ಸಾಕಷ್ಟು ಸ್ಪಷ್ಟವಾಗಿದೆ. ವಾಯು ಮಾಲಿನ್ಯವು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಕಣಗಳು ಮೂಗಿನ ಕುಹರದೊಳಗೆ ಪ್ರವೇಶಿಸಿದಾಗ, ಅದು ಉರಿಯೂತವನ್ನು ಉಂಟುಮಾಡುತ್ತದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.


    ಮೂಗಿನಲ್ಲಿ ಕಿರಿಕಿರಿ ಮತ್ತು ಉರಿಯೂತ, ಮೂಗು ಸೋರುವಿಕೆಗೆ ಇದು ಕಾರಣವಾಗಿದೆ. ವಾಯುಮಾಲಿನ್ಯವು ಶ್ವಾಸಕೋಶದ ಹಾನಿ ಮತ್ತು ಶ್ವಾಸಕೋಶದ ಕಾರ್ಯಚಟುವಟಿಕೆಗೆ ಹಾನಿ ಉಂಟು ಮಾಡುತ್ತದೆ.


    ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


    ವಾಯು ಮಾಲಿನ್ಯದಿಂದ ಹೃದಯಕ್ಕೆ ಅಪಾಯ


    ವಾಯು ಮಾಲಿನ್ಯ ರಕ್ತದೊತ್ತಡ ಹೆಚ್ಚಿಸಬಹುದು. ಹೃದ್ರೋಗ ಉಲ್ಬಣಗೊಳಿಸಬಹುದು. ಕಲುಷಿತ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ಸಾವಿನ ಅಪಾಯ ಹೆಚ್ಚಿಸುತ್ತದೆ. ದೀರ್ಘಕಾಲದ ಕಾಯಿಲೆಗಳಾದ ಉಸಿರಾಟ ಮತ್ತು ಹೃದಯರಕ್ತನಾಳದ ಕಾಯಿಲೆಗಳು, ನ್ಯೂರೋಸೈಕಿಯಾಟ್ರಿಕ್ ತೊಡಕುಗಳು, ಕಣ್ಣಿನ ಕಿರಿಕಿರಿ, ಚರ್ಮ ರೋಗಗಳು ಮತ್ತು ಕ್ಯಾನ್ಸರ್ ಅನ್ನು ಉತ್ತೇಜಿಸುತ್ತದೆ.

    Published by:renukadariyannavar
    First published: