ಹವಾ ನಿಯಂತ್ರಕದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯಿರಿ

news18
Updated:June 4, 2018, 7:04 PM IST
ಹವಾ ನಿಯಂತ್ರಕದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯಿರಿ
news18
Updated: June 4, 2018, 7:04 PM IST
ನ್ಯೂಸ್ 18 ಕನ್ನಡ

ದೇಹಕ್ಕನುಗುಣವಾಗಿ ಹವಾಮಾನ ನಿಯಂತ್ರಿಸಲು ಹೆಚ್ಚಿನವರು ಹವಾ ನಿಯಂತ್ರಕದ (AC) ಮೊರೆ ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಏಸಿ ಇರದ ಕಚೇರಿಗಳಿಲ್ಲ ಎನ್ನಬಹುದು. ಆದರೆ ದಿನವಿಡೀ ಏರ್​ ಕಂಡೀಷನರ್​ನಲ್ಲಿ ಕಾಲ ಕಳೆದರೆ ಹಲವು ರೀತಿಯ ಸೋಂಕು ಬಾಧಿಸಲಿದೆ ಎಂಬುದು ನೆನಪಿರಲಿ. ಹವಾ ನಿಯಂತ್ರಕವು ದೇಹದ ಮೇಲೆ ಯಾವ ರೀತಿಯಾಗಿ ದುಷ್ಪರಿಣಾಮ ಬೀರುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ.

* ಹವಾ ನಿಯಂತ್ರಕವನ್ನು ಬಳಸುವಾಗ ಸಾಮಾನ್ಯವಾಗಿ ಕೊಠಡಿಗಳನ್ನು ಮುಚ್ಚಲಾಗುತ್ತದೆ. ಇದರಿಂದ ರೂಮ್​ ಒಳಗೆ ತಾಜಾ ಗಾಳಿ ಪ್ರವೇಶಿಸುವುದಿಲ್ಲ. ಶ್ವಾಸಕೋಶದ ಸೋಂಕು ಹೊಂದಿರುವವರು ಸಹ ಅದೇ ಕೊಠಡಿಯಲ್ಲಿದ್ದರೆ, ನಿಮಗೂ ಕೂಡ ಅವರ ಉಸಿರಾಟದ ಗಾಳಿಯಿಂದ ಸೋಂಕು ಹರಡಬಹುದು.

* ವಾತಾವರಣದ ಬದಲಾವಣೆಯ ಸಮಯದಲ್ಲಿ ಏರ್​ ಕಂಡೀಷನರ್​ ಬಳಸುವುದು ತುಂಬಾ ಅಪಾಯಕಾರಿ. ಇಂತಹ ಸಮಯದಲ್ಲಿ ಹವಾ ನಿಯಂತ್ರಕದ ಗಾಳಿಯಿಂದ ಜ್ವರ, ಶೀತ, ಕೆಮ್ಮು ಮುಂತಾದ ಸಮಸ್ಯೆ ಉಂಟಾಗಬಹುದು.

* ದಿನನಿತ್ಯ ಏಸಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಆಯಾಸದ ಸಮಸ್ಯೆ ಕಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಶುದ್ದ ಆಮ್ಲಜನಕದ ಕೊರತೆಯಾಗಿದೆ. ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ ಹವಾ ನಿಯಂತ್ರಕದಲ್ಲಿ ಕಳೆಯುವ ನಿಮ್ಮ ದಿನಚರಿಯನ್ನು ಬದಲಿಸುವುದು ಉತ್ತಮ.

* ಸಮಯಕ್ಕೆ ಸರಿಯಾಗಿ ಏರ್​ ಕಂಡೀಷನರ್ ಅನ್ನು​ ಸರ್ವೀಸ್ ಮಾಡಿಸದಿದ್ದರೆ, ಅಲರ್ಜಿ ಸಮಸ್ಯೆ ತಲೆದೂರಬಹುದು. ಏಸಿಯಲ್ಲಿರುವ ಧೂಳಿನ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುತ್ತವೆ. ಇದರಿಂದ ಅಲರ್ಜಿ ಮತ್ತು ಶ್ವಾಸಕೋಶದ ತೊಂದರೆ ಕಾಣಿಸುತ್ತದೆ.
First published:June 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...