• Home
  • »
  • News
  • »
  • lifestyle
  • »
  • Aihole: ವಾಸ್ತುಶಿಲ್ಪದ ತೊಟ್ಟಿಲು ಈ ಐಹೊಳೆಗೆ ಪ್ರವಾಸ ಹೋಗೋದು ಹೇಗೆ? ಇಲ್ಲಿದೆ ಫುಲ್ ಮಾಹಿತಿ

Aihole: ವಾಸ್ತುಶಿಲ್ಪದ ತೊಟ್ಟಿಲು ಈ ಐಹೊಳೆಗೆ ಪ್ರವಾಸ ಹೋಗೋದು ಹೇಗೆ? ಇಲ್ಲಿದೆ ಫುಲ್ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Aihole Travel Plan: ಈಗಾಗಲೇ ಈ ಪಟ್ಟದ ಕಲ್ಲಿನ ಇತಿಹಾಸ ಹಾಗೂ ಹಿರಿಮೆಯನ್ನು ನಾವು ನಿಮಗೆ ತಿಳಿಸಿದ್ದೇವೆ. ಈಗ ಐಹೊಳೆಯ ಇತಿಹಾಸ ಹಾಗೂ ಅಲ್ಲಿಗೆ ಹೇಗೆ ಹೋಗಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • Share this:

ನಮ್ಮ ಕರ್ನಾಟಕದಲ್ಲಿ (Karnataka) ಪ್ರವಾಸಿ ತಾಣಗಳಿಗೆ (Travel Places)  ಯಾವುದೇ ಬರವಿಲ್ಲ. ಉತ್ತರದಿಂದ ದಕ್ಷಿಣದವರೆಗೆ ಒಂದೆಲ್ಲಾ ಒಂದು ವಿವಿಧ ಸ್ಥಳಗಳಿವೆ. ಅದರಲ್ಲೂ ಇತಿಹಾಸದ  (History) ಕಥೆ ಸಾರುವ ಹಾಗೂ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಪ್ರವಾಸಿ ಸ್ಥಳಗಳು ಇದೆ. ನೀವು ಉತ್ತರ ಕರ್ನಾಟಕದ ಕಡೆ ಪ್ರವಾಸಕ್ಕೆ ಹೋದರೆ ಸಾಕು ಮೊದಲು ನೆನಪಿಗೆ ಬರುವ ಹೆಸರಿ ಐಹೊಳೆ ಹಾಗೂ ಪಟ್ಟದಕಲ್ಲು. ಈಗಾಗಲೇ ಈ ಪಟ್ಟದ ಕಲ್ಲಿನ ಇತಿಹಾಸ ಹಾಗೂ ಹಿರಿಮೆಯನ್ನು ನಾವು ನಿಮಗೆ ತಿಳಿಸಿದ್ದೇವೆ. ಈಗ ಐಹೊಳೆಯ (Aihole) ಇತಿಹಾಸ ಹಾಗೂ ಅಲ್ಲಿಗೆ ಹೇಗೆ ಹೋಗಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಐಹೊಳೆ ಒಂದು ಕಾಲದಲ್ಲಿ ಚಾಲುಕ್ಯ ರಾಜವಂಶದ ರಾಜಧಾನಿಯಾಗಿತ್ತು ಮತ್ತು ಶ್ರೀಮಂತ ಮತ್ತು ಪ್ರಸಿದ್ಧ ಇತಿಹಾಸವನ್ನು ಹೊಂದಿರುವ ನಗರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲರಿಗೂ ಗೊತ್ತಿರುವಂತೆ ಈ ಐಹೊಳೆಯನ್ನು ಹಿಂದೂ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಅಲ್ಲದೇ, ಇಲ್ಲಿನ ದೇವಾಲಯಗಳು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಐಹೊಳೆಯ  ಸುತ್ತಲೂ 125 ಕ್ಕೂ ಹೆಚ್ಚು ದೇವಾಲಯಗಳಿದ್ದು, ಪ್ರತಿ ವರ್ಷ ಹಲವಾರು ಸಾವಿರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಐಹೊಳೆ ಶಾಸನ


ಜೈನ ಕವಿ ರವಿಕೀರ್ತಿಯಿಂದ ರಚಿಸಲ್ಪಟ್ಟಿದೆ ಎನ್ನಲಾಗುವ ಈ  ಐಹೊಳೆ ಶಾಸನವು ಈ ಅವಧಿಯ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಶಾಸನವು ಪುಲಕೇಶಿ II ರ ಸಾಧನೆಗಳನ್ನು ವಿವರಿಸುತ್ತದೆ. ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ದೊರೆ ಹರ್ಷವರ್ಧನ ವಿರುದ್ಧ ಅವನ ವಿಜಯವನ್ನು ಸುಂದರವಾಗಿ ವರ್ಣಿಸುತ್ತದೆ. ಪ್ರಸಿದ್ಧ ಚಾಲುಕ್ಯ ರಾಜ ಪುಲಕೇಶಿ II ಜೈನ ಧರ್ಮದ ಅನುಯಾಯಿಯಾಗಿದ್ದ. ಈ ಐಹೊಳೆ ಶಾಸನವು 634 CE, ಸಂಸ್ಕೃತ ಭಾಷೆ ಮತ್ತು ಹಳೆಯ ಕನ್ನಡ ಲಿಪಿಯಲ್ಲಿದೆ.


ಐಹೊಳೆಯಲ್ಲಿ ನೋಡಬಹುದಾದ ಸ್ಥಳಗಳು


ದುರ್ಗಾ ದೇವಾಲಯ


ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ಈ ದೇವಾಲಯವು ಐಹೊಳೆಯಲ್ಲಿ ಅತ್ಯಂತ ಸುಂದರವಾಗಿ ಅಲಂಕರಿಸಲ್ಪಟ್ಟ ಸ್ಥಳವಾಗಿದೆ. ಇದು ಕೋಟೆಯ ಸಮೀಪ ಇರುವುದರಿಂದ ಈ ಹೆಸರನ್ನು ಪಡೆದುಕೊಂಡಿದೆ. ದೇವಾಲಯವು ಚಾಲುಕ್ಯರ ಕಾಲದಷ್ಟು ಹಿಂದಿನದಾಗಿದ್ದು,ದ್ರಾವಿಡ ಶೈಲಿಯ ವಾಸ್ತುಶಿಲ್ಪ, ಪ್ರವೇಶ ದ್ವಾರದ ಸ್ತಂಭಗಳ ಸೊಗಸಾದ ಕೆತ್ತನೆಗಳು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಲಾಢ್​ ಖಾನ್ ದೇವಾಲಯ


ಈ ಕಟ್ಟಡವನ್ನು ಚಾಲುಕ್ಯರು ನಿರ್ಮಿಸಿದ್ದರು, ಆದರೆ ಇದನ್ನು ಮುಸ್ಲಿಂ ರಾಜಕುಮಾರ ತನ್ನ ಮನೆಯಾಗಿ ಮಾಡಿಕೊಂಡ ನಂತರ ಈ ಹೆಸರನ್ನು ಇಡಲಾಗಿದೆ. ಈ ಸ್ಥಳವು ಚಾಲುಕ್ಯರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಎರಡು ಗರ್ಭಗುಡಿಗಳನ್ನು ಈ ದೇವಾಲಯ ಹೊಂದಿದ್ದು, ಮುಖ್ಯ ಗರ್ಭಗುಡಿಯು ಶಿವಲಿಂಗ ಮತ್ತು ನಂದಿಯ ವಿಗ್ರಹವಿದೆ.
ಮೇಗುಟಿ ದೇವಸ್ಥಾನ


ಈ ದೇವಾಲಯವು ದಿನಾಂಕದ ಮಾಹಿತಿ ಹೊಂದಿರುವ ಐಹೊಳೆಯಲ್ಲಿರುವ ಏಕೈಕ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದನ್ನು ಪುಲಕೇಶಿ II ​​ರ ಕಮಾಂಡರ್ ಮತ್ತು ಮಂತ್ರಿ ರವಿಕೀರ್ತಿ 634 AD ನಲ್ಲಿ ನಿರ್ಮಿಸಿದ ಎನ್ನಲಾಗುತ್ತದೆ. ಈಗ ಭಾಗಶಃ ಅವಶೇಷಗಳು ಮಾತ್ರ ಉಳಿದಿದ್ದು, ಈ ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.


ಇದನ್ನೂ ಓದಿ: ಶಬರಿಮಲೆ ಮಂಡಲ ಪೂಜೆ ಇಂದಿನಿಂದ ಓಪನ್, ಬುಕ್ಕಿಂಗ್ ಮಾಡೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್


ಐಹೊಳೆಗೆ ಹೋಗುವುದು ಹೇಗೆ?


ಈ ಊರಿಗೆ ದೇಶದ ಎಲ್ಲಾ ಪ್ರಮುಖ ನಗರಗಳಿಂದ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವಿದೆ.
ವಿಮಾನದಲ್ಲಿ


ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಳಗಾವಿ ಐಹೊಳೆಯಿಂದ 189 ಕಿಮೀ ದೂರದಲ್ಲಿದೆ. ದೇಶದ ಎಲ್ಲಾ ಪ್ರಮುಖ ನಗರಗಳಿಂದ ಬೆಳಗಾವಿಗೆ ನಿಯಮಿತ ವಿಮಾನಗಳಿವೆ.


Aihole a beauty of karnataka travel story
ಐಹೊಳೆ


ರೈಲಿನ ಮೂಲಕ


ಐಹೊಳೆಯಿಂದ 34 ಕಿಮೀ ದೂರದಲ್ಲಿರುವ ಬಾಗಲಕೋಟ ಸಮೀಪದ ರೈಲು ನಿಲ್ದಾಣವಾಗಿದೆ. ದೇಶದ ಎಲ್ಲಾ ಪ್ರಮುಖ ನಗರಗಳಿಂದ ಬಾಗಲಕೋಟೆಗೆ ಹಲವಾರು ರೈಲುಗಳಿವೆ.


ಇದನ್ನೂ ಓದಿ: ಟ್ರೆಡಿಷನಲ್ ಡ್ರೆಸ್​ ಧರಿಸಿದಾಗ ಈ ಮಿಸ್ಟೇಕ್ ಮಾಡಿದ್ರೆ ನಿಮ್ಮ ಲುಕ್ ಹಾಳಾಗುತ್ತೆ


ರಸ್ತೆಯ ಮೂಲಕ


ಇಲ್ಲಿಗೆ ವಿವಿಧ ಸ್ಥಳಗಳಿಂದ ಹಲವಾರು ಬಸ್​ಗಳು ಲಬ್ಯವಿದೆ.  ಬೆಂಗಳೂರಿನಿಂದ (490 ಕಿಮೀ ದೂರ) ಪ್ಯಾಕೇಜ್ ಪ್ರವಾಸಗಳನ್ನು ನಡೆಸಲಾಗುತ್ತದೆ. ಇದು ಬಾದಾಮಿ ಮತ್ತು ಪಟ್ಟದಕಲ್ಲು ಕ್ರಮವಾಗಿ 44 ಕಿಮೀ ಮತ್ತು 17 ಕಿಮೀ ದೂರದಲ್ಲಿದೆ. ಬೆಳಗಾವಿಯಿಂದ ಬಾಗಲಕೋಟೆ ಮೂಲಕ ಸುಲಭವಾಗಿ ರಸ್ತೆ ಮೂಲಕ ನಗರವನ್ನು ತಲುಪಬಹುದು

Published by:Sandhya M
First published: