• Home
  • »
  • News
  • »
  • lifestyle
  • »
  • Agumbe Travel: ಆಗುಂಬೆಯ ಪ್ರೇಮ ಸಂಜೆಯ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! ತಂಗಾಳಿಯಲ್ಲಿ ಬಿಸಿ ಟೀ ಕುಡಿತಾ ಇದ್ರೆ ಸ್ವರ್ಗ!

Agumbe Travel: ಆಗುಂಬೆಯ ಪ್ರೇಮ ಸಂಜೆಯ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! ತಂಗಾಳಿಯಲ್ಲಿ ಬಿಸಿ ಟೀ ಕುಡಿತಾ ಇದ್ರೆ ಸ್ವರ್ಗ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

The Cherrapunji of the South: ಆಗುಂಬೆಯ ಬಗ್ಗೆ ಹೆಚ್ಚಿನ ಜನರು ಕೇಳಿರುತ್ತಾರೆ. ಇದನ್ನು ದಕ್ಷಿಣದ ಚಿರಾಪುಂಜಿ ಎಂದು ಕರೆಯುತ್ತಾರೆ. ಇಲ್ಲಿನ ಸೂರ್ಯಾಸ್ತ ನೋಡಲು ಪ್ರವಾಸಿಗರು ಕಾತುರದಿಂದ ಕಾಯುತ್ತಾರೆ. ನೀವು ಸಹ ಆಗುಂಬೆಗೆ ಟ್ರಿಪ್ ಹೋಗಬೇಕು ಎಂದರೆ ಕೆಲ ಮಾಹಿತಿ ಇಲ್ಲಿದೆ.  

  • Share this:

ನೀವು 90 ರ ದಶಕದಲ್ಲಿ ಹುಟ್ಟಿ, ಬೆಳೆದವರಾಗಿದ್ದರೆ ಮತ್ತು ಮಾಲ್ಗುಡಿ ಡೇಸ್ (Malgudi Days) ಬಗ್ಗೆ ಎಂದಿಗೂ ಕೇಳಿಲ್ಲ ಎಂದರೆ ನಿಜಕ್ಕೂ ಜೀವನದಲ್ಲಿ ಏನನ್ನೋ ಮಿಸ್​ ಮಾಡಿಕೊಂಡಿದ್ದೀರಿ ಎಂದರ್ಥ. ಮಾಲ್ಗುಡಿ ಎನ್ನುವುದು  R.K ನಾರಾಯಣ್ ( R K Narayan) ಅವರ ಕಾದಂಬರಿಯಲ್ಲಿರುವ ಒಂದು ಕಾಲ್ಪನಿಕ ಪಟ್ಟಣ. ಇದನ್ನು ಧಾರಾವಾಹಿ (Serial)  ಸಹ ಮಾಡಲಾಗಿತ್ತು. ಇದರ ಚಿತ್ರೀಕರಣವನ್ನು ಆಗುಂಬೆ (Agumbe) ಗ್ರಾಮದಲ್ಲಿ ಮಾಡಲಾಗಿದೆ. ಈ ಆಗುಂಬೆಯ ಬಗ್ಗೆ ಹೆಚ್ಚಿನ ಜನರು ಕೇಳಿರುತ್ತಾರೆ. ಇದನ್ನು ದಕ್ಷಿಣದ ಚಿರಾಪುಂಜಿ ಎಂದು ಕರೆಯುತ್ತಾರೆ. ಇಲ್ಲಿನ ಸೂರ್ಯಾಸ್ತ ನೋಡಲು ಪ್ರವಾಸಿಗರು ಕಾತುರದಿಂದ ಕಾಯುತ್ತಾರೆ. ನೀವು ಸಹ ಆಗುಂಬೆಗೆ ಟ್ರಿಪ್ ಹೋಗಬೇಕು ಎಂದರೆ ಕೆಲ ಮಾಹಿತಿ ಇಲ್ಲಿದೆ.  


ಆಗುಂಬೆ ನಮ್ಮ ಕರ್ನಾಟಕದ ಮಲೆನಾಡು ಪ್ರದೇಶದ ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಗ್ರಾಮ. ಈ ಸುಂದರ, ರಮಣೀಯ ಸ್ಥಳವು  ಪಶ್ಚಿಮ ಘಟ್ಟದಲ್ಲಿದ್ದು,  ಸಮುದ್ರ ಮಟ್ಟದಿಂದ ಸುಮಾರು 643 ಮೀ ಎತ್ತರದಲ್ಲಿ ಉಳಿದಿರುವ ಕೆಲವು ಕಾಡುಗಳಿಂದ ಆವೃತವಾಗಿದೆ. ಆಗುಂಬೆಯು ದಕ್ಷಿಣ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಹೆಸರು ಪಡೆದಿದೆ. ಇದು ಸುಂದರ ಜಲಪಾತಗಳು, ದಟ್ಟವಾದ ಕಾಡುಗಳು ಮತ್ತು ನದಿಗಳಿಂದ ಕೂಡಿದ್ದು, ಭಾರತದ ಏಕೈಕ ಮಳೆಕಾಡು ಸಂಶೋಧನಾ ಕೇಂದ್ರ ಈ ಗ್ರಾಮದಲ್ಲಿದೆ. ಆಗುಂಬೆಯು ದಕ್ಷಿಣ ಭಾರತದ ಮೋಡಿ ಮಾಡುವ ಗಿರಿಧಾಮಗಳಲ್ಲಿ ಒಂದಾಗಿದೆ.
ಆಗುಂಬೆಯು ಎಲ್ಲರನ್ನೂ ಮಂತ್ರಮುಗ್ಧಗೊಳಿಸುವ ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಆಗುಂಬೆಗೆ ಪ್ರವಾಸಕ್ಕೆ ಹೋದರೆ ಈ ಸೂರ್ಯಾಸ್ತವನ್ನು ಮಿಸ್ ಮಾಡಿಕೊಳ್ಳಬಾರದು. ಸನ್ಸೆಟ್ ಪಾಯಿಂಟ್ ಮುಖ್ಯ ಪಟ್ಟಣದಿಂದ 10 ನಿಮಿಷಗಳ ದೂರದಲ್ಲಿದ್ದು,  ಇದು ಪಶ್ಚಿಮ ಘಟ್ಟಗಳ ಅತಿ ಎತ್ತರದ ಶಿಖರ ಎಂದು ಹೆಸರು ಪಡೆದಿದೆ. ಅರೇಬಿಯನ್ ಸಮುದ್ರದ ಮೇಲೆ ನೀವು ಅತ್ಯಂತ ಸುಂದರವಾದ ಸೂರ್ಯಾಸ್ತವನ್ನು ನೋಡಬಹುದು.


ಆಗುಂಬೆಯಲ್ಲಿ ನೋಡಬಹುದಾದ ಸ್ಥಳಗಳು


ಗೋಪಾಲಕೃಷ್ಣ ದೇವಸ್ಥಾನ


ಗೋಪಾಲಕೃಷ್ಣ ದೇವಸ್ಥಾನವು ಹಲವು ವರ್ಷಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದು ಹೊಯ್ಸಳರ ಕಾಲದ 14 ನೇ ಶತಮಾನದ ದೇವಾಲಯವಾಗಿದೆ, ಪಟ್ಟಣದ ಹೆಗ್ಗುರುತು ಎನ್ನಬಹುದು. ನೆಲಮಾಳಿಗೆಯಿಂದ ಗರ್ಭ ಗೃಹಕ್ಕೆ 108 ಮೆಟ್ಟಿಲುಗಳಿದ್ದು, ಕೃಷ್ಣನ 108 ಹೆಸರುಗಳನ್ನು ಸೂಚಿಸುತ್ತದೆ.
ಬರ್ಕಾನಾ ಜಲಪಾತ


ಭಾರತದ ಅತಿ ಎತ್ತರದ ಜಲಪಾತಗಳ ಲಿಸ್ಟ್​ನಲ್ಲಿರುವ ಈ ಬರ್ಕಾನಾ ಜಲಪಾತವು ಸುಮಾರು 850 ಅಡಿ ಎತ್ತರದಲ್ಲಿದೆ. 10 ನೇ ಅತಿ ಎತ್ತರದ ಜಲಪಾತವು ಪಶ್ಚಿಮ ಘಟ್ಟಗಳ ದಟ್ಟವಾದ ಕಾಡಿನ ಮಧ್ಯದಲ್ಲಿದೆ. ಈ ಪ್ರದೇಶದಲ್ಲಿ ಹರಿಯುವ ಸೀತಾ ನದಿಯಿಂದ ಜಲಪಾತವು ರೂಪುಗೊಂಡಿದೆ ಎನ್ನಲಾಗುತ್ತದೆ. ನೀವು ಸೊಂಪಾದ ಕಾಡಿನ ಮೂಲಕ ಬರ್ಕಾನಾ ಜಲಪಾತಕ್ಕೆ ಟ್ರಕ್ಕಿಂಗ್ ಮಾಡಬಹುದು.


agumbe The Cherrapunji of the South must visit place
ಸಾಂದರ್ಭಿಕ ಚಿತ್ರ


ಜೋಗಿ ಗುಂಡಿ ಜಲಪಾತ


ಜೋಗಿ ಗುಂಡಿ ಜಲಪಾತವು ಆಗುಂಬೆಯ ಕಾಡಿನಲ್ಲಿದೆ. ಈ ಸ್ಥಳವನ್ನು ಧ್ಯಾನಕ್ಕಾಗಿ ಬಳಸಿದ ಯೋಗಿಯ ಹೆಸರನ್ನು ಇದಕ್ಕೆ ಇಡಲಾಗಿದೆ. ಜೋಗಿ ಗುಂಡಿ ಜಲಪಾತವು ಬೆಟ್ಟಗಳ ಮೂಲಕ ಗುಹೆಯಿಂದ ಹೊರಬಂದು ಹರಿಯುತ್ತದೆ. ಜಲಪಾತವು ನಗರದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ ಮತ್ತು ಕೊನೆಯ 1 ಕಿ.ಮೀ ಟ್ರಕ್ಕಿಂಗ್ ಮಾಡಿಕೊಂಡು ಈ ಜಲಪಾತ ನೋಡಲು ಹೋಗಬೇಕು.
ಇದನ್ನೂ ಓದಿ: ಮೈಕೊರೆಯೋ ಚಳಿಯಲ್ಲಿ ಈ ಹುಳಿಯಾದ ಹಣ್ಣು ತಿಂದ್ರೆ ಬಹಳ ಒಳ್ಳೆಯದಂತೆ


ಒನಕೆ ಅಬ್ಬಿ ಜಲಪಾತ


ಒನಕೆ ಅಬ್ಬಿ ಜಲಪಾತವು ಆಗುಂಬೆ ಗ್ರಾಮದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ, ಇದು ಪಶ್ಚಿಮ ಘಟ್ಟಗಳ ಅಂಚಿನಲ್ಲಿದೆ. ಮಣ್ಣಿನ ಜಾಡು ನಿಮ್ಮನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ, ಅಲ್ಲಿಂದ ಬಂಡೆಗಳ ಮೂಲಕ ಜಲಪಾತವು ಧುಮ್ಮಿಕುವುದನ್ನು ನೀವು ಆನಂದಿಸಬಹುದು. ಬೇಸಿಗೆಯಲ್ಲಿ ಜಲಪಾತವು ಸಂಪೂರ್ಣವಾಗಿ ಒಣಗಿರುತ್ತದೆ, ಆದ್ದರಿಂದ ಒನಕೆ ಅಬ್ಬಿಯನ್ನು ನೋಡಲು ಉತ್ತಮ ಸಮಯವೆಂದರೆ ನವೆಂಬರ್ ನಿಂದ ಫೆಬ್ರವರಿ ನಡುವೆ.


ಆಗುಂಬೆಗೆ ಭೇಟಿ ನೀಡಲು ಉತ್ತಮ ಸಮಯ


ನೀವು ನವೆಂಬರ್ ನಿಂದ ಫೆಬ್ರವರಿವರೆಗೆ ಯಾವಾಗ ಬೇಕಾದರೂ ಈ ಪುಟ್ಟ ಗ್ರಾಮಕ್ಕೆ ಭೇಟಿ ನೀಡಬಹುದು.  ಮಾನ್ಸೂನ್ ಅವಧಿಯಲ್ಲಿ ಹೆಚ್ಚು ಮಳೆಯಿದ್ದಾಗ ನೀವು ಆಗುಂಬೆಗೆ ಹೋಗುವುದು ಹೆಚ್ಚು ಸುರಕ್ಷಿತವಲ್ಲ ಎನ್ನಲಾಗುತ್ತದೆ. ಟ್ರಕ್ಕಿಂಗ್ ಮಾಡುವುದು ಕಷ್ಟ.


ಆಗುಂಬೆಗೆ ಹೋಗುವುದು ಹೇಗೆ?


ಹತ್ತಿರದ ವಿಮಾನ ನಿಲ್ದಾಣ: ಮಂಗಳೂರು ವಿಮಾನ ನಿಲ್ದಾಣವು ಆಗುಂಬೆ ಊರಿನಿಂದ ಸುಮಾರು 95 ಕಿಮೀ ದೂರದಲ್ಲಿದೆ.


ಹತ್ತಿರದ ರೈಲುಮಾರ್ಗ: ಉಡುಪಿ ರೈಲು ನಿಲ್ದಾಣವು ಆಗುಂಬೆಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ.


ಇದನ್ನೂ ಓದಿ: ರಾಸಾಯನಿಕಯುಕ್ತ​ ರಿಮೂವರ್ ಇಲ್ಲದೇ ನೈಲ್​ ಪಾಲಿಶ್ ತೆಗೆಯೋದು ಬಹಳ ಸುಲಭ, ಹೀಗೆ ಮಾಡಿ


ಬಸ್ ಮೂಲಕ: ನೀವು ನೇರವಾಗಿ ಬೆಂಗಳೂರಿನಿಂದ ಆಗುಂಬೆಗೆ ಬಸ್ ಅಥವಾ ತೀರ್ಥಹಳ್ಳಿಗೆ ಹೋಗುವ ಬಸ್​ನಲ್ಲಿ ಹೋಗಬಹುದು. ಅಲ್ಲಿಂದ ಆಗುಂಬೆಗೆ ಇನ್ನೊಂದು ಬಸ್ ಸಿಗುತ್ತದೆ.

Published by:Sandhya M
First published: