Relationships: ಸಂಬಂಧಗಳಲ್ಲಿ ವಯಸ್ಸಿನ ಅಂತರ ಕೂಡ ಮುಖ್ಯವಂತೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು

ಪ್ರೀತಿ ಎಂಬುದು ಜಾತಿ, ಧರ್ಮ, ಬಣ್ಣ, ವಯಸ್ಸು ಇದ್ಯಾವುದನ್ನೂ ನೋಡುವುದಿಲ್ಲ. ಅದು ತಾನಾಗಿಯೇ ಆಗುವ ಅನುಭವ ಎನ್ನಲಾಗುತ್ತದೆ. ಅಲ್ಲದೆ ಹಲವರು ವಯಸ್ಸಿನ ಅಂತರ ಎಂಬುದು ಸಂಖ್ಯೆಯಷ್ಟೇ, ಪ್ರೀತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದೇ ನಂಬುತ್ತಾರೆ. ಆದರೆ, ಇತ್ತೀಚಿನ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಅತಿಯಾಗಿರುವ ವಯಸ್ಸಿನ ಅಂತರವು ಸಂಬಂಧದಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡಬಹುದೆಂದು ಹೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರೀತಿ (Love) ಎಂಬುದು ಕುರುಡು ಎನ್ನುವ ಮಾತಿನ ಬಗ್ಗೆ ನೀವು ಕೇಳಿರುತ್ತೀರಿ. ಹೌದು, ಪ್ರೀತಿ ಎಂಬುದು ಜಾತಿ, ಧರ್ಮ, ಬಣ್ಣ, ವಯಸ್ಸು ಇದ್ಯಾವುದನ್ನೂ ನೋಡುವುದಿಲ್ಲ. ಅದು ತಾನಾಗಿಯೇ ಆಗುವ ಅನುಭವ (Experience) ಎನ್ನಲಾಗುತ್ತದೆ. ಅಲ್ಲದೆ ಹಲವರು ವಯಸ್ಸಿನ ಅಂತರ ಎಂಬುದು ಸಂಖ್ಯೆಯಷ್ಟೇ, ಪ್ರೀತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದೇ ನಂಬುತ್ತಾರೆ. ಆದರೆ, ಇತ್ತೀಚಿನ ಸಂಶೋಧನಾ ಅಧ್ಯಯನವೊಂದರ (Research Study) ಪ್ರಕಾರ, ಅತಿಯಾಗಿರುವ ವಯಸ್ಸಿನ ಅಂತರವು ಸಂಬಂಧದಲ್ಲಿ ಹಲವು ಸಮಸ್ಯೆಗಳನ್ನು (Problems) ತಂದೊಡ್ಡಬಹುದೆಂದು ಹೇಳಿದೆ. ಸಾಮಾನ್ಯವಾಗಿ ಮೂರು ವರ್ಷಗಳ ವಯಸ್ಸಿನ ಅಂತರ ಸಂಬಂಧದಲ್ಲಿ ಸ್ವೀಕರಿಸಬಹುದಾಗಿದೆ, ಆದರೆ ಅಂತರ ಇದಕ್ಕಿಂತ ಹೆಚ್ಚಾಗಿದ್ದರೆ ಏನು..ಎಂಬ ಪ್ರಶ್ನೆ ಮೂಡಬಹುದು.

ಜೋಡಿಯೊಂದರ ಮಧ್ಯೆ ಇರುವ ಅತಿಯಾದ ವಯಸ್ಸಿನ ಅಂತರವು ಹಲವು ಧನಾತ್ಮಕ ಅಂಶಗಳನ್ನೂ ಹಾಗೂ ನಕಾರಾತ್ಮಕ ಅಂಶಗಳನ್ನೂ ಒಳಗೊಂಡಿವೆ. ವಯಸ್ಸಾದಂತೆ ಸಾಮಾನ್ಯವಾಗಿ ಮಾನಸಿಕ ವಿಕಸನ ಹಾಗೂ ಅನುಭವ ಎರಡೂ ಹೆಚ್ಚುತ್ತ ಹೋಗುತ್ತವೆ. ಇಂತಹ ಒಂದು ಸಂದರ್ಭ ಬಂದಾಗ ನಿರ್ದಿಷ್ಟ ಒಂದು ವಯಸ್ಸಿನ ಗುಂಪಿನೊಂದಿಗೆ ಹೊಂದಾಣಿಕೆ ಎಂಬುದು ಕಷ್ಟಕರವಾಗುತ್ತದೆ ಹಾಗೂ ಅದರಿಂದಾಗಿಯೇ ಹಲವು ಹೆಚ್ಚಿನ ವಯಸ್ಸಿನ ಅಂತರವಿರುವ ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯಗಳು ಏರ್ಪಡುತ್ತವೆ.

ವಯಸ್ಸಿನ ಅಂತರದ ಸಂಬಂಧ ಎಂದರೇನು?
ಅತಿಯಾದ ವಯಸ್ಸಿನ ಅಂತರದ ಸಂಬಂಧ ಎಂದಾಗ ದಂಪತಿಗಳ ಮಧ್ಯೆ ಕನಿಷ್ಠ ಹತ್ತು ವರ್ಷಗಳ ಅಂತರವಿರುವುದನ್ನು ಸೂಚಿಸುತ್ತದೆ. ಈ ರೀತಿಯ ದೊಡ್ಡದಾಗಿರುವ ವಯಸ್ಸಿನ ಅಂತರ ಅಂತಹ ದಂಪತಿಗಳು ಬಾಳು ನಡಸಲು ದೊಡ್ಡ ಸವಾಲನ್ನೇ ಎಸೆಯುತ್ತದೆ.

ಇದನ್ನೂ ಓದಿ:  Children’s Care: ನಿಮ್ಮ ಮಗುವಿನ ಎದುರು ಮಾತನಾಡುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ!

ಖಂಡಿತವಾಗಿಯೂ ಪ್ರೀತಿ ಎಂಬುದು ವಯಸ್ಸಿನ ಅಂತರಕ್ಕೆ ಬಾಧಕವಾಗದೇ ಹೋದರೂ ನಾವು ಬದುಕುತ್ತಿರುವ ಈ ಸಮಾಜದಲ್ಲಿನ ಕೆಲವು ಸಾಮಾಜಿಕ ಅಂಶಗಳು ಪ್ರತಿ ಹಂತದಲ್ಲಿ ಅಂತಹ ದಂಪತಿಗಳ ಮಧ್ಯೆ ಸಾಕಷ್ಟು ಕಿರಿಕಿರಿ ಉಂಟು ಮಾಡುವ ಮೂಲಕ ಅವರು ಆರಾಮದಾಯಕ ಅಥವಾ ನೆಮ್ಮದಿಯ ಜೀವನ ನಡೆಸಲು ಕಷ್ಟಕರವಾಗಿಸುತ್ತದೆ.

ವಯಸ್ಸಿನ ಅಂತರದ ಕೆಲವು ಧನಾತ್ಮಕ ಅಂಶಗಳು

  • ಯಾವುದೇ ಸಂಬಂಧದಲ್ಲಿ ಮಾನಸಿಕ ಪ್ರಭುತ್ವ ಎಂಬುದು ಬಲು ಮುಖ್ಯವಾಗಿದ್ದು ಅತಿಯಾದ ವಯಸ್ಸಿನ ಅಂತರದ ಸಂಬಂಧದಲ್ಲಿ ಇದನ್ನು ಕಾಣಬಹುದು

  • ಇಂತಹ ಸಂಬಂಧದಲ್ಲಿ ಜೊತೆಗಾರರಿಬ್ಬರೂ ಒಬ್ಬರಿಗೊಬ್ಬರು ಗೌರವ ಕೊಡುವುದನ್ನು ಕಲಿಯುತ್ತಾರೆ.

  • ವಯಸ್ಸಿನ ಅಂತರವನ್ನು ಮಾನಸಿಕವಾಗಿ ಸ್ವೀಕರಿಸುವ ದಂಪತಿಗಳು ಜೀವನವನ್ನು ಚೆನ್ನಾಗಿ ಬದುಕಬಹುದು

  • ವಯಸ್ಸಿನಲ್ಲಿ ಹಿರಿಯನಾದ ಗಂಡ ಅಥವಾ ಹೆಂಡತಿ ತನ್ನ ಸಂಗಾತಿಯ ಅನಿಸಿಕೆಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬಲ್ಲನು ಅಥವಾ ಕೊಳ್ಳಬಲ್ಲಳು.

  • ವಯಸ್ಸಿನ ಅಂತರವಿರುವ ದಂಪತಿಗಳು ಒಬ್ಬರಿಗೊಬ್ಬರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು.


ವಯಸ್ಸಿನ ಅಂತರದ ಕೆಲವು ನಕಾರಾತ್ಮಕ ಅಂಶಗಳು

  • ಇಬ್ಬರ ಮಧ್ಯೆ ಇಗೋ ಅಥವಾ ಅಹಂಕಾರ ಇಲ್ಲವೇ ಸ್ವಾಭಿಮಾನದ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು

  • ಕೆಲ ಸಮಯದ ನಂತರ ಈ ರೀತಿ ಅತಿಯಾದ ವಯಸ್ಸಿನ ಅಂತರವುಳ್ಳ ದಂಪತಿಗಳು ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಬಹುದು

  • ವಯಸ್ಸಿನ ಅಂತರ ಇರುವುದರಿಂದ ಒಬ್ಬರಿಗೊಬ್ಬರು ಹೊಂದಿರುವ ಆಯ್ಕೆಯಲ್ಲಿ ವ್ಯತ್ಯಾಸಗಳಿರಬಹುದು ಹಾಗೂ ಇದರಿಂದ ಮುಂದೆ ಇಬ್ಬರಲ್ಲೂ ಭಿನ್ನಾಭಿಪ್ರಾಯಗಳು ಮೂಡಬಹುದು.


ಇದನ್ನೂ ಓದಿ:  Over Sleeping: ನೀವು ತುಂಬಾ ಹೊತ್ತು ನಿದ್ದೆ ಮಾಡ್ತೀರಾ? ಅದು ನಿಮ್ಮ ಪ್ರಾಣಕ್ಕೇ ಕುತ್ತು ಎಚ್ಚರ!

ಒಟ್ಟಿನಲ್ಲಿ ಹೇಳಬೇಕೆಂದರೆ ಪ್ರೀತಿಗೆ ವಯಸ್ಸು ಶತ್ರುವಲ್ಲವಾದರೂ ಒಟ್ಟಾರೆ ಹೊಂದಾಣಿಕೆಯ ವಿಷಯದಲ್ಲಿ ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ ಎಂಬುದು ತಪ್ಪಲ್ಲ. ಅಷ್ಟಕ್ಕೂ ಹಿಂದೊಮ್ಮೆ ಈ ರೀತಿಯ ಅತಿಯಾದ ವಯಸ್ಸಿನ ಅಂತರವುಳ್ಳ ಮದುವೆಗಳು ಅಥವಾ ಸಂಬಂಧಗಳು ಸಾಮಾನ್ಯವಾಗಿತ್ತು. ಆದರೆ ನಂತರ ವು ಕಡಿಮೆಯಾಗುತ್ತ ಬಂದವು. ಆದರೆ, ಈಗ ವಿಪರ್ಯಾಸವೆಂದರೆ ಮತ್ತೆ ಅಂತಹ ಸಂಬಂಧಗಳು ಅಲ್ಲಲ್ಲಿ ಏರುತ್ತಿರುವುದನ್ನು ಕಾಣಬಹುದಾಗಿದೆ.
Published by:Ashwini Prabhu
First published: