Diet And Health: ಮೂವತ್ತರ ನಂತರವೂ ಫಿಟ್ ಆಗಿರಲು ನಿಮ್ಮ ಆಹಾರದಲ್ಲಿ ಈ ಪೋಷಕಾಂಶ ಸೇರಿಸಿ

ಮಹಿಳೆಯರು ಮೊದಲು ತಮ್ಮ ಕುಟುಂಬಸ್ಥರ ಆರೋಗ್ಯದತ್ತ ಆದ್ಯತೆ ನೀಡ್ತಾರೆ. ಪ್ರತಿಯೊಬ್ಬರ ಜವಾಬ್ದಾರಿ ತೆಗೆದುಕೊಳ್ಳುವ ಅವರು ತಮ್ಮ ಆರೋಗ್ಯವನ್ನೇ ಕಡೆಗಣಿಸ್ತಾರೆ. ಆದರೆ ಪ್ರತೀ ಮಹಿಳೆಯು ತಮ್ಮ 30 ರಿಂದ 40 ನೇ ವಯಸ್ಸಿನಲ್ಲಿ ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪೌಷ್ಠಿಕಾಂಶದ ಮಹತ್ವ ಅರಿಯಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತೀ ತಂದೆ-ತಾಯಿ (Parents) ತಮ್ಮ ಮಕ್ಕಳು (Children’s) ಚಿಕ್ಕವರಿದ್ದಾಗ ಮತ್ತು ಸಣ್ಣವರಿದ್ದಾಗ ಅವರ ಆಹಾರ (Food) ಹಾಗೂ ಚಟುವಟಿಕೆ (Activities) ಸೇರಿದಂತೆ ಪ್ರತೀ ವಿಷಯದಲ್ಲಿ ಸಾಕಷ್ಟು ಜಾಗ್ರತೆ ವಹಿಸುತ್ತಿದ್ದರು. ನಮ್ಮ ಎಲ್ಲಾ ಪೋಷಕರು ನಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಹಸಿರು ತರಕಾರಿ ತಿನ್ನಿಸಲು ಸಾಕಷ್ಟು ಕಷ್ಟ ಪಡ್ತಿದ್ರು. ರಾತ್ರಿ ವೇಳೆ ಪ್ರತಿನಿತ್ಯ ಹಾಲು ಕುಡಿಸಿ ಮಲಗಿಸ್ತಿದ್ರು. ಜೀವನದಲ್ಲಿ ಯಾವುದೇ ಒಂದು ಹಂತದಲ್ಲಿ ಆರೋಗ್ಯಕರ ಆಹಾರ ಸೇವನೇ ಮಾಡದೇ ಹೋದಾಗ ಪೋಷಕರು ಗದರಿಸಿರ್ತಾರೆ. ಆದರೆ ಈ ಪೌಷ್ಟಿಕಾಂಶವು ನಮ್ಮ ದೇಹವನ್ನು ದೀರ್ಘ ಕಾಲದವರೆಗೆ ರೋಗಗಳ ವಿರುದ್ಧ ಹೋರಾಡಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

  ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು

  ಇನ್ನು ಮಗು ಬೆಳೆದಂತೆ ಹಾಗೂ ನಾವು ದೊಡ್ಡವರಾದಂತೆ ಹಾಗೂ ದೊಡ್ಡವರಾದಂತೆ ಆರೋಗ್ಯದ ಬಗ್ಗೆ ವಿಶೇಷವಾಗಿ ಮಹಿಳೆಯರ ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸ್ತೀವಿ. ವೈವಾಹಿಕ ಜೀವನದಲ್ಲಿ, ಮಹಿಳೆಯರು ಮೊದಲು ತಮ್ಮ ಕುಟುಂಬಸ್ಥರ ಆರೋಗ್ಯದತ್ತ ಆದ್ಯತೆ ನೀಡ್ತಾರೆ. ಪ್ರತಿಯೊಬ್ಬರ ಜವಾಬ್ದಾರಿ ತೆಗೆದುಕೊಳ್ಳುವ ಅವರು ತಮ್ಮ ಆರೋಗ್ಯವನ್ನೇ ಕಡೆಗಣಿಸ್ತಾರೆ.

  ಅದೇನೇ ಇರಲಿ ಪ್ರತೀ ಮಹಿಳೆಯು ತಮ್ಮ 30 ರಿಂದ 40 ನೇ ವಯಸ್ಸಿನಲ್ಲಿ ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪೌಷ್ಠಿಕಾಂಶದ ಮಹತ್ವ ಅರಿಯಬೇಕು. ಪ್ರತಿ ವರ್ಷ ಸೆಪ್ಟೆಂಬರ್ 1 ರಿಂದ 7 ರವರೆಗೆ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಆಚರಿಸಲಾಗುತ್ತದೆ. ಅದರಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮತ್ತು ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

  ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

  ರಾಷ್ಟ್ರೀಯ ಪೌಷ್ಟಿಕಾಂಶ ವಾರದ ಮಹತ್ವ

  ಪೌಷ್ಠಿಕಾಂಶದ ಮಹತ್ವವನ್ನು ಮಹಿಳೆಯರು ಅರ್ಥಮಾಡಿಕೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನೇತೃತ್ವದಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯು ವಾರದ ಕಾರ್ಯಕ್ರಮ ನಡೆಸುವ ಮೂಲಕ ಮಹಿಳೆಯರು ಆರೋಗ್ಯದ ಕಾಳಜಿ ವಹಿಸುವ ಬಗ್ಗೆ ಹೇಳಲಾಗುತ್ತದೆ.

  ಆರೋಗ್ಯಕರ ಆಹಾರವು ದೀರ್ಘಾವಧಿಯಲ್ಲಿ ಆರೋಗ್ಯಕರ ದೇಹ ಕಾಪಾಡಿಕೊಳ್ಳಲು ಮುಖ್ಯ ಆಧಾರ. ಇದು ವಿವಿಧ ರೋಗ ತಡೆಗಟ್ಟಲು ಮತ್ತು ಮಧುಮೇಹ ಮತ್ತು ಇತರ ಸಾಂಕ್ರಾಮಿಕವಲ್ಲದ ರೋಗಗಳ ಜನರ ಜೀವನದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ.

  ವಯಸ್ಸಾದಂತೆ ಜನರ ಆಹಾರದ ಅವಶ್ಯಕತೆಗಳು ಬದಲಾಗುತ್ತವೆ. ಹಾಗಾಗಿ ಯಾವ ಆಹಾರವು ನಿಮಗೆ ಸೂಕ್ತವಾಗಿದೆ ಮತ್ತು ನಿಮಗೆ ಸರಿಯಾದ ಪೋಷಣೆ ನೀಡುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಹಾಗಾದ್ರೆ ನಿಮ್ಮ 30 ಮತ್ತು 40 ರ ವಯಸ್ಸಿನಲ್ಲಿ ಯಾವ ಪೋಷಕಾಂಶ ನಿಮ್ಮನ್ನು ಆರೋಗ್ಯವಾಗಿಡುತ್ತದೆ ಎಂದು ಮತ್ತು ಸೂಕ್ಷ್ಮ ಪೋಷಕಾಂಶಗಳು ಯಾವುವು ಎಂದು ಇಲ್ಲಿ ನೋಡೋಣ.

  ವಿಟಮಿನ್ ಸಿ

  ವಿಟಮಿನ್ ಸಿ ಶಕ್ತಿಯುತವಾದ ನೀರಿನಲ್ಲಿ ಕರಗುವ ಉತ್ಕರ್ಷಣ ನಿರೋಧಕ. ದೇಹವನ್ನು ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ತೊಡೆದು ಹಾಕುತ್ತದೆ. ಶೀತ, ಸೋಂಕು ಮತ್ತು ಕೆಲವು ರೀತಿಯ ಕ್ಯಾನ್ಸರ್‌ ಪ್ರತಿಕೂಲ ಸಮಸ್ಯೆ ನಿವಾರಿಸುತ್ತದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ಇದು ಸಂಯೋಜಕ ಅಂಗಾಂಶ ಬೆಂಬಲಿಸುತ್ತದೆ. ಕ್ಯಾಪಿಲ್ಲರಿ ಆರೋಗ್ಯವಾಗಿಸುತ್ತದೆ ಮತ್ತು ಕಬ್ಬಿಣದಂಶ ಹೀರಿಕೊಳ್ಳುತ್ತದೆ.

  ವಿಟಮಿನ್ ಡಿ

  ಈ ಕೊಬ್ಬು ಕರಗುವ ಉತ್ಕರ್ಷಣ ನಿರೋಧಕ ದೇಹವು ಸೂರ್ಯನ ಬೆಳಕಿನಿಂದ ತೆಗೆದುಕೊಳ್ಳುತ್ತದೆ. ಈ ಕ್ಯಾಲ್ಸಿಯಂ ಜೊತೆಗೆ ಇದು ಮೂಳೆಯ ಆರೋಗ್ಯ ಕಾಪಾಡುತ್ತದೆ. ವಿಟಮಿನ್ ಡಿ ಇನ್ಸುಲಿನ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಸುಧಾರಿತ ಕೊಬ್ಬು ನಷ್ಟ ಮತ್ತು ಮಹಿಳೆಯರಿಗೆ ಸ್ನಾಯು ನಿರ್ಮಿಸುತ್ತದೆ.

  ಇದನ್ನೂ ಓದಿ: ಪಾದ, ಕೈಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಕಂಡು ಬರುವುದು ಹೇಗೆ? ಇದರ ಮುನ್ನೆಚ್ಚರಿಕಾ ಕ್ರಮಗಳೇನು?

  ಕಬ್ಬಿಣ

  ಕಬ್ಬಿಣವು ಪ್ರಾಥಮಿಕವಾಗಿ ಆರೋಗ್ಯಕರ ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಕಾರ್ಯ ನಿರ್ವಹಿಸುವ ಜೀವಕೋಶಗಳಿಗೆ ಆಮ್ಲಜನಕದ ವಿತರಣೆಗೆ ಸಂಬಂಧಿಸಿದ ಖನಿಜವಾಗಿದೆ. ಕಬ್ಬಿಣವು ಸ್ನಾಯು ಕೋಶಗಳಲ್ಲಿ ಅಡೆನೊಸಿನ್ ಟ್ರೈಫಾಸ್ಫೇಟ್ (ATP) ಉತ್ಪಾದಿಸುತ್ತದೆ. ಪುರುಷರಿಗಿಂತ ಮಹಿಳೆಯರಿಗೆ ಕಬ್ಬಿಣದ ಅಗತ್ಯತೆ ಹೆಚ್ಚು.
  Published by:renukadariyannavar
  First published: