• Home
  • »
  • News
  • »
  • lifestyle
  • »
  • Drinks For Morning: ಬೆಳಗ್ಗೆ ಎದ್ದ ಕೂಡಲೇ ಈ ಪಾನೀಯಗಳ ಸೇವಿಸಿ; ಆರೋಗ್ಯ ಸೂಪರ್ ಆಗಿರತ್ತೆ

Drinks For Morning: ಬೆಳಗ್ಗೆ ಎದ್ದ ಕೂಡಲೇ ಈ ಪಾನೀಯಗಳ ಸೇವಿಸಿ; ಆರೋಗ್ಯ ಸೂಪರ್ ಆಗಿರತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗ್ಗೆ ಚಹಾ ಅಥವಾ ಕಾಫಿ ಕುಡಿಯುತ್ತಿದ್ದರೆ ನೀವು ತಕ್ಷಣ ಈ ಕೆಟ್ಟ ಅಭ್ಯಾಸವನ್ನು ಸರಿಪಡಿಸಬೇಕು. ಚಹಾ ಅಥವಾ ಕಾಫಿಗೆ ಬದಲಾಗಿ ಆರೋಗ್ಯಕರ ಪಾನೀಯ ಸೇವಿಸುವುದು ಉತ್ತಮ. ಅವುಗಳ ಸೇವನೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ನೀರಿನ ಜೊತೆ ಗಿಡಮೂಲಿಕೆಗಳು ಮತ್ತು ಬೀಜಗಳ ಸೇವನೆ ಮಾಡಿ.

ಮುಂದೆ ಓದಿ ...
  • Share this:

    ದಿನದ ಕೆಲಸ (Day Work) ಮಾಡಲು ದೇಹಕ್ಕೆ ಶಕ್ತಿ (Body Energy) ಬೇಕು. ಈ ಕಾರಣದಿಂದ ತಜ್ಞರು (Experts) ಬೆಳಗಿನ ತಿಂಡಿಯನ್ನು (Morning Breakfast) ಮಿಸ್ (Miss) ಮಾಡದೇ ತಿನ್ನಲು ಹೇಳುತ್ತಾರೆ. ಕೆಲವು ಆರೋಗ್ಯಕರ ಆಹಾರ ಪದಾರ್ಥಗಳ (Healthy Food Ingredients) ಸೇವನೆ ಮಾಡಲು ಮತ್ತು ಏನನ್ನಾದರೂ ಕುಡಿಯಲು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ದೇಹಕ್ಕೆ ಶಕ್ತಿ ಜೊತೆ ಸಂಪೂರ್ಣ ಪೋಷಣೆ ನೀಡುತ್ತದೆ. ನೀವು ಬೆಳಗ್ಗೆ ಚಹಾ ಅಥವಾ ಕಾಫಿ ಕುಡಿಯುತ್ತಿದ್ದರೆ ನೀವು ತಕ್ಷಣ ಈ ಕೆಟ್ಟ ಅಭ್ಯಾಸವನ್ನು ಸರಿಪಡಿಸಬೇಕು. ವಾಸ್ತವದಲ್ಲಿ ನೀವು ಚಹಾ ಅಥವಾ ಕಾಫಿಗೆ ಬದಲಾಗಿ ಅನೇಕ ಆರೋಗ್ಯಕರ ಪಾನೀಯಗಳಿವೆ. ಅವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ.


    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಪಾನೀಯಗಳು


    ಬೆಳಗ್ಗೆ ಉಗುರು ಬೆಚ್ಚನೆಯ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕೆಲವರು ನಿಂಬೆ ಮತ್ತು ಜೇನುತುಪ್ಪದ ನೀರು ಸೇವನೆ ಮಾಡುತ್ತಾರೆ. ನೀರಿನ ಜೊತೆ ಗಿಡಮೂಲಿಕೆಗಳು ಮತ್ತು ಬೀಜಗಳಿಂದ ಮಾಡಿದ ನೀರನ್ನು ಕುಡಿಯಲು ಇಷ್ಟ ಪಡುತ್ತಾರೆ.


    ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಅಂತಹ ಆರೋಗ್ಯಕರ ಪಾನೀಯ ಸೇವನೆ ಮಾಡಬಹುದು. ಎಲ್ಲಾ ಆರೋಗ್ಯಕರ ಪಾನೀಯಗಳು ನಿಮಗೆ ಅನೇಕ ರೀತಿಯ ಪ್ರಯೋಜನ ನೀಡುತ್ತದೆ. ಇದೇ ರೀತಿಯ ಆರೋಗ್ಯಕರ ಮತ್ತು ತ್ವರಿತ ಪಾನೀಯ ಮಾಡಿ ಸೇವಿಸಲು ಇಷ್ಟಪಡುತ್ತಿದ್ದರೆ ನಿಮ್ಮ ಆರೋಗ್ಯ ಮತ್ತು ಹೊಟ್ಟೆಯ ಆರೋಗ್ಯ ಕಾಪಾಡುವ ಪಾನೀಯದ ಬಗ್ಗೆ ನಾವು ನೋಡೋಣ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಪೌಷ್ಟಿಕ ತಜ್ಞೆ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ ಹೇಳುವ ಪ್ರಕಾರ, ನಿಮ್ಮ ದೇಹದಿಂದ ವಿಷವನ್ನು ಹೊರ ಹಾಕಲು ಮಾತ್ರವಲ್ಲದೆ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುವ ಎರಡು ವಿಷಯಗಳಿವೆ ಎಂದು ಹೇಳ್ತಾರೆ.


    ತುಳಸಿ ಬೀಜದ ನೀರು


    ತುಳಸಿ ಪ್ರಯೋಜನಗಳ ಹೇಳಿರುವ ಅವರು, ಇದನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯುತ್ತಾರೆ. ಇದನ್ನು ಆಯುರ್ವೇದದಲ್ಲಿ ಅತ್ಯುತ್ತಮ ಔಷಧೀಯ ಮೂಲಿಕೆ ಎಂದು ಪರಿಗಣಿಸಲಾಗಿದೆ. ತುಳಸಿ ಎಲೆಗಳ ನೀರು ಸೇವನೆ ಮಾಡುವುದು ಮಲಬದ್ಧತೆ, ಆಮ್ಲೀಯತೆ ಮತ್ತು ಎದೆಯುರಿ ಸಮಸ್ಯೆ ಗುಣವಾಗುತ್ತದೆ. ಇದು ದೇಹದ ಮೇಲೆ ತಂಪಾಗಿಸುವ ಪರಿಣಾಮ ಹೊಂದಿದೆ.


    ಸೋಂಪು ನೀರು


    ಸೋಂಪು ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ, ಇದನ್ನು ಅಡುಗೆಯಲ್ಲೂ ಬಳಕೆ ಮಾಡಲಾಗುತ್ತದೆ. ಆದರೆ ನೀವು ಅದರ ನೀರನ್ನು ಸಹ ಕುಡಿಯಬಹುದು. ರುಚಿಯಲ್ಲಿ ಸ್ವಲ್ಪ ಸಿಹಿ, ಫೆನ್ನೆಲ್ ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಅಸಿಡಿಟಿ ಸಮಸ್ಯೆ ತಡೆಯುತ್ತದೆ.


    ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ


    ತುಳಸಿ ಬೀಜಗಳು ಮತ್ತು ಸೋಂಪು ಬೀಜಗಳ ಪ್ರಯೋಜನಗಳು ಆರೋಗ್ಯಕ್ಕೆ ಮಾತ್ರವಲ್ಲ. ಪ್ರತಿದಿನ ಬೆಳಿಗ್ಗೆ ಈ ಎರಡು ಬೀಜಗಳ ನೀರನ್ನು ಕುಡಿಯುವುದರಿಂದ ನಿಮಗೆ ಬಲವಾದ ಮತ್ತು ಆರೋಗ್ಯಕರ ಕೂದಲು ಪಡೆಯಲು ಸಹಕಾರಿ ಎಂದು ಶಿಖಾ ಹೇಳುತ್ತಾರೆ. ನಿಮ್ಮ ತ್ವಚೆಯಲ್ಲೂ ವ್ಯತ್ಯಾಸ ಅನುಭವಿಸುತ್ತೀರಿ.


    ತುಳಸಿ ಮತ್ತು ಸೋಂಪು ಬೀಜದ ನೀರು ಹೇಗೆ ತಯಾರಿಸುವುದು?


    ಒಂದು ಚಮಚ ಸೋಂಪು ಅಥವಾ ತುಳಸಿ ಬೀಜಗಳನ್ನು ತೆಗೆದುಕೊಂಡು, ಅವುಗಳನ್ನು ಗಾಜಿನ ಗ್ಲಾಸ್ ನಲ್ಲಿ ಹಾಕಿ. ಮತ್ತು ನೀರು ಹಾಕಿ ತುಂಬಿಸಿ. ಇದನ್ನು ಚೆನ್ನಾಗಿ ಬೆರೆಸಿ. ಮತ್ತು ಬೀಜಗಳ ಪೋಷಕಾಂಶಗಳು ರಾತ್ರಿಯಿಡೀ ನೀರಿನಲ್ಲಿ ಉಳಿಯಲು ಬಿಡಿ. ಮರುದಿನ ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವನೆ ಮಾಡಿ.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ಈ ಬೀಜಗಳು ಸಹ ಪ್ರಯೋಜನಕಾರಿ


    ಫೆನ್ನೆಲ್ ಮತ್ತು ತುಳಸಿ ಬೀಜಗಳನ್ನು ಬಿಟ್ಟು ನೀವು ಚಿಯಾ ಬೀಜಗಳ ನೀರು ಸಹ ಸೇವಿಸಬಹುದು. ಇದು ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ. ನೀವು ಅಧಿಕ ರಕ್ತದ ಸಕ್ಕರೆ ಸಮಸ್ಯೆ ಹೊಂದಿದ್ದರೆ, ಆಮ್ಲೀಯತೆ ಹೊಂದಿದ್ದರೆ ಚಿಯಾ ಬೀಜ ಮತ್ತು ಅಜ್ವೈನ್ ನೀರು ಸೇವನೆ ಮಾಡಬಹುದು.

    Published by:renukadariyannavar
    First published: