ಮನುಷ್ಯನಿಗೆ (Human) ದೈಹಿಕ ಆರೋಗ್ಯ (Physical Health) ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವು (Mental Health) ಅಷ್ಟೇ ಮುಖ್ಯವಾಗುತ್ತದೆ. ಮೆದುಳಿನ ಆರೋಗ್ಯಕ್ಕೆ (Brain Health) ದಿನವೂ ಕಾಳಜಿ (Care) ವಹಿಸುವುದು ತುಂಬಾ ಮುಖ್ಯ. ವಯಸ್ಸಾಗುತ್ತಾ ಹೋದಂತೆ ನೆನಪಿನ ಶಕ್ತಿ ಕುಂದುತ್ತಾ ಹೋಗುತ್ತದೆ. ಹಾಗಾಗಿ ಮೂವತ್ತರ ಹರೆಯದ ನಂತರ ನೆನಪಿನ ಶಕ್ತಿ ಕುಂದದಂತೆ ತಡೆಯಲು ಮಾನಸಿಕ ಆರೋಗ್ಯ ಕಾಪಾಡಬೇಕಾಗುತ್ತದೆ. ಸ್ಮರಣಾ ಶಕ್ತಿ, ನೆನಪಿನ ಶಕ್ತಿ, ಮೆಮೊರಿ ನಷ್ಟವು ಗಂಭೀರ ಸಮಸ್ಯೆಯಾಗಿದೆ. ಯಾಕಂದ್ರೆ ವ್ಯಕ್ತಿ ಯಾವ ವಸ್ತುವನ್ನು ಎಲ್ಲಿಟ್ಟಿದ್ದಾನೆ? ತಾನು ಎಲ್ಲಿಗೆ ಹೋಗಬೇಕು ಅಂದುಕೊಂಡಿದ್ದ ಹೀಗೆ ಹಲವು ಸಂಗತಿಗಳು ನೆನಪಿನಲ್ಲಿ ಉಳಿಯುವುದೇ ಇಲ್ಲ. ಇದು ಮೆದುಳಿನ ವಯಸ್ಸಾಗುವಿಕೆಯ ಸಂಕೇತವಾಗಿದೆ.
ಮೂವತ್ತರ ಹರೆಯದ ನಂತರ ಮರೆವು ಸಮಸ್ಯೆ
ಮೆಮೊರಿ ನಷ್ಟ ಅಂದರೆ ನೆನಪಿನ ಶಕ್ತಿ ಕುಂದುವಿಕೆ ಅಂದರೆ ಮರೆವು ಗಂಭೀರ ಸಮಸ್ಯೆ ಆಗಿದೆ. ಇದು ಮೆದುಳಿನ ವಯಸ್ಸಾಗುವಿಕೆಯ ಸಂಕೇತ ಆಗಿದೆ. ವಿವಿಧ ಸಂಶೋಧನೆಗಳು ಹೇಳುವ ಪ್ರಕಾರ,
30 ವರ್ಷ ವಯಸ್ಸಿನ ನಂತರ ಮೆದುಳಿನ ಮೇಲೆ ವಯಸ್ಸಿನ ಪರಿಣಾಮ ಕಾಣಿಸುತ್ತದೆ. ಹಾಗೆಯೇ ಕ್ರಮೇಣ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಬಹುತೇಕರನ್ನು ಗೊಂದಲ ಹಾಗೂ ಹಲವು ಸಮಸ್ಯೆ ಎದುರಿಸುವಂತೆ ಮಾಡುತ್ತದೆ.
ಜ್ಞಾಪಕ ಶಕ್ತಿ ಹೆಚ್ಚಿಸಲು ಶಂಖಪುಷ್ಪಿ ಗಿಡಮೂಲಿಕೆ
ಮೂವತ್ತರ ನಂತರ ಕಡಿಮೆಯಾಗುವ ಜ್ಞಾಪಕ ಶಕ್ತಿ ಹೆಚ್ಚಿಸಲು ಅಥವಾ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಶಂಖಪುಷ್ಪಿಯು ಉತ್ತಮ ಗಿಡಮೂಲಿಕೆ ಅಂತಾ ಆಯುರ್ವೇದ ಹೇಳುತ್ತದೆ.
ಮರೆವು ಹಾಗೂ ಗೊಂದಲ ಹಾಗೂ ಮಾನಸಿಕ ಆರೋಗ್ಯ, ಮೆದುಳಿನ ಆರೋಗ್ಯ ಕಾಪಾಡಲು, ಜ್ಞಾಪಕ ಶಕ್ತಿ ಸುಧಾರಿಸಲು ಶಂಖಪುಷ್ಪಿ ಬಳಕೆ ಪರಿಣಾಮಕಾರಿ ಆಗಿದೆ. ಆದರೆ ನಿಜವಾದ ಶಂಖಪುಷ್ಪಿ ಕಂಡು ಹಿಡಿಯುವುದು ತುಂಬಾ ಕಷ್ಟಕರ.
ಹಾಗಾಗಿ ನೀವು ಅಡುಗೆ ಮನೆಯಲ್ಲಿ ಇರುವ ಕೆಲವು ಪದಾರ್ಥಗಳು ನೆನಪಿನ ಶಕ್ತಿ ಹೆಚ್ಚಿಸುತ್ತವೆ. ಅಂತಹ ಆಹಾರವನ್ನು ದೈನಂದಿನ ಆಹಾರದಲ್ಲಿ ಸೇರಿಸಿ. ಈ ಆಹಾರಗಳು ಜ್ಞಾಪಕಶಕ್ತಿ ತ್ವರಿತವಾಗಿ ಹೆಚ್ಚಲು ಸಹಕಾರಿ. ಹಾಗೂ ಮೆದುಳಿನ ವಯಸ್ಸಾಗುವಿಕೆ ನಿಧಾನಗೊಳಿಸುತ್ತವೆ.
ಕಾಫಿ ಮೆದುಳಿನ ಆರೋಗ್ಯಕ್ಕೆ ಉತ್ತಮ
ಕಾಫಿ ಸೇವನೆ ಮಾಡುವುದು ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ. ಪಬ್ಮೆಡ್ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಕೆಫೀನ್ ಸೇವನೆ ಮೆದುಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
ಇದು ಜಾಗರೂಕತೆ, ಮನಸ್ಥಿತಿ ಮತ್ತು ಗಮನ ಹೆಚ್ಚಿಸಲು ಸಹಾಯ ಮಾಡುತ್ತದೆ. ಕಾಫಿ ಸೇವನೆ ಒತ್ತಡ ನಿವಾರಣೆ ಮಾಡುತ್ತದೆ. ಯಾವುದೇ ವಿಷಯವನ್ನು ಶಾಶ್ವತವಾಗಿ ಮನಸ್ಸಿನಲ್ಲಿಟ್ಟುಕೊಳ್ಳಲು, ನೆನಪಿಡಲು ಸಹಾಯ ಮಾಡುತ್ತದೆ.
ಅರಿಶಿನ ಸೇವನೆಯಿಂದ ನೆನಪಿನ ಶಕ್ತಿಯ ವೇಗ ಹೆಚ್ಚುತ್ತದೆ
ನಿಮಗೆ ಮರೆವು ಸಮಸ್ಯೆ ಕಾಡುತ್ತಿದ್ದರೆ, ಎಲ್ಲೋ ಇಟ್ಟಿರುವ ವಸ್ತು ನೆನಪೇ ಇರುತ್ತಿಲ್ಲ ಎಂದಾದರೆ ನಿಮ್ಮ ಆಹಾರದಲ್ಲಿ ಅರಿಶಿನ ಸೇರಿಸಿ. ಇದು ನೆನಪಿನ ಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ.
ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದೆ. ಇದು ಸ್ಮರಣೆಯನ್ನು ತೀಕ್ಷ್ಣಗೊಳಿಸುತ್ತದೆ. ಖಿನ್ನತೆ ನಿವಾರಿಸುತ್ತದೆ. ಇದು ಮೆದುಳಿನ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಕಾಪಾಡುತ್ತದೆ.
ಹೂಕೋಸು ಬ್ರೊಕೊಲಿ ಸೇವನೆ
ಬ್ರೊಕೋಲಿ ಮತ್ತು ಕ್ಯಾಬೇಜ್, ಹೂಕೋಸು ಆಹಾರದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್-ಕೆ ಇದೆ. ಈ ಕೊಬ್ಬಿನಲ್ಲಿ ಕರಗುವ ವಿಟಮಿನ್ ಜ್ಞಾಪಕಶಕ್ತಿ ಸೂಪರ್ಫಾಸ್ಟ್ ಆಗಿಡಲು ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜಗಳು ಮೆದುಳಿನ ಆರೋಗ್ಯಕ್ಕೆ ಟಾನಿಕ್ ಇದ್ದಂತೆ
ಕುಂಬಳಕಾಯಿ ಬೀಜಗಳು ಉತ್ಕರ್ಷಣ ನಿರೋಧಕದಿಂದ ಸಮೃದ್ಧವಾಗಿದೆ. ಇದು ಮೆದುಳನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಣೆ ಮಾಡುತ್ತದೆ. ಅವುಗಳಲ್ಲಿರುವ ಸತು, ಮೆಗ್ನೀಸಿಯಮ್, ತಾಮ್ರ, ಕಬ್ಬಿಣ ಪೋಷಕಾಂಶಗಳು ತೀಕ್ಷ್ಣವಾದ ಸ್ಮರಣೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಜೊತೆಗೆ ಇತರೆ ಕಾಯಿಲೆಗಳಲ್ಲಿಯೂ ಕುಂಬಳಕಾಯಿ ಬೀಜ ಸಹಕಾರಿ. ಹಾಗಾಗಿ ಪ್ರತಿದಿನ ಸೇವಿಸಿ.
ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿಯನ್ನು ಈ ರೀತಿ ಸಂಗ್ರಹಿಸಿಡಿ, ಇಲ್ಲವಾದರೆ ರುಚಿ ಕೆಡುತ್ತೆ
ಜ್ಞಾಪಕಶಕ್ತಿ ಹೆಚ್ಚಿಸಲು ಕಿತ್ತಳೆ ಸೇವಿಸಿ
ಸ್ಮರಣ ಶಕ್ತಿ ಹೆಚ್ಚಿಸಲು ಆಹಾರದಲ್ಲಿ ಕಿತ್ತಳೆ ಸೇರಿಸಿ, ಸೇವಿಸಿ. ವಿಟಮಿನ್ ಸಿ ಸಮೃದ್ಧ ಈ ಹಣ್ಣು ಗಮನ, ಸ್ಮರಣೆ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ