Friends: 30ರ ವಯೋಮಾನದ ನಂತರ ಹೆಚ್ಚಿನ ಜನರು ತಮ್ಮ ಸ್ನೇಹಿತರಿಂದ ದೂರ ಸರಿಯುತ್ತಾರಂತೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತಮ್ಮ 30 ಮತ್ತು 40 ರ ಹರೆಯದಲ್ಲಿ ಪ್ರವೇಶಿಸುವ ಬಹಳಷ್ಟು ಜನರು ಈ ಸಮಯದಲ್ಲಿ ತಮ್ಮ ಹಳೆಯ ಮತ್ತು ಅನೇಕ ವರ್ಷಗಳಿಂದ ಕಾಪಾಡಿಕೊಂಡು ಬಂದಂತಹ ಸ್ನೇಹಿತರನ್ನು ಕಳೆದುಕೊಳ್ಳುತ್ತಾರೆ ಮತ್ತು ಜನರನ್ನು ದೂರವಿಡುತ್ತಾರೆ ಎಂದು ಒಪ್ಪಿಕೊಳ್ಳುತ್ತಾರೆ. ಇದು ಏಕೆ ಹೀಗೆ ಅಂತ ನೀವು ಯೋಚನೆ ಮಾಡಬಹುದು. ಈ ವಯಸ್ಸಿನಲ್ಲಿ ಜನರು ತಮ್ಮ ಸ್ನೇಹಿತರನ್ನು ಕಳೆದುಕೊಳ್ಳುವುದಕ್ಕೆ ಮತ್ತು ಅನೇಕ ಪ್ರೀತಿ ಪಾತ್ರರಾಗಿರುವ ಜನರನ್ನು ದೂರವಿಡಲು ಕೆಲವು ಕಾರಣಗಳು ಇವೆ.

ಮುಂದೆ ಓದಿ ...
  • Share this:

ನಾವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋದ ಹಾಗೆ ನಮ್ಮ ಬಾಲ್ಯದಲ್ಲಿ (Childhood) ಇದ್ದಂತಹ ಮತ್ತು ನಮ್ಮ ಮನೆಯ ಅಕ್ಕಪಕ್ಕದಲ್ಲಿದ್ದಂತಹ ಸ್ನೇಹಿತರನ್ನು ಮರೆಯುವುದಕ್ಕೆ ಶುರು ಮಾಡುತ್ತೇವೆ. ಎಂದರೆ ಅವರೊಡನೆ ನಮ್ಮ ಸಂಪರ್ಕ (Contact) ಅಷ್ಟಾಗಿ ಇರುವುದಿಲ್ಲ ಅಂತ ಅರ್ಥ. ಇದಕ್ಕೆ ಅನೇಕ ಕಾರಣಗಳಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವೊಮ್ಮೆ ನಾವು ಬಾಲ್ಯವನ್ನು ಕಳೆದಂತಹ ಊರಿನಿಂದ ಬೇರೆ ಊರಿಗೆ ವರ್ಗಾವಣೆಯಾಗಿ ಹೋಗುವುದು ಮತ್ತು ಇನ್ನೂ ಕೆಲವು ಸಂದರ್ಭಗಳಲ್ಲಿ ನಮ್ಮ ಸ್ನೇಹಿತರು (Friends) ಆ ಊರಿನಿಂದ ಬೇರೆ ಊರಿಗೆ ಹೋಗಬಹುದು. ಒಟ್ಟಿನಲ್ಲಿ ಹೀಗೆ ಬಾಲ್ಯದಲ್ಲಿ ಇದ್ದಂತಹ ಸ್ನೇಹಿತರು ನಮ್ಮಿಂದ ದೂರವಾಗುತ್ತಾರೆ. ಕೆಲವೊಬ್ಬರು ಹಾಗೆಯೇ ನಮ್ಮ ಸ್ನೇಹಿತರಾಗಿಯೇ ಉಳಿದರೂ ಸಹ ಅವರೊಡನೆ ಆಗಿನ ಸಂಪರ್ಕ, ಸಲುಗೆ ದೊಡ್ಡವರಾದ ಮೇಲೆ ಇರುವುದಿಲ್ಲ.


ನಾವು ಬೆಳೆದಂತೆ, ನಮ್ಮಲ್ಲಿ ಹೆಚ್ಚಿನವರು ತಮ್ಮ ಬಾಲ್ಯದ ನೆನಪುಗಳನ್ನು, ತಮ್ಮ ಸ್ನೇಹಿತರನ್ನು ಮತ್ತು ಸಹಪಾಠಿಗಳೊಂದಿಗೆ ಇನ್ನೂ ಸಂಪರ್ಕದಲ್ಲಿ ಇದ್ದರೂ ಸಹ ಆಗಿನ ಒಂದು ಖುಷಿ ನೀವು 30ನೇ ವಯಸ್ಸಿನ ಆಸುಪಾಸಿನಲ್ಲಿದ್ದಾಗ ಸಿಗುವುದಿಲ್ಲ ಎಂದು ಹೇಳಬಹುದು.


ಅದೇನೇ ಇದ್ದರೂ, ತಮ್ಮ 30 ಮತ್ತು 40 ರ ಹರೆಯದಲ್ಲಿ ಪ್ರವೇಶಿಸುವ ಬಹಳಷ್ಟು ಜನರು ಈ ಸಮಯದಲ್ಲಿ ತಮ್ಮ ಹಳೆಯ ಮತ್ತು ಅನೇಕ ವರ್ಷಗಳಿಂದ ಕಾಪಾಡಿಕೊಂಡು ಬಂದಂತಹ ಸ್ನೇಹಿತರನ್ನು ಕಳೆದುಕೊಳ್ಳುತ್ತಾರೆ ಮತ್ತು ಜನರನ್ನು ದೂರವಿಡುತ್ತಾರೆ ಎಂದು ಒಪ್ಪಿಕೊಳ್ಳುತ್ತಾರೆ. ಇದು ಏಕೆ ಹೀಗೆ ಅಂತ ನೀವು ಯೋಚನೆ ಮಾಡಬಹುದು. ಈ ವಯಸ್ಸಿನಲ್ಲಿ ಜನರು ತಮ್ಮ ಸ್ನೇಹಿತರನ್ನು ಕಳೆದುಕೊಳ್ಳುವುದಕ್ಕೆ ಮತ್ತು ಅನೇಕ ಪ್ರೀತಿ ಪಾತ್ರರಾಗಿರುವ ಜನರನ್ನು ದೂರವಿಡಲು ಕೆಲವು ಕಾರಣಗಳು ಇವೆ.


ನಾವು ಬಾಲ್ಯದಲ್ಲಿ ಮತ್ತು ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಿನ ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ
ಹೆಚ್ಚಿನ ವ್ಯಕ್ತಿಗಳು ಒತ್ತಡವಿಲ್ಲದ ವಾತಾವರಣದಲ್ಲಿ ಹೆಚ್ಚು ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಸುಲಭ ಎಂದು ತಜ್ಞರು ನಂಬುತ್ತಾರೆ.


ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಫ್ರೀ ಎಂಟರ್ಟೈನ್ಮೆಂಟ್ ಕೊಟ್ಟ ಹುಡುಗಿ! ಜನ ಖುಷಿ ಪಡಲಿಲ್ಲ


ಆದ್ದರಿಂದ, ಶಿಶುವಿಹಾರ, ಶಾಲೆ ಮತ್ತು ಕಾಲೇಜುಗಳು ಸಮಾನ ಮನಸ್ಕರನ್ನು ಭೇಟಿಯಾಗಲು ಅದ್ಭುತ ಸ್ಥಳಗಳಾಗಿವೆ, ಅವರು ನಿಕಟ ಸಂಗಾತಿಗಳಾಗುತ್ತಾರೆ. ಮನಃಶಾಸ್ತ್ರಜ್ಞರು, ಕೆಲಸದ ಸ್ಥಳಗಳು ನಿಮ್ಮನ್ನು ದುರ್ಬಲಗೊಳಿಸಲು ಮತ್ತು ಹೆಚ್ಚಿನ ಕೆಲಸದ ಒತ್ತಡದಿಂದಾಗಿ ಸ್ನೇಹಿತರನ್ನು ಮಾಡಿಕೊಳ್ಳಲು ಸೂಕ್ತವಾದ ಸ್ಥಳಗಳಲ್ಲ ಎಂದು ವರದಿ ಮಾಡುತ್ತಾರೆ.


ಇದಲ್ಲದೆ, ಹೆಚ್ಚಿನ ಜನರು ಕಚೇರಿಯಲ್ಲಿ ಹೆಚ್ಚಿನ ಮಾನ್ಯತೆ ಮತ್ತು ಯಶಸ್ಸಿಗಾಗಿ ತಮ್ಮ ಸಹೋದ್ಯೋಗಿಗಳೊಂದಿಗೆ ಸ್ಪರ್ಧಿಸುತ್ತಾರೆ, ಇದು ಅವರ ಮಧ್ಯೆ ಒಂದು ಶಾಶ್ವತವಾದ ಬಾಂಧವ್ಯವನ್ನು ನಿರ್ಮಿಸುವ ಸಾಧ್ಯತೆಯನ್ನು ತೀರಾ ಕಡಿಮೆ ಮಾಡುತ್ತದೆ.


ಚಿಕ್ಕ ಮಕ್ಕಳಿಗಿಂತಲೂ ಹೆಚ್ಚು ಸ್ನೇಹಿತರನ್ನು ಬಿಡುತ್ತಾರೆ ಈ ವಯಸ್ಕರು
ನೀವು ಹದಿಹರೆಯದವರು ಮತ್ತು ಯುವ ವಯಸ್ಕರು ಆಗಿದ್ದರೆ ಆಪ್ತ ಸ್ನೇಹಿತರ ದೊಡ್ಡ ಗುಂಪನ್ನು ಹೊಂದಿರಬಹುದು ಅಥವಾ ನಂಬುವ ಬೆರಳೆಣಿಕೆಯಷ್ಟು ಉತ್ತಮ ಸ್ನೇಹಿತರನ್ನು ಹೊಂದಿರಬಹುದು. ಆದರೆ ಸಮಯ ಕಳೆದಂತೆ ತಮ್ಮ 20ರ ವಯಸ್ಸನ್ನು ಪ್ರವೇಶಿಸುತ್ತಿದ್ದಂತೆ ಜನರು ತಮ್ಮ ಸ್ನೇಹಿತರು ನಿಜವಾಗಿಯೂ ತಮ್ಮ ಜೀವನಕ್ಕೆ ಮೌಲ್ಯವನ್ನು ಸೇರಿಸುತ್ತಿದ್ದಾರೆಯೇ ಎಂದು ತಮ್ಮನ್ನು ತಾವು ಕೇಳಿಕೊಳ್ಳುತ್ತಾರೆ.


ಹೀಗೆ ನೀವು ನಿಮ್ಮ ಸ್ನೇಹಿತರ ವಲಯವನ್ನು ಕಡಿಮೆ ಮಾಡಿಕೊಳ್ಳುತ್ತೀರಿ ಮತ್ತು ಕೆಲವೊಮ್ಮೆ ನಂಬಲರ್ಹವಲ್ಲದ ಪರಿಚಯಸ್ಥರಾಗಿ ಕೆಲವು ಸ್ನೇಹಿತರನ್ನು ಇರಿಸಿಕೊಳ್ಳುವ ಸಮಯ ಪ್ರಾರಂಭವಾಗುತ್ತದೆ.


ನೀವು ಕೆಟ್ಟ ಜನರನ್ನು ದೂರವಿಡುತ್ತೀರಿ
ನಿಮ್ಮ 30ರ ವಯಸ್ಸಿನಲ್ಲಿ ನಿಮಗೆ ನಿಮ್ಮ ಜೀವನದಲ್ಲಿ ಸ್ಪರ್ಧಾತ್ಮಕ ಭಾವನೆಯನ್ನು ಉಂಟು ಮಾಡುವ ಕೆಲವು ಜನರನ್ನು ನೀವು ದೂರವಿಡಲು ಶುರು ಮಾಡುತ್ತೀರಿ. ಇದಕ್ಕೆ ಮುಖ್ಯ ಕಾರಣವೆಂದರೆ ನೀವು ನಂತರದ ಜೀವನದಲ್ಲಿ ಹೆಚ್ಚಿನ ಸ್ವ-ಮೌಲ್ಯದ ಪ್ರಜ್ಞೆಯನ್ನು ಹೊಂದಿರುತ್ತೀರಿ ಮತ್ತು ಆದ್ದರಿಂದ, ಜನರು ನಿಮ್ಮ ಲಾಭವನ್ನು ಪಡೆಯುತ್ತಿದ್ದಾರೆ ಅಂತ ತಿಳಿದರೆ ಸಾಕು, ನೀವು ಅವರನ್ನು ದೂರವಿಡಲು ಶುರು ಮಾಡುತ್ತೀರಿ. ಇದು ನಿಮ್ಮ ಸ್ನೇಹಿತರ ಪಟ್ಟಿಯನ್ನು ಚಿಕ್ಕದಾಗಿಸುತ್ತದೆ.


ಇದನ್ನೂ ಓದಿ: Old Couple: ಇದು ಚಾಕಲೇಟ್ ಲವ್ ಅಲ್ಲ! ಈ ಪ್ರೀತಿಗೆ ಎಂದೂ ಕೊನೆಯಿಲ್ಲ, ವೃದ್ಧ ದಂಪತಿ ವಿಡಿಯೋ ವೈರಲ್


ಆದ್ದರಿಂದ, ಸಿದ್ಧಾಂತವೆಂದರೆ, ನಿಮ್ಮ 30 ಮತ್ತು 40ರ ವಯಸ್ಸಿನಲ್ಲಿ ನೀವು ನಿಮಗೆ ಅತ್ಯಂತ ಮುಖ್ಯವಾದವರು ಯಾರು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ ಮತ್ತು ಅವರನ್ನು ಹತ್ತಿರ ಇರಿಸಿಕೊಳ್ಳಲು ಮತ್ತು ಅವರನ್ನು ಮೌಲ್ಯಯುತವೆಂದು ಭಾವಿಸುವಂತೆ ಮಾಡುವಲ್ಲಿ ನಿಮ್ಮ ಪ್ರಯತ್ನಗಳನ್ನು ಮಾಡುತ್ತೀರಿ. ನಿಮ್ಮ ಜೀವನದಲ್ಲಿ ನೀವು ಕಡಿಮೆ ಜನರನ್ನು ಹೊಂದಿದ್ದರೂ, ಅವರು ಯಾವುದೇ ಪರಿಸ್ಥಿತಿಯಲ್ಲಿ ನೀವು ನಂಬಬಹುದಾದ ವ್ಯಕ್ತಿಗಳಾಗಿರಬೇಕು ಅಷ್ಟೇ ಎಂದು ಹೇಳಬಹುದು.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು