Hair Fall Problem: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

ಕೆಲವೊಮ್ಮೆ ಎಷ್ಟೇ ಆರೈಕೆ ಮಾಡಿದ ನಂತರವೂ ಕೂದಲ ತುದಿ ಒಡೆಯುತ್ತವೆ. ಮತ್ತು ಕೂದಲು ಒಣಗಲು ಪ್ರಾರಂಭಿಸುತ್ತದೆ. ಅಂತಹ ಸ್ಥಿತಿಯಲ್ಲಿ ಕಾಸ್ಮೆಟಿಕ್ ಉತ್ಪನ್ನಗಳು ಹೆಚ್ಚು ಕೆಲಸ ಮಾಡಲ್ಲ. ಕಾಸ್ಮೆಟಿಕ್ ಉತ್ಪನ್ನಗಳು ಸ್ವಲ್ಪ ಸಮಯದವರೆಗೆ ಕೆಲಸ ಮಾಡುತ್ತವೆ. ಮತ್ತು ನಂತರ ಅಡ್ಡ ಪರಿಣಾಮ ಕೂದಲ ಮೇಲೆ ಕಾಣಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ (Hair Fall Problem) ಹೆಚ್ಚುತ್ತಿದೆ. ಅದೆಷ್ಟೇ ಕೂದಲ ಆರೈಕೆ ಮಾಡಿದರೂ ಸಹ ಕೂದಲು ಉದುರುವ ಸಮಸ್ಯೆ ಮಾತ್ರ ಕಡಿಮೆ ಆಗ್ತಿಲ್ಲ. ಜೊತೆಗೆ ತಲೆಯಲ್ಲಿ (Head) ಹೊಟ್ಟಿನ ಸಮಸ್ಯೆ, ಬಿಳಿ ಕೂದಲು (White Hair), ತೆಳುವಾದ ಕೂದಲು ಹೀಗೆ ಅನೇಕ ಸಮಸ್ಯೆಗಳನ್ನು ಜನರು ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸುತ್ತಲೇ ಇರುತ್ತಾರೆ. ಇದಕ್ಕೆಲ್ಲಾ ನಾವು ತಿನ್ನುವ ಆಹಾರ ಮತ್ತು ನಮ್ಮ ಜೀವನಶೈಲಿ ಮತ್ತು ಪರಿಸರದ ಕೆಲವು ಅಂಶಗಳು ಮುಖ್ಯ ಮತ್ತು ಪ್ರಬಲ ಕಾರಣಗಳಾಗಿವೆ. ಅದರಲ್ಲೂ ಬದಲಾಗುತ್ತಿರುವ ಋತುಮಾನದ ಜೊತೆಗೆ ಕೂದಲಿನಲ್ಲಿ ಹಲವು ತರಹದ ಸಮಸ್ಯೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ಕೆಲವೊಮ್ಮೆ ಕೂದಲು ವಿನಾಕಾರಣ ಉದುರುತ್ತವೆ.

  ಆರೈಕೆ ನಂತರವೂ ಕೂದಲ ಸಮಸ್ಯೆ

  ಕೆಲವೊಮ್ಮೆ ಎಷ್ಟೇ ಆರೈಕೆ ಮಾಡಿದ ನಂತರವೂ ಕೂದಲ ತುದಿ ಒಡೆಯುತ್ತವೆ. ಮತ್ತು ಕೆಲವೊಮ್ಮೆ ಕೂದಲು ಒಣಗಲು ಪ್ರಾರಂಭಿಸುತ್ತದೆ. ಅಂತಹ ಸ್ಥಿತಿಯಲ್ಲಿ ಕಾಸ್ಮೆಟಿಕ್ ಉತ್ಪನ್ನಗಳು ಹೆಚ್ಚು ಕೆಲಸ ಮಾಡಲ್ಲ. ಕಾಸ್ಮೆಟಿಕ್ ಉತ್ಪನ್ನಗಳು ಸ್ವಲ್ಪ ಸಮಯದವರೆಗೆ ಕೆಲಸ ಮಾಡುತ್ತವೆ. ಮತ್ತು ನಂತರ ಅವುಗಳ ಅಡ್ಡ ಪರಿಣಾಮಗಳು ಕೂದಲ ಮೇಲೆ ಕಾಣಿಸಲು ಶುರು ಆಗುತ್ತದೆ.

  ಇಂತಹ ವೇಳೆ ಮನೆಮದ್ದುಗಳು ನಿಮಗೆ ಸಾಕಷ್ಟು ಉತ್ತಮ ಪರಿಣಾಮಕಾರಿ ಪರಿಣಾಮ ನೀಡಲು ಮಾತ್ರ ಸಾಧ್ಯವಾಗಿವೆ. ಮನೆಮ್ದುಗಳು ಕೂದಲಿನ ವಿನ್ಯಾಸ ಹಾಗೂ ಆರೋಗ್ಯ ಸುಧಾರಿಸುವುದರ ಜೊತೆಗೆ ಆಂತರಿಕವಾಗಿ ಕೂದಲ ಪೋಷಣೆ ಮಾಡುತ್ತವೆ.

  ಇದನ್ನೂ ಓದಿ: ವಾರವಾದ್ರೂ ಅತಿಸಾರ ಕಡಿಮೆ ಆಗ್ತಿಲ್ಲ ಅಂದ್ರೆ ಅದು ಅಪಾಯದ ಸೂಚನೆ

  ಕೂದಲ ಸಮಸ್ಯೆಗೆ ಹಲೀಂ ಬೀಜಗಳ ಮನೆಮದ್ದು ಬಳಕೆ

  ಮಹಿಳೆಯೊಬ್ಬರು ತಮ್ಮ ಕೂದಲ ಸಮಸ್ಯೆ ಮತ್ತು ಅವರು ಅದಕ್ಕೆ ಪರಿಹಾರ ಕಂಡುಕೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ ಕೂದಲಿಗೆ ಹಲವು ರೀತಿ ಸಮಸ್ಯೆ ಎದುರಿಸುತ್ತಿದ್ದೆ. ಶುಷ್ಕತೆ ಜೊತೆಗೆ ಕೂದಲು ಉದುರುವಿಕೆ ಪ್ರಾರಂಭವಾಯಿತು. ಸೌಂದರ್ಯವರ್ಧಕ ಉತ್ಪನ್ನಗಳು ಇತ್ಯಾದಿ ತ್ಯಜಿಸಿ, ಮನೆಮದ್ದು ಶುರು ಮಾಡಿದೆ ಎಂದಿದ್ದಾರೆ.

  ಇವು ಹಲೀಮ್ ಅಂದರೆ ಗಾರ್ಡನ್ ಕ್ರೆಸ್ ಬೀಜಗಳು. ಕೆಲವು ದಿನಗಳ ಕಾಲ ತಾಯಿಯ ಸಲಹೆಯಂತೆ ಹಲೀಂ ಕಾಳುಗಳ ಲಡ್ಡೂ ತಿಂದೆ. ಇದು ನನ್ನ ಕೂದಲಿಗೆ ಒಳಗಿನಿಂದ ಪೋಷಣೆ ನೀಡಿತು. ಮತ್ತು ನನ್ನ ಕೂದಲು ಬಲಗೊಳ್ಳಲು ಪ್ರಾರಂಭಿಸಿತು ಎಂದಿದ್ದಾರೆ.

  ತಜ್ಞರ ಪ್ರಕಾರ ಕೂದಲಿಗೆ ಹಲೀಂ ಹೇಗೆ ಪ್ರಯೋಜನಕಾರಿ ಆಗಿದೆ?

  ಸೆಲೆಬ್ರಿಟಿ ಪೌಷ್ಟಿಕತಜ್ಞ ರುಜುತಾ ದಿವೇಕರ್ ಹೇಳುವ ಪ್ರಕಾರ, ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಹಲೀಮ್ ಅಂದರೆ ಆಲಿವ್ ಸೀಡ್ಸ್ ಕೂದಲಿಗೆ ಹೇಗೆ ಪ್ರಯೋಜನಕಾರಿ ಎಂದು ಹೇಳಿದ್ದಾರೆ. ಹಲೀಮ್ ಬೀಜಗಳು ಕ್ಯಾನ್ಸರ್ ರೋಗಿಗಳಲ್ಲಿ ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

  ಹಲೀಮ್ ಬೀಜಗಳ ಪ್ರಯೋಜನ ತಿಳಿಯಿರಿ

  IntechOpen ಪ್ರಕಟಿಸಿದ ಅಡ್ವಾನ್ಸ್ ಇನ್ ಸೀಡ್ ಬಯಾಲಜಿಯಲ್ಲಿನ ಅಧ್ಯಯನದ ಪ್ರಕಾರ, ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಲೀಮ್ ಬೀಜಗಳು ನಿಮ್ಮ ಕೂದಲು ಉದುರುವಿಕೆ ಸಮಸ್ಯೆ ತಡೆಯುವಲ್ಲಿ ಪರಿಣಾಮಕಾರಿ ಆಗಿದೆ. ಇದರ ಗುಣಗಳು ಆರೋಗ್ಯ ಸಂಬಂಧಿ ಸಮಸ್ಯೆ ದೂರ ಮಾಡುತ್ತದೆ.

  ಹಲೀಮ್ ಬೀಜಗಳು ಖನಿಜಗಳು, ವಿಟಮಿನ್ ಎ, ವಿಟಮಿನ್ ಇ, ಫೋಲಿಕ್ ಆಮ್ಲ, ಪ್ರೋಟೀನ್, ಕಬ್ಬಿಣ, ಫೋಲೇಟ್, ಕ್ಯಾಲ್ಸಿಯಂ, ಫಾಸ್ಫರಸ್, ಮೆಗ್ನೀಸಿಯಮ್ ಮತ್ತು ಫೈಬರ್‌ಗಳಂತಹ ಅನೇಕ ಪ್ರಮುಖ ಪೋಷಕಾಂಶಗಳ ಉತ್ತಮ ಮೂಲದಿಂದ ಕೂಡಿವೆ.

  ಹಲೀಮ್ ಬೀಜಗಳು ಕೂದಲು ಜೊತೆಗೆ ಚರ್ಮ ಮತ್ತು ಆರೋಗ್ಯಕ್ಕೂ ಪ್ರಯೋಜನ ನೀಡುತ್ತವೆ. ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆ ತಡೆಯುವಲ್ಲಿ ಇವುಗಳು ಸಹಕಾರಿ ಆಗಿವೆ.

  ಇದನ್ನೂ ಓದಿ: ಕೊಬ್ಬಿನಾಂಶ ಇದ್ದರೂ ತೂಕ ಇಳಿಸುತ್ತೆ ಈ ಆಹಾರ ಪದಾರ್ಥಗಳು!

  ಹಲೀಂ ಬೀಜಗಳ ಸೇವನೆ ಹೇಗೆ?

  ರುಜುತಾ ಪ್ರಕಾರ, ನೀವು ಹಲೀಂ ಬೀಜಗಳನ್ನು ರಾತ್ರಿಯಿಡೀ ನೆನೆಸಿಡಿ ಮತ್ತು ಹಾಲಿನಲ್ಲಿ ಬೆರೆಸಿ ಮತ್ತು ರಾತ್ರಿ ಮಲಗುವ ಮೊದಲು ಸೇವಿಸಿ. ನಿಮ್ಮ ಆಹಾರದಲ್ಲಿ ಅವುಗಳನ್ನು ಸೇರಿಸಲು, ಹಲೀಮ್ ಬೀಜದ ಜೊತೆ ತುಪ್ಪ, ತೆಂಗಿನಕಾಯಿ ಮತ್ತು ಬೆಲ್ಲ ಸೇರಿಸಿ. ಸಣ್ಣ ಲಡ್ಡೂ ತಯಾರಿಸಿ. ಮತ್ತು ಪ್ರತಿದಿನ ಒಂದನ್ನು ಸೇವಿಸಿ.
  Published by:renukadariyannavar
  First published: