Ramadan ಹಬ್ಬದ ನಂತರ ನೀವು ನಿಮ್ಮ ಸಾಮಾನ್ಯ ಆಹಾರ ಕ್ರಮಕ್ಕೆ ಮರಳುವುದು ಹೇಗೆ..?

ಆರೋಗ್ಯಕರ ಉಪಾಹಾರವನ್ನು ಸೇವಿಸಿ, ಸಾಕಷ್ಟು ನಾರಿನಂಶವನ್ನು ಪಡೆಯಲು ತರಕಾರಿಗಳು, ಕಚ್ಚಾ ಸಲಾಡ್‌ಗಳು ಮತ್ತು ಸಂಪೂರ್ಣ ಧಾನ್ಯಗಳೊಂದಿಗೆ ನಿಮ್ಮ ಸಂಜೆಯ ಊಟವನ್ನು ಹಗುರವಾಗಿರಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ರಂಜಾನ್ (Ramadan) ಸಮಯದಲ್ಲಿ 30 ದಿನಗಳ ಉಪವಾಸದ ನಂತರ ಈದ್-ಅಲ್-ಫಿತರ್ (Eid ul-Fitr) ಆಚರಣೆಗಳು ಬರುತ್ತದೆ, ಇದು ಐಷಾರಾಮಿ ಆಹಾರ ಔತಣಗಳಲ್ಲಿ ಕುಟುಂಬಗಳು ಮತ್ತು ಸ್ನೇಹಿತರನ್ನು ಒಟ್ಟುಗೂಡಿಸುತ್ತದೆ. ಆದರೂ, ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ರಂಜಾನ್ ನಂತರ ಸಾಮಾನ್ಯ ಆಹಾರಕ್ಕೆ ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಪೌಷ್ಟಿಕ ತಜ್ಞರು ಅವರನ್ನು ಒತ್ತಾಯಿಸಿದರು.

"ಆಹಾರವು ನಮ್ಮೆಲ್ಲರ ಜೀವನದ ಬಹು ಮುಖ್ಯವಾದ ಅಂಶವಾಗಿರುವುದರಿಂದ, ನಾವು ದೈನಂದಿನ ಜೀವನದಲ್ಲಿ ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸುವುದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ದೇಹಕ್ಕೆ ಯಾವ ರೀತಿಯ ಆಹಾರ ಕ್ರಮವು ಸರಿ ಹೊಂದುತ್ತದೆಯೋ ಹಾಗೆ ಅಭ್ಯಾಸ ಮಾಡಿಕೊಳ್ಳಿರಿ" ಎಂದು ತುಂಬೆ ಆಸ್ಪತ್ರೆಯ ಕ್ಲಿನಿಕಲ್ ಡಯಟಿಷಿಯನ್ ಜವೇರಿಯಾ ಖುರೇಷಿ ಅವರು ಹೇಳಿದರು.

ರಂಜಾನ್ ತಿಂಗಳ ಆಹಾರ ಕ್ರಮದಿಂದ ಮತ್ತೆ ತಮ್ಮ ಮೊದಲಿನ ಸಾಮಾನ್ಯವಾದ ಆಹಾರ ಕ್ರಮಕ್ಕೆ ತಮ್ಮ ದೇಹವನ್ನು ಅಭ್ಯಾಸ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಇದು ನಮ್ಮ ನಿದ್ರೆಯ ಕ್ರಮ, ಪೌಷ್ಟಿಕ ಆಹಾರಗಳ ಸೇವನೆ ಮತ್ತು ದೇಹವನ್ನು ಹೈಡ್ರೇಟ್ ಮಾಡಿಕೊಳ್ಳುವುದರ ಮೇಲೆ ಅನೇಕ ಪರಿಣಾಮಗಳು ಬೀರುತ್ತವೆ.

ರಂಜಾನ್ ನಂತರ ಈ ಸಲಹೆಗಳನ್ನು ಅನುಸರಿಸಿ:

 ಬೆಳಗಿನ ಉಪಾಹಾರವನ್ನು ಬಿಡಬೇಡಿ

ಬೆಳಗ್ಗಿನ ಉಪಾಹಾರವಿಲ್ಲದೆ ಒಂದು ತಿಂಗಳು ಕಳೆದ ನಂತರ, ಮತ್ತೆ ಬೆಳಗ್ಗೆ ನೀವು ಉಪಾಹಾರ ತಿನ್ನಲು ಪ್ರಾರಂಭಿಸಿದರೆ ದೇಹಕ್ಕೆ ಅದಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು. ಆದ್ದರಿಂದ, ರಂಜಾನ್‌ ಇಫ್ತಾರ್ ಸಮಯದಲ್ಲಿ ನೀವು ಮಾಡಿದ್ದನ್ನು ಪುನರಾವರ್ತಿಸುವ ಮೂಲಕ ಪ್ರಾರಂಭಿಸಿ. ಮಿಲ್ಕ್ ಶೇಕ್‌ಗಳು ಮತ್ತು ಸ್ಮೂಥಿಗಳೊಂದಿಗೆ ಖರ್ಜೂರವನ್ನು ಸೇವಿಸಿ. ಅಧಿಕ ಪ್ರೋಟೀನ್ ಇರುವ ಆಹಾರ ಅಥವಾ ಹಣ್ಣುಗಳನ್ನು ಸೇವಿಸಿ. ನೀವು ವಿಭಿನ್ನ ಆಹಾರ ವರ್ಗದ ಆಯ್ಕೆಗಳನ್ನು ಪ್ರಯತ್ನಿಸಬಹುದು, ಆದರೆ ಉಪಾಹಾರವನ್ನು ಬಿಡಬೇಡಿ.

ಸಣ್ಣ ಪೌಷ್ಠಿಕ ಆಹಾರವನ್ನು ಸೇವಿಸಿ

ನಮ್ಮ ಚಯಾಪಚಯವು ಆಹಾರ ಪದ್ಧತಿಗಳು ಮತ್ತು ನಮ್ಮ ಆಹಾರ ಸೇವನೆಯ ಸಮಯದೊಂದಿಗೆ ಬದಲಾಗುತ್ತದೆ. ರಂಜಾನ್ ನಂತರದಲ್ಲಿ ಅತ್ಯಂತ ಪ್ರಮುಖ ಅಂಶವೆಂದರೆ ಸರಿಯಾದ ನಿಯಮಿತ ಊಟದ ಸಮಯವನ್ನು ನಿಗದಿಪಡಿಸುವ ಮೂಲಕ ಚಯಾಪಚಯವನ್ನು ಪುನಃಸ್ಥಾಪಿಸುವ ಸಾಮರ್ಥ್ಯವಾಗಿದೆ ಎಂದು ಹೇಳಬಹುದು.

ಆರೋಗ್ಯಕರ ಉಪಾಹಾರವನ್ನು ಸೇವಿಸಿ, ಸಾಕಷ್ಟು ನಾರಿನಂಶವನ್ನು ಪಡೆಯಲು ತರಕಾರಿಗಳು, ಕಚ್ಚಾ ಸಲಾಡ್‌ಗಳು ಮತ್ತು ಸಂಪೂರ್ಣ ಧಾನ್ಯಗಳೊಂದಿಗೆ ನಿಮ್ಮ ಸಂಜೆಯ ಊಟವನ್ನು ಹಗುರವಾಗಿರಿಸಿ. ನೀವು ತೆಳ್ಳಗಿನ, ಸಂಸ್ಕರಿಸದ ಪ್ರೋಟೀನ್ ಅನ್ನು ಸಹ ಸೇವಿಸಬಹುದು.

ಇದನ್ನು ಓದಿ: ಹಬ್ಬದಂದು ಚೆನ್ನಾಗಿ ಕಾಣಬೇಕಾ? ಹಾಗಿದ್ರೆ 6 ಸರಳ ಮೆಹೆಂದಿ ವಿನ್ಯಾಸಗಳು ಇಲ್ಲಿವೆ

ಕಾಟೇಜ್ ಚೀಸ್ ಮತ್ತು ಮಜ್ಜಿಗೆ ನಿಮ್ಮ ದೈನಂದಿನ ಆಹಾರದ ಭಾಗವಾಗಿರಬೇಕು, ಏಕೆಂದರೆ ಇದು ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಸಹಾಯ ಮಾಡುವುದು ಮಾತ್ರವಲ್ಲದೆ, ಈ ಬಿಸಿ ಹವಾಮಾನದಲ್ಲಿ ನಿಮ್ಮನ್ನು ತಂಪಾಗಿಡಲು ಸಹಾಯ ಮಾಡುತ್ತದೆ.

ನಿಮ್ಮ ಊಟವನ್ನು ಬೇಗನೆ ಮುಗಿಸಿ

ರಂಜಾನ್ ಸಮಯದಲ್ಲಿ ಎಲ್ಲವನ್ನೂ ರಾತ್ರಿಯ ಸಮಯದಲ್ಲಿ ತಿನ್ನಲಾಗುತ್ತದೆ, ಆದ್ದರಿಂದ ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಮರಳಲು ನಿಮ್ಮ ರಾತ್ರಿ ಹೊತ್ತಿನ ಆಹಾರ ಸೇವನೆಯನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಇದನ್ನು ಓದಿ: ರಂಜಾನ್ ವೇಳೆ ಯಾವ ಅಡುಗೆ ಮಾಡಬೇಕೆಂದು ಯೋಚನೆಯೇ? ಇಲ್ಲಿದೆ ವಿವಿಧ ಭಕ್ಷ್ಯಗಳ ಪಾಕವಿಧಾನ

ತರಕಾರಿಗಳು ಮತ್ತು ಸಲಾಡ್‌ಗಳಂತಹ ಪೌಷ್ಠಿಕ ಆಹಾರಗಳ ಸೇವನೆಯನ್ನು ಹೆಚ್ಚಿಸಿ, ಅವು ದೇಹದ ಆರೋಗ್ಯಕ್ಕೆ ಒಳ್ಳೆಯದು ಮತ್ತು ದೇಹದ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಲು ತ್ವರಿತ ವಿಧಾನಗಳಾಗಿವೆ.

ಸಿಹಿ ತಿಂಡಿಗಳನ್ನು ಮಿತವಾಗಿ ಸೇವಿಸಿರಿ

ಈದ್ ದಿನದಂದು, ಮಿತವಾಗಿ ಸಿಹಿ ತಿಂಡಿಗಳನ್ನು ಸೇವಿಸುವುದರ ಮೂಲಕ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವಂತೆ ನೋಡಿಕೊಳ್ಳಿರಿ.

ಗಮನವಿಟ್ಟು ತಿನ್ನುವುದು ಇಲ್ಲಿ ಒಂದು ಉತ್ತಮವಾದ ತಂತ್ರವಾಗಿದೆ ಎಂದು ಹೇಳಬಹುದು. ಆದರೂ, ನಿಮ್ಮ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು ತಂಪು ಪಾನೀಯಗಳು ಮತ್ತು ಹಣ್ಣಿನ ಜ್ಯೂಸ್‌ಗಳನ್ನು ಕುಡಿಯಿರಿ.

ಈ ಆಹಾರಗಳನ್ನು ಸೇವಿಸಲೇಬೇಡಿ

ಈದ್ ಸಮಯದಲ್ಲಿ, ಕರಿದ ಆಹಾರಗಳು, ಫಾಸ್ಟ್ ಫುಡ್‌, ಜಂಕ್ ಫುಡ್‌, ಅಥವಾ ಜಿಡ್ಡಿನ ಮತ್ತು ಮಸಾಲೆಯುಕ್ತ ಆಹಾರಗಳನ್ನು ಸೇವಿಸಬೇಡಿ.

ಆದರ್ಶಪ್ರಾಯವಾಗಿ, ಇದನ್ನು ವರ್ಷವಿಡೀ ಅನುಸರಿಸಬೇಕು, ಆದರೆ ಉಪವಾಸದ ತಿಂಗಳ ನಂತರ ಇದು ವಿಶೇಷವಾಗಿ ಮುಖ್ಯವಾಗಿದೆ, ಏಕೆಂದರೆ ನಿಮ್ಮ ದೇಹವು ಅನಿಲ, ಆಮ್ಲೀಯತೆ ಮತ್ತು ಅಜೀರ್ಣವನ್ನು ಅನುಭವಿಸುವ ಸಾಧ್ಯತೆಯಿದೆ. ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ.

ಈದ್ ಸಮಯದಲ್ಲಿ ಮಾಡಬೇಕಾದದ್ದು:

ಹೊಟ್ಟೆ ಭಾರ ಆಗುವುದನ್ನು ತಪ್ಪಿಸಲು ಒಂದು ಸಮಯದಲ್ಲಿ ಊಟ ಅಥವಾ ತಿಂಡಿಯನ್ನು ಸೇರಿಸುವ ಮೂಲಕ ಕ್ರಮೇಣ ಸಾಮಾನ್ಯ ಆಹಾರ ಪದ್ಧತಿಗೆ ಮರಳುವುದು.

ಖರ್ಜೂರ, ಅಂಜೂರ ಮತ್ತು ಒಣದ್ರಾಕ್ಷಿಗಳಂತಹ ತಾಜಾ ಒಣಗಿದ ಹಣ್ಣುಗಳಿಂದ ನಿಮ್ಮ ಸಿಹಿ ಬಯಕೆಗಳನ್ನು ಬದಲಿಸಿಕೊಳ್ಳಿರಿ.

ದೈಹಿಕ ಚಟುವಟಿಕೆಯ ಮೂಲಕ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಸಕ್ರಿಯರಾಗಿರಿ.

ವಿವಿಧ ಆಹಾರಗಳನ್ನು ಸಂಯೋಜಿಸುವ ಮೂಲಕ ನಿಮ್ಮ ಆಹಾರವನ್ನು ಸಮತೋಲನಗೊಳಿಸಿ.

ಆರೋಗ್ಯಕರ ಅಡುಗೆ ವಿಧಾನಗಳನ್ನು ಬಳಸಲು ಪ್ರಯತ್ನಿಸಿ ಮತ್ತು ಹೆಚ್ಚು ಸಂಕೀರ್ಣ ಕಾರ್ಬೋಹೈಡ್ರೇಟ್ ಗಳನ್ನು ಸೇವಿಸಿ

ಈದ್ ಸಮಯದಲ್ಲಿ ಇವುಗಳನ್ನು ಮಾಡಲೇಬೇಡಿ:

ಬೆಳಗ್ಗಿನ ಉಪಾಹಾರವನ್ನು ಬಿಟ್ಟು ಬಿಡುವುದು.

ಸಕ್ಕರೆ ಮತ್ತು ಕೊಬ್ಬಿನಂಶವಿರುವ ಆಹಾರಗಳನ್ನು ತಿನ್ನುವುದು.

ಅತಿಯಾದ ಕಾಫಿ ಕುಡಿಯುವುದು.

ಆರೋಗ್ಯಕರ ಆಹಾರಗಳ ಬದಲಿಗೆ ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದು.

ನಿಮ್ಮ ಊಟವನ್ನು ಆಗಾಗ್ಗೆ ಸಣ್ಣ ಊಟವಾಗಿ ವಿಂಗಡಿಸುವ ಬದಲು, ಒಂದೇ ಸಮಯದಲ್ಲಿ ಅತಿಯಾಗಿ ಊಟವನ್ನು ಸೇವಿಸುವುದು.

ರಾತ್ರಿ ಹೊತ್ತು ಆಹಾರ ಸೇವಿಸುವುದು.
Published by:Seema R
First published: