Day Sleeping: ಹಗಲಿನಲ್ಲಿ ಮಲಗುವ ಅಭ್ಯಾಸವಿದ್ರೆ ಇಂದೇ ಬಿಟ್ಟು ಬಿಡಿ; ಇಲ್ಲವಾದ್ರೆ ಈ ಸಮಸ್ಯೆಗಳು ಕಾಡುತ್ತೆ ಎಚ್ಚರ

ಕೆಲವರು ಎಷ್ಟು ನಿದ್ದೆಗೆ ಹೋಗುತ್ತಾರೆಂದರೆ ಸೋಮಾರಿತನದಿಂದಾಗಿ ಡೈನಿಂಗ್ ಟೇಬಲ್ ಮೇಲೆ ಊಟವಾದ ನಂತರ ಸೀದಾ ಎದ್ದು ಬೆಡ್ ಗೆ ಹೋಗಿ ಮಲಗಿ ಬಿಡುತ್ತಾರೆ. ಆದರೆ ಆಯುರ್ವೇದದಲ್ಲಿ ಹಾಗೆ ಮಾಡುವುದನ್ನು ಕಟ್ಟು ನಿಟ್ಟಾಗಿ ತಪ್ಪು ಎಂದು ಪರಿಗಣಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಿನವೂ (Daily) ನೀವು ಹಗಲು (Day) ಮಲಗುವ (Sleeping) ಅಭ್ಯಾಸ (Habit) ರೂಢಿಸಿಕೊಂಡಿದ್ದರೆ ಇಂದೇ ಬದಲಾಯಿಸಿಕೊಳ್ಳಿ (Changes) ಎಂದು ಹೇಳುವುದನ್ನು ಕೇಳಿರಬಹುದು. ಹಗಲು ಮಲಗುವುದರ ಹಿಂದೆ ಸಾಕಷ್ಟು ಕಾರಣ ಮತ್ತು ಪರಿಣಾಮಗಳು ಉಂಟಾಗುತ್ತವೆ. ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಹಗಲು ಮಲಗಬಾರದು ಎಂದು ಸಲಹೆ ನೀಡುತ್ತಾರೆ. ನೀವು ಹಗಲು ಮಲಗಬಾರದು ಎಂಬ ಮಾತನ್ನು ಯಾವುದೋ ಒಂದು ಹಂತದಲ್ಲಿ ಕೇಳಿರಬಹುದು. ಮತ್ತು ಅದನ್ನು ನಿರ್ಲಕ್ಷಿಸಿರಬಹುದು. ಏಕೆಂದರೆ ಮಧ್ಯಾಹ್ನದ ಆಹಾರ ತಿಂದ ನಂತರ ಕಣ್ಣುಗಳು ತಾನಾಗಿಯೇ ಮುಚ್ಚಲು ಪ್ರಾರಂಭಿಸಿ, ನಿದ್ದೆ ಎಳೆಯಲು ಶುರುವಾಗುತ್ತದೆ. ಎಷ್ಟೇ ಕಂಟ್ರೋಲ್ ಮಾಡಿದರೂ ನಿದ್ದೆ ಹೋಗುವುದೇ ಇಲ್ಲ.

    ಊಟವಾದ ನಂತರ ಸೀದಾ ಎದ್ದು ಬೆಡ್ ಗೆ ಹೋಗಿ ಮಲಗುವುದು

    ಕೆಲವರು ಎಷ್ಟು ನಿದ್ದೆಗೆ ಹೋಗುತ್ತಾರೆಂದರೆ ಸೋಮಾರಿತನದಿಂದಾಗಿ ಡೈನಿಂಗ್ ಟೇಬಲ್ ಮೇಲೆ ಊಟವಾದ ನಂತರ ಸೀದಾ ಎದ್ದು ಬೆಡ್ ಗೆ ಹೋಗಿ ಮಲಗಿ ಬಿಡುತ್ತಾರೆ. ಆದರೆ ಆಯುರ್ವೇದದಲ್ಲಿ ಹಾಗೆ ಮಾಡುವುದನ್ನು ಕಟ್ಟು ನಿಟ್ಟಾಗಿ ತಪ್ಪು ಎಂದು ಪರಿಗಣಿಸಲಾಗಿದೆ.

    ಆಯುರ್ವೇದ ತಜ್ಞೆ ಡಾ. ಐಶ್ವರ್ಯಾ ಸಂತೋಷ್ ಸಲಹೆ

    ಯಾಕೆಂದರೆ ಊಟವಾದ ಕೂಡಲೇ ಬೆಡ್ ಮೇಲೆ ಹೋಗಿ ಮಲಗುವುದು ದೇಹದಲ್ಲಿ ಹಲವಾರು ರೀತಿಯ ಕಾಯಿಲೆಗಳು ಹುಟ್ಟಿಕೊಳ್ಳುಲು ಅನುಕೂಲ ಮಾಡಿ ಕೊಡುತ್ತವೆ. ಆಯುರ್ವೇದ ತಜ್ಞೆ ಡಾ. ಐಶ್ವರ್ಯಾ ಸಂತೋಷ್ ಅವರು Instagram ನಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.

    ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!

    ಹಗಲಿನಲ್ಲಿ ಯಾರು ಮಲಗಬೇಕು?

    ಮತ್ತು ಊಟದ ನಂತರ ಮಲಗುವ ಫಲಿತಾಂಶ ಯಾವುದಾಗಿರುತ್ತದೆ. ಅದು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಹಗಲಿನಲ್ಲಿ ಮಲಗಲು ಆಯುರ್ವೇದದಲ್ಲಿ ಕೆಲವು ನಿಯಮಗಳನ್ನು ಮಾಡಲಾಗಿದೆ. ಹಗಲಿನಲ್ಲಿ ಯಾರು ಮಲಗಬೇಕು ಮತ್ತು ಎಷ್ಟು ಗಂಟೆಗಳ ನಂತರ ಮಲಗಬೇಕು ಹಾಗೂ ತಿಂದ ತಕ್ಷಣ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ.

    ದಿನದಲ್ಲಿ ತಿಂದ ನಂತರ ನೀವು ಮಲಗಿದರೆ ಏನಾಗುತ್ತದೆ?

    ತಿಂದ ನಂತರ ಮಲಗಬಾರದು. ಆಯುರ್ವೇದ ತಜ್ಞರು ಹೇಳುವಂತೆ, ನೀವು ಮಧ್ಯಾಹ್ನದ ನಂತರ ಮಲಗಿದಾಗ, ದೇಹದಲ್ಲಿ ಅಸ್ಪಷ್ಟ ಗುಣದ ಪ್ರಮಾಣವು ಹೆಚ್ಚಾಗುತ್ತದೆ. ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸಲು ಇದು ಕಾರಣ.

    ಜೀರ್ಣಕ್ರಿಯೆಯ ಸಮಯದಲ್ಲಿ ಕಫ ದೋಷವು ಸ್ವಾಭಾವಿಕವಾಗಿ ಹೆಚ್ಚುತ್ತದೆ. ಹಾಗಾಗಿ ನಾವು ನಿದ್ರಿಸಿದರೆ, ಅದು ನಾಶವಾಗುತ್ತದೆ. ಮತ್ತು ಅನೇಕ ರೀತಿಯ ಸಮಸ್ಯೆಗಳು ಹೊಟ್ಟೆಯಲ್ಲಿ ಪ್ರಾರಂಭವಾಗುತ್ತವೆ.

    ಹಗಲಿನಲ್ಲಿ ಯಾರು ಮಲಗಬೇಕು?

    ಕೆಲಸ ಮಾಡಿ, ದೈಹಿಕವಾಗಿ ಅಥವಾ ಮಾನಸಿಕವಾಗಿ ದಣಿದಿರುವವರು ಮಾತ್ರ ಹಗಲಿನಲ್ಲಿ ಮಲಗಬೇಕು. ಇದಲ್ಲದೆ, ವಯಸ್ಸಾದವರು, ಮಕ್ಕಳು ಮತ್ತು ಕಡಿಮೆ ತೂಕದ ಜನರು ಹಗಲು ನಿದ್ದೆ ಮಾಡಬಹುದು. ಬೇಸಿಗೆಯಲ್ಲಿ ಮಾತ್ರ ಹಗಲಿನಲ್ಲಿ ಮಲಗಬೇಕು ಎನ್ನುವುದು ತಜ್ಞರ ಮಾತು. ಬೊಜ್ಜು ಇರುವವರು, ಗ್ಯಾಸ್ ಸಮಸ್ಯೆ ಇರುವವರು ಹಗಲು ನಿದ್ದೆ ಮಾಡಬಾರದು.

    ಹಗಲಿನಲ್ಲಿ ನಿದ್ರೆ ಮಾಡಿದರೆ ಏನಾಗುತ್ತದೆ?

    ಹಗಲಿನಲ್ಲಿ ಅನಾರೋಗ್ಯಕರ ನಿದ್ರೆಯಿಂದಾಗಿ ಜನರು ಸಾಮಾನ್ಯವಾಗಿ ದೇಹದಲ್ಲಿ ಕಫದ ಹೆಚ್ಚಳ ಸಮಸ್ಯೆಯಿಂದ ತೊಂದರೆ ಎದುರಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ತಲೆನೋವು, ದೇಹದಲ್ಲಿ ಭಾರ, ದುರ್ಬಲ ಜೀರ್ಣಕ್ರಿಯೆ, ದೀರ್ಘಕಾಲದ ಮೂಗು ಸೋರುವಿಕೆ, ನರಗಳ ಅಡಚಣೆ, ಊತ ಇತ್ಯಾದಿಗಳಿಂದ ಬಳಲುತ್ತಾರೆ.

    ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

    ಊಟದ ನಂತರ ಎಷ್ಟು ಹೊತ್ತು ಮಲಗಬೇಕು?

    ಡಾ. ಐಶ್ವರ್ಯಾ ಪ್ರಕಾರ, ಊಟದ ನಂತರ ಕನಿಷ್ಠ 1 ರಿಂದ 1.5 ಗಂಟೆಗಳ ನಿದ್ದೆ ಮಾಡಬೇಕು. ತಿಂದ ತಕ್ಷಣ 100 ಹೆಜ್ಜೆ ನಡೆಯಬೇಕು. ನಿಮಗೆ ದಣಿವು ಅನಿಸಿದರೆ, ಕುಳಿತೇ ಸ್ವಲ್ಪ ನಿದ್ದೆ ಮಾಡಬಹುದು.
    Published by:renukadariyannavar
    First published: