ತೂಕ ಹೆಚ್ಚಳಕ್ಕೆ (Weight Gain) ಕೆಲವೊಮ್ಮೆ ಮಾನಸಿಕ ಖಿನ್ನತೆ ಕೂಡ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು ಪ್ರೀತಿ (Love), ಪ್ರೇಮದಲ್ಲಿ ಮುಳುಗುತ್ತಾರೆ. ಆದರೆ ಆ ಪ್ರೇಮ, ಪ್ರೀತಿ ತುಂಬಾ ದಿನ ನಡೆಯುವುದಿಲ್ಲ. ಕೆಲವೇ ದಿನಗಳಲ್ಲಿ ಬ್ರೇಕಪ್ (Breakup) ಮಾಡಿಕೊಳ್ತಾರೆ. ಆದರೆ ಒಬ್ಬರು ಸೀರಿಯಸ್ ಆಗಿರುವುದಿಲ್ಲ. ಮತ್ತೊಬ್ಬರು ಸಂಬಂಧವನ್ನು (Relationship) ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿರ್ತಾರೆ. ಮನಸಾರೆ ಪ್ರೀತಿಸಿರುತ್ತಾರೆ. ಹೀಗಿದ್ದಾಗ, ಸಂಗಾತಿಯು ದಿಢೀರ್ ದೂರವಾದಾಗ, ಬ್ರೇಕಪ್ ಮಾಡಿಕೊಂಡಾಗ ಸಾಕಷ್ಟು ನೊಂದುಕೊಳ್ಳುತ್ತಾರೆ. ನೋವು (Pain), ದುಃಖದಲ್ಲಿ ಮುಳುಗಿ ಬಿಡುತ್ತಾರೆ. ಕೆಲವೊಮ್ಮೆ, ಸಿಟ್ಟು ಕೋಪದಲ್ಲಿ ಸಿಕ್ಕಿದ್ದೆಲ್ಲಾ ತಿನ್ನುತ್ತಾರೆ. ತಾನು ಹೇಗಿದ್ದರೇನು ಎಂಬ ಆಲೋಚನೆ ಮನಸ್ಸಲ್ಲಿ ಮೂಡುತ್ತದೆ.
ಬ್ರೇಕಪ್ ನಂತರ ತೂಕ ಹೆಚ್ಚಳದ ಅಪಾಯ
ಬ್ರೇಕಪ್ ಎಂಬುದು ಮನಸ್ಸಿನಲ್ಲಿ ಸಾಕಷ್ಟು ಉದ್ವೇಗ, ನೋವು, ಸಿಟ್ಟು, ಒತ್ತಡ ಉಂಟು ಮಾಡುತ್ತದೆ. ಕೆಲವೊಮ್ಮೆ ಖಿನ್ನತೆಗೂ ದಾರಿ ಮಾಡಿ ಕೊಡುತ್ತದೆ. ಇದು ವ್ಯಕ್ತಿಯನ್ನು ನೋವಿನಾಳಕ್ಕೆ ಹಾಗೂ ಅಸ್ವಸ್ಥತೆಗೆ ದೂಡುತ್ತದೆ.
ಇದರಿಂದಾಗಿ ಹೆಚ್ಚು ತಿನ್ನುವುದು, ಮನೆಯಲ್ಲೇ ಕೂರುವುದು, ಫ್ರೆಂಡ್ಸ್ ಜೊತೆ ಬೆರೆಯದೇ ಇರುವುದು ಮಾಡ್ತಾರೆ. ಇದು ಅವರಲ್ಲಿ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಿ ಬೊಜ್ಜು ಹೆಚ್ಚಿಸುತ್ತದೆ.
ಫಿಟ್ನೆಸ್ ಟ್ರ್ಯಾಕ್ ಮಾಡಿ
ಅನೇಕ ಬಾರಿ ಬ್ರೇಕಪ್ ನಂತರ ಜನರು ಮನೆಯಿಂದ ಹೊರಗೆ ಹೋಗುವುದಿಲ್ಲ. ಎಲ್ಲಿಯೂ ತಿರುಗಾಡುವುದಿಲ್ಲ. ಫಿಟ್ನೆಸ್ ಹಾಗೂ ಹೆಲ್ತ್ ಕಡೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಇದು ಸುಲಭವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಯಾವಾಗಲೋ ಮಲಗುವುದು, ಸದಾ ಚಿಂತೆಯಲ್ಲಿಯೇ ಕಾಲ ಕಳೆಯುವುದು, ಆಲೋಚನೆ ಮಾಡುತ್ತಲೇ ಇರುವುದು, ಯಾವಾಗಲೋ ಊಟ ಮಾಡುವುದು, ಮಧ್ಯಾಹ್ನ 12 ಗಂಟೆಯಾದ್ರೂ ಏಳದೇ ಇರುವುದು, ಆಲಸ್ಯತನ ಇದೆಲ್ಲವೂ ಆರೋಗ್ಯ ಕೆಡಿಸುತ್ತದೆ. ಈ ರೀತಿಯ ಜಡ ಹಾಗೂ ಅನಾರೋಗ್ಯಕರ ಜೀವನಶೈಲಿಯು ವೇಗವಾಗಿ ತೂಕ ಹೆಚ್ಚಿಸುತ್ತದೆ.
ಉದ್ವೇಗದಿಂದ ಪದೇ ಪದೇ ತಿನ್ನುವ ಅಭ್ಯಾಸ
ಉದ್ವೇಗದಿಂದಾಗಿ ಪದೇ ಪದೇ ಚಿಪ್ಸ್ ತಿನ್ನುವುದು, ಪಾನಿಪುರಿ, ಸಮೋಸಾ, ಕರಿದ ಪದಾರ್ಥಗಳು, ಜಂಕ್ ಫುಡ್ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ದೈಹಿಕ ಚಟುವಟಿಕೆಯ ಕೊರತೆ
ಇನ್ನು ಬ್ರೇಕಪ್ ನಂತರ ತುಂಬಾ ಜನರು ಯಾವುದೇ ವಿಷಯದಲ್ಲಿ ಆಸಕ್ತಿ ತೋರಿಸುವುದಿಲ್ಲ. ಬೆಳಗ್ಗೆ ಬೇಗ ಏಳುವುದಿಲ್ಲ. ದಿನಚರಿ ಪಾಲನೆ ಮಾಡಲ್ಲ. ಸರಿಯಾಗಿ ನೀರು ಕುಡಿಯುವುದಿಲ್ಲ. ಅಧಿಕ ಕ್ಯಾಲೋರಿ ಆಹಾರ ಸೇವನೆ ಮತ್ತು ಸದಾ ಮಲಗೇ ಇರುವುದು ತ್ವರಿತವಾಗಿ ತೂಕ ಹೆಚ್ಚಿಸುತ್ತದೆ.
ಅಲ್ಲದೇ ಯಾವುದೇ ರೀತಿಯ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಲ್ಲ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆಟೋಟ, ಮನೆಯಲ್ಲಿ ಕ್ರಿಯಾಶೀಲರಾಗಿರುವುದು, ಮನೆಯ ಕೆಲಸಗಳನ್ನೂ ಮಾಡದೇ ಇರುವುದು ತೂಕ ಹೆಚ್ಚಿಸುತ್ತದೆ.
ಹಾಗಾಗಿ ನಿಮ್ಮ ಫಿಟ್ನೆಸ್ ಬಗ್ಗೆ ಜಾಗ್ರತೆ ವಹಿಸಿ. ಬ್ರೇಕಪ್ ನಂತರವೂ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಶ್ರಮಿಸಿ.
ಆರೋಗ್ಯ ಸಮಸ್ಯೆ ಹೆಚ್ಚಳ
ಇನ್ನು ಬ್ರೇಕಪ್ ನಂತರ ದೈಹಿಕ ಸಮಸ್ಯೆ, ಚಿಂತೆ ಮತ್ತು ಒತ್ತಡ ಇತ್ಯಾದಿ ಉಂಟಾಗುತ್ತದೆ. ಒತ್ತಡದ ಹಾರ್ಮೋನುಗಳು ಹೆಚ್ಚಾಗುತ್ತವೆ. ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಆದ್ಯತೆ ನೀಡಿ. ಒಬ್ಬಂಟಿಯಾಗಿರುವುದಕ್ಕಿಂತ ಹೆಚ್ಚಾಗಿ ಕುಟುಂಬ ಮತ್ತು ಸ್ನೇಹಿತರ ಜೊತೆ ಸಮಯ ಕಳೆಯಿರಿ. ಭವಿಷ್ಯದ ಗುರಿಯತ್ತ ಗಮನ ಕೇಂದ್ರೀಕರಿಸಿ.
ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್ ಕಾಯಿಲೆಯ ಸೂಚನೆಯಂತೆ!
ಧ್ಯಾನ, ಯೋಗ, ಸಂಗೀತ, ವಿಶ್ರಾಂತಿ, ವ್ಯಾಯಾಮ ಮತ್ತು ನಡಿಗೆ ಇತ್ಯಾದಿಗಳನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ. ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ