• Home
 • »
 • News
 • »
 • lifestyle
 • »
 • Weight Loss: ನಲವತ್ತರ ಹರೆಯದ ನಂತರ ತೂಕ ಇಳಿಸುವವರು ಈ ವಿಷಯಗಳನ್ನು ನೆನಪಿಡಿ!

Weight Loss: ನಲವತ್ತರ ಹರೆಯದ ನಂತರ ತೂಕ ಇಳಿಸುವವರು ಈ ವಿಷಯಗಳನ್ನು ನೆನಪಿಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಲವತ್ತರ ಹರೆಯದ ನಂತರ ತೂಕ ಇಳಿಕೆಗೆ ಮುಂದಾಗುತ್ತಿರುವವರು ಮಿತಿಯಲ್ಲಿ ವ್ಯಾಯಾಮ ಮಾಡಬೇಕು ಎಂಬುದಾಗಿ ತಜ್ಞರು ಹೇಳುತ್ತಾರೆ. ದೀರ್ಘ ಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ನಲವತ್ತು ವಯಸ್ಸು ದಾಟಿದ್ದರೆ ನಿರ್ದಿಷ್ಟ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

 • Share this:

  ನಿಯಮಿತ ವ್ಯಾಯಾಮ (Regular Exercise) ಮಾಡುವುದು ಉತ್ತಮ ದೈಹಿಕ ಮತ್ತು ಮಾನಸಿಕ (Physical And Mental) ಆರೋಗ್ಯಕ್ಕೆ (Health) ತುಂಬಾ ಮುಖ್ಯ ಆಗಿದೆ. ದಿನನಿತ್ಯ ತಪ್ಪದೇ ವ್ಯಾಯಾಮ ಮಾಡುವುದು ಒಟ್ಟಾರೆ ಆರೋಗ್ಯ ಮತ್ತು ಫಿಟ್ನೆಸ್ (Fitness) ಸುಧಾರಿಸಲು ಸಹಾಯ ಮಾಡುತ್ತದೆ. ಯಾರೇ ಆಗಲಿ ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಎಷ್ಟು ತೂಕ ನಿಯಂತ್ರಣದಲ್ಲಿ ಇರುತ್ತದೆಯೋ ಅಷ್ಟು ರೋಗಗಳ ಅಪಾಯ ಕಡಿಮೆ ಇರುತ್ತದೆ. ಯಾವಾಗ ತೂಕ ಹೆಚ್ಚುತ್ತಾ ಹೋಗುತ್ತದೆಯೋ ಆಗ ಹಲವು ಕಾಯಿಲೆಗಳು ವ್ಯಕ್ತಿಯನ್ನು ಬಾಧಿಸುತ್ತವೆ. ತೂಕ ಕಳೆದುಕೊಳ್ಳುವುದು ಪ್ರತಿಯೊಬ್ಬರೂ ಫಿಟ್ ಆಗಿರಲು ಸಹಕಾರಿ. ತೂಕ ಇಳಿಕೆ ಮಹಿಳೆಯರಿಗೆ ತುಂಬಾ ಮುಖ್ಯ.


  ನಲವತ್ತರ ಹರೆಯದ ನಂತರ ತೂಕ ಇಳಿಕೆ


  ಅದರಲ್ಲೂ ನಲವತ್ತರ ಹರೆಯದ ನಂತರ ತೂಕ ಇಳಿಕೆಗೆ ಮುಂದಾಗುತ್ತಿರುವವರು ಮಿತಿಯಲ್ಲಿ ವ್ಯಾಯಾಮ ಮಾಡಬೇಕು ಎಂಬುದಾಗಿ ತಜ್ಞರು ಹೇಳುತ್ತಾರೆ. ದೀರ್ಘ ಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ನಲವತ್ತು ವಯಸ್ಸು ದಾಟಿದ್ದರೆ  ನಿರ್ದಿಷ್ಟ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ನಲವತ್ತರ ನಂತರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ತುಂಬಾ ಮುಖ್ಯ.


  ತೂಕ ಇಳಿಸಲು ಮತ್ತು ಟೋನಿಂಗ್ ಮಾಡಲು ಹೆಚ್ಚಿನ ಮಹಿಳೆಯರು ದೇಹ ದಂಡಿಸುತ್ತಾರೆ. ಮನೆ ಕೆಲಸ, ಆಫೀಸ್ ಜೊತೆಗೆ ಫಿಟ್ ಆಗಿರಲು ವ್ಯಾಯಾಮ ಮಾಡುತ್ತಾರೆ. ಪುರುಷರಿಗಿಂತ ಮಹಿಳೆಯರು ಹೆಚ್ಚು ವ್ಯಾಯಾಮ ಮಾಡುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.


  ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


  ವ್ಯಾಯಾಮದಿಂದ ಜೀವನದ ಗುಣಮಟ್ಟ ಸುಧಾರಣೆ  


  ಮಹಿಳೆಯರು ನಲವತ್ತರ ಪ್ರಾಯ ತಲುಪುತ್ತಿದ್ದಂತೆ ಉತ್ತಮ ಆರೋಗ್ಯಕ್ಕೆ ಅಗತ್ಯ ತೂಕ ಹೊಂದುವುದು ಮುಖ್ಯ ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಳ್ತಾರೆ. ವ್ಯಾಯಾಮ ಜೀವನ ಮಟ್ಟದ ಸುಧಾರಣೆ ಮಾಡಲು ಅವಶ್ಯಕ ಎಂಬುದನ್ನು ಅರಿಯತ್ತಾರೆ. ಹೀಗಾಗಿ ಹೆಚ್ಚಿನ ಮಹಿಳೆಯರು ಕಾರ್ಡಿಯೋ, ಜಿಮ್, ವಾಕಿಂಗ್, ಯೋಗ ಮಾಡುವ ಮೂಲಕ ತೂಕ ಇಳಿಕೆ ಮತ್ತು ನಿಯಂತ್ರಿಸುತ್ತಾರೆ.


  ನಲವತ್ತರ ನಂತರ ವ್ಯಾಯಾಮದ ಮಿತಿಯ ಬಗ್ಗೆ ಏಕೆ ಕಾಳಜಿ ವಹಿಸಬೇಕು?


  ಅದಾಗ್ಯೂ ನಲವತ್ತರ ಹರೆಯದ ನಂತರ ತೂಕ ಇಳಿಸುವವರು ವ್ಯಾಯಾಮದ ಮಿತಿಯನ್ನ ಹಾಕಿಕೊಳ್ಳಬೇಕಾಗುತ್ತದೆ. ಅದಕ್ಕೆ ಮೊದಲ ಕಾರಣ ವಯಸ್ಸಿನಿಂದಾಗಿ ಬರುವ ಆರೋಗ್ಯ ತೊಂದರೆ ಮತ್ತು ಮೂಳೆಯ ಆರೋಗ್ಯವಾಗಿದೆ. ಮೂಳೆಯ ಆರೋಗ್ಯಕ್ಕಾಗಿ ತೂಕ ಎತ್ತುವುದನ್ನು ಆದಷ್ಟು ತಪ್ಪಿಸಿ. ಯಾಕಂದ್ರೆ ಇದು ಮೂಳೆ ಮುರಿತ ಸಮಸ್ಯೆ ಉಂಟು ಮಾಡಬಹುದು.


  ತೂಕ ಎತ್ತುವುದು ಯಾವುದೇ ಅಡ್ಡ ಪರಿಣಾಮ ಬೀರಲ್ಲ. ಇದು ಮಧುಮೇಹ ಟೈಪ್ 2 ರೋಗಿಗಳ ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡುತ್ತದೆ. ಆದರೆ ಇದನ್ನು ಮಾಡುವ ಮೊದಲು ನಿಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಫಿಟ್ನೆಸ್ ತಜ್ಞ ದಿನೇಶ್ ಚಾಂಡೆಲ್ ಪ್ರಕಾರ, ಹೃದ್ರೋಗ ಸಮಸ್ಯೆ ಹೊಂದಿದ್ದರೆ, ತೂಕ ಎತ್ತುವ ವ್ಯಾಯಾಮ ಮಾಡಬಾರದು ಎಂದಿದ್ದಾರೆ.


  ಮೂಳೆಗಳ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ವ್ಯಾಯಾಮ ಮಾಡಬೇಕಾಗುತ್ತದೆ. ಕಠಿಣ ವ್ಯಾಯಾಮಗಳು ಮೂಳೆಗಳನ್ನು ದುರ್ಬಲಗೊಳಿಸಬಹುದು. ದೇಹ ಮತ್ತು ಗುರಿಗೆ ಸರಿ ಹೊಂದುವ ತೂಕ ಮಾತ್ರ ಎತ್ತಬೇಕು. ಸ್ನಾಯುಗಳಿಗೆ ಯಾವುದೇ ರೀತಿಯ ಗಾಯಗಳಾಗಿದ್ದರೆ ವ್ಯಾಯಾಮದಿಂದ ದೂರವಿರಿ.


  ಸುಲಭ ಮತ್ತು ಸರಳ ವ್ಯಾಯಾಮ ಮಾಡಿ


  ಕೊರೊನಾದಿಂದ ಚೇತರಿಸಿಕೊಂಡಿದ್ದರೆ ಅಥವಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಕಠಿಣ ವ್ಯಾಯಾಮ ಮಾಡಬೇಡಿ. ಕುರ್ಚಿ ಆಧಾರಿತ ಅಥವಾ ಸ್ಕ್ವಾಟ್‌ಗಳಂತಹ ಸರಳ ವ್ಯಾಯಾಮ ಮಾಡಿ. ನಿಧಾನವಾಗಿ ನಡೆಯಬಹುದು ಅಥವಾ ಸಣ್ಣ ಮನೆಕೆಲಸ ಮಾಡಿ.


  ಉಸಿರಾಟ ವ್ಯಾಯಾಮಕ್ಕೆ ಆದ್ಯತೆ ನೀಡಿ


  ಮನೆಯಲ್ಲಿ ಉಸಿರಾಟದ ವ್ಯಾಯಾಮ ಅಥವಾ ಪ್ರಾಣಾಯಾಮ ಮಾಡಿ. ತೂಕ ಇಳಿಸುವಲ್ಲಿ ಕಪಾಲಭಾತಿ ತುಂಬಾ ಪರಿಣಾಮಕಾರಿ. ಗರ್ಭಿಣಿಯಾಗಿದ್ದರೆ ಅಥವಾ ರಕ್ತದೊತ್ತಡದ ರೋಗಿಯಾಗಿದ್ದರೆ ಕಪಾಲಭಾತಿ ಮಾಡಬೇಡಿ.


  ತೀವ್ರ ತರಹದ ಏರೋಬಿಕ್ ರೂಪ ವ್ಯಾಯಾಮ ಮಾಡಬೇಡಿ


  ಭಾರೀ ತಾಲೀಮು ಮಾಡಿದಾಗ ತೋಳು, ಕಾಲುಗಳು ಮತ್ತು ಸ್ನಾಯು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ತೀವ್ರ ತರಹದ ಏರೋಬಿಕ್ ವ್ಯಾಯಾಮ ತಪ್ಪಿಸಿ. ಫಿಟ್ನೆಸ್ ಮಟ್ಟ ಕಾಪಾಡಲು ಸುಲಭ ವ್ಯಾಯಾಮ ಮಾಡಿ.


  ಇದನ್ನೂ ಓದಿ: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


  ಸ್ಕಿಪ್ಪಿಂಗ್ ಮಾಡುವಾಗ ಎಚ್ಚರಿಕೆ ವಹಿಸಿ


  ಹೃದ್ರೋಗ ತಜ್ಞ ಡಾ. ಅಮಿತ್ ಸಿನ್ಹಾ ಅವರ ಪ್ರಕಾರ, ಸ್ಕಿಪ್ಪಿಂಗ್ ಹೃದಯ ರಕ್ತನಾಳದ ಫಿಟ್‌ ನೆಸ್‌ಗೆ ಒಳ್ಳೆಯದು ಎನ್ನುತ್ತಾರೆ. ಇದು ಇಡೀ ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡುತ್ತದೆ. ನಿಮಗೆ ಮೊಣಕಾಲು ನೋವು ಅಥವಾ ಬೆನ್ನು ನೋವು, ಗಾಯ ಇದ್ದರೆ ಸ್ಕಿಪ್ಪಿಂಗ್ ಮಾಡುವುದು ತಪ್ಪಿಸಿ.

  Published by:renukadariyannavar
  First published: