Sleepy After food: ಊಟ ಆದ ಕೂಡ್ಲೇ ನಿದ್ದೆ ಜೋರು ತೂಗುತ್ತೆ, ಏನು ಮಾಡೋದು? ಇಲ್ಲಿದೆ ಟಿಪ್ಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಗಲಿನಲ್ಲಿ ನಿದ್ದೆ ಬರುವುದು ಮಾತ್ರವಲ್ಲದೇ ಆಹಾರ ತಿಂದ ಕೂಡಲೇ ನಿದ್ದೆ ಬರುತ್ತದೆ. ಇದಕ್ಕೆ ನಿದ್ದೆಯ ಕೊರತೆ ಜೊತೆಗೆ ಒತ್ತಡ ಮತ್ತು ಅತಿಯಾದ ಆಹಾರ ಸೇವನೆಯು ಕಾರಣವಾಗುತ್ತದೆ ಅಂತಾರೆ ವೈದ್ಯರು. ಎಷ್ಟೋ ಜನರಿಗೆ ಬೆಳಗ್ಗೆ ತಿಂಡಿ ತಿಂದ ನಂತರ, ಮಧ್ಯಾಹ್ನದ ಊಟದ ನಂತರ ನಿದ್ದೆ ಬರುತ್ತದೆ.

ಮುಂದೆ ಓದಿ ...
  • Share this:

ನಿದ್ದೆ (Sleep) ಅದರಲ್ಲೂ ಆಳವಾದ ನಿದ್ದೆ ಮಾಡುವುದು ನಿಮ್ಮ ಆರೋಗ್ಯ (Health) ಕಾಪಾಡಲು ತುಂಬಾ ಮುಖ್ಯವಾಗಿ ಬೇಕು. ಹಾಗಾಗಿ ವೈದ್ಯರು ದಿನವೂ ಎಂಟು ಗಂಟೆಗಳ ಆಳವಾದ ನಿದ್ದೆ ಮಾಡುವುದು ಮುಖ್ಯ ಅಂತಾರೆ. ನೀರು, ನಿದ್ದೆ, ಆಹಾರ, ವ್ಯಾಯಾಮ (Exercise) ಈ ಅಂಶಗಳು ನಿಮ್ಮ ದೈನಂದಿನ ಜೀವನಕ್ಕೆ ಮತ್ತು ಸದೃಢ ಆರೋಗ್ಯಕ್ಕೆ ತುಂಬಾ ಮುಖ್ಯ. ಅದಾಗ್ಯೂ ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣವೆಂದರೆ ರಾತ್ರಿ (Night) ಸರಿಯಾಗಿ ನಿದ್ದೆ ಮಾಡದೇ ಇರುವುದು. ತಡರಾತ್ರಿಯವರೆಗೆ ಮೊಬೈಲ್ (Mobile) ಮತ್ತು ಲ್ಯಾಪ್ ಟಾಪ್ ನಲ್ಲಿ ಕಾಲ ಕಳೆಯುವುದು ನಿದ್ರಾಹೀನತೆ ಸಮಸ್ಯೆ ಉಂಟು ಮಾಡುತ್ತದೆ.


ಊಟದ ನಂತರ ನಿದ್ದೆಯ ಮಂಪರು


ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಹೋದರೆ ಅದು ಮಾರನೇ ದಿನ ಹಗಲು ನಿದ್ದೆಗೆ ಪ್ರಚೋದನೆ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾತ್ರಿ ನಿದ್ದೆ ಕೊರತೆಯು ಮಾರನೇ ದಿನದ ಕೆಲಸ ಕಾರ್ಯಗಳಿಗೆ ಕೂಡ ತೊಂದರೆ ಉಂಟು ಮಾಡುತ್ತದೆ.




ಎಷ್ಟೋ ಜನರಿಗೆ ಬೆಳಗ್ಗೆ ತಿಂಡಿ ತಿಂದ ನಂತರ, ಮಧ್ಯಾಹ್ನದ ಊಟದ ನಂತರ ನಿದ್ದೆ ಬರುತ್ತದೆ. ಸಾಕಷ್ಟು ಆಕಳಿಕೆ ಬರುತ್ತದೆ. ಕಣ್ಣುಗಳು ಭಾರವಾಗಿ, ದೇಹದಲ್ಲಿ ಸಾಕಷ್ಟು ಆಯಾಸ ಕಾಣಿಸಿಕೊಳ್ಳುತ್ತದೆ.


ಆಹಾರ ಸೇವಿಸಿದ ನಂತರ ಏಕೆ ನಿದ್ದೆ ಬರುತ್ತದೆ?


ನಿದ್ರೆ ನಮ್ಮ ಆಹಾರ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದೆ. ಉಪಹಾರ ಮತ್ತು ಊಟದಲ್ಲಿ ಏನು ತಿನ್ನುತ್ತೇವೆ ಎಂಬುದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ, ಸಾರ್ವಕಾಲಿಕ ದಣಿವು ಮತ್ತು ಆಲಸ್ಯ ಉಂಟಾಗುತ್ತದೆ.


ಆಹಾರ ತಿಂದ ನಂತರ ನಮ್ಮ ದೇಹವು ದಣಿಯುತ್ತದೆ. ಆಗ ದೇಹದಿಂದ ಸಿರೊಟೋನಿನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಸಿರೊಟೋನಿನ್ ಹಾರ್ಮೊನ್ ನಮ್ಮ ಮನಸ್ಥಿತಿ ಮತ್ತು ನಿದ್ರೆಯ ಚಕ್ರ ನಿಯಂತ್ರಿಸುತ್ತದೆ. ಟ್ರಿಪ್ಟೊಫಾನ್, ಪ್ರೊಟೀನ್ ಭರಿತ ಆಹಾರ ತಿಂದಾಗ ದೇಹದಲ್ಲಿ ಉತ್ಪತ್ತಿಯಾಗುವ ಅಮೈನೋ ಆಮ್ಲ, ಮೆದುಳಿನಲ್ಲಿ ಸಿರೊಟೋನಿನ್ ಹೆಚ್ಚಲು ಕೆಲಸ ಮಾಡುತ್ತದೆ.


ಯಾದೃಚ್ಛಿಕ ಊಟ ತಿಂದರೆ ದೇಹದಲ್ಲಿ ಆಯಾಸ ಉಂಟಾಗುತ್ತದೆ. ವಾಸ್ತವವಾಗಿ, ಬೆಳಗಿನ ಉಪಾಹಾರ ಬಿಟ್ಟ ನಂತರ ನಾವು ನೇರ ಊಟ ಮಾಡಿದರೆ ಮೆದುಳಿಗೆ ರಕ್ತದ ಹರಿವು ನಿಧಾನವಾಗುತ್ತದೆ. ಇದು ಆಲಸ್ಯಕ್ಕೆ ಕಾರಣವಾಗುತ್ತದೆ. ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ ಸಮೃದ್ಧ ಆಹಾರ ತಿನ್ನುವುದರಿಂದ ನಿದ್ರೆಗೆ ಸಹಾಯ ಮಾಡುತ್ತದೆ.


ಸಾಂದರ್ಭಿಕ ಚಿತ್ರ


ಊಟದ ನಂತರದ ನಿದ್ದೆ ಮಂಪರು ತಪ್ಪಿಸುವುದು ಹೇಗೆ?


ಸಾಕಷ್ಟು ನೀರು ಕುಡಿಯಿರಿ


ತಿಂದ ನಂತರ ನಿಮಗೆ ನಿದ್ರೆ ಬರಬಾರದು ಎಂದರೆ ಊಟದ ಅರ್ಧ ಘಂಟೆಯ ನಂತರ ಚೆನ್ನಾಗಿ ನೀರನ್ನು ಕುಡಿಯಿರಿ. ಕೆಲವೊಮ್ಮೆ ದೇಹದಲ್ಲಿ ನೀರಿನ ಕೊರತೆಯು ಆಲಸ್ಯ ಮತ್ತು ನಿದ್ರಾಹೀನತೆ ಸಮಸ್ಯೆ ಉಂಟು ಮಾಡುತ್ತದೆ. ಗುಟುಕು ನೀರು ಕುಡಿಯಿರಿ. ಇದು ನಿದ್ರೆಯನ್ನು ನಿಧಾನವಾಗಿ ಓಡಿಸುತ್ತದೆ.


ವಾಕಿಂಗ್ ಮಾಡಿ


ಮಧ್ಯಾಹ್ನದ ಊಟದಲ್ಲಿ ಭಾರವಾದ ಊಟ ಸೇವಿಸಿದರೆ ನಿದ್ದೆ ಬರುತ್ತದೆ. ತಿಂದ ತಕ್ಷಣ ಸ್ವಲ್ಪ ನಡೆದಾಡಿ. ವಾಕ್ ಮಾಡಿ. 10 ನಿಮಿಷ ನಡೆದಾಡಿ. ಇದು ಆಹಾರ ಜೀರ್ಣಿಸಲು ಸಹಕಾರಿ. ದೇಹದಲ್ಲಿ ಶಕ್ತಿಯ ಮಟ್ಟ ಕಾಪಾಡುತ್ತದೆ.


ರಾತ್ರಿ ಎಂಟು ಗಂಟೆಯ ಆಳವಾದ ನಿದ್ರೆ ಮಾಡಿ


ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡಿ. ಜನರು ದಿನವಿಡೀ ಶಕ್ತಿಯುತವಾಗಿರುತ್ತಾರೆ. ಸುಲಭವಾಗಿ ಪ್ರತಿಯೊಂದು ಕೆಲಸದ ಮೇಲೆ ಆಸಕ್ತಿ ಬರುತ್ತದೆ. ರಕ್ತದ ಹರಿವು ಸಹ ಸರಾಗವಾಗಿ ಆಗುತ್ತದೆ. ಊಟದ ನಂತರ ಆಯಾಸ, ನಿದ್ದೆ ಬರಲ್ಲ.


ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರ ತೂಕ ಎಷ್ಟಿರಬೇಕು? ಅವರ ಜೀವನಶೈಲಿ ಹೇಗಿರಬೇಕು?


ಫೈಬರ್ ಭರಿತ ಆಹಾರ ಸೇವಿಸಿ

top videos


    ಆಹಾರ ನಂತರ ನಿದ್ದೆ ತಪ್ಪಿಸಲು ಫೈಬರ್ ಸಮೃದ್ಧ ಆಹಾರ ತಿನ್ನಿ. ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಸೇವನೆ ಕಡಿಮೆ ಮಾಡಿ. ಫೈಬರ್ ಭರಿತ ಹಣ್ಣುಗಳು ಮತ್ತು ತರಕಾರಿ ತಿನ್ನಿ.  ನಿಯಮಿತ ವ್ಯಾಯಾಮ ಮಾಡಿ.

    First published: