Diabetes: ಊಟದ ನಂತರ ಮರೆಯದೇ ವಾಕ್​ ಹೋಗಿ, ಇದರಿಂದ ಸಿಗುವ ಪ್ರಯೋಜನ ಅಷ್ಟಿಷ್ಟಲ್ಲ

ಊಟದ ನಂತರ ಹೊಟ್ಟೆ ಭಾರವಾದಂತೆ ಅನುಭವವಾಗುತ್ತದೆ, ಚಿಕ್ಕನಿದ್ರೆ ಮಾಡಬೇಕೆಂದು ಅನಿಸುತ್ತದೆ, ಸೋಮಾರಿತನ ಕಾಡುತ್ತದೆ, ಸುಮ್ನೆ ಸ್ಪಲ್ಪ ಹೊತ್ತು ರೆಸ್ಟ್ ಮಾಡೋಣ ಅನಿಸುತ್ತದೆ ಎಂಬುದೆಲ್ಲಾ ನಿಜ. ಆದರೆ ಅನಿಸಿದ ತಕ್ಷಣ ಹೀಗೆ ಮಾಡುವುದೇ ತಪ್ಪು. ಊಟವಾದ ತಕ್ಷಣ ಕಿರು ನಿದ್ದೆ ಮಾಡುವುದು ಅಪಾಯಕಾರಿ. ಇದು ಹಲವು ರೋಗಗಳಿಗೆ ದಾರಿ ಮಾಡುತ್ತದೆ. ಅದರಲ್ಲೂ ಡಯಾಬಿಟಿಸ್‌ ಮತ್ತು ಹೃದಯದ ಕಾಯಿಲೆಗಳನ್ನು ತರುತ್ತದೆ. ಊಟದ ನಂತರದ ನಡಿಗೆ ಬಗ್ಗೆ ತಜ್ಞರು ಏನ್‌ ಹೇಳ್ತಾರೆ? ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಊಟ ಮಾಡಿದ ತಕ್ಷಣ ಸೋಮಾರಿ ಥರ ಬಿದ್ಕೊಳ್ ಬೇಡ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಆದರೆ, ಇದು ಯಾಕೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಆಹಾರ (Food) ಸೇವಿಸಿದ ನಂತರ ನಡೆಯೋದ್ರಿಂದ (Walking) ಏನಾದ್ರೂ ಉಪಯೋಗ ಇದೆಯೇ ಎಂದು ನೀವು ಕೇಳಿದರೆ ಹೌದು ಅಂತಾರೆ ತಜ್ಞರು. ಹಳೆ ಕಾಲದಿಂದಲೂ ಊಟದ ನಂತರ ಸ್ವಲ್ಪ ಸಮಯ ನಡೆಯುವುದರಿಂದ ಆಹಾರವು ಉತ್ತಮವಾಗಿ ಜೀರ್ಣಗೊಂಡು, ಆರೋಗ್ಯ (Health) ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕೆ ಬಹುತೇಕರು ಊಟದ ನಂತರ ಚಿಕ್ಕ ವಾಕ್‌ ಹೋಗಿ ಬರುತ್ತಾರೆ. ಪಾಶ್ಚಿಮಾತ್ಯ ಮೆಡಿಸಿನ್‌ನ ಪಿತಾಮಹ ಎಂದು ಕರೆಸಿಕೊಳ್ಳುವ ಹಿಪೊಕ್ರೆಟಿಸ್‌ನ ಕಾಲದಿಂದಲೂ, ನಡಿಗೆಯ ಅನುಕೂಲಗಳು ಎಲ್ಲರಿಗೂ ತಿಳಿದಿವೆ.

ಊಟ ಮಾಡಿದ ನಂತರ ನಡೆಯುವುದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಇದು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ಜನರು ಹೇಳುತ್ತಾರೆ, ಆದರೆ ವಾಸ್ತವದಲ್ಲಿ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಊಟದ ನಂತರ ಹೊಟ್ಟೆ ಭಾರವಾದಂತೆ ಅನುಭವವಾಗುತ್ತದೆ, ಚಿಕ್ಕನಿದ್ರೆ ಮಾಡಬೇಕೆಂದು ಅನಿಸುತ್ತದೆ, ಸೋಮಾರಿತನ ಕಾಡುತ್ತದೆ, ಸುಮ್ನೆ ಸ್ಪಲ್ಪ ಹೊತ್ತು ರೆಸ್ಟ್ ಮಾಡೋಣ ಅನಿಸುತ್ತದೆ ಎಂಬುದೆಲ್ಲಾ ನಿಜ. ಆದರೆ ಅನಿಸಿದ ತಕ್ಷಣ ಹೀಗೆ ಮಾಡುವುದೇ ತಪ್ಪು. ಊಟವಾದ ತಕ್ಷಣ ಕಿರು ನಿದ್ದೆ ಮಾಡುವುದು ಅಪಾಯಕಾರಿ. ಇದು ಹಲವು ರೋಗಗಳಿಗೆ ದಾರಿ ಮಾಡುತ್ತದೆ. ಅದರಲ್ಲೂ ಡಯಾಬಿಟಿಸ್‌ ಮತ್ತು ಹೃದಯದ ಕಾಯಿಲೆಗಳನ್ನು ತರುತ್ತದೆ. ರಕ್ತದಲ್ಲಿನ ಸಕ್ಕರೆ ಎಂದರೇನು? ಊಟದ ನಂತರದ ನಡಿಗೆ ಬಗ್ಗೆ ತಜ್ಞರು ಏನ್‌ ಹೇಳ್ತಾರೆ? ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.

ರಕ್ತದಲ್ಲಿನ ಸಕ್ಕರೆ ಅಂಶ ಎಂದರೇನು?
ಸರಳವಾಗಿ ಹೇಳುವುದಾದರೆ, ರಕ್ತದಲ್ಲಿನ ಸಕ್ಕರೆ ಎಂದರೆ ರಕ್ತದಲ್ಲಿನ ಗ್ಲೂಕೋಸ್ (ಅಥವಾ ಸಕ್ಕರೆ) ಸಾಂದ್ರತೆಯಾಗಿದೆ. ನಾವು ಆಹಾರ ಸೇವಿಸುವ ಪ್ರತಿ ಬಾರಿಯೂ ಆಹಾರ ಜೀರ್ಣವಾಗುತ್ತದೆ. ಆಗ ನಮ್ಮ ದೇಹವು ಕಾರ್ಬೋಹೈಡ್ರೇಟ್‌ಗಳು ಮತ್ತು ಇತರ ಪೋಷಕಾಂಶಗಳಿಂದ ಸಕ್ಕರೆ ಅಂಶವನ್ನು ಪಡೆಯುತ್ತದೆ.

ಕಾರ್ಬೋಹೈಡ್ರೇಟ್‌ಗಳ ವಿಘಟನೆಯ ನಂತರ ರೂಪುಗೊಂಡ ಸಕ್ಕರೆ ರಕ್ತ ಪ್ರವಾಹಕ್ಕೆ ಪ್ರವೇಶಿಸುತ್ತದೆ. ಅಲ್ಲಿ ಇನ್ಸುಲಿನ್ ಎಂಬ ಹಾರ್ಮೋನ್ ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ. ಇದು ರಕ್ತಪ್ರವಾಹದಿಂದ ಜೀವಕೋಶಗಳಿಗೆ ಸಕ್ಕರೆಯನ್ನು ತೆಗೆದುಕೊಂಡು ಹೋಗುತ್ತವೆ. ಅಲ್ಲಿ ಅದನ್ನು ಶಕ್ತಿಯ ಮೂಲವಾಗಿ ಬಳಸಲಾಗುತ್ತದೆ. ಇದೆ ಮುಂದೆ ಗ್ಲುಕೋಸ್‌ ಆಗಿ ಪರಿವರ್ತನೆಗೊಳ್ಳುತ್ತದೆ.

ಅಧ್ಯಯನಗಳು ಏನ್‌ ಹೇಳ್ತಿವೆ?
ಜರ್ನಲ್‌ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ “ನೀವು ಊಟ ಮಾಡಿದ ನಂತರ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ, ಇದು ದೇಹದ ಜೀರ್ಣಕ್ರಿಯೆಗೆ ಸಹಾಯ ಆಗುತ್ತದೆ. ಯಾವುದೇ ಊಟದ ನಂತರ ಸ್ವಲ್ಪ ಹೊತ್ತು ವಾಕ್‌ ಹೋಗುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಟೈಪ್ 2 ಮಧುಮೇಹದಂತಹ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Breakfast Habits: ನೀವು ಸೇವಿಸೋ ಉಪಹಾರ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು, ಎಚ್ಚರ!

10 ನಿಮಿಷಗಳ ಸಣ್ಣ ನಡಿಗೆ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ಹೆಚ್ಚಿನ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಅಧಿಕ ಕೊಲೆಸ್ಟ್ರಾಲ್ ಮತ್ತು ಸ್ಥೂಲಕಾಯದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಊಟದ ನಂತರ 60 ರಿಂದ 90 ನಿಮಿಷಗಳ ಕಾಲ ನಡೆಯುವುದು ನಮ್ಮ ದೇಹಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ” ಎಂದು ಹೇಳಲಾಗಿದೆ.

ಊಟದ ನಂತರದ ನಡಿಗೆಯ ಪ್ರಯೋಜನಗಳ ಬಗ್ಗೆ ತಜ್ಞರೇನು ಹೇಳ್ತಿದಾರೆ?
"ಸ್ಪೋರ್ಟ್ಸ್ ಮೆಡಿಸಿನ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಒಂದು ಅಧ್ಯಯನದಲ್ಲಿ, ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳು ಸೇರಿದಂತೆ ಹಲವಾರು ಹೃದಯ ಆರೋಗ್ಯ ಸೂಚಕಗಳ ಮೇಲೆ ಪರಿಣಾಮ ಬೀರುವ ಕುರಿತು ಅದಕ್ಕೆ ವಾಕಿಂಗ್ ಮಾಡುವ ಪರಿಣಾಮವನ್ನು ಮೌಲ್ಯಮಾಪನ ಮಾಡುವ ಏಳು ಅಧ್ಯಯನಗಳ ಸಂಶೋಧನೆಗಳನ್ನು ಸಂಶೋಧಕರು ಪರಿಶೀಲಿಸಿದರು. ಎರಡರಿಂದ ಐದು ನಿಮಿಷಗಳಂತಹ ನಡಿಗೆ, ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಗಣನೀಯ ಪರಿಣಾಮವನ್ನು ಬೀರುತ್ತದೆ. ನಿಮಗೆ ಮೊದಲೇ ಹೃದ್ರೋಗವಿದ್ದರೆ ದಯವಿಟ್ಟು ಊಟದ ನಂತರದ ನಡಿಗೆಯನ್ನು ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ಮುಂದುವರಿಯಿರಿ” ಎಂದು ಗುರುಗ್ರಾಮ್ ನಗರದ ನಿರ್ದೇಶಕ-ಆಂತರಿಕ ಔಷಧ ಮತ್ತು ವೈದ್ಯಕೀಯ ಸಲಹೆಗಾರ ಮ್ಯಾಕ್ಸ್ ಆಸ್ಪತ್ರೆ, ಹಿರಿಯ ವೈದ್ಯ ಡಾ. ಅಶುತೋಷ್ ಶುಕ್ಲಾ ಹೇಳುತ್ತಾರೆ.

ಊಟದ ನಂತರ ನಡೆಯುವುದರಿಂದ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ನೀವು ಊಟ ಮಾಡುವಾಗ, ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಊಟದ ನಂತರದ ನಡಿಗೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಇದನ್ನೂ ಓದಿ:  Vitamin B12: ಕಣ್ಣಿನಿಂದ, ಮೆದುಳಿನ ಆರೋಗ್ಯದವರೆಗೆ ವಿಟಮಿನ್ ಬಿ 12 ಪ್ರಯೋಜನಗಳಿದು

"ಇದು ವಿಶೇಷವಾಗಿ ನೀವು ಡಯಾಬಿಟಿಸ್‌ ರೋಗಿಯಾಗಿದ್ದರೆ ಅಥವಾ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಊಟದ ನಂತರ ನಡಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಪ್ರತಿ ಊಟದ ನಂತರ 10 ನಿಮಿಷಗಳ ಸಣ್ಣ ನಡಿಗೆಯು ದಿನವಿಡೀ ಹೆಚ್ಚು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಇನ್ನು ಹೆಚ್ಚು ಆರೋಗ್ಯವನ್ನು ಪಡೆಯಬಹುದು” ಎಂದು ದಿ ಬಾಡಿ ಸೈನ್ಸ್ ಅಕಾಡೆಮಿಯ ಸಹ-ಸಂಸ್ಥಾಪಕ ಮತ್ತು ಎಸಿಇ ಪ್ರಮಾಣೀಕೃತ ವೈಯಕ್ತಿಕ ತರಬೇತುದಾರ ವರುಣ್ ರತ್ತನ್ ಹೇಳುತ್ತಾರೆ.

“ನಮ್ಮ ಜಡ ಜೀವನಶೈಲಿಯನ್ನು ಪರಿಗಣಿಸಬಹುದಾದರೆ, ಊಟದ ನಂತರದ ನಡಿಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದರಿಂದ ಡಯಾಬಿಟಿಸ್‌ ಅಷ್ಟೆ ಅಲ್ಲದೇ, ಹೃದಯದ ರೋಗಗಳನ್ನು ಕಡಿಮೆ ಮಾಡುವಲ್ಲಿ ಇದು ಸಹಾಯಕಾರಿ” ಎಂದು ನಾರಾಯಣ ಹೃದಯಾಲಯದ ಹಿರಿಯ ಕ್ಲಿನಿಕಲ್ ಡಯೆಟಿಷಿಯನ್ ಶ್ರುತಿ ಭಾರದ್ವಾಜ್ ಹೇಳುತ್ತಾರೆ.

ಊಟದ ಬಳಿಕ ಲಘುವಾದ ವಾಕ್ ಮಾಡುವುದು ಒಳ್ಳೆಯದು
"ಭಾರತದಲ್ಲಿ ಊಟಕ್ಕೆ ಬಹಳಷ್ಟು ಪ್ರಮುಖ ಪಾತ್ರವಿದೆ. ಊಟವು ಉಪಹಾರಕ್ಕಿಂತ ಹೆಚ್ಚಿನ ಪ್ರಮುಖ ಸ್ಥಾನವನ್ನು ಹೊಂದಿದೆ. ಭಾರತದ ಸಂಸ್ಕೃತಿ ಪ್ರಕಾರ ಊಟವನ್ನು ಎಲ್ಲರೂ ಒಟ್ಟಿಗೆ ಕೂತು ಮಾಡಬೇಕು ಎಂಬುದು ನಮ್ಮ ಪದ್ಧತಿ ಆಗಿದೆ. ಅಂತಹ ಸಮಯದಲ್ಲಿ ಅನೇಕ ಬಾರಿ ನಾವು ನಮ್ಮ ತಟ್ಟೆಯಲ್ಲಿನ ಆಹಾರದ ಪ್ರಮಾಣ ಎಷ್ಟಿದೆ ಎಂದು ನೋಡುವುದೇ ಇಲ್ಲ. ಇದು ಭವಿಷ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಊಟದ ನಂತರ ನಡಿಗೆಯು ತೂಕ ನಿರ್ವಹಣೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಅದರ ಜೊತೆಗೆ ಚುರುಕಾದ ನಡಿಗೆಗೆ ಬದಲಾಗಿ ಲಘುವಾದ ವಾಕ್ ಮಾಡುವುದು ಒಳ್ಳೆಯದು. ಊಟ ಮುಗಿಸಿದ 10 ನಿಮಿಷಗಳ ನಂತರ ವಾಕ್ ಹೋಗಬಹುದು" ಎಂದು ಆಹಾರ ತಜ್ಞರು ಹೇಳುತ್ತಾರೆ.

ಶೃತಿ ಭಾರದ್ವಾಜ್ ಅವರು ಸ್ವಸ್ಥ ಆರೋಗ್ಯಕ್ಕಾಗಿ ಊಟದ ನಂತರದ ನಡಿಗೆಯ ಇತರ ಪ್ರಯೋಜನಗಳ ಬಗ್ಗೆ ಇಲ್ಲಿ ನಮಗೆ ತಿಳಿಸಿದ್ದಾರೆ:

 • ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

 • ವಿಶೇಷವಾಗಿ ಮಹಿಳೆಯರಿಗೆ ಹೊಟ್ಟೆಯ ಬಳಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 • ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

 • ಊಟದ ನಂತರ ನಡೆಯುವುದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 • ಇದು ಇನ್ಸುಲಿನ್ ಪ್ರತಿರೋಧವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

 • ಊಟದ ನಂತರದ ನಡಿಗೆಗಳು ಗ್ಯಾಸ್ಟ್ರಿಕ್ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 • ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.


ಇದನ್ನೂ ಓದಿ:  PCOD V/s PCOS: ಇವೆರಡೂ ಒಂದೇನಾ? ಹೆಣ್ಮಕ್ಕಳನ್ನು ಕಾಡೋ ಸಮಸ್ಯೆಯ ಲಕ್ಷಣಗಳೇನು?

ಊಟದ ನಂತರದ ನಡಿಗೆಯಿಂದ ಇತರ ಪ್ರಯೋಜನಗಳು:

 • ಊಟದ ನಂತರ ನಡೆಯುವುದರಿಂದ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ.

 • ಇದರ ಜೊತೆಗೆ ನಿಮ್ಮ ಸ್ನಾಯುಗಳು ಆರೋಗ್ಯವಾಗಿರುತ್ತವೆ ಮತ್ತು ನಿಮ್ಮ ಆಯಸ್ಸು ಕೂಡ ಹೆಚ್ಚುತ್ತದೆ.

 • ನಡೆಯುವುದರಿಂದ ನಿಮ್ಮ ಮೆಟಬಾಲಿಸಮ್ ಹೆಚ್ಚಾಗುತ್ತದೆ ಹಾಗು ತೂಕ ನಿಯಂತ್ರಣದಲ್ಲಿರುತ್ತದೆ.

 • ನಿಮ್ಮ ದೇಹ ಕೂಡ ಸರಿಯಾದ ಆಕಾರ ಪಡೆದುಕೊಳ್ಳುವುದು.

 • ಹಾಗೆಯೇ ನಿಮ್ಮ ದೇಹದಲ್ಲಿನ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದು ಬಹಳ ಪ್ರಯೋಜನಕಾರಿ.


ಕೊನೆಯದಾಗಿ ವಾಕ್‌ ಮಾಡುವುದು ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಪ್ರಯೋಜನ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇನ್ನು ಮುಂದೆ ನೀವು ಊಟದ ನಂತರ ಸ್ವಲ್ಪ ಹೊತ್ತು ವಾಕ್‌ ಮಾಡಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.
Published by:Ashwini Prabhu
First published: