• Home
  • »
  • News
  • »
  • lifestyle
  • »
  • Citrus Allergy: ಸಿಟ್ರಸ್ ಅಂಶದ ಹಣ್ಣು ತಿಂದ ನಂತರ ಅಲರ್ಜಿ ಉಂಟಾಗುತ್ತದೆಯೇ? ಹಾಗಾದರೆ ಈ ವಿಷಯಗಳ ಬಗ್ಗೆ ಎಚ್ಚರಿಕೆ ಇರಲಿ

Citrus Allergy: ಸಿಟ್ರಸ್ ಅಂಶದ ಹಣ್ಣು ತಿಂದ ನಂತರ ಅಲರ್ಜಿ ಉಂಟಾಗುತ್ತದೆಯೇ? ಹಾಗಾದರೆ ಈ ವಿಷಯಗಳ ಬಗ್ಗೆ ಎಚ್ಚರಿಕೆ ಇರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವೊಮ್ಮೆ ನಿಂಬೆ ಪಾನಕ ಕಣ್ಣುಗಳು ಊತಕ್ಕೂ ಕಾರಣವಾಗುತ್ತದೆ. ಸಿಟ್ರಸ್ ಹಣ್ಣುಗಳ ಸೇವನೆ ಅಥವಾ ಜ್ಯೂಸ್ ಕುಡಿದ ನಂತರ ಅಲರ್ಜಿ ಸಮಸ್ಯೆ ಉಂಟಾಗಬಹುದು. ನಿಂಬೆ ಕಿತ್ತಳೆ ಮತ್ತು ದ್ರಾಕ್ಷಿ, ಕಿವಿ ಸೇರಿದಂತೆ ಹಲವು ಹಣ್ಣುಗಳು ಸಿಟ್ರಸ್ ವರ್ಗಕ್ಕೆ ಸೇರ್ಪಡೆಯಾಗುತ್ತವೆ.

  • Share this:

    ಬಿಸಿಲಿನ ದಿನಗಳಿರಲಿ (Summer Days), ತಂಪಾದ ವಾತಾವರಣವೇ (Cold Weather) ಇರಲಿ, ಹೋಟೆಲ್, ರೆಸ್ಟೋರೆಂಟ್ ಊಟಕ್ಕೂ ಮೊದಲು ಹೀಗೆ ತುಂಬಾ ಜನರು (People) ನಿಂಬೆ ಪಾನಕ (Lemon Juice) ಕುಡಿಯಲು ಇಷ್ಟ ಪಡುತ್ತಾರೆ. ಕೆಲವೊಮ್ಮೆ ನಿಂಬೆ ಪಾನಕ ಆರೋಗ್ಯಕ್ಕೆ ಸರಿ ಹೊಂದುವುದಿಲ್ಲ. ಕೆಲವರಿಗೆ ನಿಂಬೆ ಪಾನಕ ಅನಾರೋಗ್ಯ ಉಂಟು ಮಾಡುತ್ತದೆ. ನಿಂಬೆ ಪಾನಕ ಬಾಯಿ ಮತ್ತು ಗಂಟಲಲ್ಲಿ ಕಿರಿಕಿರಿ ಉಂಟು ಮಾಡುತ್ತದೆ. ಇದು ತುಂಬಾ ಕೆಟ್ಟದಾಗಿಸುತ್ತದೆ. ಗಂಟಲು ನೋವುಂಟು ಮಾಡುತ್ತದೆ. ಕೆಲವೊಮ್ಮೆ ನಿಂಬೆ ಪಾನಕ ಅಸ್ವಸ್ಥತೆ ಉಂಟು ಮಾಡುತ್ತದೆ. ಅದಾಗ್ಯೂ ಶಾಖ, ಬಿಸಿಲಿನ ವಾತಾವರಣದಲ್ಲಿ ನಿಂಬೆ ಪಾನಕ, ನೀರು ಕುಡಿಯುವುದು ಆರೋಗ್ಯ ಪ್ರಯೋಜನ ನೀಡುತ್ತದೆ. 


    ಸಿಟ್ರಸ್ ಹಣ್ಣಿನ ಅಲರ್ಜಿ


    ಕೆಲವೊಮ್ಮೆ ನಿಂಬೆ ಪಾನಕ ಕಣ್ಣುಗಳು ಊತಕ್ಕೂ ಕಾರಣವಾಗುತ್ತದೆ. ಸಿಟ್ರಸ್ ಹಣ್ಣುಗಳ ಸೇವನೆ ಮಾಡಿದ ನಂತರ ಅಥವಾ ಜ್ಯೂಸ್ ಕುಡಿದ ನಂತರ ಅಥವಾ ಸಿಟ್ರಸ್ ಹಣ್ಣುಗಳ ಸಿಪ್ಪೆಯ ಸಂಪರ್ಕಕ್ಕೆ ಬಂದ ಕೂಡಲೇ ಅಲರ್ಜಿ ಸಮಸ್ಯೆ ಎದುರಿಸಿರಬಹುದು. ನಿಂಬೆ, ಕಿತ್ತಳೆ ಮತ್ತು ದ್ರಾಕ್ಷಿ, ಕಿವಿ ಸೇರಿದಂತೆ ಹಲವು ಹಣ್ಣುಗಳು ಸಿಟ್ರಸ್ ವರ್ಗಕ್ಕೆ ಸೇರ್ಪಡೆಯಾಗುತ್ತವೆ. ಸಿಟ್ರಸ್ ಹಣ್ಣಿನ ಅಲರ್ಜಿ ತುಂಬಾ ವಿರಳ.


    ತುಟಿಗಳು ಮತ್ತು ನಾಲಿಗೆ ಊತ ಉಂಟಾಗುವುದು


    ಸಿಟ್ರಸ್ ಹಣ್ಣು ಅಥವಾ ಪಾನಕ ಕುಡಿದ ನಂತರ ಅಲರ್ಜಿ ಉಂಟಾಗುತ್ತದೆ. ಅದರಲ್ಲಿ ಪ್ರಮುಖವಾಗಿ ತುಟಿಗಳು ಮತ್ತು ನಾಲಿಗೆ ಊತ ಉಂಟಾಗುತ್ತದೆ. ಉಸಿರಾಟ ಕಷ್ಟ ಆಗುತ್ತದೆ. ತೀವ್ರತರ ಪ್ರಕರಣಗಳಲ್ಲಿ ರಕ್ತದೊತ್ತಡ ಕಡಿಮೆ ಸಹ ಆಗುವ ಚಾನ್ಸ್ ಹೆಚ್ಚಿರುತ್ತದೆ. ಆಗಾಗ ವಾಂತಿ ಅಥವಾ ಅಸ್ತಮಾ ಅಟ್ಯಾಕ್ ಕೂಡ ಆಗುವ ಸಾಧ್ಯತೆ ಇದೆ.




    ಸಿಟ್ರಸ್ ಹಣ್ಣುಗಳ ಸಿಪ್ಪೆ ಅಲರ್ಜಿಯಾದಾಗ ಗೋಚರಿಸುವ ಲಕ್ಷಣಗಳು


    ಚರ್ಮ ಕೆಂಪಾಗುವಿಕೆ, ಚರ್ಮದಲ್ಲಿ ದದ್ದು ಉಂಟಾಗುವುದು, ಚರ್ಮದ ಮೇಲೆ ತುರಿಕೆ ಮತ್ತು ಸಂವೇದನೆ, ಊತ ಅಥವಾ ಗುಳ್ಳೆ ಉಂಟಾಗುತ್ತವೆ.


    ಸಿಟ್ರಸ್ ಅಲರ್ಜಿ ಲಕ್ಷಣಗಳು ಹೀಗಿವೆ


    ಸಿಟ್ರಸ್ ಹಣ್ಣುಗಳ ಸೇವನೆ ಅಥವಾ ಜ್ಯೂಸ್ ಸೇವನೆ ಮಾಡಿದಾಗ ಉಂಟಾಗುವ ಅಲರ್ಜಿಗಳು ವಿಭಿನ್ನ ಪ್ರಕಾರ ಹೊಂದಿವೆ. ಅವುಗಳ ಸಿಪ್ಪೆ ಸ್ಪರ್ಶಿಸಿದಾಗ ಬೇರೆ ರೀತಿಯ ಅಲರ್ಜಿ ಉಂಟಾಗುತ್ತದೆ.


    ತುಟಿ, ನಾಲಿಗೆ ಮತ್ತು ಗಂಟಲಿನಲ್ಲಿ ತೀವ್ರ ತುರಿಕೆ ಅಥವಾ ಸುಡುವ ಸಂವೇದನೆ, ತುಟಿ ಮತ್ತು ಒಸಡು ಕೆಂಪಾಗುವುದು ಮತ್ತು ಊತ ಕಂಡು ಬರುತ್ತದೆ.


    ಸಿಟ್ರಸ್ ಅಲರ್ಜಿ ಕಂಡು ಹಿಡಿಯುವುದು ಹೇಗೆ?


    ಸಿಟ್ರಸ್ ಅಲರ್ಜಿ ಕಂಡು ಹಿಡಿಯಲು ನಿಮ್ಮ ಚರ್ಮ ಮತ್ತು ದೇಹದ ಭಾಗಗಳಲ್ಲಾಗುವ ಬದಲಾವಣೆ ಹಾಗೂ ಸಮಸ್ಯೆಯಿಂದ ಕಂಡು ಹಿಡಿಯಬಹುದು. ಏನನ್ನು ತಿನ್ನುತ್ತೇವೆ, ಕುಡಿಯುತ್ತೇವೆಯೋ ಆಗ ಅದರ ಪರಿಣಾಮ ಕೆಲವೊಮ್ಮೆ ದೇಹದಲ್ಲಿ, ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಗುರುತಿಸಬೇಕಾಗುತ್ತದೆ. ಇದು ಅಲರ್ಜಿಯನ್ನು ಅರ್ಥ ಮಾಡಿಕೊಳ್ಳಲು ಸುಲಭವಾದ ಮಾರ್ಗವಾಗಿದೆ.


    ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸುವುದು, ಚರ್ಮದ ಚುಚ್ಚು ಪರೀಕ್ಷೆ ನಂತರ ಅಲರ್ಜಿ ಕಂಡು ಹಿಡಿಯಲಾಗುತ್ತದೆ. ತೀವ್ರತರ ಪ್ರಕರಣದಲ್ಲಿ ಔಷಧಿ ಸೇವಿಸಲು ಸೂಚಿಸಲಾಗುತ್ತದೆ.


    ಅಲರ್ಜಿ ತಪ್ಪಿಸಲು ಈ ಅಂಶಗಳ ಬಗ್ಗೆ ಎಚ್ಚರಿಕೆ ವಹಿಸಿ


    ಕುಡಿಯಲು ಸಿದ್ಧವಾದ ಹಣ್ಣಿನ ರಸವನ್ನು ಸೇವನೆ ಮಾಡುವುದು ತಪ್ಪಿಸಿ. ಆಹಾರ ಪದಾರ್ಥ ಖರೀದಿಸುವ ಮೊದಲು, ಅದರ ಪದಾರ್ಥಗಳ ಪಟ್ಟಿ ಮತ್ತು ತಾರೀಖನ್ನು ಪರಿಶೀಲಿಸಿ. ಅದರಲ್ಲಿ ಸಿಟ್ರಸ್ ಇದ್ದರೆ ಖರೀದಿಸಬೇಡಿ.


    ಇದನ್ನೂ ಓದಿ: ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸಿ!


    ಕಚ್ಚಾ ಸಿಟ್ರಸ್ ಹಣ್ಣುಗಳು ಮಾಗಿದ ಹಣ್ಣುಗಳಿಗಿಂತ ಹೆಚ್ಚು ಮಾರಕವಾಗಬಹುದು ಅಂತಾರೆ ತಜ್ಞರು. ಸಿಟ್ರಸ್ ಹಣ್ಣುಗಳ ಸಿಪ್ಪೆಗಳು ಮತ್ತು ಬೀಜಗಳ ಬಳಕೆ ವೇಳೆ ಎಚ್ಚರಿಕೆ ವಹಿಸಿ. ಕೃತಕ ಸಿಟ್ರಸ್ ಹಣ್ಣಿನ ಸುವಾಸನೆ ಅಥವಾ ವಿಟಮಿನ್ ಸಿ ಸಪ್ಲಿಮೆಂಟ್, ವಿಟಮಿನ್ ಸಿ ಸೇವನೆ ಮೊದಲು ಎಚ್ಚರಿಕೆ ವಹಿಸಿ.

    Published by:renukadariyannavar
    First published: