ತುಂಬಾ ಜನರು (People) ಬೆಳಗಿನ ಹಾಗೂ ಸಂಜೆ (Morning And Evening) ಚಹಾದ ಜೊತೆ ಬಿಳಿ ಬ್ರೆಡ್ (White Bread) ಸೇವನೆ ಮಾಡ್ತಾರೆ. ಬೆಳಗ್ಗೆ ತಿಂಡಿಗೆ ಹೆಚ್ಚಿನ ಜನರು ಮಕ್ಕಳಿಗೆ ಬ್ರೆಡ್ ಜಾಮ್ ತಿನ್ನೋಕೆ ಕೊಡ್ತಾರೆ. ಬೆಳಗಿನ ತಿಂಡಿಗೆ ಬ್ರೆಡ್ ಮತ್ತು ಜಾಮ್ ಬಳಸುವುದು ತುಂಬಾ ಸುಲಭ. ಹಾಗಾಗಿ ಎಷ್ಟೋ ಜನ ಇದನ್ನು ಸೇವನೆ ಮಾಡ್ತಾರೆ. ಬೆಳಗಿನ ತಿಂಡಿಗೆ ಯಾವುದೇ ಕಷ್ಟವಿಲ್ಲದೇ, ಸಮಯ ವ್ಯರ್ಥವಾಗದೇ ಬ್ರೆಡ್ ಜಾಮ್ ತಿನ್ನುವುದು ಹೆಚ್ಚು ಅನುಕೂಲಕರವಾಗಿದೆ. ಇದನ್ನು ಬೆಳಿಗ್ಗೆ ತಯಾರಿಸುವುದು ಸುಲಭ. ಹೆಚ್ಚಿನ ಮನೆಗಳಲ್ಲಿ ಇದು ಪ್ರಧಾನ ಆಹಾರವಾಗಿರುತ್ತದೆ. ಸ್ಯಾಂಡ್ವಿಚ್, ಟೋಸ್ಟ್ ಅಥವಾ ಬ್ರೆಡ್ ಬೆಣ್ಣೆ ಹಲವು ಬಾರಿ ಸುಲಭ ಉಪಹಾರದ ಆಯ್ಕೆಯಾಗಿದೆ.
ಬೆಳಗ್ಗೆ ಬ್ರೆಡ್ ಸೇವನೆ ನಂತರ ಸುಸ್ತು ಆಗುವುದು
ಬಿಳಿ ಬ್ರೆಡ್ ಸೇವನೆ ಆರೋಗ್ಯಕರ ಆಯ್ಕೆಯಲ್ಲ ಎನ್ನುತ್ತಾರೆ ತಜ್ಞರು. ಯಾಕಂದ್ರೆ ಬಿಳಿ ಬ್ರೆಡ್ ನಲ್ಲಿ ಆರೋಗ್ಯಕರ ಅಂಶಗಳಿಲ್ಲ. ಇನ್ನು ಕೆಲವರು ಬ್ರೆಡ್ ತಿಂದ ಮೇಲೆ ಹೆಚ್ಚು ಬಳಲಿಕೆ, ಸುಸ್ತು ಸಮಸ್ಯೆ ಅನುಭವಿಸುತ್ತಾರೆ. ಬ್ರೆಡ್ ನ್ನು ಮುಖ್ಯವಾಗಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಪದಾರ್ಥಗಳಿಂದ ಕೂಡಿದೆ.
ಬೆಳಗಿನ ತಿಂಡಿಗೆ ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುವ ಮೊಟ್ಟೆ, ಚೀಸ್, ಕಡಲೆಕಾಯಿ ಬೆಣ್ಣೆ, ಚಿಕನ್ ತಿನ್ನುವುದು, ಬ್ರೆಡ್ ತಿನ್ನುವುದಕ್ಕಿಂತ ಉತ್ತಮ. ಬ್ರೆಡ್ ತಿಂದ ನಂತರ ನಿಮಗೆ ದಣಿವು ಅಥವಾ ಹೊಟ್ಟೆ ಉಬ್ಬರಿಸುವ ಸಮಸ್ಯೆ ಉಂಟಾದರೆ ಜಾಗ್ರತೆ ವಹಿಸಿ. ಬ್ರೆಡ್ ಸೇವನೆ ತಪ್ಪಿಸಿ.
ಬ್ರೆಡ್ ಸೇವನೆ ನಂತರ ಸುಸ್ತು, ಹೊಟ್ಟೆಯುಬ್ಬರ ಸಮಸ್ಯೆ ಯಾಕೆ ಉಂಟಾಗುತ್ತದೆ?
ಬ್ರೆಡ್ ತಿಂದ ನಂತರ ದೇಹದಲ್ಲಿ ಇನ್ಸುಲಿನ್ ತ್ವರಿತವಾಗಿ ಬಿಡುಗಡೆ ಆಗುತ್ತದೆ. ಇದು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳಿಂದ ಪ್ರಚೋದನೆಗೆ ಒಳಗಾಗುತ್ತದೆ. ಮೆಲಟೋನಿನ್ ನಮ್ಮ ದೇಹವನ್ನು ನಿದ್ರೆಗೆ ಪ್ರೇರೇಪಿಸುವ ಹಾರ್ಮೋನ್ ಆಗಿದೆ. ನಮ್ಮ ಆಹಾರದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಾದಾಗ ಈ ಮೆಲಟೋನಿನ್ ಹೆಚ್ಚು ಉತ್ಪತ್ತಿ ಆಗುತ್ತದೆ.
ಚೀಸ್, ಮೊಟ್ಟೆ, ಕಡಲೆಕಾಯಿ ಬೆಣ್ಣೆ ಬ್ರೆಡ್ ಸೇವನೆಯು ಮೆಲಟೋನಿನ್ ಹಾರ್ಮೋನಿನ ಪ್ರತಿಕ್ರಿಯೆಗೆ ಪ್ರಚೋದನೆ ನೀಡುತ್ತದೆ. ಅವುಗಳಲ್ಲಿರುವ ಟ್ರಿಪ್ಟೊಫಾನ್ ಅನ್ನು ಇವು ಮೆಲಟೋನಿನ್ ಆಗಿ ಪರಿವರ್ತಿಸುತ್ತದೆ.
ಬ್ರೆಡ್ ಹೆಚ್ಚಿನ ಗ್ಲೈಸೆಮಿಕ್ ಆಹಾರ ಪದಾರ್ಥ
ಬ್ರೆಡ್ ನಿಂದ ಸುಸ್ತು ಮತ್ತು ನಿದ್ದೆ ಬರಲು ಇನ್ನೊದು ಕಾರಣ ಅಂದ್ರೆ ಅದು ಹೆಚ್ಚಿನ ಗ್ಲೈಸೆಮಿಕ್ ಆಹಾರ ಪದಾರ್ಥ ಆಗಿದೆ. ಇದರರ್ಥ ಇದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚು ಮಾಡುತತ್ದೆ. ಅಲ್ಪಾವಧಿಗೆ ಇದು ನಿಮಗೆ ಶಕ್ತಿ ನೀಡಬಹುದು.
ಆದರೆ ಇದು ಆಲಸ್ಯ, ಸುಸ್ತು ಉಂಟು ಮಾಡುತ್ತದೆ. ಗೋಧಿ ಮತ್ತು ಇತರ ಧಾನ್ಯಗಳಲ್ಲಿ ಕಂಡು ಬರುವ ಗ್ಲುಟನ್ ಹೆಚ್ಚು ಜನರ ಆರೋಗ್ಯಕ್ಕೆ ಸರಿ ಹೊಂದುವುದಿಲ್ಲ. ಅನೇಕ ಜನರು ಗ್ಲುಟನ್ ಅನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಆಗಲ್ಲ.
ಹಾಗಾಗಿ ಜನರು ಬ್ರೆಡ್ ತಿಂದ ನಂತರ ಆಯಾಸ, ಆಲಸ್ಯ ಮತ್ತು ಮೆದುಳಿಗೆ ಸಂಬಂಧಪಟ್ಟ ತೊಂದರೆ ಲಕ್ಷಣ ಅನುಭವಿಸುತ್ತಾರೆ. ಪ್ರೋಟೀನ್ ಅಥವಾ ಆರೋಗ್ಯಕರ ಕೊಬ್ಬು ರಹಿತ ಆಹಾರವಾಗಿರುವ ಬ್ರೆಡ್ ತಿಂದ ನಂತರ ದಣಿವು ಮತ್ತು ತಲೆತಿರುಗುವ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು.
ಬ್ರೆಡ್ ಸೇವನೆ ಯಾಕೆ ಮಾಡಬಾರದು?
ಬಿಳಿ ಬ್ರೆಡ್ ಹೊರತಾಗಿ ಕೆಲವು ಆರೋಗ್ಯಕರ ಧಾನ್ಯಗಳ ಬ್ರೆಡ್ ಸೇವಿಸಿ. ಬಿಳಿ ಬ್ರೆಡ್ ರಕ್ತದ ಸಕ್ಕರೆ ಹೆಚ್ಚಿಸುತ್ತದೆ. ಸುಸ್ತು, ತಲೆ ತಿರುಗುವಿಕೆ, ಮೆದುಳಿನ ಸಮಸ್ಯೆ ಹೆಚ್ಚಿಸುತ್ತದೆ. ಹಾಗಾಗಿ ಸೇವಿಸಬೇಡಿ.
ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!
ಬಿಳಿ ಬ್ರೆಡ್ ಬದಲು ಶಕ್ತಿಯ ಮಟ್ಟ ಹೆಚ್ಚಿಸುವ, ಪೋಷಕ ಪದಾರ್ಥಗಳ ಬ್ರೆಡ್ ಸೇವಿಸಿ. ಓಟ್ಸ್, ಕ್ವಿನೋವಾ, ಮ್ಯೂಸ್ಲಿ, ಸ್ಮೂಥಿ ಬೌಲ್ಗಳು, ಹಣ್ಣಿನ ಮೊಸರು ಇತ್ಯಾದಿ ತಿನ್ನಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ