• Home
  • »
  • News
  • »
  • lifestyle
  • »
  • Cholesterol Problem: ದೀಪಾವಳಿ ನಂತರ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ ತಡೆಯಲು ಹೀಗೆ ಮಾಡಿ

Cholesterol Problem: ದೀಪಾವಳಿ ನಂತರ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ ತಡೆಯಲು ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಬ್ಬ ಹರಿದಿನಗಳಲ್ಲಿ ಜನರು ಅನಾರೋಗ್ಯಕರ ಪದಾರ್ಥ ಹೆಚ್ಚು ಸೇವನೆ ಮಾಡುತ್ತಾರೆ. 2022 ರ ದೀಪಾವಳಿಯಲ್ಲಿ ನೀವು ಹಲವು ತರಹದ ಸಿಹಿ ತಿಂಡಿ ಮತ್ತು ಬಹಳಷ್ಟು ಕರಿದ ಪದಾರ್ಥಗಳನ್ನು ತಿನ್ನುವ ಮೂಲಕ ಹಬ್ಬವನ್ನು ಆಚರಿಸಲು ಬಯಸುತ್ತಾರೆ. ಇದು ಜೀರ್ಣಕಾರಿ ಮತ್ತು ಹೃದಯದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಮುಂದೆ ಓದಿ ...
  • Share this:

    ಕೊಲೆಸ್ಟ್ರಾಲ್ (Cholesterol) ಒಂದು ಕೊಬ್ಬಿನಂತಹ ವಸ್ತು (Thing) ಆಗಿದೆ. ಅದು ಯಕೃತ್ತಿನಿಂದ (Liver) ಬಿಡುಗಡೆ ಆಗುತ್ತದೆ. ಆದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವ ತಪ್ಪು ಮಾಡಬೇಡಿ. ಇದು ದೇಹದ (Body) ಜೀವಕೋಶಗಳನ್ನು ಸ್ಥಗಿತದಿಂದ ರಕ್ಷಣೆ ಮಾಡುತ್ತದೆ. ಮತ್ತು ಹಾರ್ಮೋನು ಮತ್ತು ವಿಟಮಿನ್ (Hormone And Vitamins) ಗಳನ್ನು ಉತ್ಪಾದನೆ ಮಾಡುತ್ತದೆ. ಕೊಲೆಸ್ಟ್ರಾಲ್‌ ನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ (Types). ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (ಎಲ್‌ಡಿಎಲ್) ಎಂದರೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (ಎಚ್‌ಡಿಎಲ್) ಎಂದರೆ ಒಳ್ಳೆಯ ಕೊಲೆಸ್ಟ್ರಾಲ್ ನಮ್ಮ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಇರುವುದು ಮುಖ್ಯ ಅಂತಾರೆ ತಜ್ಞರು.


    SENS ನ ಹಿರಿಯ ಕಾಸ್ಮೆಟಾಲಜಿಸ್ಟ್ ಡಾ.ಆಕಾಂಕ್ಷಾ ಸಿಂಗ್ ಹೇಳುವ ಪ್ರಕಾರ, ನಮ್ಮ ದೇಹವು ನಮಗೆ ಅಗತ್ಯವಿರುವ ಕೊಲೆಸ್ಟ್ರಾಲ್ ನ್ನು ಮಾಡುತ್ತದೆ ಎಂಬುದನ್ನು ನಾವು ನೆನಪಿಡಬೇಕಾದ ಸಂಗತಿ. ಹಾಗಾಗಿ ಇದನ್ನು ಆಹಾರ ಪದಾರ್ಥಗಳ ಮೂಲಕ ಸೇವಿಸುವ ಅಗತ್ಯ ಇಲ್ಲ.


    ದೀಪಾವಳಿಯಂದು ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ?


    ಹಬ್ಬ ಹರಿದಿನಗಳಲ್ಲಿ ಜನರು ಅನಾರೋಗ್ಯಕರ ಪದಾರ್ಥ ಹೆಚ್ಚು ಸೇವನೆ ಮಾಡುತ್ತಾರೆ. 2022 ರ ದೀಪಾವಳಿಯಲ್ಲಿ ನೀವು ಹಲವು ತರಹದ ಸಿಹಿ ತಿಂಡಿ ಮತ್ತು ಬಹಳಷ್ಟು ಕರಿದ ಪದಾರ್ಥಗಳನ್ನು ತಿನ್ನುವ ಮೂಲಕ ಹಬ್ಬವನ್ನು ಆಚರಿಸಲು ಬಯಸುತ್ತಾರೆ.


    ಇದನ್ನೂ ಓದಿ: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು


    ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆ, ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿವೆ. ಇದು ಜೀರ್ಣಕಾರಿ ಮತ್ತು ಹೃದಯದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.


    ಅತಿಯಾಗಿ ತಿನ್ನುವುದು ಕೊಲೆಸ್ಟ್ರಾಲ್‌ಗೆ ಪ್ರಮುಖ ಕಾರಣ


    ದೀಪಾವಳಿಯು ಭಾರತದಲ್ಲಿ ಬಹಳ ದೊಡ್ಡ ಹಬ್ಬ . ಇದನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ವೇಳೆ ಜನರು ಪರಸ್ಪರ ಭೇಟಿ ಆಗುತ್ತಾರೆ. ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಮತ್ತು ಸಿಹಿ ತಿಂಡಿಗಳು ಮತ್ತು ಭಕ್ಷ್ಯ ಸೇವನೆ ಮಾಡುತ್ತಾರೆ.


    ಈ ರೀತಿಯ ಹಬ್ಬ ಹರಿದಿನಗಳಲ್ಲಿ ಅತಿಯಾಗಿ ತಿನ್ನುವ ಸಮಸ್ಯೆ ಹೆಚ್ಚು ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಅತಿಯಾಗಿ ಮದ್ಯಪಾನ ಮಾಡುವುದು ಅಸಿಡಿಟಿ ಮತ್ತು ಆಲ್ಕೋಹಾಲ್ ಸಂಬಂಧಿತ ಜಠರದ ಉರಿತಕ್ಕೆ ಕಾರಣ ಆಗುತ್ತದೆ. ಈಗಾಗಲೇ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಈ ಕಾರಣದಿಂದ ರಕ್ತದ ಸಕ್ಕರೆ, ಬಿಪಿ ಮತ್ತು ಕೊಲೆಸ್ಟ್ರಾಲ್ ಮಟ್ಟವು ಬಹಳ ಹೆಚ್ಚಾಗುತ್ತದೆ.


    ಕೆಟ್ಟ ಕೊಲೆಸ್ಟ್ರಾಲ್ ತಡೆಯಲು ಏನು ಮಾಡಬೇಕು?


    ಬೀಜಗಳು ಮತ್ತು ಹಣ್ಣು ಸೇವನೆ ಮಾಡಿ. ಸಾಕಷ್ಟು ನೀರು ಮತ್ತು ತಾಜಾ ಹಣ್ಣಿನ ರಸ ಕುಡಿಯಿರಿ. ಹಬ್ಬದ ದಿನಗಳಲ್ಲಿ ನಿಮ್ಮ ಆಹಾರದಲ್ಲಿ ಮೊಸರು ಮತ್ತು ನಾರಿನಂಶ ಪದಾರ್ಥಗಳನ್ನು ಸೇರಿಸಿ. ಅಥವಾ ಬೇಯಿಸಿದ ಆಹಾರ ಸೇವಿಸಿ. ಇದರಿಂದ ನಿಮ್ಮ ದೇಹವು ಆರೋಗ್ಯಕರ ಆಹಾರ ಪಡೆಯಲು ಸಹಕಾರಿ ಆಗಿದೆ.


    ಸಾಸಿವೆ ಎಣ್ಣೆ ಅಥವಾ ತುಪ್ಪ ಬಳಸಿ. ನಿಮ್ಮ ಆಹಾರದಲ್ಲಿ ಆರೋಗ್ಯಕರ ಕೊಬ್ಬನ್ನು ಸೇರಿಸಿ. ಪ್ರತಿದಿನ 7 ರಿಂದ 8 ಗಂಟೆಗಳ ನಿದ್ದೆ ಮಾಡಿ.


    ಕೆಟ್ಟ ಕೊಲೆಸ್ಟ್ರಾಲ್ ತಡೆಯಲು ಏನು ಮಾಡಬೇಕು?


    ಕರಿದ ಪದಾರ್ಥಗಳನ್ನು ತಿನ್ನಬೇಡಿ. ಆಹಾರದಲ್ಲಿ ಸಂಸ್ಕರಿಸಿದ ಎಣ್ಣೆ ಬಳಸಬೇಡಿ. ಎಣ್ಣೆ ಮತ್ತು ಹೊರಗಿನಿಂದ ಸಮೃದ್ಧ ಆಹಾರ ಸೇವನೆ ತಪ್ಪಿಸಿ. ದೀಪಾವಳಿಯ ನಂತರ ಡಿಟಾಕ್ಸ್ ಮಾಡುವುದು ಸಹ ಅಗತ್ಯವಾಗಿದೆ.


    ಇದನ್ನೂ ಓದಿ: ಬಿರುಕು ಬಿಟ್ಟ ಪಾದಗಳ ಸಮಸ್ಯೆ ಹೋಗಲಾಡಿಸಲು ಇಲ್ಲಿದೆ ಕೆಲವು ಸುಲಭ ಟಿಪ್ಸ್!


    ಇದಲ್ಲದೇ ಹಬ್ಬ ಹರಿದಿನಗಳ ನಂತರ ವಿಷ ನಿವಾರಣೆ ಮಾಡಬೇಕು. ಇದಕ್ಕಾಗಿ ನೀವು ಮನೆ ಮದ್ದು  ತೆಗೆದುಕೊಳ್ಳಲು ಬಯಸಿ ಇದು ಸಹಕಾರಿ. ಅಥವಾ ಸೌನಾ, ಕಪ್ಪಿಂಗ್, ಎನಿಮಾ, ಡಿಟಾಕ್ಸ್ ಡ್ರಿಪ್ಸ್ ಮತ್ತು ಲಿಂಫಾಸ್ಟಿಮ್ ಚಿಕಿತ್ಸೆ ಮೂಲಕ ಉತ್ತಮ ಫಲಿತಾಂಶ ಪಡೆಯಿರಿ.

    Published by:renukadariyannavar
    First published: