ಬೇರೆ ದೈಹಿಕ ಆರೋಗ್ಯ ಸಮಸ್ಯೆಗಳಂತೆ (Health Problems) ಮಹಿಳೆಯರು ಮತ್ತು ಪುರುಷರಿಗೆ (Men And Women) ಅವರದ್ದೇ ಆದ ಲೈಂಗಿಕ ಸಮಸ್ಯೆಗಳು ಕೆಲ ಕಾರಣಗಳಿಂದ ಕಂಡು ಬರುತ್ತವೆ. ಔಷಧಿಗಳ ಅಡ್ಡ ಪರಿಣಾಮಗಳು (Medicine Side Effects), ಆಹಾರದಲ್ಲಿ (Food) ವ್ಯತ್ಯಾಸ, ಜೀವನಶೈಲಿ (Lifestyle) ಧೂಮಪಾನ, ಮದ್ಯಪಾನ (Smoking And Drinking), ಹಾರ್ಮೋನ್ ಅಸಮತೋಲನ (Harmon Variations) ಹೀಗೆ ಅನೇಕ ಕಾರಣಗಳಿಂದ ಪುರುಷ ಮತ್ತು ಮಹಿಳೆಯರಲ್ಲಿ ಲೈಂಗಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಕೋವಿಡ್ ನಂತರ ಹೆಚ್ಚಾಯ್ತು ಲೈಂಗಿಕ ಸಮಸ್ಯೆ
ಈ ಕಾರಗಳ ಪಟ್ಟಿಗೆ ಹೊಸದಾಗಿ ಕೋವಿಡ್ ಕೂಡ ಸೇರ್ಪಡೆಯಾಗಿದೆ ಎನ್ನಬಹುದು. ಏಕೆಂದರೆ ಕೋವಿಡ್ ನಂತರ ಅನೇಕರಿಗೆ ಅನೇಕ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ , ಅದರಲ್ಲಿ ಲೈಂಗಿಕ ಕ್ರಿಯೆ ಸಮಸ್ಯೆಯೂ ಒಂದು.
ಹೌದು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವಿಶೇಷವಾಗಿ ಪುರುಷರು ಮಾನಸಿಕ ಮತ್ತು ಆರ್ಥಿಕ ಒತ್ತಡಗಳ ಜೊತೆಗೆ ಲೈಂಗಿಕ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಎದುರಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನೆಫ್ರೋ-ಮೂತ್ರಶಾಸ್ತ್ರಜ್ಞರು ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ದುರ್ಬಲತೆಯ ಪ್ರಕರಣಗಳು ಹೆಚ್ಚಿವೆ ಎಂದು ತಿಳಿಸಿದ್ದಾರೆ.
ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಪ್ರಕರಣಗಳು ದ್ವಿಗುಣ
ವೈದ್ಯಕೀಯ ತಜ್ಞರು ಕೋವಿಡ್ ನಂತರ ಸುಮಾರು 18-45 ವಯೋಮಾನದವರಲ್ಲಿ ದುರ್ಬಲತೆಯ ಹೆಚ್ಚಳವನ್ನು ಕಂಡುಕೊಂಡಿದ್ದಾರೆ. ಫೋರ್ಟಿಸ್ ಆಸ್ಪತ್ರೆಗಳ ಮೂತ್ರಶಾಸ್ತ್ರದ ಹಿರಿಯ ನಿರ್ದೇಶಕ ಮತ್ತು ಮೂತ್ರಪಿಂಡ ವಿಜ್ಞಾನದ ವಿಶೇಷ ಮಂಡಳಿಯ ಅಧ್ಯಕ್ಷ ಡಾ ಮೋಹನ್ ಕೇಶವಮೂರ್ತಿ ಅವರು 2020 ಕ್ಕಿಂತ ಮೊದಲು ಅಂದರೆ ಕೋವಿಡ್ ಆರಂಭವಾಗುವ ಮುನ್ನ, ಸುಮಾರು 30 ರಿಂದ 40 ರೋಗಿಗಳು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ (ED) ಅಥವಾ ಪುರುಷ ದುರ್ಬಲತೆ (MI) ಸಮಸ್ಯೆ ಎದುರಿಸುತ್ತಿದ್ದರು.
ಆದರೆ ಕೋವಿಡ್ ನಂತರ ಈಗ ಈ ಪ್ರಕರಣಗಳು ದುಪ್ಪಟ್ಟಾಗಿವೆ. ಸಮಸ್ಯೆಗಳು ಚಿಕ್ಕಪುಟ್ಟವಾಗಿರುವುದರ ಜೊತೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರ್ಯವಿಧಾನಗಳ ಸಂಖ್ಯೆಯೂ ದ್ವಿಗುಣಗೊಂಡಿದೆ ಎಂದು ಪುರುಷರು ಎದುರಿಸುತ್ತಿರುವ ಲೈಂಗಿಕ ಸಮಸ್ಯೆ ಬಗ್ಗೆ ತಿಳಿಸಿದರು.
ಕೋವಿಡ್ ಸಮಯದಲ್ಲಿ ಮತ್ತು ನಂತರದ ದಿನಗಳಲ್ಲಿ ತೀವ್ರವಾದ ಆರ್ಥಿಕ, ಮಾನಸಿಕ ಸಮಸ್ಯೆ ಮತ್ತು ಒತ್ತಡ ಮತ್ತು ಆತಂಕಗಳನ್ನು ಎದುರಿಸಿದಂತಹವರಲ್ಲಿ ಈ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ ಎಂದು ವೈದ್ಯರು ಹೇಳಿದ್ದಾರೆ.
ಒತ್ತಡದಿಂದ ಕಿರಿದಾಗುವ ರಕ್ತನಾಳಗಳು
ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯನ್ನು ಸಾಮಾನ್ಯ ಭಾಷೆಯಲ್ಲಿ ದುರ್ಬಲತೆ ಎಂದೂ ಕರೆಯುತ್ತಾರೆ. ಲೈಂಗಿಕ ಸಂಭೋಗದ ಸಮಯದಲ್ಲಿ ಶಿಶ್ನವು ಸಾಕಷ್ಟು ಉದ್ವೇಗ ಅಥವಾ ನಿಮಿರುವಿಕೆಯನ್ನು ಪಡೆಯದಿದ್ದಾಗ ಈ ಲೈಂಗಿಕ ಸಂಬಂಧಿತ ರೋಗವು ಸಂಭವಿಸುತ್ತದೆ.
ಅಂದರೆ ಶಿಶ್ನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಕ್ಕೆ ರಕ್ತ ಪೂರೈಕೆಯು ಸಾಕಾಗದೆ ಇದ್ದಾಗ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಉಂಟಾಗುತ್ತದೆ. ಕೋವಿಡ್ ಸಾಂಕ್ರಾಮಿಕ ನಂತರ ಉಂಟಾಗುತ್ತಿರುವ ಈ ಸಮಸ್ಯೆಗೂ ಇದೇ ಕಾರಣವನ್ನು ವೈದ್ಯರು ನೀಡಿದ್ದಾರೆ.
ಸರಳವಾಗಿ ಹೇಳೋದಾದರೆ ಕೋವಿಡ್ ನಂತರ ಆತಂಕ, ಒತ್ತಡ ಪುರುಷರಲ್ಲಿ ಹೆಚ್ಚಾಗಿದ್ದು, ಈ ಒತ್ತಡದಿಂದಾಗಿ ರಕ್ತನಾಳಗಳು ಕಿರಿದಾಗುತ್ತವೆ. ಇದು ನೇರವಾಗಿ ನಿಮಿರುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆ ಒತ್ತಡದ ಕಾರಣ ಪುರುಷರಲ್ಲಿ ನಿಮಿರುವಿಕೆ ಸಮಸ್ಯೆ ಹೆಚ್ಚಾಗಲು ಪ್ರಮುಖ ಅಂಶ ಎಂದು ವೈದ್ಯರು ತಿಳಿಸಿದ್ದಾರೆ.
ಚಿಂತೆ ಬೇಡ, ಚಿಕಿತ್ಸೆ ಲಭ್ಯವಿದೆ
ಆಸ್ಪತ್ರೆಯ ಸಮಾಲೋಚಕ ಮೂತ್ರಶಾಸ್ತ್ರಜ್ಞರಾದ ಡಾ ಅವಿನಾಶ್ ಟಿಎಸ್ ಅವರು, ಸಾಂಕ್ರಾಮಿಕ ರೋಗದ ನಂತರ ಇಡಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಒಬ್ಬ ವ್ಯಕ್ತಿಯು ಸಾಮಾನ್ಯ ನಿಮಿರುವಿಕೆ ಹೊಂದಲು, ಉತ್ತಮ ರಕ್ತದ ಹರಿವು ಅಗತ್ಯವಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: Health Tips: ಟೀ ಜೊತೆ ಸಿಗರೇಟ್ ಸೇದುತ್ತೀರಾ? ಇನ್ಮುಂದೆ ಈ ತಪ್ಪು ಮಾಡ್ಲೇಬೇಡಿ
ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದಾಗ ರಕ್ತನಾಳಗಳು ಕಿರಿದಾಗುತ್ತವೆ, ಇದು ಇಡಿಗೆ ಕಾರಣವಾಗುತ್ತದೆ. ಈ ಪ್ರಕರಣದಲ್ಲಿ ಕಂಡುಬರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಸಮಾಲೋಚನೆ ಮತ್ತು ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಸಾಮಾನ್ಯವಾಗಿ ವಯಸ್ಸಾದ ರೋಗಿಗಳಿಗೆ ಶಿಶ್ನ ಕಸಿ ಅಗತ್ಯವಿರುವ ಆಕ್ರಮಣಕಾರಿ ಶಸ್ತ್ರಚಿಕಿತ್ಸೆಗಳ ಅಗತ್ಯವಿರುತ್ತದೆ. ಹೆಚ್ಚಿನ ED ಮತ್ತು MI ಪ್ರಕರಣಗಳನ್ನು ಸಮಾಲೋಚನೆ ಮತ್ತು ಮೌಖಿಕ ಔಷಧಿಗಳ ಸಂಯೋಜನೆ ಮತ್ತು ಪರಸ್ಪರ ಸಂಬಂಧದಲ್ಲಿನ ಬದಲಾವಣೆಯಿಂದ ಚಿಕಿತ್ಸೆ ನೀಡಬಹುದು ಎಂದು ವೈದ್ಯರು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ