ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದ (Bad Food Plan And Bad Lifestyle) ಜನರು ಸ್ಥೂಲಕಾಯ (Obesity), ಬೊಜ್ಜು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದರಿಂದ ಹಲವು ಕಾಯಿಲೆಗಳಿಗೆ (Disease) ತುತ್ತಾಗುತ್ತಾರೆ. ರಕ್ತದೊತ್ತಡ, ಮಧುಮೇಹ (Diabetes), ಹೃದ್ರೋಗ ಸಮಸ್ಯೆ ಉಂಟಾಗುತ್ತದೆ. ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸುವುದು, ದೈಹಿಕ ಚಟಿವಟಿಕೆಯ ಕೊರತೆಯು ಕಾಯಿಲೆಗಳು ಬೇಗ ದೇಹ ಸೇರುವಂತೆ ಮಾಡುತ್ತವೆ. ಕೆಟ್ಟ ಜೀವನಶೈಲಿಯ ಅಭ್ಯಾಸಗಳು ದೊಡ್ಡ ತೊಂದರೆ ಉಂಟು ಮಾಡುತ್ತದೆ. ಹೀಗಾಗಿ ಮಧುಮೇಹ ಮತ್ತು ಹೃದ್ರೋಗ ಸಮಸ್ಯೆ ಇರುವವರಿಗೆ ವ್ಯಾಯಾಮ ಮತ್ತು ಯೋಗ ಚಟುವಟಿಕೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ.
ಬೊಜ್ಜು ಕರಗಿಸಲು ವಾಕಿಂಗ್ ಬೆಸ್ಟ್ ಆಯ್ಕೆ
ಹೆಚ್ಚಿರುವ ಬೊಜ್ಜು ಕರಗಿಸಲು ಉತ್ತಮ ಆಯ್ಕೆ ಅಂದ್ರೆ ವಾಕಿಂಗ್. ನೀವು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದರೆ ಬೆಳಗ್ಗೆ ಸೂರ್ಯೋದಯಕ್ಕೂ ಮೊದಲೇ ಏಳುವುದನ್ನು ರೂಢಿಸಿಕೊಳ್ಳಿ. ನಿತ್ಯ ಕರ್ಮ ಮುಗಿಸಿ, ಬೆಳಗ್ಗೆ, ವಾಕಿಂಗ್ , ಜಾಗಿಂಗ್, ಕೆಲವು ಲಘು ವ್ಯಾಯಾಮ ಇಲ್ಲವೇ ಯೋಗ ಮಾಡಿ.
ಈ ಅಭ್ಯಾಸವು ನಿಮ್ಮನ್ನು ಆರೋಗ್ಯಕರವಾಗಿ ಇರಿಸಲು ಸಹಕಾರಿ. ಜೊತೆಗೆ ಸ್ಥೂಲಕಾಯ ಸಮಸ್ಯೆ ತೊಡೆದು ಹಾಕಲು ಪರಿಣಾಮಕಾರಿ. ಅಲ್ಲದೇ ಬೆಳಗ್ಗೆ ವಾಕಿಂಗ್, ಜಾಗಿಂಗ್ ಮತ್ತು ರನ್ನಿಂಗ್ ಮಾಡುವುದು ನಿಮ್ಮ ಕೆಲವು ಆರೋಗ್ಯ ಸಮಸ್ಯೆ ನಿವಾರಿಸಲು ಸಹ ಸಹಾಯ ಮಾಡುತ್ತದೆ.
ಮಧುಮೇಹ, ಹೃದ್ರೋಗ, ರಕ್ತದೊತ್ತಡ ಹಾಗೂ ಹೊಟ್ಟೆಯ ಅಸ್ವಸ್ಥತೆ ಸಮಸ್ಯೆ ನಿವಾರಿಸಲು ಬೆಳಗ್ಗಿನ ವಾಕಿಂಗ್ ಸಾಕಷ್ಟು ಉತ್ತಮ ಪ್ರಯೋಜನ ನೀಡುತ್ತದೆ. ಮತ್ತು ಕಾಯಿಲೆ ತೊಡೆದು ಹಾಕಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಊಟ ಮತ್ತು ಉಪಹಾರದ ನಂತರ ವಾಕಿಂಗ್ ಮಾಡಿ
ವಾಕಿಂಗ್ ದೇಹಕ್ಕೆ ಟಾನಿಕ್ ಇದ್ದಂತೆ. ನೀವು ಮಧ್ಯಾಹ್ನದ ಊಟದ ನಂತರ ಸ್ವಲ್ಪ ನಡೆಯಿರಿ. ಇದು ಆಹಾರ ಜೀರ್ಣವಾಗಲು ಮತ್ತು ಶಕ್ತಿಯ ಪರಿವರ್ತನೆಗೆ ಸಹಾಯ ಮಾಡುತ್ತದೆ. ಅಲ್ಲದೇ ರಕ್ತದ ಸಕ್ಕರೆ ಪ್ರಮಾಣ ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ ಅಂತಾರೆ ತಜ್ಞರು.
ಊಟ ಮತ್ತು ಉಪಹಾರದ ನಂತರ ಹತ್ತು ನಿಮಿಷ ವಾಕಿಂಗ್ ಮಾಡುವುದು ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯ ಕಾಪಾಡುತ್ತದೆ. ಊಟದ ನಂತರ ನಡೆಯುವ ಅಭ್ಯಾಸವು ದೇಹದ ರಕ್ತದ ಗ್ಲೂಕೋಸ್ ಮಟ್ಟ ನಿಯಂತ್ರಿಸುತ್ತದೆ.
ಬೊಜ್ಜು ಹೆಚ್ಚಳ ಮಧುಮೇಹಕ್ಕೆ ಕಾರಣ
ಮಧುಮೇಹ ಮತ್ತು ಪ್ರಿಡಿಯಾಬಿಟಿಸ್ ಸಮಸ್ಯೆಗೆ ಬೊಜ್ಜು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಹಾಗಾಗಿ ಬೊಜ್ಜು ಕರಗಿಸುವುದು ಕೆಲವು ಕಾಯಿಲೆಗಳಿಂದ ನಿಮ್ಮನ್ನ ರಕ್ಷಣೆ ಮಾಡುತ್ತದೆ. ಜನರ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗಲು ಸ್ಥೂಲಕಾಯ ಕಾರಣವಾಗಿದೆ. ಹಾಗಾಗಿ ನಡಿಗೆ ಬೊಜ್ಜು ಕರಗಲು ಸಹಾಯ ಮಾಡುತ್ತದೆ.
ತಿಂದ ನಂತರ ನೀವು ಎಷ್ಟು ಸಮಯ ನಡೆಯಬೇಕು?
ಸಂಶೋಧನೆಯ ಪ್ರಕಾರ, ತಿಂದ ನಂತರ 60 ರಿಂದ 90 ನಿಮಿಷ ವಾಕಿಂಗ್ ಮಾಡುವುದು ಬೊಜ್ಜು ಸಮಸ್ಯೆ ಕಡಿಮೆ ಮಾಡುತ್ತದೆ. ಮತ್ತು ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆ ಕಡಿಮೆ ಮಾಡುತ್ತದೆ.
ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆ ಆರೋಗ್ಯದ ಮೇಲೆ ಇತರ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯ, ಹೃದಯಾಘಾತ ಸಮಸ್ಯೆ ಹುಟ್ಟು ಹಾಕುತ್ತದೆ.
ಹಾಗಾಗಿ ತಿಂದ ನಂತರ ಸ್ವಲ್ಪ ನಡೆಯುವುದು ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿಡುತ್ತದೆ. ಗ್ಯಾಸ್ ಮತ್ತು ಉಬ್ಬುವಿಕೆ ಸಮಸ್ಯೆ ನಿವಾರಿಸುತ್ತದೆ.
ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!
ಊಟದ ನಂತರ ವಾಕಿಂಗ್ ಮಾಡಿದ್ರೆ ಒತ್ತಡದ ಹಾರ್ಮೋನ್ ಗಳಾದ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಆತಂಕ ಮತ್ತು ಖಿನ್ನತೆ ಸಮಸ್ಯೆ ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ