Sleeping And Health: ಚೆನ್ನಾಗಿ ನಿದ್ರಿಸಿದ್ದರೂ ಮರುದಿನ ಆಲಸ್ಯ ಉಂಟಾಗಲು ಕಾರಣವೇನು?

ಅನೇಕ ಬಾರಿ ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಕಾಲ ಆರಾಮವಾಗಿ ಮಲಗಿ ನಿದ್ದೆ ಮಾಡಿದ ನಂತರವೂ ನೀವು ಬೆಳಿಗ್ಗೆ ದಣಿವು ಮತ್ತು ಆಲಸ್ಯ ಅನುಭವಿಸುತ್ತೀರಿ. ಇದು ಒಂದು ಅಥವಾ ಎರಡು ದಿನವಿದ್ದರೆ ಸಾಮಾನ್ಯವೆಂದು ಭಾವಿಸಬಹುದು. ಆದರೆ ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ ನಂತರವೂ ಮರುದಿನ ಆಲಸ್ಯ ಅನುಭವಿಸುತ್ತಿದ್ದರೆ ಕಾಳಜಿ ವಹಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತುಂಬಾ ದಣಿದಾಗ (Tired) ಚೆನ್ನಾಗಿ ಮಲಗಿ ಒಳ್ಳೆಯ ನಿದ್ರೆ (Sleep) ಮಾಡಬೇಕು ಎಂದು ಎಲ್ಲರೂ ಅಂದುಕೊಳ್ತಾರೆ. ಅಂದ ಹಾಗೆ, ವ್ಯಕ್ತಿಯ ಸಂಪೂರ್ಣ ಆರೋಗ್ಯಕ್ಕೆ (Health) ಚೆನ್ನಾಗಿ ನಿದ್ದೆ ಮಾಡುವುದು ತುಂಬಾ ಮುಖ್ಯ. ನಿಮ್ಮ ದೈಹಿಕ ಮತ್ತು ಮಾನಸಿಕ (Physical And Mental) ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ದಿನವಿಡಿ ಕೆಲಸ ಮಾಡಿದ ಸುಸ್ತು ಮತ್ತು ಆಯಾಸವನ್ನು ದೂರ ಮಾಡಲು ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಚೆನ್ನಾಗಿ ನಿದ್ದೆ ಮಾಡುವುದು ತಂಬಾ ಮುಖ್ಯ. ರಾತ್ರಿಯ ಎಂಟು ಗಂಟೆ ಚೆನ್ನಾಗಿ ನಿದ್ದೆ ಮಾಡಿದ ನಂತರ ಮರುದಿನದ ಕೆಲಸ ಮತ್ತು ಕಾರ್ಯಗಳಿಗೆ ದೇಹವನ್ನು ಸಿದ್ಧಪಡಿಸುವುದು ಮುಖ್ಯ. ಅದಕ್ಕಾಗಿ ನೀವು ಚೆನ್ನಾಗಿ ನಿದ್ದೆ ಮಾಡಬೇಕು.

    ಉತ್ತಮ ನಿದ್ದೆಯ ನಂತರವೂ ಮರುದಿನದ ಆಲಸ್ಯಕ್ಕೆ ಕಾರಣವೇನು?

    ಆದರೆ ಅನೇಕ ಬಾರಿ ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಕಾಲ ಆರಾಮವಾಗಿ ಮಲಗಿ ನಿದ್ದೆ ಮಾಡಿದ ನಂತರವೂ ನೀವು ಬೆಳಿಗ್ಗೆ ದಣಿವು ಮತ್ತು ಆಲಸ್ಯ ಅನುಭವಿಸುತ್ತೀರಿ. ಇದು ಒಂದು ಅಥವಾ ಎರಡು ದಿನವಿದ್ದರೆ ಸಾಮಾನ್ಯವೆಂದು ಭಾವಿಸಬಹುದು.

    ಆದರೆ ನೀವು ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ ನಂತರವೂ ಮರುದಿನ ದಣಿವು, ಆಲಸ್ಯ ಅನುಭವಿಸುತ್ತಿದ್ದರೆ, ನಿಮ್ಮ ದೇಹದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸುವುದು ತುಂಬಾ ಮುಖ್ಯ.

    ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

    ಶೀಘ್ರದಲ್ಲೇ ಯಾವ ರೋಗಕ್ಕೆ ತುತ್ತಾಗುತ್ತೀರಿ ಎಂಬುದರ ಸಂಕೇತ?

    ಆಯುರ್ವೇದ ತಜ್ಞೆ ಡಾ. ನಿತಿಕಾ ಕೊಹ್ಲಿ ಅವರು ಬೆಳಿಗ್ಗೆ ತಾಜಾ ದಿನವನ್ನು ಆರಂಭಿಸಲು ಮತ್ತು ತಾಜಾತನ ಅನುಭವಿಸಲು ಮತ್ತು ದಿನವಿಡೀ ಸಕ್ರಿಯವಾಗಿರಲು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸುಲಭ ಮತ್ತು ಪರಿಣಾಮಕಾರಿ ಪರಿಹಾರ ಶೇರ್ ಮಾಡಿದ್ದಾರೆ. ನಮ್ಮ ಸುತ್ತಲೂ ಮತ್ತು ಜಗತ್ತಿನಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತವೆ.

    ಕೊರೊನೊ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನಾವು ಸುಪ್ತ ಸ್ಥಿತಿಗೆ ಹೋಗದಂತೆ ಮನೆಯಿಂದಲೇ ಕೆಲಸ ಮಾಡುವುದು ಇಡೀ ಜೀವನವನ್ನು ಬದಲಾಯಿಸಿದೆ. ಇನ್‌ಸ್ಟಾ ಪೋಸ್ಟ್‌ನಲ್ಲಿ ಅವರು ಬರೆದಿರುವ ಪ್ರಕಾರ, ಪ್ರತಿದಿನ ಆರೋಗ್ಯಕರ ಮತ್ತು ತಾಜಾತನ ಅನುಭವಿಸಲು ನಿಮ್ಮ ದಿನಚರಿಯಲ್ಲಿ ನೀವು ಕೆಲವು ಅಗತ್ಯ ಬದಲಾವಣೆ ಮಾಡಿಕೊಳ್ಳಿ.

    ಬೇಗ ಏಳುವುದು

    ಬೆಳಿಗ್ಗೆ ತಾಜಾ ಮತ್ತು ಪೂರ್ಣ ಶಕ್ತಿಯ ತಾಜಾತನದ ಜೊತೆ ನೀವು ಏಳಲು ಡಾ. ನಿತಿಕಾ ಬೆಳಿಗ್ಗೆ ಬೇಗನೆ ಏಳಲು ಸಲಹೆ ನೀಡುತ್ತಾರೆ. ಬೆಳಿಗ್ಗೆ 6 ಗಂಟೆಯ ಮೊದಲು ಎದ್ದೇಳಲು ಪ್ರಯತ್ನಿಸಿ ಎಂದು ಅವರು ತಿಳಿಸಿದ್ದಾರೆ. ಇದು ನಿಮ್ಮನ್ನು ಆರೋಗ್ಯವಾಗಿಡುವ ಜೊತೆಗೆ ನಿಮ್ಮ ಮನಸ್ಸನ್ನು ತಾಜಾ ಮತ್ತು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ.

    ಪ್ರತಿದಿನ ಮಸಾಜ್ ಮಾಡುವುದು

    ನೀವು ಆರಾಮವಾಗಿ ಮಲಗಿದ ನಂತರ ಬೆಳಿಗ್ಗೆ ಸುಸ್ತಾಗಿ ಎದ್ದರೆ, ಪ್ರತಿದಿನ 20 ರಿಂದ 25 ನಿಮಿಷ ಕಾಲ ನಿಮ್ಮ ದೇಹವನ್ನು ಎಣ್ಣೆಯಿಂದ ಮಸಾಜ್ ಮಾಡಿ. ಇದು ನಿಮ್ಮ ಸಂಪೂರ್ಣ ನರಮಂಡಲವು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಮಾಡುತ್ತದೆ. ಮತ್ತು ನಿಮ್ಮ ದೇಹವು ದಿನವಿಡೀ ಸಕ್ರಿಯವಾಗಿರುತ್ತದೆ.

    ನಿಯಮಿತ ಯೋಗ ಮತ್ತು ಪ್ರಾಣಾಯಾಮ

    ಯೋಗ ಮತ್ತು ಪ್ರಾಣಾಯಾಮ ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯಕವಾಗಿದೆ. ಇದು ನಿಮ್ಮ ದೇಹ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಯೋಗ ಮತ್ತು ಪ್ರಾಣಾಯಾಮ ಮಾಡುವುದು ನಿಮ್ಮ ದೇಹದ ಮುಖ್ಯ ಭಾಗಗಳಿಗೆ ಸರಿಯಾದ ಪ್ರಮಾಣದ ರಕ್ತ ಸಂಚಾರ ಮಾಡಲು ಕೆಲಸ ಮಾಡುತ್ತದೆ.

    ನಿದ್ರಾಹೀನತೆ

    ನಿದ್ರಾಹೀನತೆಯು ನಿದ್ರಿಸಲು ಅಸಮರ್ಥತೆಯನ್ನು ಸೂಚಿಸುತ್ತದೆ. ಇದು ಜೆಟ್ ಲ್ಯಾಗ್, ಒತ್ತಡ ಮತ್ತು ಆತಂಕ, ಹಾರ್ಮೋನುಗಳು ಅಥವಾ ಜೀರ್ಣಕಾರಿ ಸಮಸ್ಯೆಗಳಿಂದ ಉಂಟಾಗಬಹುದು. ಇದು ಇನ್ನೊಂದು ಸ್ಥಿತಿಯ ಲಕ್ಷಣವೂ ಆಗಿರಬಹುದು.

    ನಿದ್ರಾಹೀನತೆಯು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಜೀವನದ ಗುಣಮಟ್ಟಕ್ಕೆ ಸಮಸ್ಯಾತ್ಮಕವಾಗಬಹುದು. ಅಲ್ಲದೆ, ಈ ಕೆಳಗಿನ ಕಾಯಿಲೆಗಳಿಗೆ ಅಥವಾ ಸಮಸ್ಯೆಗಳಿಗೆ ಸಂಭಾವ್ಯವಾಗಿ ಕಾರಣವಾಗಬಹುದು:

    ಖಿನ್ನತೆ

    ಕೇಂದ್ರೀಕರಿಸುವ ತೊಂದರೆ

    ಸಿಡುಕುತನ

    ತೂಕ ಹೆಚ್ಚಿಸಿಕೊಳ್ಳುವುದು

    ದುರ್ಬಲಗೊಂಡ ಕೆಲಸ ಅಥವಾ ಶಾಲೆಯ ಕಾರ್ಯಕ್ಷಮತೆ

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ಈ ಅಸ್ವಸ್ಥತೆಯು ವಯಸ್ಸಾದ ವಯಸ್ಕರು ಮತ್ತು ಮಹಿಳೆಯರಲ್ಲಿ ಹೆಚ್ಚು ಪ್ರಚಲಿತವಾಗಿದೆ. ನಿದ್ರಾಹೀನತೆಯನ್ನು ಸಾಮಾನ್ಯವಾಗಿ ಮೂರು ವಿಧಗಳಲ್ಲಿ ಒಂದಾಗಿ ವರ್ಗೀಕರಿಸಲಾಗಿದೆ.
    Published by:renukadariyannavar
    First published: