Health Tips: 30 ವರ್ಷ ವಯಸ್ಸಾದ ಮಹಿಳೆಯರು ಈ ವಿಚಾರದ ಬಗ್ಗೆ ಗಮನ ಹರಿಸಲೇಬೇಕು!

ಮಹಿಳೆಯರ ದೈಹಿಕ ಆರೋಗ್ಯದ ಅಗತ್ಯತೆಗಳು ಮೂವತ್ತರ ಹರೆಯದಲ್ಲಿ ಬದಲಾಗುತ್ತವೆ. ಆರೋಗ್ಯ ಕಾಪಾಡಿಕೊಳ್ಳಲು ನೀವು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಮಹಿಳೆಯರು ಹೆಚ್ಚುವರಿ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮೂವತ್ತನೇ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರು (Women) ಕಚೇರಿ ಮತ್ತು ಕುಟುಂಬದ ಜವಾಬ್ದಾರಿ (Family Responsibility) ಮಧ್ಯೆ ತಮ್ಮ ಆರೋಗ್ಯದ (Health) ಬಗ್ಗೆ ಗಮನ ಹರಿಸುವುದೇ ಇಲ್ಲ. ಕೆಲವೊಮ್ಮೆ ಎಲ್ಲಾ ಕರ್ತವ್ಯ ನಿಭಾಯಿಸುವ ಮಹಿಳೆ ತನ್ನ ಆರೋಗ್ಯದತ್ತ ಅಷ್ಟಾಗಿ ಗಮನ ನೀಡಲ್ಲ. ನೀವು ಕಳೆದ ಕೆಲವು ವರ್ಷಗಳಲ್ಲಿ ಯಾವ ಬ್ಯೂಟಿ ಹಾಗೂ ದೈಹಿಕ ಆರೋಗ್ಯ ಹೊಂದಿದ್ದಿರೋ ಮೂವತ್ತರ ಆಸುಪಾಸಿನಲ್ಲೂ ನೀವೂ ಅಷ್ಟೇ ಹೆಲ್ದೀ ಮತ್ತು ಯಂಗ್ ಆಗಿ ಕಾಣಲು ಬಯಸುತ್ತೀರಿ. ಆದರೆ ಮೂವತ್ತರ ಹರೆಯದಲ್ಲಿ ನಿಮ್ಮ ದೇಹವು ನಿಧಾನವಾಗಿ ಬದಲಾಗುತ್ತದೆ. ಮತ್ತು ದೈಹಿಕ ಆರೋಗ್ಯದ ಅಗತ್ಯತೆಗಳು ಮೂವತ್ತರ ಹರೆಯದಲ್ಲಿ ಬದಲಾಗುತ್ತವೆ.

    ನಿಯಮಿತ ಆರೋಗ್ಯ ತಪಾಸಣೆ

    ಆರೋಗ್ಯ ಕಾಪಾಡಿಕೊಳ್ಳಲು ನೀವು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಮಹಿಳೆಯರು ಹೆಚ್ಚುವರಿ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು. ಏಕೆಂದರೆ ಸಾಮಾನ್ಯವಾಗಿ 30 ವರ್ಷ ವಯಸ್ಸಿನ ಮಹಿಳೆಯರು ಪೌಷ್ಟಿಕಾಂಶದ ಕೊರತೆ, ಹಾರ್ಮೋನ್ ಸಮಸ್ಯೆಗೆ ಬಲಿಯಾಗುತ್ತಾರೆ. ಆಯುರ್ವೇದ ತಜ್ಞೆ ಡಾ. ನಿತಿಕಾ ಕೊಹ್ಲಿ, 30 ವರ್ಷ ವಯಸ್ಸಿನ ನಂತರ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳ ಸಾಮಾನ್ಯ ಲಕ್ಷಣಗಳ ಬಗ್ಗೆ ಶೇರ್ ಮಾಡಿದ್ದಾರೆ.

    ನಿತಿಕಾ ಅವರು ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್‌ ಶೇರ್ ಮಾಡಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ಆದ್ರೆ ವಯಸ್ಸು ಹೆಚ್ಚಾದಂತೆ ಗಂಭೀರ ಆರೋಗ್ಯ ಸಮಸ್ಯೆ ತರುತ್ತದೆ ಎಂದು ಹೇಳುವುದಿಲ್ಲ. ನೀವು 30 ರ ಹರೆಯದಲ್ಲಿದ್ದಾಗ ಅನೇಕ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ಈ ಆರೋಗ್ಯ ಸಮಸ್ಯೆ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮತ್ತು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲ ಮಾಡುತ್ತದೆ. ಜೊತೆಗೆ ನೀವು ಕೆಲವು ಪ್ರಮುಖ ಮತ್ತು ಗಂಭೀರ ರೋಗ ಲಕ್ಷಣಗಳ ಬಗ್ಗೆ ತಿಳಿಯುವುದು ತುಂಬಾ ಮುಖ್ಯ.

    ತೂಕದ ಹೆಚ್ಚಳ

    ನಿಮ್ಮ ಹೊಟ್ಟೆಯ ಸುತ್ತ ಹೆಚ್ಚುವರಿ ಕೊಬ್ಬು ನಿರ್ದಿಷ್ಟ ಒಳಾಂಗಗಳ ಕೊಬ್ಬನ್ನು ಹೆಚ್ಚಿಸುತ್ತದೆ. ಇದು ದೀರ್ಘಾವಧಿ ಕಾಯಿಲೆಗಳ ಸಂಕೇತ ಆಗಿರಬಹುದು. ನಿಮ್ಮ ಚಯಾಪಚಯವು ಮೊದಲಿನಂತೆಯೇ ಇರುವುದಿಲ್ಲ.

    ಹಾರ್ಮೋನ್ ಅಸಮತೋಲನ ತೂಕದ ಹೆಚ್ಚಳಕ್ಕೆ ಕಾರಣ ಆಗಬಹುದು. ಅಂತಹ ಸ್ಥಿತಿಯಲ್ಲಿ ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆ ಈ ಸಮಸ್ಯೆಯಿಂದ ಹೊರ ಬರಲು ನಿಮಗೆ ಸಹಾಯ ಮಾಡಬಹುದು.

    ನಿರಂತರ ಕೂದಲು ನಷ್ಟ

    ನಿರಂತರ ಕೂದಲು ಉದುರುವಿಕೆ ನಿಮ್ಮ ದೇಹದ ಅಗತ್ಯಗಳಿಗೆ ತಕ್ಕಂತೆ ನಿಮ್ಮ ಆಹಾರವನ್ನು ಅಪ್‌ಗ್ರೇಡ್ ಮಾಡುವ ಸಂಕೇತವಾಗಿದೆ. ಈ ವೇಳೆ ಪ್ರೋಟೀನ್, ಕೊಬ್ಬಿನಾಮ್ಲಗಳು ಮತ್ತು ಸತು ಪೌಷ್ಟಿಕಾಂಶದ ಕೊರತೆ ಪರೀಕ್ಷಿಸುವುದು ಒಳ್ಳೆಯದು. ದೀರ್ಘಾವಧಿ ರೋಗ ಲಕ್ಷಣ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

    ಗರ್ಭಿಣಿಯಾಗಲು ತೊಂದರೆ

    30 ರ ನಂತರ ಮಗು ಹೊಂದಲು ಯೋಜನೆ ರೂಪಿಸುವ ಮಹಿಳೆಯರಲ್ಲಿ ನೀವು ಒಬ್ಬರಾಗಿದ್ದರೆ, 30 ರ ನಂತರ ಗರ್ಭಿಣಿಯಾಗುವುದು ಕಷ್ಟ. ಮೇಯೊ ಕ್ಲಿನಿಕ್ ಪ್ರಕಾರ, 30 ರ ನಂತರ ಮಹಿಳೆಯರಲ್ಲಿ ಫಲವತ್ತತೆ ಕ್ಷೀಣಿಸುತ್ತದೆ. ಇದು ಗರ್ಭ ಧರಿಸುವಲ್ಲಿ ತೊಡಕುಗಳ ಅಪಾಯ ಹೆಚ್ಚಿಸುತ್ತದೆ. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಉಂಟಾಗುವ ತೊಡಕುಗಳ ಅಪಾಯ ಹೆಚ್ಚಿಸುತ್ತದೆ.

    ಅವಧಿ ಸಮಸ್ಯೆ

    30 ರ ಹರೆಯದ ಮಹಿಳೆಯರು ಎಂಡೊಮೆಟ್ರಿಯೊಸಿಸ್ ಅಥವಾ ಗರ್ಭಾಶಯದ ಫೈಬ್ರಾಯ್ಡ್‌ಗಳಂತಹ ಪರಿಸ್ಥಿತಿ ಅಭಿವೃದ್ಧಿಪಡಿಸಬಹುದು. ಪಿರಿಯಡ್ಸ್‌ನಲ್ಲಿ ಅನಿಯಮಿತತೆ, ಭಾರೀ ರಕ್ತಸ್ರಾವ ಸಮಸ್ಯೆ ಎದುರಿಸಬಹುದು.

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ಉಸಿರಾಟ ತೊಂದರೆ

    ನಿಮ್ಮ ಶ್ವಾಸಕೋಶದ ಆರೋಗ್ಯ ನೋಡಿಕೊಳ್ಳಿ. ವಯಸ್ಸಾದಂತೆ ಉಸಿರಾಟ ವ್ಯಾಯಾಮ ಮಾಡಿ. 30 ರ ನಂತರ ನಮ್ಮ ಶ್ವಾಸಕೋಶಗಳು ಸ್ವಾಭಾವಿಕವಾಗಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಇದರಿಂದ ಉಸಿರಾಟದ ತೊಂದರೆ, ಆಯಾಸ ಸಮಸ್ಯೆ ಉಂಟಾಗುತ್ತದೆ.
    Published by:renukadariyannavar
    First published: