Adult Health Tips: ನಿಮ್ಮ ಮಕ್ಕಳಿಗೆ ಸೆಕ್ಸ್ ಕುರಿತ ಶಿಕ್ಷಣ ಯಾಕೆ ಮುಖ್ಯ? ಖುಷಿ ಹಾಗೂ ಲೈಂಗಿಕ ಸುರಕ್ಷೆ ಕುರಿತು ಹೀಗೆ ವಿವರಿಸಿ

ನಿಮ್ಮ ಬೆಳೆಯುತ್ತಿರೋ ಮಕ್ಕಳಿಗೆ ಸೆಕ್ಸ್ ಕುರಿತು ಮಾಹಿತಿ ನೀಡುವುದು ಯಾಕೆ ಮುಖ್ಯ? ಎಡವಿ ಬೀಳುವ ಮುನ್ನ ಹಿಡಿದುಕೊಳ್ಳಿ, ಲೈಂಗಿಕ ಜೀವನ ಕುರಿತು ಮಾಹಿತಿ ಹರೆಯದ ಮಕ್ಕಳಿಗೆ ಅಗತ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸೆಕ್ಸ್ ಕುರಿತು ಮಾಹಿತಿ ಇರುವುದೆಷ್ಟು ಮುಖ್ಯವೋ ಅದೇ ರೀತಿಯಾಗಿ ಸೆಕ್ಸುವಲ್ ಟ್ರಾನ್ಸಮಿಟೆಡ್ ಡಿಸೀಸ್ ಅಂದರೆ ಸೆಕ್ಸ್ ಮೂಲಕ ಹರಡುವ ರೋಗಗಳ ಕುರಿತು ಎಚ್ಚರಿಕೆ ಹಾಗೂ ಅದರ ಕುರಿತ ಸಾಮಾನ್ಯ ಶಿಕ್ಷಣ (Education) ಪಡೆಯುವುದು ಅಗತ್ಯ. ಇತ್ತೀಚಿನ ಸಂಶೋಧನೆ ಪ್ರಕಾರ ಸೆಕ್ಸ್ ಕುರಿತ ಆರೋಗ್ಯ ಕಾರ್ಯಕ್ರಮಗಳು ಲೈಂಗಿಕಾಸಕ್ತಿ ಹಾಗೂ ಲೈಂಗಿಕವಾಗಿ ಸಂತೃಪ್ತಿ ಹಾಗೂ ಸೆಕ್ಸ್​ ಕುರಿತ ಮಾಹಿತಿ (Information) ಅದನ್ನು ನೋಡುವ ದೃಷ್ಟಿಯೂ ಬದಲಾಗಲು ಕಾರಣವಾಗುತ್ತದೆ ಎನ್ನಲಾಗಿದೆ. ಈ ಮೂಲಕ ಕಾಂಡೋಮ್​ಗಳ(Condoms) ಬಳಕೆ ಉದ್ದೇಶ, ಬಳಕೆಯ ಮಹತ್ವ ಹಾಗೂ ಆರೋಗ್ಯದ ದೃಷ್ಟಿಯಿಂದ ಇವುಗಳ ಪ್ರಾಧಾನ್ಯವನ್ನು ತಿಳಿಸುತ್ತದೆ. 'PLOS ONE' ಎಂಬ ಪತ್ರಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.

2005-2020 ನಡುವಿನ ಅಧ್ಯಯನದಲ್ಲಿ (Study) ಲೈಂಗಿಕ ಮಾಹಿತಿ ಕಾರ್ಯಾಗಾರದಲ್ಲಿ ನೀಡಲಾಗುವ ಮಾಹಿತಿ ಖುಷಿ ನೀಡುವುದಲ್ಲದೆ ಸೆಕ್ಸ್ ಹಾಗು ಸುರಕ್ಷಿತ ಲೈಂಗಿಕ ಸಂಬಂಧದ ಮೇಲೆ ಪಾಸಿಟಿವ್ ಪರಿಣಾಮಗಳನ್ನು (Positive Effects) ಬೀರುತ್ತದೆ.

ಎಚ್​ಐವಿ ಸೇರಿ ಲೈಂಗಿಕ ರೋಗಗಳ ಹರಡುವಿಕೆ

ವಿಶ್ವಾದ್ಯಂತ ಪ್ರತಿ ವರ್ಷ ಲೈಂಗಿಕ ಆರೋಗ್ಯ, ರಿಪ್ರೊಡಕ್ಟಿವ್ ಹೆಲ್ತ್ (Reproductivity), ಲೈಂಗಿಕ ಸುರಕ್ಷತೆಯ ಮಾಹಿತಿ ಕಾರ್ಯಗಳಿಗಾಗಿ ಬಿಲಿಯನ್​ಗಟ್ಟಲೆ ಡಾಲರ್ಸ್​ ವ್ಯಯಿಸಲಾಗುತ್ತದೆ. ಲೈಂಗಿಕ ಸಂಪರ್ಕ ಸಂತಾನೋತ್ಪತ್ತಿ, ಆರೋಗ್ಯ ಹಕ್ಕುಗಳನ್ನು ಗುರಿಯಾಗಿಸಿ 10 ವರ್ಷಗಳಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ವಿಶ್ವ ಸಂಸ್ಥೆ ಗುರಿ ಇರಿಸಿಕೊಂಡಿತ್ತು. ಹತ್ತು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಇದನ್ನು ಮಾಡಲು ಟಾರ್ಗೆಟ್ ಇಟ್ಟರೂ ಜಗತ್ತಿನಾದ್ಯಂತ ಲೈಂಗಿಕವಾಗಿ ಹರಡುವ ರೋಗಗಳು (STD) ಮತ್ತು ಎಚ್ಐವಿ (HIV) ಪ್ರಕರಣಗಳು ಹಾಗೇ ಇದೆ.

ಕಾಂಡೋಮ್ ಬಳಕೆಗೆ ಪ್ರೋತ್ಸಾಹ

ದಿ ಪ್ಲೆಶರ್ ಪ್ರಾಜೆಕ್ಟ್ ಅಡಿಯಲ್ಲಿ ವಿಶ್ವ ಸಂಸ್ಥೆಯ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಕುರಿತ ಸಂಶೋಧನೆ ವಿಭಾಗದ ಸಿಬ್ಬಂದಿ ಸಂಶೋಧನೆ ನಡೆಸಿ 33 ಕೇಸ್ ಅಧ್ಯಯನ ಮಾಡಿದ್ದಾರೆ. STI/HIV ಅಪಾಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ 33 ಅಂಶಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಲೈಂಗಿಕ ಮಾಹಿತಿ ಪಡೆದ ನಂತರ ವ್ಯಕ್ತಿಯ ಮೇಲೆ ಪಾಸಿಟಿವ್ ಪರಿಣಾಮಗಳು ಬಂದಿರುವುದು ಬಯಲಾಗಿದೆ. ಮಾಹಿತಿ, ಎಟಿಟ್ಯೂಡ್, ನಂಬಿಕೆ, ಕಾನ್ಫಿಡೆನ್ಸ್ ಎಲ್ಲದರಲ್ಲಿಯೂ ಬದಲಾವಣೆ ಕಾಣಿಸಿದೆ. ಹಾಗೆಯೇ ಈ ಮಾಹಿತಿಯಿಂದ ಕಾಂಡೋಮ್ ಬಳಕೆಗೂ ಪ್ರೋತ್ಸಾಹ ಲಭಿಸಿದಂತಾಗಿದೆ.

ಇದನ್ನೂ ಓದಿ: First Time Sex: ಮೊದಲ ಬಾರಿಗೆ ಸೆಕ್ಸ್​​ ಮಾಡುವರಿಗೆ ಇಲ್ಲಿವೆ ಒಂದಷ್ಟು ಉತ್ತಮ ಟಿಪ್ಸ್​

ಗರ್ಭನಿರೋಧಕ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳನ್ನು(Family Planning) ಒಳಗೊಂಡಂತೆ ಇವುಗಳ ಸ್ಥಿತಿಯನ್ನು ಗಮನಿಸಿದಾಗ ಇವುಗಳೆಲ್ಲವೂ ಅಷ್ಟು ಪ್ರಭಾವಶಾಲಿ ರೀತಿಗಳಲ್ಲ ಎನ್ನುವುದು ಬಯಲಾಗಿದೆ. ಹಾಗಾಗಿ ಆರೋಗ್ಯಕರವಾಗಿ ಇದನ್ನು ನಿರ್ವಹಿಸಲು ಎಚ್​ಐವಿಯಂತಹ ಲೈಂಗಿಕ ಸಂಬಂಧಿ ರೋಗಗಳಿಂದ ದೂರವಿರಲು ಇನ್ನಷ್ಟು ಪರಿಣಾಮಕಾರಿಯಾದ ರೀತಿಗಳ ಅಗತ್ಯವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಲೈಂಗಿಕ ಶಿಕ್ಷಣದಲ್ಲೂ ಖುಷಿ

ಲೈಂಗಿಕ ಆರೋಗ್ಯ ಮತ್ತು ಶಿಕ್ಷಣದಲ್ಲಿ ಖುಷಿಯನ್ನು ತೆಗೆಯುವುದು ಪರಿಣಾಮಕಾರಿಯಾಗದೆ ಬದಲಾಗುವ ಅಪಾಯವಿದೆ ಎಂದು ತಂಡವು ತಿಳಿಸಿದೆ. ಲೈಂಗಿಕ ಶಿಕ್ಷಣ ಹಾಗು ಲೈಂಗಿಕ ಮಾಹಿತಿ ಕಾರ್ಯಕ್ರಮಗಳು ಹೇಗೆ, ಯಾವುದರ ಮೇಲೆ ಆಧಾರಿತವಾಗಿವೆ ಎಂಬುದರ ಕುರಿತು ಮರುಚಿಂತನೆಗೆ ಸಂಶೋಧಕರು ಸಲಹೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೆಕ್ಸ್​​ ಮಾಡಿದರೆ ಕೊರೋನಾ ಸೋಂಕು ತಗುಲುತ್ತಾ?​ ಹೀಗಿದೆ ವೈದ್ಯರ ಉತ್ತರ

ಆರೋಗ್ಯ ಪ್ರಚಾರ ಮತ್ತು ಲೈಂಗಿಕ ಶಿಕ್ಷಣದಲ್ಲಿ ಸಿಗುವ ಆನಂದವನ್ನು ಅತಿಯಾಗಿ ವೈಭವೀಕರಿಸಲಾಗಿದೆ. ಮಾಹಿತಿಗಿಂತ ಮುಖ್ಯವಾಗಿ ಇದನ್ನು ತಪ್ಪಾದ ದೃಷ್ಟಿಕೋನದಲ್ಲಿ ಪ್ರತಿಬಿಂಬಿಸಲಾಗುತ್ತಿದೆ. ಲೈಂಗಿಕ ಸಂಪರ್ಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳಲ್ಲಿ ವ್ಯಕ್ತಿಯ ಖುಷಿಯನ್ನು ಪರಿಗಣಿಸುವುದು ಕಾಂಡೋಮ್ ಬಳಕೆಯನ್ನು ಸುಧಾರಿಸುತ್ತದೆ. ಆದ್ದರಿಂದ ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಹೆಚ್ಚಿನ ಬದಲಾವಣೆ ತರಬಹುದು ಎನ್ನಲಾಗಿದೆ.
Published by:Divya D
First published: