ಇತ್ತೀಚಿನ ದಿನಗಳಲ್ಲಿ ಜನರು (People) ಹೆಚ್ಚು ಆರೋಗ್ಯದ (Health) ಬಗ್ಗೆ ಕಾಳಜಿ (Care) ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕೊರೊನಾ ನಂತರದ ದಿನಗಳಲ್ಲಿ ಹಲವು ಕಾಯಿಲೆಗಳು (Disease) ಜನರನ್ನು ತಲ್ಲಣಗೊಳಿಸಿವೆ. ಕಲುಷಿತ ವಾತಾವರಣ, ಗಾಳಿ ಹಾಗೂ ಇತರೆ ಎಲ್ಲಾ ಕೆಟ್ಟ ಅಂಶಗಳಿಂದ ದೇಹವನ್ನು (Body) ರಕ್ಷಿಸಿ ಮತ್ತು ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕರ ಅಭ್ಯಾಸ ರೂಢಿಸಿಕೊಳ್ಳುವುದು ಮುಖ್ಯವಾಗಿದೆ. ಯಾಕೆ ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಪದ್ಧತಿ ಹೊಂದಬೇಕು? ಆರೋಗ್ಯಕರ ಅಭ್ಯಾಸದ ಮೊದಲ ಹಂತವೇ ಆರೋಗ್ಯಕರ ಆಹಾರ ಮತ್ತು ಜೀವನಶೈಲಿ. ಇದು ವ್ಯಕ್ತಿಯನ್ನು ಸದಾ ಸಂತಸದಿಂದ ಹಾಗೂ ಕಾಯಿಲೆಮುಕ್ತವಾಗಿ ಇರಿಸಲು ಸಹಾಯ ಮಾಡುತ್ತದೆ.
ಬಾಲ್ಯದಿಂದಲೇ ಉತ್ತಮ ಅಭ್ಯಾಸ ಯಾಕೆ ರೂಢಿಸಿಕೊಳ್ಳಬೇಕು?
ಹಾಗಾಗಿ ಚಿಕ್ಕಂದಿನಿಂದಲೇ ಮಗುವಿಗೆ ಉತ್ತಮ ಅಂಶಗಳನ್ನು ರೂಢಿಸಬೇಕು. ಆಟ, ಪಾಠ, ಆಹಾರ ಮತ್ತು ಜೀವನಶೈಲಿಯನ್ನು ಚೆನ್ನಾಗಿ ಇರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಮತ್ತು ಉತ್ತಮ ಅಭ್ಯಾಸಗಳಿಂದ ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಹಾಗಾಗಿ ಬಾಲ್ಯದಿಂದಲೇ ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು.
ಪಾಲಕರು ತಮ್ಮ ಮಕ್ಕಳಿಗೆ ತಮ್ಮ ಡಿಎನ್‌ಎ ನೀಡುವಂತೆ ಮುಖ್ಯ ಐದು ಅಭ್ಯಾಸಗಳನ್ನೂ ರೂಢಿಸಬೇಕು. ಇದರ ಲಾಭ ವೃದ್ಧಾಪ್ಯದವರೆಗೂ ಸಿಗುತ್ತದೆ. ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಮಧುಮೇಹ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಯೂರಿಕ್ ಆಸಿಡ್, ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು.
ದಿನವೂ ನಾಲ್ಕು ಲೀಟರ್ ನೀರು ಕುಡಿಯುವುದು.
ಯಾವ ಅಭ್ಯಾಸಗಳು ಒಳ್ಳೆಯದು ಮತ್ತು ಆರೋಗ್ಯಕರ ಅದರಲ್ಲಿ ಮುಖ್ಯವಾದದ್ದು ದಿನವೂ ನಾಲ್ಕು ಲೀಟರ್ ನೀರು ಕುಡಿಯುವುದು. ಬಾಲ್ಯ ಮತ್ತು ವೃದ್ಧಾಪ್ಯ ಯಾವುದೇ ಹಂತವಿರಲಿ ಸಾಕಷ್ಟು ನೀರು ಕುಡಿಯಬೇಕು. ನಿಮ್ಮ ಜೀವಕೋಶಗಳನ್ನು ಸರಿಪಡಿಸಲು ಮತ್ತು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ದೇಹದ ಎಲ್ಲಾ ಭಾಗಗಳನ್ನು ವಿಷಮುಕ್ತವಾಗಿಸುತ್ತದೆ.
ಚೆನ್ನಾಗಿ ಮತ್ತು ಆರೋಗ್ಯಕರ ಪೋಷಕಾಂಶ ಭರಿತ ಪದಾರ್ಥ ತಿನ್ನಿ
ಇದು ಹೆಚ್ಚಿನ ರೋಗಗಳ ಅಪಾಯ ಕಡಿಮೆ ಮಾಡುತ್ತದೆ. ಪೋಷಕಾಂಶ ಕೊರತೆ ಕಡಿಮೆ ಮಾಡುತ್ತದೆ. ಪ್ರತಿದಿನ ಸಮತೋಲಿತ ಮತ್ತು ಆರೋಗ್ಯಕರ ಆಹಾರ ತಿನ್ನಿ. ಪ್ರೋಟೀನ್ ಭರಿತ ಸೋಯಾಬೀನ್, ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಸಿ ಸೇರಿ ಇತರೆ ಪದಾರ್ಥ ತಿನ್ನಿ.
ದಿನವೂ ಎಂಟು ಗಂಟೆ ನಿದ್ದೆ ಮಾಡಿ.
ಆಳವಾದ ನಿದ್ದೆ ಮಾಡಿ ಇದು ನಿಮ್ಮ ಸ್ಕಿನ್ ಮತ್ತು ಆರೋಗ್ಯ ಸುಧಾರಿಸುತ್ತದೆ. ನಿದ್ದೆಯು ದೇಹ ಮತ್ತು ಮೆದುಳಿನ ಜೀವಕೋಶಗಳು ತಮ್ಮನ್ನು ತಾವು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಡಿಮೆ ನಿದ್ರೆ ಮಾಡುವುದು ದೇಹ ಮತ್ತು ಮನಸ್ಸಿನ ಮೇಲೆ ಒತ್ತಡ ಉಂಟು ಮಾಡುತ್ತದೆ. ರೋಗದ ಅಪಾಯ ಹೆಚ್ಚುತ್ತದೆ.
ದಿನವೂ ಅರ್ಧ ಗಂಟೆ ವ್ಯಾಯಾಮ ಮಾಡುವುದು.
ಇದು ತೂಕ ನಿಯಂತ್ರಿಸುತ್ತದೆ. ದೀರ್ಘಕಾಲ ಸೌಂದರ್ಯ ಕಾಪಾಡುತ್ತದೆ. ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಸ್ನಾಯುಗಳು, ಮೂಳೆಗಳ ಆರೋಗ್ಯ ಕಾಪಾಡುತ್ತದೆ. ದಿನವೂ ವಾಕಿಂಗ್, ಸ್ಟ್ರೆಚಿಂಗ್ ಮುಂತಾದ ದೈಹಿಕ ಚಟುವಟಿಕೆ ಮಾಡಿ.
ಧ್ಯಾನ ಮಾಡಿ. ಮತ್ತು ಕೆಟ್ಟ ಚಟಗಳಿಂದ ದೂರವಿರಿ.
ಧ್ಯಾನ ದೇಹ ಮತ್ತು ಮನಸ್ಸನ್ನು ಚೆನ್ನಾಗಿಡುತ್ತದೆ. ಒತ್ತಡ ಕಡಿಮೆ ಮಾಡಿ. ಮಾನಸಿಕ ಶಾಂತಿ ಕಾಪಾಡುತ್ತದೆ.
ಇದನ್ನೂ ಓದಿ: ದಿನಾ 2 ಸೇಬು ತಿಂದ್ರೆ ಕೊಲೆಸ್ಟ್ರಾಲ್ ಸಮಸ್ಯೆ ಬರೋದೇ ಇಲ್ಲ
ಕೆಟ್ಟ ಚಟಗಳಾದ ಕುಡಿತ, ಧೂಮಪಾನ, ತಂಬಾಕು, ಗುಟ್ಕಾ, ಪಾನ್ ಮಸಾಲಾ ತಿನ್ನುವುದರಿಂದ ಕೆಟ್ಟ ಅಭ್ಯಾಸಗಳಿಂದ ದೂರವಿರಿ. ಇದು ಕ್ಯಾನ್ಸರ್ ನಂತಹ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ಕೊಳಕು ಮತ್ತು ಕೊಬ್ಬಿನ ಆಹಾರ, ಅತಿಯಾದ ಸಿಹಿ ಆಹಾರ, ಒತ್ತಡ ತೆಗೆದುಕೊಳ್ಳುವುದು ಇತ್ಯಾದಿ ತಪ್ಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ