Self-Confidence: ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯೇ? ಈ ಅಂಶಗಳನ್ನು ಅಳವಡಿಸಿಕೊಂಡರೆ ನಿಮಗಿದೆ ಸಕ್ಸಸ್

ಆತ್ಮವಿಶ್ವಾಸವು ನಮ್ಮ ಗುರಿಗಳನ್ನು ತಲುಪಲು ಹೆಚ್ಚು ಸಹಕಾರಿಯಾಗಿವೆ. ವ್ಯಕ್ತಿಯ ಸ್ವಂತ ಸಾಮರ್ಥ್ಯದ ಪ್ರಜ್ಞೆ ಮತ್ತು ವಿವಿಧ ಸನ್ನಿವೇಶಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ಗ್ರಹಿಸಿದ ಸಾಮರ್ಥ್ಯ ಎಂಬುದಾಗಿ ಆತ್ಮವಿಶ್ವಾಸವನ್ನು ಪರಿಗಣಿಸಲಾಗುತ್ತದೆ. ಆತ್ಮವಿಶ್ವಾಸವುಳ್ಳ ವ್ಯಕ್ತಿಯು ಹೊಸ ಅವಕಾಶಗಳ ಲಾಭವನ್ನು ಪಡೆಯಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆತ್ಮವಿಶ್ವಾಸವು (Confidence) ನಮ್ಮ ಗುರಿಗಳನ್ನು ತಲುಪಲು ಹೆಚ್ಚು ಸಹಕಾರಿಯಾಗಿವೆ. ವ್ಯಕ್ತಿಯ ಸ್ವಂತ ಸಾಮರ್ಥ್ಯದ ಪ್ರಜ್ಞೆ ಮತ್ತು ವಿವಿಧ ಸನ್ನಿವೇಶಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ಗ್ರಹಿಸಿದ ಸಾಮರ್ಥ್ಯ ಎಂಬುದಾಗಿ ಆತ್ಮವಿಶ್ವಾಸವನ್ನು ಪರಿಗಣಿಸಲಾಗುತ್ತದೆ. ಆತ್ಮವಿಶ್ವಾಸವುಳ್ಳ ವ್ಯಕ್ತಿಯು ಹೊಸ ಸವಾಲುಗಳನ್ನು (challenge) ಎದುರಿಸಬಹುದು. ಹೊಸ ಅವಕಾಶಗಳ (Opportunity) ಲಾಭವನ್ನು ಪಡೆಯಬಹುದು. ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇದ್ದರೆ ನಾವು ಅಸುರಕ್ಷಿತ, ಸ್ವಯಂ-ಅನುಮಾನ, ಖಚಿತ ಮತ್ತು ಸ್ವಯಂ ಪ್ರಜ್ಞೆಯನ್ನು (Self-consciousness) ಅನುಭವಿಸಬಹುದು. ಆತ್ಮವಿಶ್ವಾಸವನ್ನು ನಮ್ಮಲ್ಲಿ ಬೆಳೆಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ

ಆತ್ಮವಿಶ್ವಾಸವನ್ನು ಹೇಗೆ ನಿರ್ಮಿಸಿಕೊಳ್ಳುವುದು
ಸಕಾರಾತ್ಮಕ ಪ್ರತಿಕ್ರಿಯೆಗೆ ನಮ್ಮನ್ನು ನಾವು ತೆರೆದುಕೊಂಡರೆ ನಮ್ಮಲ್ಲಿ ಆತ್ಮವಿಶ್ವಾಸ ತನ್ನಿಂದ ತಾನೇ ಆರಂಭಗೊಳ್ಳುತ್ತದೆ. ಯಶಸ್ವಿ ಅನುಭವಗಳು ಆತ್ಮವಿಶ್ವಾಸದೆಡೆಗೆ ಮುನ್ನುಗ್ಗಿಸುತ್ತವೆ.

ನಿಮ್ಮಲ್ಲಿರುವ ಆಂತರಿಕ ವಿಮರ್ಶಕರೊಂದಿಗೆ ಸಂಧಾನ ನಡೆಸಿ
ನಿಮ್ಮಲ್ಲಿರುವ ಆಂತರಿಕ ವಿಮರ್ಶಕರೊಂದಿಗೆ ಸಂಧಾನ ನಡೆಸಿ. ನಾನು ಸಮರ್ಥನಲ್ಲ ಎಂಬುದು ನಮ್ಮ ಮನಸ್ಸಿಗೆ ಬಂದರೆ ನಮ್ಮಲ್ಲಿಯೇ ನಾವು ಧನಾತ್ಮಕ ಚಿಂತೆನಗಳನ್ನು ಬೆಳೆಸಿಕೊಳ್ಳಬಹುದು. ನಮ್ಮಷ್ಟಕ್ಕೆ ನಾವು ಧನಾತ್ಮಕವಾಗಿರಲು ನಮ್ಮನ್ನು ನಾವು ಹುರಿದುಂಬಿಸಿಕೊಳ್ಳುವುದು ಮುಖ್ಯವಾಗಿದೆ. ಹೀಗೆ ಮಾಡುವುದರಿಂದ ಆತ್ಮವಿಶ್ವಾಸ ತನ್ನಿಂದ ತಾನೇ ಬೆಳೆಯುತ್ತದೆ.

ಸಕಾರಾತ್ಮಕ ಗುಣಗಳನ್ನು ದೃಢೀಕರಿಸಿ
ನನ್ನಲ್ಲಿ ಸಕಾರಾತ್ಮಕ ಗುಣಗಳಿವೆ ಎಂಬುದನ್ನು ನಾವು ಮನನ ಮಾಡಿಕೊಳ್ಳುವುದು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ರಹದಾರಿ ಎಂದೆನಿಸಿದೆ. ನಾನು ಕರುಣಾಮಯಿ, ನಾನು ಬುದ್ಧಿವಂತ ಹೀಗೆ ನಮಗೆ ನಾವೇ ಬೆನ್ನು ತಟ್ಟಿಕೊಳ್ಳುವುದು.

ಇದನ್ನೂ ಓದಿ: Collagen: ನಿಮ್ಮ ಚರ್ಮ ಹೊಳಪನ್ನು ಕಳೆದುಕೊಳ್ಳುತ್ತಿದೆಯೇ? ಹಾಗಿದ್ರೆ ಸಮಸ್ಯೆ ಇದೆ!

ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಬಲಪಡಿಸಿ
ಸಕಾರಾತ್ಮಕ ಗುಣಗಳನ್ನು ವೃದ್ಧಿಸುವುದರ ಜೊತೆಗೆ ನಿಮ್ಮಲ್ಲಿರುವ ಕೌಶಲ್ಯ ಹಾಗೂ ಸಾಮರ್ಥ್ಯಗಳನ್ನು ಬಲಪಡಿಸಿ. ನನಗೆ ಈ ಸಾಮರ್ಥ್ಯವಿದೆ. ನನ್ನಲ್ಲಿ ಕಷ್ಟಪಡುವ ಗುಣವಿದೆ, ಹೀಗೆ ನಮ್ಮನ್ನು ನಾವು ಪ್ರೋತ್ಸಾಹಿಸಿಕೊಳ್ಳುವುದು ಆತ್ವವಿಶ್ವಾಸವನ್ನು ನಮ್ಮಲ್ಲುಂಟು ಮಾಡಲು ನೆರವನ್ನೀಯುತ್ತದೆ.

ಸ್ವಯಂ-ಸಹಾನುಭೂತಿಯನ್ನು ಅಭ್ಯಸಿಸಿ
ಸ್ವಯಂ ಸ್ವಹಾನುಭೂತಿಯಿಂದ ನಮ್ಮನ್ನು ನಾವು ದಯೆಯಿಂದ ನಡೆಯಿಸಿಕೊಳ್ಳಬಹುದಾಗಿದೆ. ಸ್ವಯಂ ಸಹಾನುಭೂತಿಯು ನಮ್ಮ ಬಗ್ಗೆ ಹೆಚ್ಚು ಸಕಾರಾತ್ಮಕ ಮನೋಭಾವವನ್ನು ಹೊಂದಲು ಸಹಾಯ ಮಾಡುತ್ತದೆ, ಇದು ಆತ್ಮ ವಿಶ್ವಾಸಕ್ಕೆ ಸಹಾಯ ಮಾಡುತ್ತದೆ. ಋಣಾತ್ಮಕ ಮೌಲ್ಯಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಿದೆ.

ಸ್ವಯಂ – ಕೇಂದ್ರಿತ ಆಶಾವಾದವನ್ನು ಬೆಳೆಸಿಕೊಳ್ಳಿ
ಆಶಾವಾದಿಯಾಗಿರುವುದು ಭವಿಷ್ಯವನ್ನು ಭರವಸೆ ಮತ್ತು ಸಕಾರಾತ್ಮಕತೆಯಿಂದ ನೋಡುವುದನ್ನು ಒಳಗೊಂಡಿರುತ್ತದೆ. ಹೆಚ್ಚಿನ ಆರೋಗ್ಯವನ್ನು ಒಳಗೊಂಡಂತೆ ಎಲ್ಲಾ ರೀತಿಯ ಧನಾತ್ಮಕ ಫಲಿತಾಂಶಗಳೊಂದಿಗೆ ಆಶಾವಾದ ಎಂಬುದು ಬದುಕಿನಲ್ಲಿ ತನ್ನದೆ ಆದ ವಿಶಿಷ್ಟ ಪಾತ್ರ ಹೊಂದಿದೆ. ಆತ್ಮವಿಶ್ವಾಸವನ್ನು ಪಡೆಯಲು, ನಾವು ಹೆಚ್ಚು ಆಶಾವಾದಿಗಳಾಗಿರಲು ಕೆಲವು ಮಾರ್ಗಗಳಿವೆ.

ನಿರ್ದಿಷ್ಟವಾಗಿ ನಮ್ಮ ಬಗ್ಗೆ ಮತ್ತು ನಮ್ಮ ಸಾಮರ್ಥ್ಯಗಳ ಬಗ್ಗೆ ಧನಾತ್ಮಕವಾಗಿರುವುದು ಮುಖ್ಯವಾಗಿದೆ. ನೀವು ಮಾಡುವ ಒಳ್ಳೆಯ ಕೆಲಸಗಳ ಮೇಲೆ ಕೇಂದ್ರೀಕರಿಸಬಹುದು. ನಿಮ್ಮ ಗುರಿಗಳನ್ನು ನೀವು ಯಶಸ್ವಿಯಾಗಿ ತಲುಪುತ್ತೀರಿ ಎಂದು ನೀವು ಊಹಿಸಿಕೊಳ್ಳಬಹುದು.

ಇದು ನಿಮ್ಮ ಯಶಸ್ಸಿನ ಕಲ್ಪನೆಗೆ ನಿಮ್ಮ ಮನಸ್ಸನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಗುರಿಗಳನ್ನು ಅನುಸರಿಸುವಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸಲು ಸಹಾಯ ಮಾಡುತ್ತದೆ. ನಮ್ಮಲ್ಲಿ ಹೆಚ್ಚಿವರು ಸ್ವಲ್ಪ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಲು ಬಯಸುತ್ತಾರೆ.

ಆಶಾದಾಯಕವಾಗಿ, ಈ ಲೇಖನದಲ್ಲಿ ಚರ್ಚಿಸಲಾದ ಅಂಶಗಳು ನಿಮಗೆ ಸ್ವಲ್ಪ ಒಳನೋಟವನ್ನು ಪಡೆಯಲು ಮತ್ತು ದೀರ್ಘಾವಧಿಯಲ್ಲಿ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕೆಲವು ಕೌಶಲ್ಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Relationships: ಸಂಬಂಧಗಳಲ್ಲಿ ವಯಸ್ಸಿನ ಅಂತರ ಕೂಡ ಮುಖ್ಯವಂತೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು

ಒಟ್ಟಿನಲ್ಲಿ ಆತ್ಮವಿಶ್ವಾಸ ಎಂಬುದು ಜೀವನವನ್ನು ಸಮರ್ಥವಾಗಿ ಹಾಗೂ ವಿಪರೀತವಾಗಿ ಬರುವ ಯಾವುದೇ ರೀತಿಯ ಅಡೆ-ತಡೆಗಳನ್ನು ಹಿಮ್ಮೇಟಿಸಿ ಮುಂದೆ ಸಾಗುವಂತಹ ಗುಣಗಳನ್ನು ಹೊಂದುವಂತೆ ಸಹಕರಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.ಇಂದೇ ನೀವು ಸಹ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧರಾಗಲು ಪ್ರಯತ್ನಿಸಿ.
Published by:Ashwini Prabhu
First published: