• Home
  • »
  • News
  • »
  • lifestyle
  • »
  • Peanut Oil: ಕಡಲೆಕಾಯಿ ಎಣ್ಣೆಯನ್ನು ಆಹಾರದಲ್ಲಿ ಸೇರಿಸಿದರೆ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

Peanut Oil: ಕಡಲೆಕಾಯಿ ಎಣ್ಣೆಯನ್ನು ಆಹಾರದಲ್ಲಿ ಸೇರಿಸಿದರೆ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Peanut Oil: ಕಡಲೆಕಾಯಿ ಎಣ್ಣೆಯು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

  • Share this:

    ಮನೆಯಲ್ಲಿ (Home) ಅಡುಗೆಗೆ ಸಾಮಾನ್ಯವಾಗಿ ಎಳ್ಳೆಣ್ಣೆ, ಆಲಿವ್ ಎಣ್ಣೆ (Olive Oil), ಕಡಲೆಕಾಯಿ ಎಣ್ಣೆ (Peanut Oil) , ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಒಬ್ಬೊಬ್ಬರು ಒಂದೊಂದು ತರಹದ ಎಣ್ಣೆ ಬಳಸುತ್ತಾರೆ. ಕಡಲೆಕಾಯಿ (Peanut) ಸೀಸನ್ ನಲ್ಲಿ (Season) ಹಸಿ ಕಡಲೆಕಾಯಿ ತಿನ್ನೋ ಮಜಾನೇ ಬೇರೆ. ಹಸಿ ಕಡಲೆಯಾಯಿಯನ್ನು ಕುದಿಸಿ, ಹುರಿದು ಸಹ ತಿನ್ನುತ್ತಾರೆ. ಮನೆಯಲ್ಲಿ ಕೆಲವು ಖಾದ್ಯಗಳ (Recipe ) ತಯಾರಿಕೆಯಲ್ಲಿ ಕಡಲೆಕಾಯಿ ಬಳಕೆ ಮಾಡುವುದು ರೂಢಿಯಲ್ಲಿದೆ. ಕಡಲೆಕಾಯಿ ಅಡುಗೆ ಮನೆಯಲ್ಲಿ ಕಂಡು ಬರುವ ಪ್ರಮುಖ ಪದಾರ್ಥ ಆಗಿದೆ. ಕಡಲೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ನಮಗೆಲ್ಲರಿಗೂ ತಿಳಿದಿದೆ.


    ಕಡಲೆಕಾಯಿ ಎಣ್ಣೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ?


    ಆದರೆ ಕಡಲೆಕಾಯಿ ಎಣ್ಣೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಾವು ಇಲ್ಲಿ ತಿಳಿಯೋಣ. ಆಂಟಿಸೆಪ್ಟಿಕ್, ಸಂಕೋಚಕ, ಆಂಟಿಸ್ಪಾಸ್ಮೊಡಿಕ್, ಫ್ಲೇವನಾಯ್ಡ್ ಮತ್ತು ಫೋಲೇಟ್‌ ನಂತಹ ಅಂಶಗಳು ಕಡಲೆಕಾಯಿ ಎಣ್ಣೆಯಲ್ಲಿ ಸಮೃದ್ಧವಾಗಿವೆ. ಇದು ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂಬುದು ನಿಮಗೆ ಗೊತ್ತಿರಲಿ.


    ಕಡಲೆಕಾಯಿ ಎಣ್ಣೆಯು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಡಲೆ ಎಣ್ಣೆಯನ್ನು ಆಹಾರದಲ್ಲಿ ಸೇರಿಸುವುದು ಮಧುಮೇಹದ ಸಮಸ್ಯೆ ನಿಯಂತ್ರಿಸಲು ಸಾಕಷ್ಟು ಸಹಕಾರಿ ಆಗಿದೆ. ಅಷ್ಟೇ ಅಲ್ಲದೇ ಇದು ಚರ್ಮ ಮತ್ತು ಕೂದಲಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಹಾಗಾಗಿ ಕಡಲೆಕಾಯಿ ಎಣ್ಣೆಗೆ ಹೆಚ್ಚಿನ ಮಹತ್ವವಿದೆ. ಇಂದು ಇಲ್ಲಿ ಕಡಲೆಕಾಯಿ ಎಣ್ಣೆಯ ಆರೋಗ್ಯ ಪ್ರಯೋಜನಗಳನ್ನು ನೋಡೋಣ.


    ಕಡಲೆಕಾಯಿ ಎಣ್ಣೆಯ ಪ್ರಯೋಜನಗಳು ಹೀಗಿವೆ


    ಹೃದಯದ ಆರೋಗ್ಯ ಕಾಪಾಡುತ್ತದೆ


    ಕಡಲೆಕಾಯಿ ಎಣ್ಣೆಯು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಡಲೆಕಾಯಿ ಎಣ್ಣೆ ಸೇವನೆ ಎಚ್‌ಡಿಎಲ್ ಅಂದರೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲ್ಲ. ಇದು ಹಾನಿಕಾರಕ ಕೊಲೆಸ್ಟ್ರಾಲ್ ಅಂದರೆ ಎಲ್‌ಡಿಎಲ್ ಅನ್ನು ಕಡಿಮೆ ಮಾಡುತ್ತದೆ.


    ಮಧುಮೇಹ ನಿಯಂತ್ರಣಕ್ಕೆ ಸಹಕಾರಿ


    ಕಡಲೆಕಾಯಿ ಎಣ್ಣೆ ಮಧುಮೇಹಿಗಳಿಗೆ ಪ್ರಯೋಜನಕಾರಿ ಆಗಿದೆ. ವಾಸ್ತವದಲ್ಲಿ ಕಡಲೆಕಾಯಿ ಎಣ್ಣೆಯಲ್ಲಿರುವ ಒಲೀಕ್ ಆಮ್ಲವು ಉರಿಯೂತದ ಸೈಟೊಕಿನ್ TNF-ಆಲ್ಫಾದ ಪರಿಣಾಮ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಉತ್ಪಾದನೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ಆಹಾರದಲ್ಲಿ ಸೇರಿಸಿದರೆ ಮಧುಮೇಹ ಸಮಸ್ಯೆ ನಿಯಂತ್ರಿಸಬಹುದು.


    ನೋವಿಗೆ ಮದ್ದಾಗಿದೆ


    ನೀವು ಕೀಲು ನೋವಿನ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಕಡಲೆಕಾಯಿ ಎಣ್ಣೆ ಸೇವನೆ ಮಾಡಿ. ಕಡಲೆಕಾಯಿ ಎಣ್ಣೆಯಲ್ಲಿರುವ ಸಂಕೋಚಕ ಗುಣವು ನಿಮ್ಮ ಕೀಲು ನೋವನ್ನು ಚಿಟಿಕೆಯಲ್ಲಿ ಮಾಯವಾಗಿಸುತ್ತದೆ.


    ಚರ್ಮದ ಕಾಳಜಿಗೆ ಸಹಕಾರಿ


    ಬೇಸಿಗೆಯಲ್ಲಿ ಚರ್ಮದಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಡಲೆಕಾಯಿ ಎಣ್ಣೆಯ ಬಳಕೆ ನಿಮಗೆ ಪ್ರಯೋಜನಕಾರಿ ಆಗಿದೆ. ವಿಟಮಿನ್ ಇ ಕಡಲೆಕಾಯಿ ಎಣ್ಣೆಯಲ್ಲಿ ಕಂಡು ಬರುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.


    ಕೂದಲ ಆರೋಗ್ಯ ಮತ್ತು ಕಾಳಜಿಗೆ ಸಹಕಾರಿ


    ಕೂದಲಿನ ಸಮಸ್ಯೆಯಿಂದ ನೀವು ತೊಂದರೆ ಪಡುತ್ತಿದ್ದರೆ ಆಹಾರದಲ್ಲಿ ಕಡಲೆಕಾಯಿ ಎಣ್ಣೆ ಸೇರಿಸಿ. ಕಡಲೆಕಾಯಿ ಎಣ್ಣೆಯಲ್ಲಿ ಇಂತಹ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ಇದು ಕೂದಲ ತುದಿ ಒಡೆದು ಕೂದಲು ಉದುರುವುದನ್ನು ತಡೆಯುತ್ತದೆ.


     ಇನ್ಸುಲಿನ್


    ಕಡಲೆಕಾಯಿ ಎಣ್ಣೆಯಲ್ಲಿರುವ ಒಲೀಕ್ ಆಮ್ಲವು ಉರಿಯೂತದ ಸೈಟೊಕಿನ್ TNF-ಆಲ್ಫಾದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಇನ್ಸುಲಿನ್ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


    ಕಡಲೆಕಾಯಿ ಎಣ್ಣೆಯ ಚರ್ಮಕ್ಕೆ ಒಳ್ಳೆಯದು. ವಿಟಮಿನ್-ಇ ವಯಸ್ಸಾದ ಪರಿಣಾಮ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ದೀರ್ಘಕಾಲ ಯೌವನವಾಗಿ ಕಾಣಲು ಕಡಲೆ ಎಣ್ಣೆ ಸೇವಿಸಬಹುದು.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ನಿಮಗೆ ಪಾದಗಳಲ್ಲಿ ನೋವು ಇದ್ದರೆ ಅಥವಾ ಸಂಧಿವಾತದ ದೂರು ಇದ್ದರೆ, ಕಡಲೆಕಾಯಿ ಎಣ್ಣೆಯು ನಿಮಗೆ ಪ್ರಯೋಜನಕಾರಿ.

    Published by:renukadariyannavar
    First published: