ಹಿರಿಯರಲ್ಲಿನ ರಕ್ತದೊತ್ತಡ-ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ ಈ ಧಾನ್ಯಗಳು..!

ಹಿರಿಯರಿಗೆ ಕಸ್ಟಮೈಸ್ ಮಾಡಿದ ಆಹಾರವು ಅವಶ್ಯಕವಾಗಿದೆ. ಅವರ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ಧಾನ್ಯಗಳನ್ನು ಅವರ ಆಹಾರದಲ್ಲಿ ಸೇರಿಸುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಹೆತ್ತವರು ನಿರ್ದಿಷ್ಟ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮನವೊಲಿಸುವುದು ಸುಲಭವಲ್ಲ. ಏಕೆಂದರೆ ಅವರು ಈಗ ತಮ್ಮದೇ ಆದ ಆಹಾರ ಪದ್ಧತಿಯೊಂದಿಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ನಿಮ್ಮ ಪೋಷಕರು ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯನ್ನು ಹೊಂದಿದ್ದರೆ, ಅವರಿಗೆ ಕಸ್ಟಮೈಸ್ ಮಾಡಿದ ಆಹಾರವು ಅವಶ್ಯಕವಾಗಿದೆ. ಅವರ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಧಾನ್ಯಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ.

ದಿ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಮಧುಮೇಹ ಮತ್ತು ರಕ್ತದೊತ್ತಡವು ಮಧ್ಯವಯಸ್ಕ ಮತ್ತು ವೃದ್ಧರಲ್ಲಿ ಸಾಮಾನ್ಯವಾಗಿದೆ. ಅದಕ್ಕಾಗಿಯೇ ಟಫ್ಟ್ಸ್ ವಿಶ್ವವಿದ್ಯಾಲಯದ ಜೀನ್ ಮೇಯರ್ ಯುಎಸ್‌ಡಿಎ ಹ್ಯೂಮನ್ ನ್ಯೂಟ್ರಿಷನ್ ರಿಸರ್ಚ್ ಸೆಂಟರ್‌ನ ಸಂಶೋಧಕರ ತಂಡವು ಈ ಕುರಿತು ಅಧ್ಯಯನವನ್ನು ನಡೆಸಿದ್ದು, ಕಾಲಾನಂತರದಲ್ಲಿ ಸಂಪೂರ್ಣ ಮತ್ತು ಸಂಸ್ಕರಿಸಿದ-ಧಾನ್ಯಗಳ ಸೇವನೆಯು ಹೃದಯ ಕಾಯಿಲೆಯ ಐದು ಅಪಾಯಕಾರಿ ಅಂಶಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಮೇಲೆ ಈ ಅಧ್ಯಯನ ಕೇಂದ್ರೀಕರಿಸಿದೆ. ಅವುಗಳೆಂದರೆ: ಸೊಂಟದ ಗಾತ್ರ, ರಕ್ತದೊತ್ತಡ , ರಕ್ತದಲ್ಲಿನ ಸಕ್ಕರೆ, ಟ್ರೈಗ್ಲಿಸರೈಡ್ ಮತ್ತು ಎಚ್‌ಡಿಎಲ್ (ಉತ್ತಮ ಕೊಲೆಸ್ಟ್ರಾಲ್).

ಅವರ ಅಧ್ಯಯನದ ಫಲಿತಾಂಶಗಳು:

ಕಡಿಮೆ ಧಾನ್ಯಗಳನ್ನು ತಿನ್ನುವವರ  ಸೊಂಟದ ಗಾತ್ರ ದೊಡ್ಡದಾಗಿರುತ್ತದೆ.

ಆಹಾರದಲ್ಲಿ ಸಂಪೂರ್ಣ ಧಾನ್ಯಗಳನ್ನು ಸೇರಿಸದ ಕಾರಣ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟ ಎರಡರಲ್ಲೂ ಹೆಚ್ಚಳ ಕಂಡಿದ್ದಾರೆ.

ಇದನ್ನೂ ಓದಿ: Rashmika Mandanna: ಗುಡ್​ ಬೈ ಚಿತ್ರದ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ರಶ್ಮಿಕಾ ಮಂದಣ್ಣ: ಫೋಟೋ ವೈರಲ್

ವಿಶೇಷವಾಗಿ ವಯಸ್ಸಾದವರಿಗೆ ಧಾನ್ಯಗಳು ಮಧುಮೇಹ ಮತ್ತು ರಕ್ತದೊತ್ತಡದ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಸಂಶೋಧಕರು ತಿಳಿಸಿದ್ದಾರೆ. ಸಂಪೂರ್ಣ ಗೋಧಿ, ಕಡಲೆ ಹಿಟ್ಟು, ಓಟ್ ಮೀಲ್, ಸಂಪೂರ್ಣ ಓಟ್ಸ್, ಕಂದು ಅಕ್ಕಿ, ವೈಲ್ಡ್‌ ಅಕ್ಕಿ, ಧಾನ್ಯದ ಜೋಳ, ಪಾಪ್‌ಕಾರ್ನ್ (ಉಪ್ಪುರಹಿತ ಮತ್ತು ಅನಿಯಂತ್ರಿತ), ಧಾನ್ಯದ ಬಾರ್ಲಿ - ಈ ಕೆಲವು ಧಾನ್ಯಗಳು ಮಧುಮೇಹಿಗಳು ಮತ್ತು ಬಿಪಿ ರೋಗಿಗಳ ಆರೋಗ್ಯಕ್ಕೆ ಒಳ್ಳೆಯದು.

ಧಾನ್ಯಗಳು ವಯಸ್ಸಾದವರಿಗೆ ಪೌಷ್ಠಿಕಾಂಶದ ಶಕ್ತಿಯ ಕೇಂದ್ರವಾಗಿದೆ.

ಧಾನ್ಯಗಳು ಆಹಾರದ ನಾರಿನ ಉತ್ತಮ ಮೂಲವಾಗಿದೆ: ಇದು ಕರುಳನ್ನು ಆರೋಗ್ಯಕರವಾಗಿರುಸುತ್ತದೆ. ಉತ್ತಮ ರೋಗನಿರೋಧಕ ಶಕ್ತಿ ಮತ್ತು ದೇಹದ ಅಂಗಗಳ ಉತ್ತಮ ಕಾರ್ಯನಿರ್ವಹಣೆಗೆ ಧಾನ್ಯಗಳು ಕಾರಣವಾಗುತ್ತವೆ. ಸಂಸ್ಕರಿಸಿದ ಧಾನ್ಯಗಳಲ್ಲಿ ಯಾವುದೇ ರೀತಿಯ ಆಹಾರದ ನಾರಿನಂಶವನ್ನು ಇರುವುದಿಲ್ಲ ಆದ್ದರಿಂದ ಸಂಸ್ಕರಿಸಿದ ಧಾನ್ಯಗಳನ್ನು ಹೆಚ್ಚು ಉಪಯೋಗಿಸಬೇಡಿ.

ಧಾನ್ಯಗಳು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ: ಏಕೆಂದರೆ ಅವುಗಳು ಕಡಿಮೆ ಕ್ಯಾಲೋರಿ, ಹೆಚ್ಚಿನ ಫೈಬರ್ ಹೊಂದಿರುತ್ತದೆ, ಅನಗತ್ಯ ಕಡು ಬಯಕೆಗಳನ್ನು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತವೆ. ಇದರರ್ಥ ನಿಮ್ಮ ಪೋಷಕರು ತಮ್ಮ ಆಹಾರದಲ್ಲಿ ಮೇಲೆ ತಿಳಿಸಿದ ಕೆಲವು ಧಾನ್ಯಗಳನ್ನು ಸೇರಿಸಿದರೆ ಬೊಜ್ಜು ನಿಯಂತ್ರಿಸಬಹುದು.

ಇದನ್ನೂ ಓದಿ: ದರ್ಶನ್ ಕಡೆಯಿಂದ ಸಿಕ್ತು ಸಿಹಿ ಸುದ್ದಿ: ದಾಸನ 55ನೇ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಶೈಲಜಾ ನಾಗ್

ಅಕಾಲಿಕ ವಯಸ್ಸನ್ನು ತಡೆಯಲು ಧಾನ್ಯಗಳು ಸಹಾಯ ಮಾಡಬಹುದು:  ಏಕೆಂದರೆ ಧಾನ್ಯಗಳನ್ನು ಥಯಾಮಿನ್ (ವಿಟಮಿನ್ ಬಿ 1), ರಿಬೋಫ್ಲಾವಿನ್ (ವಿಟಮಿನ್ ಬಿ 2), ನಿಯಾಸಿನ್ (ವಿಟಮಿನ್ ಬಿ 3), ಫೋಲೇಟ್ (ವಿಟಮಿನ್ ಬಿ 9), ಕಬ್ಬಿಣ, ಮೆಗ್ನೀಶಿಯಮ್ ಮತ್ತು ಸೆಲೆನಿಯಂನಂತಹ ಇತರ ಪೋಷಕಾಂಶಗಳನ್ನು ಹೊಂದಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಎಲ್ಲಾ ಪೋಷಕಾಂಶಗಳು ನಮ್ಮ ದೇಹದಲ್ಲಿನ ಕೋಶಗಳ ಪುನರುತ್ಪಾದನೆಗೆ ಸಹಾಯ ಮಾಡುತ್ತವೆ ಮತ್ತು ಅವು ಹಾನಿಗೊಳಗಾದವುಗಳನ್ನು ಸಹ ಸರಿಪಡಿಸುತ್ತವೆ. ಈ ಕಾರಣದಿಂದಾಗಿ, ದೇಹವು ದೀರ್ಘಕಾಲದವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ನಿಮ್ಮ ಪೋಷಕರು ಆರೋಗ್ಯಕರ, ಸಂತೋಷ ಮತ್ತು ನೋವುರಹಿತ ಜೀವನವನ್ನು ನಡೆಸಬಹುದು.


Published by:Anitha E
First published: