Hypertension: ಅಧಿಕ ರಕ್ತದೊತ್ತಡಕ್ಕೆ ಈ ಹಣ್ಣಿನ ಜ್ಯೂಸ್​ ರಾಮಬಾಣ..!

ಒಂದು ಕೆಂಪು ಹಣ್ಣಿನ ಜ್ಯೂಸ್ ಮಾಡಿಕೊಂಡು ಪ್ರತಿದಿನ ಸೇವಿಸುವುದರಿಂದ ನಿಮಗಿರುವ ಅಧಿಕ ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಕೆಂಪು ಹಣ್ಣು ಎಂದರೆ ಯಾವುದಪ್ಪಾ ಅದು ಅಂತೀರಾ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಅಧಿಕ ರಕ್ತದೊತ್ತಡವು (Hypertension)ನಮಗೆ ಗೊತ್ತಿರಲಾರದೇ ನಮ್ಮ ದೇಹವನ್ನು ಹಾನಿಗೊಳಿಸುತ್ತದೆ. ನಮಗೆ ರಕ್ತದೊತ್ತಡ ಹೆಚ್ಚಿದೆ ಎನ್ನುವುದನ್ನು ಅರಿತುಕೊಂಡ ನಂತರ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಪ್ರತಿದಿನ ವ್ಯಾಯಾಮ, ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಮತ್ತು ಆಹಾರ ಕ್ರಮ ಬದಲಾಯಿಸಿಕೊಂಡರೆ ಈ ಅಧಿಕ ರಕ್ತದೊತ್ತಡವನ್ನು ನಿಭಾಯಿಸಬಹುದು. ಇದನ್ನು ಹಾಗೆಯೇ ಬಿಟ್ಟರೇ, ಕಾಲಾನಂತರದಲ್ಲಿ ಈ ಸ್ಥಿತಿಯು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಮತ್ತು ಕೆಲವು ಸಂದರ್ಭಗಳಲ್ಲಿ ಕುರುಡುತನದಂತಹ ಪರಿಸ್ಥಿತಿಗಳಿಂದಾಗಿ ಮರಣ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದು.

ಆದರೆ, ಇಲ್ಲಿ ತಜ್ಞರ ಪ್ರಕಾರ ಒಂದು ಕೆಂಪು ಹಣ್ಣಿನ ಜ್ಯೂಸ್ ಮಾಡಿಕೊಂಡು ಪ್ರತಿದಿನ ಸೇವಿಸುವುದರಿಂದ ನಿಮಗಿರುವ ಅಧಿಕ ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಕೆಂಪು ಹಣ್ಣು ಎಂದರೆ ಯಾವುದಪ್ಪಾ ಅದು ಅಂತೀರಾ.

ಕಲ್ಲಂಗಡಿ ಹಣ್ಣಿನ ಜ್ಯೂಸ್


ಕಲ್ಲಂಗಡಿ ಹಣ್ಣಿನ ಜ್ಯೂಸ್ ಮಾಡಿಕೊಂಡು ಪ್ರತಿದಿನ ಸೇವಿಸುವುದರಿಂದ ನಿಮಗಿರುವ ಅಧಿಕ ರಕ್ತದೊತ್ತಡವು ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಕಡಿಮೆ ನಾರು ಮತ್ತು ಹೆಚ್ಚಿನ ಸಕ್ಕರೆ ಅಂಶದಿಂದಾಗಿ ಕೂಡಿದ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಪರಿಗಣಿಸುವುದಿಲ್ಲ. ಆದರೆ ಈಗ, ಒಂದು ಅಧ್ಯಯನದ ಪ್ರಕಾರ ಕಲ್ಲಂಗಡಿ ಹಣ್ಣಿನ ಜ್ಯೂಸ್ ನಮಗಿರುವ ಅಧಿಕ ರಕ್ತದೊತ್ತಡ ಕಡಿಮೆ ಮಾಡಬಲ್ಲದು ಎಂದು ಹೇಳಿದೆ.

ಇದನ್ನೂ ಓದಿ: ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆಗೆ ಸೀಬೆ ಹಣ್ಣು ರಾಮಬಾಣ..!

ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುವ ಎಲ್-ಸಿಟ್ರುಲ್ಲೈನ್ ಎಂಬ ಸಂಯುಕ್ತವು ರಕ್ತದೊತ್ತಡದ ಮೇಲೆ ಬಲವಾದ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಈ ಸಂಯುಕ್ತವು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಬಿಡುಗಡೆ ಮಾಡಲು ಪ್ರೇರೇಪಿಸುತ್ತದೆ. ಇದು ರಕ್ತನಾಳಗಳನ್ನು ಶಾಂತಗೊಳಿಸುತ್ತದೆ ಮತ್ತು ಅಪಧಮನಿಗಳು ಹೆಚ್ಚು ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.

ಈ ಮೊದಲು, ಕಲ್ಲಂಗಡಿ ಹಣ್ಣಿನ ಸೇವನೆಯು ತೂಕ ಇಳಿಸಲು ಮತ್ತು ಆರೋಗ್ಯಕರ ದೇಹದ ದ್ರವ್ಯರಾಶಿ ಸೂಚ್ಯಂಕ (ಬಿಎಂಐ) ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅಧ್ಯಯನಗಳು ಅನ್ವೇಷಿಸಿದ್ದವು. ಇದಲ್ಲದೆ, ಕಲ್ಲಂಗಡಿಗಳು ಲೈಕೊಪೀನ್‌ನ ಸಮೃದ್ಧ ಮೂಲವಾಗಿದೆ, ಇದು ಆರೋಗ್ಯಕರ ಪ್ರಾಸ್ಟೇಟ್ ಗ್ರಂಥಿಯೊಂದಿಗೆ ಸಂಪರ್ಕ ಹೊಂದಿರುವ ಸಂಯುಕ್ತವಾಗಿದೆ. ಕಲ್ಲಂಗಡಿ ಹಣ್ಣುಗಳಲ್ಲಿ ವಿಟಮಿನ್ ಇ, ಸಿ ಮತ್ತು ಬಿ ಮತ್ತು ಬೀಟಾ-ಕ್ಯಾರೋಟಿನ್ ಅಂಶಗಳು ಇರುತ್ತದೆ. ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಸಹ ಇದು ಹೊಂದಿದೆ.

ನಿಮಗಿರುವ ರಕ್ತದೊತ್ತಡವು ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಿ

ನಿಮ್ಮ ರಕ್ತದೊತ್ತಡವು 90/60 ರಿಂದ 120/80 ನಡುವೆ ಇದ್ದರೆ ಅದು ಆರೋಗ್ಯಕರ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ಇದು 120/80 ಅನ್ನು ಮೀರಿ 140/90ರಷ್ಟು ಹೆಚ್ಚಾದಾಗ, ಅದು ಆತಂಕಕ್ಕೆ ಕಾರಣವಾಗುತ್ತದೆ ಮತ್ತು ಇದನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಸೋಡಿಯಂ ಆಹಾರ ಸೇವಿಸುವುದು ಮತ್ತು ದಿನಕ್ಕೆ 30 ನಿಮಿಷಗಳ ವ್ಯಾಯಾಮ ಮಾಡುವುದರೊಂದಿಗೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಇದನ್ನೂ ಓದಿ: Mental Health: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಏಕಾಂಗಿತನ ಹೇಗೆ ಸಹಕಾರಿ ಗೊತ್ತಾ..?

ಹೆಚ್ಚಿನ ಅರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಅಗತ್ಯವಿದೆ.ಅಧಿಕ ರಕ್ತದೊತ್ತಡವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಜೀವನ ಶೈಲಿ ರೋಗಗಳಲ್ಲಿ ಒಂದಾಗಿದೆ. ಇದು ಅಪಾಯಕಾರಿ ರೋಗಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಹೃದಯದ ಅರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.ಅಧಿಕ ಬಿಪಿಯ ಸ್ಥಿತಿಯನ್ನು ನಿರ್ವಹಿಸುವ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಸರಿಯಾದ ಆಹಾರ ಸೇವನೆ. ಇನ್ನೂ ಬೇಸಿಗೆ ಕಾಲದಲ್ಲಿ , ಹಲವು ಬೇಸಿಗೆ ಹಣ್ಣುಗಳು ಅತ್ಯಂತ ಪೌಷ್ಟಿಕವಾಗಿದ್ದು ನಿಮ್ಮ ರಕ್ತದೊತ್ತಡ ಮಟ್ಟವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತವೆ.
Published by:Anitha E
First published: