HOME » NEWS » Lifestyle » ADD THESE SPECIAL THINGS IN THE DIET CHILDREN HEIGHT WILL INCREASE ZP

Health Tips: ಮಕ್ಕಳ ಉತ್ತಮ ಬೆಳವಣಿಗೆಗೆ ಈ ಆಹಾರಗಳನ್ನು ನೀಡಿ..!

ಸಿಹಿ ಆಲೂಗಡ್ಡೆಯನ್ನು ಸಹ ಆಹಾರದಲ್ಲಿ ಸೇರಿಸಬೇಕು. ಇದರಲ್ಲಿರುವ ವಿಟಮಿನ್-ಎ ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

news18-kannada
Updated:February 27, 2021, 7:33 AM IST
Health Tips: ಮಕ್ಕಳ ಉತ್ತಮ ಬೆಳವಣಿಗೆಗೆ ಈ ಆಹಾರಗಳನ್ನು ನೀಡಿ..!
ಸಾಂದರ್ಭಿಕ ಚಿತ್ರ
  • Share this:
ಸಾಮಾನ್ಯವಾಗಿ ಮಕ್ಕಳ ಆರೋಗ್ಯದ ಮೇಲೆ ಪೋಷಕರು ಹೆಚ್ಚಿನ ಕಾಳಜಿವಹಿಸುತ್ತಾರೆ. ಇದೇ ವೇಳೆ ಕುಟುಂಬದಲ್ಲಿರುವ ಅಥವಾ ಪರಿಚಯಸ್ಥರ ಮಕ್ಕಳ ಬೆಳವಣಿಗೆಯೊಂದಿಗೆ ತುಲನ ಕೂಡ ಮಾಡುತ್ತಾರೆ. ಆದರೆ ಅನೇಕ ಸಂದರ್ಭದಲ್ಲಿ ಒಂದೇ ವಯಸ್ಸಿದ್ದರೂ ಮಕ್ಕಳ ಬೆಳವಣಿಗೆಗಳಲ್ಲಿ ವ್ಯತ್ಯಾಸಗಳು ಕಂಡು ಬರುತ್ತವೆ. ಕೆಲ ಮಕ್ಕಳು ದಷ್ಟ ಪುಷ್ಠವಾಗಿ ಬೆಳೆದರೆ, ಮತ್ತೆ ಕೆಲ ಮಕ್ಕಳು ಉತ್ತಮ ಎತ್ತರವನ್ನು ಹೊಂದಿರುತ್ತಾರೆ. ಇದಕ್ಕೆ ಕಾರಣ ಆಹಾರ ಎಂಬುದು ಅನೇಕರಿಗೆ ತಿಳಿದಿಲ್ಲ.

ಮಕ್ಕಳ ಎತ್ತರವನ್ನು ಹೆಚ್ಚಿಸಲು ಕೆಲ ಪೋಷಕರು ನಾನಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದೇ ವೇಳೆ ಡಯಟ್ ಬೂಸ್ಟರ್ ಮತ್ತು ಟಾನಿಕ್ ಗಳನ್ನು ಮಕ್ಕಳಿಗೆ ನೀಡಲಾಗುತ್ತದೆ. ಆದರೆ ಆಹಾರದಲ್ಲಿ ಕೆಲವು ವಿಷಯಗಳನ್ನು ಸೇರಿಸುವ ಮೂಲಕ ಕೂಡ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮಕ್ಕಳ ಎತ್ತರವನ್ನು ಹೆಚ್ಚಿಸಬಹುದು. ಅಂತಹ ಕೆಲ ಪೌಷ್ಠಿಕಾಂಶ ಹೊಂದಿರುವ ಆಹಾರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಹಸಿರು ಎಲೆಗಳ ತರಕಾರಿ: ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳು ಲಭಿಸುತ್ತದೆ. ಆದರೆ ಈ ತರಕಾರಿಗಳಲ್ಲಿ ಕೆಲವೊಂದು ಉತ್ತಮ ಪೌಷ್ಠಿಕಾಂಶದ ಜೊತೆಗೆ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಅರುಗುಲಾ ಎಲೆಗಳು, ಬಾಳೆ ಎಲೆಗಳು, ಎಲೆಕೋಸು ಎಲೆಗಳು ಮತ್ತು ಪಾಲಕವನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ತರಕಾರಿಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ವಿಟಮಿನ್-ಕೆ ಸಹ ಕಂಡುಬರುತ್ತವೆ. ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಿ, ಮಕ್ಕಳು ಎತ್ತರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ನೆನೆಸಿದ ಬಾದಾಮಿ: ನೆನೆಸಿದ ಬಾದಾಮಿಯನ್ನು ಬೆಳಿಗ್ಗೆ ಸೇವಿಸಿ. ಬಾದಾಮಿಯಲ್ಲಿ ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳಿವೆ. ಇದು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ಫೈಬರ್, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ವಿಟಮಿನ್-ಇ ಯಲ್ಲಿ ಸಮೃದ್ಧವಾಗಿದೆ. ದೇಹದಲ್ಲಿ ಉಲ್ಲಾಸದೊಂದಿಗೆ ಉದ್ದವನ್ನು ಹೆಚ್ಚಿಸಲು ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಬೆರಿ ಹಣ್ಣುಗಳು: ಸ್ಟ್ರಾಬೆರಿ, ಬ್ಲೂಬೆರ್ರಿ, ಬ್ಲ್ಯಾಕ್ಬೆರಿ ಅಥವಾ ರಾಸ್ಪ್ಬೆರಿ ಹಣ್ಣುಗಳ ಸೇವನೆ ಕೂಡ ಬೆಳವಣಿಗೆಗೆ ಪೂರಕ. ಇದರಲ್ಲಿರುವ ವಿಟಮಿನ್-ಸಿ ಕಾಲಜನ್ ಸಂಶ್ಲೇಷಣೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಇದರಲ್ಲಿರುವ ವಿಟಮಿನ್ ಸಿ ಜೀವಕೋಶಗಳನ್ನು ಸುಧಾರಿಸುತ್ತದೆ ಮತ್ತು ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಸಿಹಿ ಆಲೂಗಡ್ಡೆ: ಸಿಹಿ ಆಲೂಗಡ್ಡೆಯನ್ನು ಸಹ ಆಹಾರದಲ್ಲಿ ಸೇರಿಸಬೇಕು. ಇದರಲ್ಲಿರುವ ವಿಟಮಿನ್-ಎ ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ, ಮ್ಯಾಂಗನೀಸ್, ವಿಟಮಿನ್ ಬಿ 6 ಮತ್ತು ಪೊಟ್ಯಾಸಿಯಮ್ ಅನ್ನು ಸಹ ಒಳಗೊಂಡಿದೆ. ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
ಮೊಟ್ಟೆ ಮತ್ತು ಸಾಲ್ಮನ್ ಮೀನು: ಮಕ್ಕಳು ಮಾತ್ರವಲ್ಲ, ಎಲ್ಲಾ ವಯಸ್ಸಿನವರು ಮೊಟ್ಟೆ ಮತ್ತು ಸಾಲ್ಮನ್ ಮೀನುಗಳನ್ನು ತಿನ್ನಬೇಕು. ಇದು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ. 874 ಮಕ್ಕಳ ಮೇಲೆ ನಡೆಸಿದ ಅಧ್ಯಯನದಲ್ಲಿ ನಿಯಮಿತವಾಗಿ ಮೊಟ್ಟೆ ತಿನ್ನುವ ಮಕ್ಕಳ ಎತ್ತರ ಬೇಗ ಹೆಚ್ಚಾಗುತ್ತದೆ ಎಂದು ತಿಳಿಸಿದೆ. ಹಾಗೆಯೇ ಸಾಲ್ಮನ್ ಮೀನುಗಳಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಮೂಳೆಗಳ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Published by: zahir
First published: February 27, 2021, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories