• Home
  • »
  • News
  • »
  • lifestyle
  • »
  • Winter Care: ಸ್ಟೀಮ್ ತೆಗೆದುಕೊಳ್ಳುವಾಗ ನೀರಿಗೆ ಈ ವಸ್ತುಗಳನ್ನು ಹಾಕಿದ್ರೆ 1 ದಿನದಲ್ಲಿ ಶೀತಕ್ಕೆ ಪರಿಹಾರ ಸಿಗುತ್ತೆ

Winter Care: ಸ್ಟೀಮ್ ತೆಗೆದುಕೊಳ್ಳುವಾಗ ನೀರಿಗೆ ಈ ವಸ್ತುಗಳನ್ನು ಹಾಕಿದ್ರೆ 1 ದಿನದಲ್ಲಿ ಶೀತಕ್ಕೆ ಪರಿಹಾರ ಸಿಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Items For Steam: ಈ ಹಬೆಯಲ್ಲಿ ಸ್ವಲ್ಪ ವಿವಿಧ ವಸ್ತುಗಳನ್ನು ಹಾಕಿದರೆ, ಈ ಹಬೆಯು ಅತಿ ಕಡಿಮೆ ಸಮಯದಲ್ಲಿ ಶೀತದಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

  • Share this:

ಬದಲಾಗುತ್ತಿರುವ ಹವಾಮಾನ (Weather) ಮತ್ತು ತಾಪಮಾನದಲ್ಲಿ ತೀವ್ರ ಕುಸಿತದಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಶೀತ (Cold) ಮತ್ತು ಕೆಮ್ಮಿನಿಂದ (Cough)  (Cough)  ಬಳಲುತ್ತಿದ್ದಾರೆ. ಈ ಸಮಸ್ಯೆಗಳನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು. ಆದರೆ ನೀವು ಈಗಾಗಲೇ ಮೂಗು ಸೋರುವಿಕೆ ಮತ್ತು ನಿರಂತರ ಕೆಮ್ಮಿನಿಂದ ಬಳಲುತ್ತಿದ್ದರೆ, ಕೆಲವು ಮನೆಮದ್ದುಗಳನ್ನು ಸಹ ಅನುಸರಿಸಬಹುದು.  ಇಂತಹ ಅನೇಕ ಮನೆಮದ್ದುಗಳಿವೆ. ಆದರೆ ಕರೋನಾ ಸಮಯದಲ್ಲಿ ನಾವೆಲ್ಲರೂ ಮಾಡಿದ ಶೀತಕ್ಕೆ ಉತ್ತಮ ಪರಿಹಾರವೆಂದರೆ ಹಬೆಯನ್ನು ತೆಗೆದುಕೊಳ್ಳುವುದು. ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಫಲಿತಾಂಶಗಳಿಗಾಗಿ ಸ್ಟೀಮ್ ಉತ್ತಮ ಎನ್ನಬಹುದು. ಆದರೆ ಈ ಹಬೆಯಲ್ಲಿ ಸ್ವಲ್ಪ ವಿವಿಧ ವಸ್ತುಗಳನ್ನು ಹಾಕಿದರೆ, ಈ ಹಬೆಯು ಅತಿ ಕಡಿಮೆ ಸಮಯದಲ್ಲಿ ಶೀತದಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ಆ ವಸ್ತುಗಳು ಯಾವುವು ಹಾಗೂ ಅದನ್ನು ಯಾವ ರೀತಿ ಸೇರಿಸಬೇಕು ಎಂಬುದು ಇಲ್ಲಿದೆ.


ತುಳಸಿ ಎಲೆಯಲ್ಲಿದೆ ಅದ್ಭುತ ಶಕ್ತಿ


ಹಬೆ ತೆಗೆದುಕೊಳ್ಳಲು ಬೇಕಾಗುವಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಸಿ. ಆ  ಕುದಿಯುವ ನೀರಿನಲ್ಲಿ 1 ಚಮಚ ಏಲಕ್ಕಿ, 10 ರಿಂದ 15 ತುಳಸಿ ಎಲೆಗಳು, 2 ಹಸಿ ಅರಿಶಿನ ಅಥವಾ 2 ಚಮಚ ಅರಿಶಿನ ಪುಡಿ,  4 ರಿಂದ 5 ಪುದೀನಾ ಎಲೆಗಳನ್ನು ಸೇರಿಸಿ. ಇದನ್ನು  5 ನಿಮಿಷಗಳ ಕಾಲ ಮುಚ್ಚಳದಿಂದ ಮುಚ್ಚಿ. ನಂತರ ಅದನ್ನು ಸ್ಟೀಮ್ ತೆಗೆದುಕೊಳ್ಳಿ.


ಹಬೆಯಾಡುವ ನೀರಿಗೆ ಒಂದರಿಂದ ಎರಡು ಚಮಚ ಓಟ್ಸ್ ಸೇರಿಸಿ. ಈ ಓಟ್ಸ್​ ತೂಕ ಇಳಿಸಲು ಮಾತ್ರವಲ್ಲದೇ, ಚಳಿಗಾಲದಲ್ಲಿ ಕಾಡುವ ಶೀತದಿಂದ ಸಹ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಈ ಓಟ್ಸ್​ ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ. ಆದ್ದರಿಂದ, ಈ ಓಟ್ಸ್ ಇರುವ ನೀರನ್ನು ಸ್ಟೀಮ್ ತೆಗೆದುಕೊಳ್ಳುವುದು ನಿಮಗೆ ಶೀತದಿಂದ ಬಹಳ ಬೇಗ ಮುಕ್ತಿ ನೀಡುತ್ತದೆ.


ತುಳಸಿ ಎಲೆಗಳು ಶೀತಗಳಿಗೆ ಉತ್ತಮ ಪರಿಹಾರವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ನೀರು ಮತ್ತು ತುಳಸಿ ಎಲೆಗಳನ್ನು ಚೆನ್ನಾಗಿ ಕುದಿಸಿ ನಂತರ ಉರಿಯನ್ನು ಆಫ್ ಮಾಡಿ ಮತ್ತು ಆ ನೀರಿನಿಂದ ನೀವು ಸ್ಟೀಮ್ ತೆಗೆದುಕೊಳ್ಳಿ. ಈ ನೀರು ಕೇವಲ ಶೀತ ಮಾತ್ರವಲ್ಲದೇ ತಲೆನೋವನ್ನು ಸಹ ಕಡಿಮೆ ಮಾಡುತ್ತದೆ.


ಅರಿಶಿನವನ್ನು ಈ ರೀತಿ ಬಳಸಿ


ಕೇವಲ ತುಳಸಿ ಮಾತ್ರವಲ್ಲ, ಅರಿಶಿನದಲ್ಲಿ ಸಹ ಆ್ಯಂಟಿ ಆಕ್ಸಿಡೆಂಟ್​ ಬಹಳಷ್ಟಿದ್ದು ಈ ಎರಡು ವಸ್ತುಗಳನ್ನು  ಒಟ್ಟಿಗೆ ಮಿಕ್ಸ್ ಮಾಡಿ ಸೇವನೆ ಮಾಡಿದಾಗ ಅಥವಾ ಸ್ಟೀಮ್ ತೆಗೆದುಕೊಂಡಾಗ ಶೀತದಿಂದ ಮುಕ್ತಿ ನೀಡುತ್ತದೆ.


ಇದನ್ನೂ ಓದಿ: ಕೊಬ್ಬು ಕಡಿಮೆ ಆಗ್ಬೇಕಾ? ಹಾಗಾದ್ರೆ ನಿಮ್ಮ ಅಡುಗೆ ಮನೆಯಲ್ಲಿರಲಿ ಈ ಪದಾರ್ಥಗಳು


ಈ ಚಳಿಗಾಲದಲ್ಲಿ ಶೀತದಿಂದ ತ್ವರಿತ ಪರಿಹಾರ ಬೇಕಾದರೆ, ಒಂದು ಪಾತ್ರೆಯಲ್ಲಿ ನೀರನ್ನು ಸುರಿಯಿರಿ, ಅರ್ಧ ಚಮಚ ಅರಿಶಿನ ಮತ್ತು ಕೆಲವು ತುಳಸಿ ಎಲೆಗಳನ್ನು ಸೇರಿಸಿ ಮತ್ತು ನೀರನ್ನು ಕುದಿಯಲು ಬಿಡಿ. ನಂತರ ನಿಮ್ಮ ಮುಖವನ್ನು ಟವೆಲ್​ನಿಂದ ಮುಚ್ಚಿ, ಅದರಿಂದ ಸ್ಟೀಮ್ ತೆಗೆದುಕೊಂಡು ನೋಡಿ, ಶೀತ ಮಾಯವಾಗುತ್ತದೆ.




ಇದಿಷ್ಟೇ ಅಲ್ಲದೇ, ಮತ್ತೊಂದು ಶೀತದ ಪರಿಹಾರವು ನಿಮಗೆ ಸಹಾಯ ಮಾಡಬಹುದು. ಇದಕ್ಕಾಗಿ, ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಶುಂಠಿಯನ್ನು ತುರಿ ಮಾಡಿ ಹಾಕಿ. ಅದರಲ್ಲಿ ಒಂದು ಚಮಚ ಓಟ್ಸ್ ಅನ್ನು ಸಹ ಸೇರಿಸಿ. ಈ ನೀರಿನ ವಾಸನೆಯು ತುಂಬಾ ಪ್ರಬಲವಾಗಿರುತ್ತದೆ, ಹಾಗಾಗಿ ಇದು ಶೀತ ಮತ್ತು ಸೈನಸ್ ಮತ್ತು ಸೌಮ್ಯವಾದ ತಲೆನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತದೆ.


ಇದನ್ನೂ ಓದಿ:ಶುಂಠಿ ಸಿಪ್ಪೆ ಕೂಡ ವೇಸ್ಟ್​ ಅಲ್ಲ, ಡಿಫರೆಂಟ್​ ಆಗಿ ಇದನ್ನೂ ಯೂಸ್ ಮಾಡ್ಬೋದು


ಈ ಮೇಲಿನ ಯಾವುದೇ ವಸ್ತುಗಳನ್ನು ನೀವು ಬಳಸಿ ಸ್ಟೀಮ್ ತೆಗೆದುಕೊಂಡರೆ ಚಳಿಗಾಲದಲ್ಲಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

Published by:Sandhya M
First published: